ಲೇಖಕ: admin

ಬೆಂಗಳೂರು ಜು.23 NEWS DESK : ಹಾರಂಗಿ ನೀರಾವರಿ ಸಲಹಾ ಸಮಿತಿ ಸಭೆಯು ಸಚಿವರಾದ ಕೆ.ವೆಂಕಟೇಶ್ ಅವರ ಉಪಸ್ಥಿತಿಯಲ್ಲಿ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅಧ್ಯಕ್ಷತೆಯಲ್ಲಿ  ಬೆಂಗಳೂರಿನಲ್ಲಿ ನಡೆಯಿತು. ಹುಣಸೂರು, ಕೆ.ಆರ್.ನಗರ, ಕ್ಷೇತ್ರದ ಶಾಸಕರು, ಸಲಹಾ ಸಮಿತಿ ಸದಸ್ಯರು, ನೀರಾವರಿ ಇಲಾಖೆಯ ಹಿರಿಯ ಎಂಜಿನಿಯರ್ ಗಳು ಇತರರು ಪಾಲ್ಗೊಂಡಿದ್ದರು. ಸಭೆಯಲ್ಲಿ ಜುಲೈ 28 ರಿಂದ ಕಾಲುವೆಗಳಿಗೆ ನೀರು ಹರಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹಾರಂಗಿ ನೀರಾವರಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಪುಟ್ಟಸ್ವಾಮಿ ತಿಳಿಸಿದ್ದಾರೆ.

Read More

ನವದೆಹಲಿ ಜು.23 NEWS DESK : ಮೂರು ಕ್ಯಾನ್ಸರ್ ಔಷಧಗಳ ಮೇಲಿನ ಕಸ್ಟಮ್ ಡ್ಯೂಟಿ ತೆರವುಗೊಳಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಲೋಕಸಭೆಯಲ್ಲಿ 2024-25ನೇ ಸಾಲಿನ ಮುಂಗಡ ಪತ್ರ ಮಂಡಿಸಿದ ಅವರು ಎಕ್ಸ್-ರೇ ಟ್ಯೂಬ್‌ಗಳು ಮತ್ತು ಫ್ಲಾಟ್ ಪ್ಯಾನಲ್ ಡಿಟೆಕ್ಟರ್‌ಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ.6 ರಷ್ಟು ಮತ್ತು ಪ್ಲಾಟಿನಂ ಮೇಲೆ ಶೇಕಡಾ 6.4 ರಷ್ಟು ಕಡಿಮೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ದೇಶದ ಆರೋಗ್ಯ ವ್ಯವಸ್ಥೆಗೆ ಸರ್ಕಾರವು 89,287 ಕೋಟಿ ರೂ ಗಳನ್ನು ನಿಗದಿಪಡಿಸಿದ್ದು, ಇದ್ದು ಈ ಹಿಂದಿನ ವರ್ಷದ 88,956 ಕೋಟಿಗಿಂತ ಸ್ವಲ್ಪ ಹೆಚ್ಚಾಗಿದೆ. ಔಷಧ ಉದ್ಯಮಕ್ಕೆ ಪಿಎಲ್‌ಐಗೆ ಸರ್ಕಾರ 2,143 ಕೋಟಿ ರೂ ಮಂಜೂರು ಮಾಡಿದೆ. ಫೆಬ್ರವರಿಯಲ್ಲಿ ಮಂಡಿಸಲಾದ 2024-25ರ ಮಧ್ಯಂತರ ಕೇಂದ್ರ ಬಜೆಟ್‌ನಲ್ಲಿ, ಹಣಕಾಸು ಸಚಿವರು ಆರೋಗ್ಯ ಕ್ಷೇತ್ರಕ್ಕೆ ಹಲವಾರು ಮಹತ್ವದ ಘೋಷಣೆಗಳನ್ನು ಮಾಡಿದ್ದರು. ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ 2024-25ಕ್ಕೆ 90,171 ಕೋಟಿ ರೂ ಮೀಸಲಿಟ್ಟಿದ್ದು, ಇದು 2023-24ರಲ್ಲಿ 79,221 ಕೋಟಿ ರೂ…

Read More

ಬೆಂಗಳೂರು ಜು.23 NEWS DESK : ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಸರ್ಕಾರ ಮತ್ತು ಇಡಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ಶಾಸಕರು ಹಾಗೂ ಸಚಿವರು ವಿಧಾನಸೌಧದ ಗಾಂಧಿ ಪ್ರತಿಮೆಯ ಬಳಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು. ರಾಜಕೀಯ ಸೇಡು, ದ್ವೇಷದಿಂದ ಕೂಡಿದ ನಡೆಯನ್ನು ನಮ್ಮ ಸರ್ಕಾರ ತೀವ್ರವಾಗಿ ಖಂಡಿಸುತ್ತದೆ. ಇದನ್ನು ನಾವು ಪ್ರತಿಭಟಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಪ್ರಜಾಪ್ರಭುತ್ವಕ್ಕೆ ಮಾರಕವಾದ ನಡೆಯಿದು. ಪ್ರಜಾಪ್ರಭುತ್ವದಲ್ಲಿ ಯಾವುದೇ ತನಿಖೆಯನ್ನು ಕಾನೂನುಬಾಹಿರವಾಗಿ ಮಾಡುವಂತಿಲ್ಲ. ಇಡಿ ದುರುಪಯೋಗವಾಗುತ್ತಿರುವ ಬಗ್ಗೆ ಪಕ್ಷದ ವರಿಷ್ಠರು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಾರೆ ಎಂದರು. ವಾಲ್ಮೀಕಿ ನಿಗಮದ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಯಾರೇ ತಪ್ಪು ಮಾಡಿದ್ದರೂ ಮುಲಾಜಿಗೆ ಒಳಗಾಗುವುದಿಲ್ಲ. ಯಾರನ್ನೂ ರಕ್ಷಣೆ ಮಾಡುವುದಿಲ್ಲ. ನಾವು ತಪ್ಪಿತಸ್ಥರಿಗೆ ಶಿಕ್ಷೆ ಕೊಟ್ಟೆ ಕೊಡುತ್ತೇವೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ತಿಳಿಸಿದರು. ಸದನದಿಂದ ಹೊರಗೆ ಹೋರಾಟ ಮಾಡುವ ಬಗ್ಗೆ ಪಕ್ಷದಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು. ಉಪ…

Read More

ಸುಂಟಿಕೊಪ್ಪ, ಜು.23 NEWS DESK : ವಿದ್ಯಾರ್ಥಿಗಳು ಅತೀಯಾದ ಶ್ರಮ, ಶ್ರದ್ಧೆ, ಸಮಯ ಪಾಲನೆಯನ್ನು ರೂಢಿಸಿಕೊಂಡಲ್ಲಿ ಸಾಧನೆಯ ಸಿದ್ಧಿಯನ್ನು ಗಳಿಸಿಕೊಳ್ಳಲು ಸಾಧ್ಯ ಎಂದು ಕೂಡಿಗೆಯ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಬಿ.ಬಸಪ್ಪ ಹೇಳಿದರು. ಮಾದಾಪುರ ಶ್ರೀಮತಿ ಡಿ ಚೆನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಸಂಸ್ಥೆಯ ಹಳೆಯ ವಿದ್ಯಾರ್ಥಿ ನಿವೃತ್ತ ಕೆ.ಎ.ಎಸ್ ಅಧಿಕಾರಿ ಬಿ.ಎ.ನಾಣಿಯಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ಥಾಮಸ್ ಅಲ್ವಾ ಎಡಿಸನ್ ಅವರ ವಿದ್ಯಾರ್ಥಿ ಜೀವನದ ನಿದರ್ಶನಗಳನ್ನು ನೀಡಿ ಸ್ಪೂರ್ತಿಯ ಮಾತುಗಳನ್ನಾಡಿದರು. ಸಂಸ್ಥೆಯಲ್ಲಿ ಪ್ರಯೋಗಾಲಯ ಸಹಾಯಕರಾಗಿ ನಲ್ವತ್ತೊಂದು ವರ್ಷಗಳ ಕಾಲ ಸುದೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತರಾದ ಸಿ.ಆರ್.ಅಶೋಕ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಸಮಾಜದಲ್ಲಿ ಉತ್ತಮ ಮನುಷ್ಯನಾಗಿ ರೂಪುಗೊಳ್ಳಲು ಈ ಸಂಸ್ಥೆಯು ಕಾರಣವಾಯಿತು ಎಂದು ಅಶೋಕ್ ಸ್ಮರಿಸಿಕೊಂಡರು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಕರ್ನಲ್ ಬಿಜಿವಿ ಕುಮಾರ್ ಮಾತನಾಡಿ, ಮಕ್ಕಳು ಶಿಸ್ತು ಸಂಸ್ಕಾರವನ್ನು ಮೈಗೂಡಿಸಿ ಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ…

Read More

ಮಡಿಕೇರಿ ಜು.23 NEWS DESK : ಗಿರಿಜನ ಲ್ಯಾಂಪ್ ಸಹಕಾರ ಸಂಘಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಂತೆ ಕೊಡಗು ಜಿಲ್ಲಾ ಲ್ಯಾಂಪ್ ಸಹಕಾರ ಸಂಘ ಸೋಮವಾರಪೇಟೆ,  ಬಸವನಹಳ್ಳಿ ಮತ್ತು ತಿತಿಮತಿ ಲ್ಯಾಂಪ್ ಸಹಕಾರ ಸಂಘ ಮನವಿ ಮಾಡಿದೆ. ಸಂಘದ ಅಧ್ಯಕ್ಷರುಗಳಾದ ಎಸ್.ಆರ್.ಅರುಣ್ ರಾವ್ ಮತ್ತು ಪಿ.ಕೆ.ಮಣಿ ಹಾಗೂ ಕುಶಾಲನಗರ ತಾಲೂಕು ಕೂಡಿಗೆ ಗ್ರಾಮ ಪಂಚಾಯತ್ ಗ್ರಾಮ ಪಂಚಾಯತ್ ಸದಸ್ಯ ಎಸ್.ಎನ್.ಅನಂತ, ಕೆ.ಎಸ್.ಶಿವಕುಮಾರ್, ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಅವರ ನೇತೃತ್ವದಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ  ಅವರನ್ನು  ವಿಧಾನಸೌಧದ ಕಚೇರಿಯಲ್ಲಿ ಭೇಟಿ ಮಾಡಿ ಬೇಡಿಕೆಯ ಮನವಿ ಪತ್ರ ಸಲ್ಲಿಸಿದರು.

Read More

ಸುಂಟಿಕೊಪ್ಪ ಜು.23 NEWS DESK : ಪಸಕ್ತ ಸಾಲಿನಲ್ಲಿ ಆಶಾದಾಯಕ ಮುಂಗಾರು ಮಳೆಯಿಂದ ಕೃಷಿಕರು ಹೆಚ್ಚಿನ ಉತ್ಸಾಹದೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜೂನ್ ಬಹುಪಾಲು ಮಳೆಯಾಗುವುದರೊಂದಿಗೆ ಜುಲೈನಲ್ಲಿ ಪುನರ್ವಸು ಮಳೆಯ ಆರ್ಭಟದಿಂದ ಉತ್ತಮ ಮಳೆಯಾಗಿದ್ದು ಹೊಳೆ, ತೋಡು, ನಾಲೆ, ಝರಿಗಳು ತುಂಬಿ ಹರಿಯುತ್ತಿದ್ದು ಗದ್ದೆಗಳಲ್ಲೂ ನೀರು ತುಂಬಿರುವುದರಿಂದ ರೈತರು ಗದ್ದೆ ಉಳುಮೆ ಮಾಡಿ ಭತ್ತದ ಬೀಜ ಹಾಕಲು ಸಹಕಾರಿಯಾಯಿತು. ಮೊದಲೇ ಬೀಜ ಹಾಕಿದ ರೈತರಿಗೆ ಸಸಿಮಿಡಿ ಬೆಳೆದಿದ್ದರಿಂದ ಈಗ ಗದ್ದೆಯನ್ನು ಹದಮಾಡಿ ನಾಟಿ ಕಾಯಕ ಮಾಡಲು ಅನುಕೂಲಕರವಾಗಿದೆ. ಸುಂಟಿಕೊಪ್ಪದ ಗದ್ದೆಹಳ್ಳ ನಿವಾಸಿ ಪ್ರಗತಿಪರ ಕೃಷಿಕ ಪಟ್ಟೆಮನೆ ಉದಯಕುಮಾರ್, ಪ್ರಸನ್ನ, ಮಧು, ಸದಾಶಿವ ಅವರುಗಳ ಗದ್ದೆಯಲ್ಲಿ ಕೃಷಿಕರು ನಾಟಿ ಕಾರ್ಯದಲ್ಲಿ ಮಗ್ನರಾಗಿರುವುದು ಕಂಡು ಬಂತು. ಕೊಡಗರಹಳ್ಳಿ, ಕಂಬಿಬಾಣೆ, ಹೆರೂರು, ಹರದೂರು, ಹಾರ್‍ಬೈಲ್, ಕೆದಕಲ್, ಹೊರೂರು, ಹಾಲೇರಿ, ಕಾಂಡನಕೊಲ್ಲಿ ಮೊದಲಾದ ಗ್ರಾಮದಲ್ಲೂ ಬಿರುಸಿನಿಂದ ಕೃಷಿ ಚಟುವಟಿಕೆಯನ್ನು ಕೈಗೊಂಡಿದ್ದಾರೆ. 

Read More

ಮಡಿಕೇರಿ ಜು.23 NEWS DESK : ಹಿರಿಯ ಪತ್ರಕರ್ತರಾದ ಮನೆಯಪಂಡ ಪೊನ್ನಪ್ಪ ಹಾಕಿ ಆಟಕ್ಕೆ ಪ್ರೋತ್ಸಾಹ ನೀಡಿದವರ ಬಗ್ಗೆ ಲೇಖನ ರಚಿಸಿದ್ದರು. ನನ್ನ ಗುರುಗಳೂ ಆದ ಅವರ ಲೇಖನಗಳ ಕೆಲವು ಅಂಶಗಳನ್ನು ಆರಿಸಿ ಓದುಗರಿಗೆ ತಿಳಿಸಲು ಬಯಸಿದ್ದೇನೆ. ಮಾಲೆಟೀರ ಶೆರಿ ಬೆಳ್ಳಿಯಪ್ಪ ಅವರು ತಮ್ಮ ಬದುಕಿನುದ್ದಕ್ಕೂ ಹಲವು ಸವಾಲುಗಳನ್ನು ಎದುರಿಸುತ್ತಲೇ ನಡೆದರು. ನ್ಯಾಯಕ್ಕಾಗಿ ಬದ್ಧ, ಅನ್ಯಾಯವನ್ನೆಂದೂ ಸಹಿಸಿದವರಲ್ಲ. ಕ್ರೀಡಾ ವಲಯದಲ್ಲಿ ಅವರೊಬ್ಬ ಚೈತನ್ಯಶೀಲ ವ್ಯಕ್ತಿ ಆಗಿದ್ದರು. 70 ರಿಂದ 90ರ ದಶಕದವರೆಗೆ ಬೆಂಗಳೂರಿನಲ್ಲಿ ತಮ್ಮ ವಕೀಲ ವೃತ್ತಿಜೀವನ ನಡೆಸಿದರು. ಇವರು ಸ್ವತಃ ಹಾಕಿ ಆಟಗಾರರಲ್ಲದಿದ್ದರೂ ಈ ಆಟದ ಬಗ್ಗೆ ಸಂಪೂರ್ಣ ತಿಳಿದಿದ್ದರು. ಕ್ರೀಡಾ ಆಡಳಿತಗಾರರಾಗಿ ದುಡಿದು ಯುವ ಪ್ರತಿಭೆಗಳನ್ನು ಬೆಳಕಿಗೆ ತಂದರು. ಹಾಕಿ ಆಟಗಾರರ ಬೆಳವಣಿಗೆಗೆ ಕೊಡಗು ಮತ್ತು ಬೆಂಗಳೂರು ಹಾಕಿ ವಲಯಗಳ ನಡುವೆ ಸೇತುವೆಯಂತಿದ್ದರು. ಹಾಕಿ ಕ್ರೀಡೆಗೆ ಹೊಸ ಪೀಳಿಗೆಯ ಹುಡುಗರನ್ನು ತರಲೆಂದು ಖುದ್ದು ಖಾಸಗಿ ಹಾಕಿ ಕ್ಲಬ್ ಒಂದನ್ನು ಹುಟ್ಟು ಹಾಕಿದ್ದರು. “ಕೂರ್ಗ್ ಬ್ಲೂಸ್” ಕ್ಲಬ್ಬಿನ ಹೆಸರು, ಶೆರಿ…

Read More

ಮಡಿಕೇರಿ ಜು.22 NEWS DESK : ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಹಲವು ಮೂಲಭೂತ ಸಮಸ್ಯೆಗಳು ಕಾಡುತ್ತಿದ್ದರೂ ಪ್ರಂಚಾಯಿತಿ ಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿ ಸಿಪಿಐಎಂ ಪಕ್ಷದ ಕೊಡಗು ಜಿಲ್ಲಾ ಘಟಕ ಪ್ರತಿಭಟನೆ ನಡೆಸಿತು. ಸಿಪಿಐಎಂ ಪಕ್ಷದ ಮುಖಂಡ ಡಾ.ಈ.ರ.ದುರ್ಗಾಪ್ರಸಾದ್ ಮಾತನಾಡಿ ಕೊಡಗು ಜಿಲ್ಲೆಯಲ್ಲೇ ಸಿದ್ದಾಪುರ ಗ್ರಾ.ಪಂ ಅತ್ಯಂತ ದೊಡ್ಡ ಮತ್ತು ಆದಾಯ ಹೆಚ್ಚು ಬರುವ ಪಂಚಾಯ್ತಿಯಾಗಿದೆ. ಆದರೆ ಜನರ ಸಮಸ್ಯೆಗಳಿಗೆ ಜನಪ್ರತಿನಿಧಿಗಳಿಂದ ಯಾವುದೇ ಸ್ಪಂದನೆ ದೊರೆಯುತ್ತಿಲ್ಲ. ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತ್ತಿಲ್ಲವೆಂದು ಆರೋಪಿಸಿದರು. ಅಶುಚಿತ್ವದ ವಾತಾವರಣದಿಂದ ಆರೋಗ್ಯದ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿರುವುದರಿಂದ ಗ್ರಾ.ಪಂ ಕಸದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಚ್.ಬಿ.ರಮೇಶ್ ಮಾತನಾಡಿ ಇಲ್ಲಿಯವರೆಗೆ ಗ್ರಾ.ಪಂ ಯಲ್ಲಿ ಆಡಳಿತ ನಡೆಸಿದವರ ಇಚ್ಛಾಶಕ್ತಿಯ ಕೊರತೆಯಿಂದ ಸಮಸ್ಯೆಗಳಿಗೆ ಪರಿಹಾರ ದೊರೆತ್ತಿಲ್ಲ. ಜನಪ್ರತಿನಿಧಿಗಳು ಪಂಚಾಯಿತಿಯನ್ನು ಸ್ವಾರ್ಥ ಮತ್ತು ತಮ್ಮ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಸಿದ್ದಾಪುರದ ಬಹುದೊಡ್ಡ ಸಮಸ್ಯೆಯಾದ ಕಸ…

Read More

ಮಡಿಕೇರಿ ಜು.22 NEWS DESK : ಕಾರ್ಗಿಲ್ ವಿಜಯ ದಿನದ ಗೌರವಾರ್ಥ  ಭಾರತೀಯ ಸೇನೆಯು 25 ಮಹಿಳೆಯರ ಆಲ್‌ವುಮೆನ್ ಬೈಕ್ ರ್‍ಯಾಲಿ ಆಯೋಜಿಸಿದ್ದು, 2000 ಕಿ.ಮೀ.ಮಾರ್ಗದ ಈ ರ್‍ಯಾಲಿಯಲ್ಲಿ ಕರ್ನಾಟಕದಿಂದ ಇಬ್ಬರು ಮಹಿಳೆಯರು ಪಾಲ್ಗೊಂಡಿದ್ದು, ಈ ಪೈಕಿ ಏಕೈಕ ಕನ್ನಡತಿ ಸುಳ್ಯ ತಾಲೂಕಿನ ಪಂಜ ಸಮೀಪದ ವೃಷ್ಠಿ ಮಲ್ಕಜೆ ಅವರಾಗಿದ್ದಾರೆ. ಪುತ್ತೂರು ಹಾಗೂ ಸುಳ್ಯದಲ್ಲಿ ನ್ಯಾಯವಾದಿಯಾಗಿರುವ ಪುರುಷೋತ್ತಮ ಮಲ್ಕಜೆ ಹಾಗೂ ಉಷಾ ಮಲ್ಕಜೆ ದಂಪತಿಯ ಪುತ್ರಿಯಾಗಿರುವ  ವೃಷ್ಠಿ  ಈ ರ್‍ಯಾಲಿಯಲ್ಲಿ ಪಾಲ್ಗೊಂಡು ವಿಶೇಷ ಸಾಧನೆ ಮೆರೆದಿದ್ದಾರೆ. ಕಾರ್ಗಿಲ್ ವಿಜಯ ದಿವಸವು ಭಾರತೀಯ ಸೇನಾ ಇತಿಹಾಸದಲ್ಲಿ ಮರೆಯಲಾಗದ ದಿನವಾಗಿದ್ದು, 25 ವರ್ಷಗಳ ಹಿಂದಿನ ಈ ಯುದ್ಧದಲ್ಲಿ ಹುತಾತ್ಮರಾದವರಿಗೆ ಗೌರವ ಸಲ್ಲಿಸಲು ಭಾರತೀಯ ಸೇನೆ ಇತ್ತೀಚೆಗಷ್ಟೇ ಟಿವಿಎಸ್ ಮೋಟಾರ್ ಕಂಪೆನಿ ಜೊತೆಗೂಡಿ ನಾರಿ ಶಕ್ತಿ ಕಾರ್ಯಕ್ರಮದಡಿ 25 ಮಹಿಳಾ ಬೈಕರ್‌ಗಳ ವಿಶಿಷ್ಠ ರ್‍ಯಾಲಿ ಆಯೋಜಿಸಿತ್ತು. ಸುಮಾರು 2000 ಕಿ.ಮೀ. ಮಾರ್ಗದ ಬೈಕ್ ರ್‍ಯಾಲಿಯಲ್ಲಿ ಭಾರತೀಯ ಸೇನೆಯ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರು ಹಾಗೂ ಅವರ ಸೇನಾ ಕುಟುಂಬದ…

Read More

ಮಡಿಕೇರಿ ಜು.22 NEWS DESK : ಗಾಳಿ ಮಳೆಗೆ ಚೇರಂಬಾಣೆ ಕೊಟ್ಟೂರು ಗ್ರಾಮದ ಲಿಂಗಪ್ಪ ಪೂಜಾರಿ ಎಂಬುವವರಿಗೆ ಸೇರಿದ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ಚೇರಂಬಾಣೆ ಗ್ರಾ.ಪಂ ಉಪಾಧ್ಯಕ್ಷ ಬಡ್ಡೀರ ಸೋಮಣ್ಣ ಹಾಗೂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.

Read More