ಮಡಿಕೇರಿ ಜೂ.18 NEWS DESK : ಮಡಿಕೇರಿಯ ವಿಂಗ್ಸ್ ಆಫ್ ಪ್ಯಾಶನ್ ಸಂಸ್ಥೆಯ ನೃತ್ಯ ಸಂಯೋಜಕಿ ಹಾಗೂ ನಿರ್ದೇಶಕಿ ಪ್ರೀತಕೃಷ್ಣ ಅವರಿಗೆ ಗೋಲ್ಡನ್ ಕೊರಿಯೋಗ್ರಾಫರ್ ಪ್ರಶಸ್ತಿ ಲಭಿಸಿದೆ. ವಾವ್ ಸಿನಿಮಾಸ್ ಚಾನಲ್ ವತಿಯಿಂದ ಬೆಂಗಳೂರಿನ ಸ್ಫೂರ್ತಿಧಾಮ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ “ವಾವ್” ಸಿನಿಮಾದ ನಿರ್ದೇಶಕ, ನಿರ್ಮಾಪಕ ಅವಿನಾಶ್, ಬಿಗ್ ಬಾಸ್ ಸೀಸನ್-4 ವಿನ್ನರ್ ಪ್ರಥಮ್, ನೃತ್ಯ ಸಂಯೋಜಕರಾದ ಜಗ್ಗಿ, ಶಶಿ, ಭೂಷಣ್, ವರುಣ್, ರವಿ ಮೋಹನ್ ಮತ್ತಿತರರು ಪ್ರೀತಕೃಷ್ಣಾಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಲೇಖಕ: admin
ಮಡಿಕೇರಿ ಜೂ.18 NEWS DESK : ಕೊಡಗು ಜಿಲ್ಲಾ ಕಿವುಡರ ಸಂಘದ ವಾರ್ಷಿಕ ಮಹಾಸಭೆಯು ಜೂ.30 ರಂದು ಸಂಘದ ಅಧ್ಯಕ್ಷೆ ಗೌರು ಎಂ. ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆಯಲಿದೆ. ವಿರಾಜಪೇಟೆಯ ಸೇಂಟ್ ಆನ್ಸ್ ಶಾಲೆಯ ಸಭಾಂಗಣದಲ್ಲಿ ಬೆಳಿಗ್ಗೆ 10.30 ಗಂಟೆಗೆ ನಡೆಯಲಿರುವ ಸಭೆಗೆ ಸರ್ವ ಸದಸ್ಯರು ಹಾಜರಾಗುವಂತೆ ಕೊಡಗು ಜಿಲ್ಲಾ ಕಿವುಡರ ಸಂಘದ ಆಡಳಿತ ಮಂಡಳಿ ಕೋರಿದೆ.
ಕೂಡಿಗೆ ಜೂ.18 NEWS DESK : ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ಹಾಗೂ ಹುಲುಗುಂದ ವ್ಯಾಪ್ತಿಯ ಹಿಂದೂ ರುದ್ರಭೂಮಿಗೆ ಧರ್ಮಸ್ಥಳ ಸಂಘದ ವತಿಯಿಂದ ಸಿಲಿಕಾನ್ ಚೇಂಬರ್ ಮಂಜೂರಾತಿ ಪತ್ರವನ್ನು ನೀಡಲಾಯಿತು. ಚಿಕ್ಕತ್ತೂರು ಕಾರ್ಯಕ್ಷೇತ್ರದ ವತಿಯಿಂದ ಹುಲಗುಂದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 1,51,630 ರೂ. ಮಂಜೂರಾತಿ ಪತ್ರವನ್ನು ಕೂಡುಮಂಗಳೂರು ಗ್ರಾ.ಪಂ ಅಧ್ಯಕ್ಷ ಭಾಸ್ಕರ್ ನಾಯಕ್ ಅವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಮಾತನಾಡಿದ ಧರ್ಮಸ್ಥಳ ಸಂಘದ ಯೋಜನಾಧಿಕಾರಿ ರೋಹಿತ್, ಪರಮಪೂಜ್ಯ ಡಾ. ಡಿ.ವೀರೇಂದ್ರ ಹೆಗಡೆಯವರ ಆಶೀರ್ವಾದದಿಂದ ಕೊಡಗು ಜಿಲ್ಲೆಯ ಸಮುದಾಯ ಭವನ, ಶಾಲೆಗಳ ದುರಸ್ತಿ, ಮೃತಪಟ್ಟವರಿಗೆ ಧನಸಹಾಯ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ನೀಡುತ್ತ ಬರಲಾಗುತ್ತಿದೆ. ಅದೇ ರೀತಿ ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ಹಾರಂಗಿ-ಹುಲಗುಂದ ಗ್ರಾಮದ ಹಿಂದೂರುದ್ರ ಭೂಮಿಗೆ 1,51,630 ರೂ ವೆಚ್ಚದಲ್ಲಿ ಆದೇಶ ಪತ್ರವನ್ನು ನೀಡಲಾಗಿದೆ ಎಂದು ತಿಳಿಸಿದರು. ಕೂಡುಮಂಗಳೂರು ಗ್ರಾ.ಪಂ ಅಧ್ಯಕ್ಷ ಭಾಸ್ಕರ್ ನಾಯಕ್ ಮಾತನಾಡಿ, ಹಾರಂಗಿ-ಹುಲಗುಂದ ಗ್ರಾಮದ ಹಿಂದೂ ರುದ್ರ ಭೂಮಿಗೆ ಶವ ಸುಡುವ ಸಿಲಿಕಾನ್…
ಮಡಿಕೇರಿ ಜೂ.18 NEWS DESK : ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ(ಐಬಿಪಿಎಸ್) ದೇಶದಾದ್ಯಂತ 43 ಗ್ರಾಮೀಣ ಬ್ಯಾಂಕ್‍ಗಳಲ್ಲಿ ಖಾಲಿಯಿರುವ 9,995 ಆಫೀಸ್ ಅಸಿಸ್ಟೆಂಟ್ (ಮಲ್ಟಿ ಪರ್ಪಸ್) ಮತ್ತು ಆಫೀಸರ್ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ಜೂನ್ 27 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ರಾಜ್ಯದ ಅಭ್ಯರ್ಥಿಗಳು ಹಿಂದಿ ಅಥವಾ ಇಂಗ್ಲಿಷ್ ಜತೆಗೆ ಕಳೆದ ಬಾರಿಯಂತೆ ಆಫೀಸ್ ಅಸಿಸ್ಟೆಂಟ್ (ಮಲ್ಟಿ ಪರ್ಪಸ್) ಮತ್ತು ಆಫೀಸರ್ ಸ್ಟೇಲ್-1 ಹುದ್ದೆಗಳಿಗೆ ಕನ್ನಡ ಮತ್ತು ಕೊಂಕಣಿ ಭಾಷೆಯಲ್ಲೂ ಪರೀಕ್ಷೆ ಬರೆಯುವ ಅವಕಾಶವನ್ನು ಐಬಿಪಿಎಸ್ ನೀಡಿದೆ. ಕಳೆದ ಬಾರಿ 8,622 ಹುದ್ದೆಗಳಿಗೆ ನೇಮಕ ನಡೆಸಿದ ಐಬಿಪಿಎಸ್ ಈ ಬಾರಿ 9,995 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ. ರಾಜ್ಯದಲ್ಲಿ ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‍ಗಳಿಗೆ ಈ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕ ನಡೆಯಲಿದೆ. ರಾಜ್ಯದ ಎರಡು ಬ್ಯಾಂಕುಗಳಲ್ಲಿ 586 ಹುದ್ದೆಗಳು ಖಾಲಿ ಇವೆ. ಇದರಲ್ಲಿ ಆಫೀಸ್ ಅಸಿಸ್ಟೆಂಟ್ (ಮಲ್ಟಿ ಪರ್ಪಸ್) ಒಟ್ಟು 200…
ಮಡಿಕೇರಿ ಜೂ.17 NEWS DESK : ಕಾಡಾನೆಗಳ ಹಿಂಡು ಮನೆಯ ಅಂಗಳದಲ್ಲಿ ದಾಂಧಲೆ ನಡೆಸಿ, ಹೂ ಕುಂಡಗಳನ್ನು ಹಾನಿಗೊಳಿಸಿದ್ದಲ್ಲದೆ, ಮನೆಯ ಒಳಕ್ಕೆ ಮರಿಯಾನೆಗಳು ನುಗ್ಗಲು ಯತ್ನಿಸಿದ ಘಟನೆ ಗುಹ್ಯ ಗ್ರಾಮದಲ್ಲಿ ನಡೆದಿದೆ. ಗುಹ್ಯ ಗ್ರಾಮದ ಮೂಕೊಂಡ ಸುಬ್ರಮಣಿ ಎಂಬವರ ಕಾಫಿ ತೋಟದಲ್ಲಿ ಮರಿಯಾನೆಗಳೂ ಸೇರಿದಂತೆ ಆರಕ್ಕೂ ಹೆಚ್ಚು ಕಾಡಾನೆಗಳು ಬಿಡುಬಿಟ್ಟು ದಾಂಧಲೆ ನಡೆಸಿವೆ. ಅಲ್ಲದೆ ಕೃಷಿ ಫಸಲುಗಳನ್ನು ನಾಶಗೊಳಿಸಿವೆ. ರಾತ್ರಿ ಮನೆಯಂಗಳಕ್ಕೆ ಬಂದ ಕಾಡಾನೆಗಳ ಹಿಂಡು ಮನೆಯ ಅಂಗಳದಲ್ಲಿದ್ದ 20ಕ್ಕೂ ಅಧಿಕ ಹೂ ಕುಂಡಗಳನ್ನು ತುಳಿದು ಧ್ವಂಸಗೊಳಿಸಿವೆ. ಗುಹ್ಯ ಭಾಗದಲ್ಲಿ ನಿರಂತರವಾಗಿ ಕಾಡಾನೆಗಳ ಹಾವಳಿಯಿಂದಾಗಿ ರಾತ್ರಿ ಮನೆಯಲ್ಲಿ ನಿದ್ರೆ ಮಾಡಲು ಭಯವಾಗುತ್ತಿದೆ. ಸಂಜೆ ಮನೆಯಿಂದ ಹೊರ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿ ಎಂದು ಮೂಕೊಂಡ ಸುಬ್ರಮಣಿ ಆತಂಕ ವ್ಯಕ್ತಪಡಿಸಿದ್ದಾರೆ. ಮನೆಯ ಬದಿಯಲ್ಲಿದ್ದ ಪ್ಲಾಸ್ಟಿಕ್ ಚೇರ್‍ಗಳನ್ನು ಹಾಗೂ ಇನ್ನಿತರ ವಸ್ತುಗಳನ್ನು ಎಳೆದು, ತುಳಿದು ನಾಶಗೊಳಿಸಿದ್ದು, ಮನೆಯ ಪಕ್ಕದಲ್ಲೇ ಕಾಡಾನೆಗಳು ಘೀಳಿಡುತ್ತಿದ್ದವು. ಮರಿಯಾನೆಗಳು ಮನೆಯ ಒಳಕ್ಕೆ ನುಗ್ಗಲು ಯತ್ನಿಸುತ್ತಿದ್ದವು ಎಂದರು. ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಅರಣ್ಯ…
ಮಡಿಕೇರಿ ಜೂ.18 NEWS DESK : ಕೊಡಗು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ 2024-25ನೇ ಸಾಲಿಗೆ ಅನ್ವಯವಾಗುವಂತೆ ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ಮಕ್ಕಳ ಶಿಕ್ಷಣಕ್ಕಾಗಿ ಆರ್ಥಿಕ ನೆರವನ್ನು ನೀಡಲು ನಿರ್ಧರಿಸಿದ್ದು, ಆಸಕ್ತರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಶಿಕ್ಷಣಕ್ಕಾಗಿ ನೀಡಲಾಗುವ ಆರ್ಥಿಕ ನೆರವನ್ನು ಪ್ರಾಥಮಿಕ ಶಾಲೆಯಿಂದ ಪದವಿ ತರಗತಿಗಳವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ಪತ್ರಕರ್ತರ ಮಕ್ಕಳು ಪಡೆಯಲು ಅರ್ಹರಾಗಿರುತ್ತಾರೆ. ನೆರವು ಪಡೆಯಲು ಇಚ್ಛಿಸುವವರು ಅಂಕಪಟ್ಟಿ, ಶಾಲೆಗೆ ಪಾವತಿಸಿದ ಶುಲ್ಕದ ನಕಲು ಪ್ರತಿಯೊಂದಿಗೆ ಅರ್ಜಿಯನ್ನು ದಿನಾಂಕ 26-06-2024ರ ಒಳಗಾಗಿ ಸಲ್ಲಿಸಲು ಕೋರಲಾಗಿದೆ. ಅರ್ಜಿಗಳನ್ನು ‘ಮ್ಯಾನೇಜಿಂಗ್ ಟ್ರಸ್ಟಿ, ಕೊಡಗು ಪತ್ರಿಕಾ ಭವನ ಟ್ರಸ್ಟ್, ಪತ್ರಿಕಾ ಭವನ, ಕೈಗಾರಿಕಾ ಬಡಾವಣೆ, ಮಡಿಕೇರಿ-571201’ ಈ ವಿಳಾಸಕ್ಕೆ ಕಳುಹಿಸಿಕೊಡಬೇಕೆಂದು ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್ ತಿಳಿಸಿದ್ದಾರೆ.
ವಿರಾಜಪೇಟೆ ಜೂ.18 NEWS DESK : ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಹಾಗೂ ನಿರ್ವಹಣಾ ಶಾಸ್ತ್ರ ವಿಭಾಗದ ವತಿಯಿಂದ ಸಿಎಸ್‍ಆರ್ ಮತ್ತು ಸುಸ್ಥಿರ ಅಭಿವೃದ್ದಿ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ನಿರ್ವಹಣಾ ಶಾಸ್ತ್ರ ವಿಭಾಗದ ಮುಖಸ್ಥ ಆರ್.ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸಿಸುವ ಸಾಮಾಜಿಕ ಜವಾಬ್ದಾರಿಯನ್ನು ಬೆಳಿಸಿಕೊಳ್ಳುವುದರ ಮೂಲಕ ದೇಶದ ಸುಸ್ಥಿರ ಅಭಿವೃದ್ಧಿಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಸಂತ ಅನ್ನಮ್ಮ ಕಾಲೇಜಿನ ಐಕ್ಯೂಎಸಿ ಸಂಚಾಲಕರ ಹಾಗೂ ಸಹಾಯಕ ಪ್ರಾಧ್ಯಾಪಕರಾದ ಬಿ.ಡಿ.ಹೇಮಾ, ಮಾತನಾಡಿ ವಿದ್ಯಾರ್ಥಿಗಳಿಗೆ ಕಂಪನಿಗಳು ತಮ್ಮ ಲಾಭಾಂಶವನ್ನು ಕಂಪನಿಗಳ ಸಾಮಾಜಿಕ ಜವಾಬ್ದಾರಿಗಳ ಮೂಲಕ ವಿನಿಯೋಗಿಸಿ ಆರ್ಥಿಕ ಹಾಗೂ ಸಾಮಾಜಿಕ ಸುಸ್ಥಿರ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ ಎಂಬುದನ್ನು ತಿಳಿಸಿದರು. ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಹೆಚ್.ಎಸ್.ವೇಣುಗೋಪಾಲ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಅಂತಿಮ ಬಿಬಿಎ ವಿದ್ಯಾರ್ಥಿನಿ ಶೃತಿಕಾ ನಡಿಸಿಕೊಟ್ಟರು. ಉಪನ್ಯಾಸಕರಾದ ಸುಮಯ್ಯ ತಬಸುಮ್ ಸಂಪೂನ್ಮೂಲ ವ್ಯಕ್ತಿಯ…
ಸೋಮವಾರಪೇಟೆ ಜೂ.18 NEWS DESK : ರೋಟರಿ ಕ್ಲಬ್ ಆಫ್ ಸೋಮವಾರಪೇಟೆ ಹಿಲ್ಸ್‌ನ ಪದಗ್ರಹಣ ಕಾರ್ಯಕ್ರಮ ರೋಟರಿ ಭವನದಲ್ಲಿ ನಡೆಯಿತು. 2024-25ನೇ ಸಾಲಿನ ಅಧ್ಯಕ್ಷ ಜೆ.ಕೆ.ಪೊನ್ನಪ್ಪ ಹಾಗೂ ಕಾರ್ಯದರ್ಶಿ ಕೆ.ಡಿ.ಬಿದ್ದಪ್ಪ ಮತ್ತು ಆಡಳಿತ ಮಂಡಳಿ ಸದಸ್ಯರಿಗೆ ರೋಟರಿ ಚಾಮರಾಜನಗರ ಮಾಜಿ ಜಿಲ್ಲಾ ರಾಜ್ಯಪಾಲ ಡಾ. ಆರ್.ಎಸ್.ನಾಗಾರ್ಜುನ ಪದಗ್ರಹಣ ನೆರವೇರಿಸಿದರು. ನಂತರ ಮಾತನಾಡಿ ಅವರು, ಕೆಲವೇ ಜನರಿಗೆ ತಲುಪುವ ಯೋಜನೆಗಿಂತ ಸಾವಿರಾರು ಜನರಿಗೆ ಸೇವೆ ನೀಡುವಂತಹ ಕೆಲಸ ಮಾಡಬೇಕೆಂದು ಹೇಳಿದರು. ರೋಟರಿ ಸಂಸ್ಥೆಗಳು ದೊಡ್ಡ ಕನಸ್ಸುಗಳನ್ನು ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಕರೆ ನೀಡಿದ ಅವರು ಚಾಮರಾಜನಗರದಲ್ಲಿ ರೋಟರಿ ಸಂಸ್ಥೆ ವತಿಯಿಂದ ಡಯಾಲೀಸಿಸ್ ಘಟಕ ಕಾರ್ಯನಿರ್ವಹಿಸುತ್ತಿದೆ. ಸೋಮವಾರಪೇಟೆ ರೋಟರಿ ಸಂಸ್ಥೆ ದೊಡ್ಡ ಕನಸ್ಸು ಕಾಣಲೇಬೇಕು. ಒಳ್ಳೆ ಕಾರ್ಯಕ್ಕೆ ದಾನಿಗಳು ಕೈಜೋಡಿಸಲಿದ್ದಾರೆ ಎಂದು ಹೇಳಿದರು. ಪ್ರಪಂಚದಲ್ಲಿ 119 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ರೋಟರಿ ಪ್ರಮುಖ ಅಂತಾರಾಷ್ಟ್ರೀಯ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಸಾಕಷ್ಟು ಅಂತಾರಾಷ್ಟ್ರೀಯ ಸಂಸ್ಥೆಗಳು ತಮ್ಮ ಯೋಜನೆಗಳಿಗೆ ರೋಟರಿ ಸೇವಾ ಸಂಸ್ಥೆಯ ಮಾದರಿಯನ್ನು ಅನುಸರಿಸುತ್ತಿರುವುದನ್ನು…
ಸಿದ್ದಾಪುರ ಜೂ.18 NEWS DESK : ವಿದ್ಯಾರ್ಥಿಗಳು ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಅವಕಾಶ ಸಿಕ್ಕಾಗ ಬಳಸಿಕೊಂಡು ಸಾಧನೆ ಮಾಡಬೇಕು ಎಂದು ಸಿದ್ದಾಪುರ ಸಂತ ಜೋಸೆಫ್ ದೇವಾಲಯದ ಧರ್ಮಗುರು ಮೈಕಲ್ ಮರಿ ತಿಳಿಸಿದರು. ಸಿದ್ದಾಪುರ ಎಸ್.ಜೆ.ಸಿ.ಕ್ರಿಕೆಟರ್ಸ್ ವತಿಯಿಂದ ಸಂತ ಜೋಸೆಫ್ ದೇವಾಲಯದಲ್ಲಿ ನಡೆದ ಧರ್ಮ ಕೇಂದ್ರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಅಭಿನಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಈ ರೀತಿಯ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಪ್ರೇರೇಪಿಸಿದಂತಾಗುತ್ತದೆ ಎಂದರು. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 7ನೇ ಸ್ಥಾನ ಹಾಗೂ ಕೊಡಗಿನಲ್ಲಿ ಪ್ರಥಮ ಸ್ಥಾನ ಪಡೆದ ನೆಲ್ಯಹುದಿಕೇರಿಯ ಜಾನ್ಸನ್ ಅವರ ಪುತ್ರಿ ಚರೀಷ್ಮ ಶೇ.85 ಅಂಕ ಪಡೆದ ಪಡೆದಿದ್ದಾಳೆ. ದ್ವಿತೀಯ ಪಿಯುಸಿ ನ ಜೀವಿನ್, ಜೋವಿಟ ಮತ್ತು ಎಸ್.ಎಸ್.ಎಲ್.ಸಿ ಯಲ್ಲಿ ಹೆಚ್ಚು ಅಂಕ ಪಡೆದ ಅನುಷ,ಶಿನೋಯ್,ದಿಯಾ ಜೋಸೆಫ್ ಅವರನ್ನು ಸನ್ಮಾನಿಸಿ ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜೋಶ್ ಕುರಿಯನ್, ಜಿ.ಪಂ ಸದಸ್ಯ ಜಾನ್ಸನ್, ವಿಜೇಶ್,…
ಮಡಿಕೇರಿ ಜೂ.18 NEWS DESK : ಕೊಡಗಿನ ನಾಪೋಕ್ಲಿನಲ್ಲಿ ಜನಿಸಿ ಭಾರತದ ಮೂಲೆ ಮೂಲೆಯಲ್ಲಿ ಹಾಕಿ ಆಟ ಅಡಿ ತೆರೆಯ ಮರೆಯಲ್ಲಿ ಯಾವ ಪ್ರಚಾರವೂ ಬಯಸದೆ, ಯಾವ ಪದವಿಯನ್ನು ಅಲಂಕರಿಸದ ಅದ್ಭುತ ಆಟಗಾರ ಅರೆಯಡ ರವಿ ಅಯ್ಯಪ್ಪ. ಅರೆಯಡ ಉತ್ತಯ್ಯ ಹಾಗೂ ಗೌರಿ ಕಾಮವ್ವ ( ತಾಮನೆ ಕಂಗಾಂಡ) ಅವರ 5ನೇ ಪುತ್ರನಾಗಿ ರವಿ ಅಯ್ಯಪ್ಪ ಅವರು ಜನಿಸಿದರು. ಶಿಕ್ಷಣ : ಇವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ನಾಪೋಕ್ಲಿನಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಸರಕಾರಿ ಪದವಿಪೂರ್ವ ಕಾಲೇಜು ನಾಪೋಕ್ಲಿನಲ್ಲಿ ಹಾಗೂ ಕಲೆಯಲ್ಲಿ ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದರು. ಹಾಕಿ ಪಂದ್ಯಾಟಗಳು : 1974ರಲ್ಲಿ ಭಾರತೀಯ ಸೈನ್ಯದ ಆರ್ಟಿಲರಿಗೆ ಪ್ರವೇಶ ಪಡೆದರು. 1980-84 ವರೆಗೆ ದಕ್ಷಿಣ ಕಮಾಂಡ್ ನ ಹಾಕಿ ಆಟಗಾರನಾಗಿ ಆಡಿದರು. 1985-87 ರವರೆಗೆ ಸರ್ವಿಸಸ್ ಪರ ಹಾಕಿ ಆಡಿದರು. ರಂಗಸ್ವಾಮಿ ಕಪ್ ಆಡಿದ ಅದ್ಭುತ ಆಟಗಾರ. ಭಾರತದ ಆಯ್ಕೆ ಶಿಬಿರ : 1982-83 ರಲ್ಲಿ ಭಾರತದ ಆಯ್ಕೆ ಶಿಬಿರಕ್ಕೆ…






