ಲೇಖಕ: admin

ಮಡಿಕೇರಿ ಜೂ.18 NEWS DESK : ಕಾಡಾನೆಯೊಂದು ತೆರೆದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಾಲಂಗಾಲ ಗ್ರಾಮದಲ್ಲಿ ನಡೆದಿದೆ. ಗ್ರಾ.ಪಂ ವತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಬಾವಿಯನ್ನು ನಿರ್ಮಿಸಲಾಗುತ್ತಿತ್ತು. ಸುಮಾರು 20 ಅಡಿಗಳಷ್ಟು ಆಳವಿದ್ದ ಬಾವಿಗೆ ಸೋಮವಾರ ಮಧ್ಯರಾತ್ರಿ ಕಾಡಾನೆ ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಆನೆಯ ಮೃತದೇಹವನ್ನು ಮೇಲೆತ್ತುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆಹಾರ ಮತ್ತು ನೀರನ್ನು ಹುಡುಕುತ್ತಾ ಕಾಡಾನೆಗಳು ಕೊಡಗಿನ ಗ್ರಾಮೀಣ ಪ್ರದೇಶಗಳಿಗೆ ಲಗ್ಗೆ ಇಡುತ್ತಿವೆ. ಇದರಿಂದ ಕೃಷಿಕ ವರ್ಗ ಅಪಾರ ನಷ್ಟವನ್ನು ಅನುಭವಿಸುತ್ತಿದೆ, ಅಲ್ಲದೆ ಕಾಡಾನೆಗಳು ಅಸಹಜ ಸಾವಿಗೂ ತುತ್ತಾಗುತ್ತಿವೆ. ಕಾಡಾನೆಗಳ ಉಪಟಳ ಮಿತಿ ಮೀರುತ್ತಿದ್ದು, ಗ್ರಾಮಗಳಲ್ಲಿ ಆತಂಕದ ವಾತಾವರಣ ಮೂಡಿದೆ.

Read More

ಕುಶಾಲನಗರ, ಜೂ.18  NEWS DESK : ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಪ್ರತಿಭಾ ಅವರು ನಿರ್ಮಿಸಿ ನಿರ್ದೇಶಿಸಿ ತಯಾರಿಸಿರುವ ಸಂಭವಾಮಿ ಯುಗೇ ಯುಗೇ ಚಲನಚಿತ್ರ ಜೂನ್ 21ಕ್ಕೆ ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದಾಗಿ ಚಿತ್ರದ ನಿರ್ದೇಶಕ ಚೇತನ್ ಚಂದ್ರಶೇಖರ್ ಶೆಟ್ಟಿ ತಿಳಿಸಿದ್ದಾರೆ. ಕುಶಾಲನಗರದ ಖಾಸಗಿ ಹೊಟೇಲ್ ‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮಾಹಿತಿ ನೀಡಿದ  ಅವರು, ಗ್ರಾಮೀಣ ಸೊಗಡಿನ ಚಿತ್ರ‌ ಇದಾಗಿದ್ದು ಎಲ್ಲಾ ವರ್ಗದ ಪ್ರೇಕ್ಷಕರನ್ನು ರಂಜಿಸುವ ಭರವಸೆಯಿದೆ. ಕಣ್ಣು ಕಾಣದ ತಾಯಿಯೊಬ್ಬಳು ತನ್ನ ಮಕ್ಕಳ ಭವಿಷ್ಯಕ್ಕಾಗಿ ಹೋರಾಡುವ ಕಥೆಯನ್ನು ಒಳಗೊಂಡಿದೆ. ಚಿತ್ರದಲ್ಲಿ ಹಲವು ಹಿರಿಯ ಕಿರಿಯ ಕಲಾವಿದರು ನಟಿಸಿದ್ದಾರೆ. ಕೊಡಗು ಜಿಲ್ಲೆಯ  ಕುಶಾಲನಗರದ ಉದಯೋನ್ಮುಖ ನಟಿಯಾದ ಮಧುರ ಗೌಡ  ನಾಯಕಿಯರಲ್ಲಿ ಒಬ್ಬರಾಗಿ ನಟಿಸಿದ್ದಾರೆ ಎಂದು ತಿಳಿಸಿದ್ದಾರೆ. ಕುಟುಂಬ ಸಮೇತವಾಗಿ ನೋಡಬಹುದಾದ ಹಳ್ಳಿಗಾಡಿನ ಕಥೆ ಚಿತ್ರದಲ್ಲಿ ಅದ್ಭುತವಾಗಿ ಮೂಡಿ ಬಂದಿದೆ ಎಂದು ನಾಯಕ ನಟ ಜಯ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು. ಹೊಸಬರು ಎನ್ನುವುದಕ್ಕಿಂತ ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡುವ ಮೂಲಕ ಕನ್ನಡ ಚಿತ್ರರಂಗದ ಉಳಿವಿಗೆ…

Read More

ಮಡಿಕೇರಿ ಜೂ.17 : ಪುತ್ತೂರಿನ ಕುಂಬ್ರ ಬಳಿ ಭಾನುವಾರ ನಡೆದ ಕಾರು ಮತ್ತು ಬೊಲೆರೊ ನಡುವಿನ ಅಪಘಾತದಲ್ಲಿ ಮೃತಪಟ್ಟ ವಾಲ್ನೂರು ತ್ಯಾಗತ್ತೂರುವಿನ ತ್ಯಾಗತ್ತೂರು ನಿವಾಸಿಗಳು, ಬಿಜೆಪಿಯ ಸಕ್ರಿಯ ಕಾರ್ಯಕರ್ತರೂ ಆದ ರವೀಂದ್ರ(53) ಹಾಗೂ ಲೋಕೇಶ್ (40) ಅವರ ಅಂತ್ಯ ಸಂಸ್ಕಾರ ಇಂದು ಸ್ವಗ್ರಾಮದಲ್ಲಿ ನಡೆಯಿತು. ಮೃತ ರವೀಂದ್ರ ಪತ್ನಿ ಹಾಗೂ ಇಬ್ಬರು ಪುತ್ರರನ್ನು ಮತ್ತು ಲೋಕೇಶ್ ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಪುತ್ತೂರು ಬಿಜೆಪಿ ಪ್ರಮುಖ ಅರುಣ್ ಪುತ್ತಿಲ, ತ್ಯಾಗತ್ತೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಮನು ಮಹೇಶ, ಉಪಾಧ್ಯಕ್ಷ ಗಗನ್ ಉತ್ತಯ್ಯ, ಸಂಘ ಪರಿವಾರದ ಪ್ರಮುಖರಾದ ಪ್ರದೀಪ್, ರವೀಂದ್ರ ಭುವನೇಂದ್ರ ಮತ್ತಿತರರು ಮೃತ ದೇಹಗಳನ್ನು ತರುವಲ್ಲಿ ಸಂಪೂರ್ಣ ಸಹಕಾರ ನೀಡಿದರು.

Read More

ಮಡಿಕೇರಿ ಜೂ.17 NEWS DESK : ಕೊಂಡಂಗೇರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಬಡ ವಿದ್ಯಾರ್ಥಿಗಳಿಗೆ ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಕೆ.ಜಿ.ಜಾಶಿರ್ ಮೂರ್ನಾಡು ಹಾಗೂ ಕೊಂಡಂಗೇರಿ ಜೆಡಿಎಸ್ ಮುಖಂಡ ನಜೀರ್ ಆಲಿ ಅವರು ಪುಸ್ತಕಗಳನ್ನು ವಿತರಿಸಿದರು. ಸುಮಾರು 40 ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಪುಸ್ತಕಗಳನ್ನು ನೀಡಲಾಗಿದೆ ಎಂದು ಜಾಶಿರ್ ತಿಳಿಸಿದರು. ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದ ಈ ಸಂದರ್ಭ ಉಪಸ್ಥಿತರಿದ್ದರು.

Read More

ಮಡಿಕೇರಿ ಜೂ.17 NEWS DESK : ಸಿದ್ದಾಪುರದ ಕಾಫಿ ತೋಟ ಸೇರಿದಂತೆ ಕೊಡಗು ಜಿಲ್ಲೆಯಾದ್ಯಂತ ನಡೆಯುತ್ತಿರುವ ಬೃಹತ್ ಭೂಪರಿವರ್ತನೆಗೆ ಆಡಳಿತ ವ್ಯವಸ್ಥೆಯ ಪರೋಕ್ಷ ಕುಮ್ಮಕ್ಕು ಇದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಆರೋಪಿಸಿದ್ದಾರೆ. ಸಿದ್ದಾಪುರದಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಇಂದು ನಡೆದ ಶಾಂತಿಯುತ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು ಪವಿತ್ರ “ಕೊಡವ ಲ್ಯಾಂಡ್” ಉಳಿಯಬೇಕಾದರೆ ಬೃಹತ್ ಭೂಪರಿವರ್ತನೆ ಪ್ರಕ್ರಿಯೆಗಳು ಸ್ಥಗಿತಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಆಂಧ್ರ ಸೇರಿದಂತೆ ವಿವಿಧ ರಾಜ್ಯಗಳ ಭೂಮಾಫಿಯ ಹಾಗೂ ರಾಜಕೀಯ ಬೆಂಬಲಿಗರು ಭೂಲೋಕದ ಸ್ವರ್ಗವೆಂದೇ ಪರಿಗಣಿಸಲ್ಪಟ್ಟಿರುವ ಕೊಡವ ಭೂಮಿಯನ್ನು ವ್ಯಾಪರೀಕರಣಗೊಳಿಸಲು ಮುಂದಾಗಿದ್ದಾರೆ. ಹಸಿರ ಸುಂದರ ಪ್ರಕೃತಿಯ ಸೊಬಗನ್ನು, ಜಲಮೂಲಗಳನ್ನು ನಾಶಗೊಳಿಸಿ ಬೃಹತ್ ಕಾಂಕ್ರೀಟ್ ಕಟ್ಟಡಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದಾರೆ. ಭೂಮಿ ಖರೀದಿ ವ್ಯವಹಾರ ಒಂದು ಜೂಜಾಟದಂತೆ ನಡೆಯುತ್ತಿದ್ದು, ಈ ಬೆಳವಣಿಗೆ ಅತ್ಯಂತ ಸೂಕ್ಷ್ಮ ಜನಾಂಗವಾಗಿರುವ ಆದಿಮಸಂಜಾತ ಬುಡಕಟ್ಟು ಜನಾಂಗ ಕೊಡವರ ನಾಶಕ್ಕೂ ಕಾರಣವಾಗಬಹುದು ಎಂದು ಆತಂಕ…

Read More

ಸುಂಟಿಕೊಪ್ಪ ಜೂ.17 NEWS DESK : ನಾಡಿನಾದ್ಯಂತ ತ್ಯಾಗ ಬಲಿದಾನ ಸಂಕೇತವಾದ ಮುಸ್ಲಿಂ ಭಾಂದವರು ಬಕ್ರೀದ್ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಪಟ್ಟಣದ ವಿವಿಧ ಮಸೀದಿಗಳಲ್ಲಿ ಬೆಳಿಗ್ಗಿನಿಂದಲೇ ನೂರಾರು ಸಂಖ್ಯೆಯಲ್ಲಿ ಮುಸ್ಲಿಂ ಭಾಂದವರು ಪಾಲ್ಗೊಂಡು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸುಂಟಿಕೊಪ್ಪ ಪಟ್ಟಣದ ಸುನ್ನಿ ಶಾಫಿ ಜುಮ್ಮ ಮಸ್ಜಿದ್‍ನಲ್ಲಿ ಮುಸ್ಲಿಯರ್ ಆರೀಫ್ ಸಖಾಫಿ, ಸುನ್ನಿ ಹನಫಿ ಮುಸ್ಲಿಂ ಜಮೀಯಮಸೀದಿ ಮೌಲನಾ ಜುಬ್ಬೇರ್ ಅಜಾರತ್, ಸುನ್ನಿ ಶಾಫಿ ಜುಮಾ ಮಸ್ಜಿದ್ ಧಾರ್ಮಿಕ ಮೌಲವಿ ಮೊಹಮದ್ ಹುಸೈನ್, ಕೂÀಬ್ಬ ಮಸ್ಜಿದ್ ಮೌಲನಾ ಇನಾಂ ಹಾಗೂ ಗದ್ದೆಹಳ್ಳದ ನೂರು ಜುಮ್ಮ ಮಸ್ಜಿದ್‍ನ ಆಸೀಫ್ ಶಾಖಾಫಿ ಧಾರ್ಮಿಕ ಪ್ರವಚ ನೀಡಿದರು. ನಂತರ ಪರಸ್ಪರು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ನಂತರ ಈದ್ಗಾಗಳಿಗೆ ತೆರಳಿ ಹಿರಿಯರಿಗೆ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಸಲಾಫಿ ಮಸೀದಿಯಲ್ಲಿ ನಿಶಾದ್ ಸ್ವಲಾಹಿ, ಧಾರ್ಮಿಕ ಪ್ರವಚನಗಳನ್ನು ನೇರವೇರಿಸಿದರು.

Read More

ಮಡಿಕೇರಿ ಜೂ.17  NEWS DESK : ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯಿಂದ ನಂದಿಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಉಚಿತ ನೋಟ್ ಪುಸ್ತಕ ಹಾಗೂ ಶೈಕ್ಷಣಿಕ ಸಾಮಾಗ್ರಿಗಳನ್ನು ವಿತರಿಸಲಾಯಿತು. ದಾನಿಗಳಾದ ಚೆನ್ನಯ್ಯ ಅವರು ಕೊಡುಗೆಯಾಗಿ ನೀಡಿದ ಪುಸ್ತಕ ಹಾಗೂ ಶೈಕ್ಷಣಿಕ ಸಾಮಾಗ್ರಿಗಳನ್ನು ಶಾಲೆಯ ನೀಡಲಾಯಿತು. ಈ ಸಂದರ್ಭ ಮಾತನಾಡಿದ ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆಯ ಡಾ.ಸಂಪತ್, ವಿದ್ಯಾರ್ಥಿಗಳು ತಮ್ಮ ಮನೆಯ ವಾತಾವರವನ್ನು ಸೂಚಿಯಾಗಿಡುವುದರ ಜೊತೆಗೆ ವೈಯಕ್ತಿಕ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ಆ ಮೂಲಕ ಉತ್ತಮ ಆರೋಗ್ಯವನ್ನು ಪಡೆಯಬಹುದು ಎಂದು ಸಲಹೆ ನೀಡಿದರು. ಎಲ್ಐಸಿ ವ್ಯವಸ್ಥಾಪಕ ಹಾಗೂ ಪುಸ್ತಕ ದಾನಿ ಚೆನ್ನಯ್ಯ ಮಾತನಾಡಿ, ತಾನು ಇದೇ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದು, ಇಲ್ಲಿಯ ವಿದ್ಯಾರ್ಥಿಗಳಿಗೆ ಹಾಗೂ ಶಾಲೆಗೆ ಸೇವೆ ಸಲ್ಲಿಸುವ ಅವಕಾಶ ದೊರೆತ್ತಿರುವುದು ನನ್ನ ಭಾಗ್ಯ ಎಂದರು. ವಿದ್ಯಾರ್ಥಿ ಸರ್ಕಾರಿ ಶಾಲೆ ಎಂಬ ಕೀಳರಿಮೆ ಹೊಂದದೆ. ಶಾಲೆಯ ಸಿಗುವ ಎಲ್ಲಾ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಉನ್ನತ ಸ್ಥಾನದಲ್ಲಿ ಗುರುತಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭ ಪುಸ್ತಕ…

Read More

ಮಡಿಕೇರಿ ಜೂ.17 NEWS DESK : ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕೊಡಗು ಜಿಲ್ಲಾ ಬಿಜೆಪಿ ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿತು. ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಸೈಕಲ್ ತುಳಿದು, ಕಾರನ್ನು ಹಗ್ಗದಿಂದ ಎಳೆಯುವ ಮೂಲಕ ರಾಜ್ಯ ಸರ್ಕಾರದ ಬೆಲೆ ಏರಿಕೆಯ ಕ್ರಮವನ್ನು ತೀವ್ರವಾಗಿ ಖಂಡಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ಶಾಸಕರುಗಳಾದ ಎಂ.ಪಿ.ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ಮಾಜಿ ಎಂಎಲ್‍ಸಿಗಳಾದ ಸುನಿಲ್ ಸುಬ್ರಮಣಿ, ಎಸ್.ಜಿ.ಮೇದಪ್ಪ ಸೇರಿದಂತೆ ಕಾರ್ಯಕರ್ತರು ಜ.ತಿಮ್ಮಯ್ಯ ವೃತ್ತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್‍ಗೆ ಲೀಟರ್‍ವೊಂದಕ್ಕೆ ಅನುಕ್ರಮವಾಗಿ 3 ಮತ್ತು 3.50 ರೂ.ಗಳನ್ನು ಹೆಚ್ಚಳ ಮಾಡಿರುವ ಮೂಲಕ, ಜನ ಸಾಮಾನ್ಯರ ಮೇಲೆ ಹೆಚ್ಚಿನ ಹೊರೆ ಹೊರಿಸಿದೆ. ಇದು ಸರ್ಕಾರದ…

Read More

ಸೋಮವಾರಪೇಟೆ ಜೂ.17 NEWS DESK  : ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ಅಗತ್ಯವೆಂದು ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಅಭಿಪ್ರಾಯ ಪಟ್ಟರು. ಪಟ್ಟಣದ ಎಂ.ಜಿ ರಸ್ತೆಯಲ್ಲಿ ನೂತನವಾಗಿ ಪ್ರಾರಂಭವಾಗಲಿರುವ ನಾಟ್ಯಕಲಾ ನೃತ್ಯ ಶಾಲೆಗೆ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಭಾಗದ ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕಾಗಿದೆ ಆದ್ದರಿಂದ ಇಂಥ ನಾಟ್ಯ ಶಾಲೆಗಳು ಅವಶ್ಯಕ ಎಂದರು. ಪತ್ರಿಕಾ ಭವನದ ಅಧ್ಯಕ್ಷ ಎಸ್.ಮಹೇಶ್ ಮಾತನಾಡಿ, ಇಂದಿನ ಮಕ್ಕಳು ಬಹಳ ಬುದ್ಧಿವಂತರು. ಒಬ್ಬೊರೊಳಗೆ ಒಂದೊಂದು ಪ್ರತಿಭೆಗಳಿರುತವೆ. ಅವುಗಳನ್ನು ಗುರುತಿಸಬೇಕು, ಶಾಲೆಗಳಲ್ಲಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯು ಅವಶ್ಯಕವೆಂದರು. ಇಂದು ದೃಶ್ಯ ಮಾದ್ಯಮಗಳು ಸ್ಪರ್ಧೆಗಳನ್ನು ಆಯೋಜಿಸಿ ಸುಪ್ತವಾಗಿ ಅಡಗಿರುವ ಪ್ರತಿಭೆಗಳನ್ನು ನಾಡಿನಾದ್ಯಂತ ಪರಿಚಯ ಮಾಡುತ್ತಿರುವುದರಿಂದ ಎಲ್ಲರಲ್ಲೂ ಆಸಕ್ತಿ ಹೆಚ್ಚುತ್ತಿದೆ ಎಂದರು. ರಾಷ್ಟ್ರೀಯ ನೃತ್ಯ ತರಬೇತುದಾರ ವಿನೋದ್ ಕರ್ಕೇರಾ ಮಾತನಾಡಿ, ಇಂದು ನೃತ್ಯವೆಂಬುದು ಜೀವನದ ಅವಿಭಾಜ್ಯ ಅಂಗವೆಂಬಂತಾಗಿದೆ ಮಕ್ಕಳಿಂದ ವಯೋವೃದ್ಧರವರೆಗೂ ನೃತ್ಯದ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಎಲ್ಲಾರೂ ದೃಶ್ಯ ಮಾಧ್ಯಮಗಳಲ್ಲಿ ಬರುವ ನೃತ್ಯ, ಹಾಡು ಮುಂತಾದ…

Read More

ನಾಪೋಕ್ಲು ಜೂ.17 NEWS DESK : ಕೊಡಗು-ಮೈಸೂರು ಲೋಕಸಭಾ ಕ್ಷೇತ್ರ ಅತ್ಯಂತ ವಿಸ್ತಾರವಾದ ಕ್ಷೇತ್ರವಾಗಿದ್ದು, ಜಿಲ್ಲೆಯ ನಾಯಕರು ಹಾಗೂ ಕಾರ್ಯಕರ್ತರು ಚುನಾವಣೆ ಗೆಲುವಿಗಾಗಿ ಪ್ರಾಮಾಣಿಕ ಶ್ರಮ ಹಾಕಿದ್ದಾರೆ ಎಂದು ಕ್ಷೇತ್ರದ ನೂತನ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ಸಂಸದರಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡಿದ ಅವರು, ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ನಾಪೋಕ್ಲಿನ ಭಗವತಿ ಸನ್ನಿಧಿಯ ಸಮುದಾಯ ಭವನದಲ್ಲಿ ನಡೆದ ಕಾರ್ಯಕರ್ತ ಸಭೆಯಲ್ಲಿ ಪಾಲ್ಗೊಂಡು ಮತದಾರರಿಗೆ ಧನ್ಯವಾದ ಸಲ್ಲಿಸಿದರು. ನಂತರ ಮಾತನಾಡಿದ ಅವರು, ಚುನಾವಣಾ ಪ್ರಚಾರ ಆರಂಭಿಸಿದ ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿ ಸಭೆ ನಡೆಸಿದ್ದು, ಕಾವೇರಿಯ ಆಶೀರ್ವಾದಿಂದಲೇ ಅಧಿಕಾರ ಸಿಕ್ಕಿದೆ ಎಂದರು. ಚುನಾವಣೆ ಸಂದರ್ಭ ಯಾವ ರೀತಿ ಶ್ರಮ ಹಾಕಿದ್ದೆವೋ ಅದೇ ರೀತಿ ಮುಂದಿನ ಐದು ವರ್ಷಗಳಲ್ಲೂ ಕೆಲಸ ಮಾಡುವುದಾಗಿ ಹೇಳದಿ ಅವರು, ಆದಷ್ಟು ಬೇಗ ಪ್ರಗತಿ ಪರೀಶೀಲನಾ ಸಭೆ ನಡೆಸಿ, ಉಳಿದಿರುವ ಕೆಲಸ ಕಾರ್ಯಗಳತ್ತ ಗಮನ ಹರಿಸುವುದಾಗಿ ಭರವಸೆ ನೀಡಿದರು. ಇದಕ್ಕೂ ಮುನ್ನ ಭಗವತಿ…

Read More