ಮಡಿಕೇರಿ ಜ.17 NEWS DESK : ಸೌತ್ ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಸುಳ್ಯ ಜಟ್ಟಿಪಳ್ಳದ ಬಿ.ಎ.ಪಾಲಾಕ್ಷ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಮಂಗಳೂರಿನ ಮಂಗಳ ಸ್ಟೇಡಿಯಂ ನಲ್ಲಿ ನಡೆದ ಸೌತ್ ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ ಟ್ರಿಪಲ್ ಜಂಪ್ ನಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಪಂದ್ಯಾವಳಿಯಲ್ಲಿ ಭಾರತ ಮಾತ್ರವಲ್ಲದೆ ಶ್ರೀಲಂಕ, ಭೂತನ್, ನೇಪಾಳ, ಬಾಂಗ್ಲಾದೇಶಗಳ ಸುಮಾರು 1700 ವಿವಿಧ ಕ್ರೀಡಾಪಟುಗಳು ಭಾಗವಹಿಸಿದ್ದರು. ಬಿ.ಎ.ಪಾಲಾಕ್ಷ ಮಡಿಕೇರಿಯ ಜಿಲ್ಲಾ ಪಾಲಿ ಕ್ಲಿನಿಕ್ ನಲ್ಲಿ ಸರ್ಕಾರಿ ಸೇವೆ ಸಲ್ಲಿಸುತ್ತಿದ್ದಾರೆ.