ಲೇಖಕ: admin

ಮಡಿಕೇರಿ ಜು.15 NEWS DESK : ಆರ್ಥಿಕ ಹೊರೆಯನ್ನು ಅನುಭವಿಸುತ್ತಿರುವ ರಾಜ್ಯ ಸರ್ಕಾರ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಕೊಡಗು ಜಿಲ್ಲೆಯಲ್ಲಿ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಗೆ ಪರೋಕ್ಷವಾಗಿ ಉತ್ತೇಜನ ನೀಡುತ್ತಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಗಂಭೀರ ಆರೋಪ ಮಾಡಿದ್ದಾರೆ. ಸಿದ್ದಾಪುರದ ಕಾಫಿ ತೋಟಗಳು ಸೇರಿದಂತೆ ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಸಿಎನ್‍ಸಿ ವತಿಯಿಂದ ಪೊನ್ನಂಪೇಟೆ ಪಟ್ಟಣದಲ್ಲಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು. ಭೂಪರಿವರ್ತನೆ ಮತ್ತು ನೋಂದಣಿಗೆ ದೊಡ್ಡ ಮೊತ್ತದ ಶುಲ್ಕ ವಸೂಲಿ ಮಾಡುತ್ತಿರುವ ಸರ್ಕಾರ ಕೊಡಗು ಜಿಲ್ಲೆಯ ಕೃಷಿಭೂಮಿಯನ್ನು ಸುಲಭವಾಗಿ ಪರಭಾರೆ ಮಾಡಲು ಅವಕಾಶ ನೀಡುತ್ತಿದೆ. ಸರ್ಕಾರ ದಿನಕ್ಕೊಂದು ಕರಾಳ ಕಾನೂನನ್ನು ಜಾರಿಗೆ ತಂದು ಕೊಡವರಿಗೆ ಕಿರುಕುಳ ನೀಡುತ್ತಿದೆ. ಕೊಡವ ಲ್ಯಾಂಡ್ ನಿಂದಲೇ ಒಕ್ಕಲೆಬ್ಬಿಸುವ ಪ್ರಯತ್ನಗಳು ನಡೆಯುತ್ತಿದೆ. ದೊಡ್ಡ ದೊಡ್ಡ ಬಂಡವಾಳಶಾಹಿಗಳ ಪರ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿರುವ ಸರ್ಕಾರ ಮತಬ್ಯಾಂಕ್ ಗಾಗಿ ಕೊಡಗನ್ನು…

Read More

ಪುತ್ತೂರು ಜು.15 NEWS DESK : ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ನಡೆಸಿದ 2023-24ನೇ ಶೈಕ್ಷಣಿಕ ಸಾಲಿನ ಅಂತಿಮ ವರ್ಷದ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ 2 ರ‍್ಯಾಂಕ್ ಗಳನ್ನು ಪಡೆದುಕೊಂಡಿದ್ದಾರೆ. ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಕೇಶವ ಪ್ರಜ್ವಲ್.ಪಿ 9.38 ಸಿಜಿಪಿಎ ಅಂಕಗಳೊಂದಿಗೆ 3ನೇ ರ‍್ಯಾಂಕ್ ಹಾಗೂ ಕೆ.ಪಲ್ಲವಿ 9.33 ಸಿಜಿಪಿಎ ಅಂಕಗಳೊಂದಿಗೆ 5ನೇ ರ‍್ಯಾಂಕ್ ಗಳಿಸಿಕೊಂಡಿದ್ದಾರೆ. ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಪ್ರೊ.ಪ್ರಶಾಂತ್ ಹಾಗೂ ಪ್ರಾಧ್ಯಾಪಕರ ಸಮರ್ಥ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಈ ಸಾಧನೆಯನ್ನು ಮಾಡಿದ್ದಾರೆ. ಕೇಶವ ಪ್ರಜ್ವಲ್.ಪಿ ಅವರು ಕುಂಬ್ಳೆಯ  ಶ್ರೀವಾಣಿ ಹಾಗೂ  ಉದಯಶಂಕರ ಭಟ್ ಅವರ ಪುತ್ರ. ಕೆ.ಪಲ್ಲವಿ ಅವರು ಬಂಟ್ವಾಳದ ಅಲ್ಲಿಪಾದೆಯ ಚಂದ್ರಿಕಾ ಹಾಗೂ ಕೆ.ಕಿಶೋರ್ ಕುಮಾರ್ ಅವರ ಪುತ್ರಿ. ವಿದ್ಯಾರ್ಥಿಗಳ ಈ ಸಾಧನೆಗೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್, ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ…

Read More

ಮಡಿಕೇರಿ ಜು.15 NEWS DESK : ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‍ಗಳಲ್ಲಿ ಖಾಲಿ ಇರುವ ಕ್ಲರಿಕಲ್ ಮತ್ತು ಪ್ರೊಬೇಶನರಿ ಆಫ಼ೀಸರ್ ಹುದ್ದೆಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಖಾ ಲಿ ಇರುವ ಕ್ಲರಿಕಲ್ ಹುದ್ದೆಗಳ ನೇಮಕಾತಿಗೆ ಐಬಿಪಿಎಸ್ ಸಂಸ್ಥೆ ಈಗಾಗಲೇ ಅರ್ಜಿ ಆಹ್ವಾನಿಸಿದೆ. ಈ ವರ್ಷದಲ್ಲಿ ಇಲ್ಲಿಯವರೆಗೆ ಒಟ್ಟು 15,215 ಕ್ಕೂ ಹೆಚ್ಚಿನ ಬ್ಯಾಂಕ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದಂತಾಗಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಖಾಲಿ ಇರುವ ಪ್ರೊಬೇಶನರಿ ಆಫ಼ೀಸರ್ ಹುದ್ದೆಗಳು, ಎಸ್‍ಬಿಐ, ಆರ್‍ಬಿಐ ಹಾಗೂ ಖಾಸಗಿ ಬ್ಯಾಂಕ್‍ಗಳಲ್ಲಿ ಖಾಲಿ ಇರುವ ಸಾವಿರಾರು ಕ್ಲರಿಕಲ್ ಹಾಗೂ ಪ್ರೊಬೇಶನರಿ ಆಫ಼ೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗುವುದು ತಿಳಿದು ಬಂದಿದೆ. ಹಾಸನದ ಸಾಲಗಾಮೆ ರಸ್ತೆಯಲ್ಲಿರುವ ಕೃಷಿಕ್ ಸರ್ವೋದಯ ಫೌಂಡೇಶನ್‍ನಲ್ಲಿ ಬ್ಯಾಂಕ್ ನೇಮಕಾತಿ ಪರೀಕ್ಷೆಗಳ ತಯಾರಿಗೆ ಜುಲೈ, 16 ರಿಂದ 18 ರವರೆಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಡೆಮೋ ಉಚಿತ ತರಗತಿಗಳನ್ನು ಆಯೋಜಿಸಲಾಗಿದ್ದು, ಆಸಕ್ತರು ಈ ಅವಕಾಶದ ಉಪಯೋಗಪಡೆದುಕೊಳ್ಳಲು ಕೂಡಲೇ ಮೊಬೈಲ್ ಸಂಖ್ಯೆ 8660217739…

Read More

ಮಡಿಕೇರಿ ಜು.15 NEWS DESK : ಎಲ್ಲ ರೀತಿಯ ವಾಣಿಜ್ಯ, ಕೈಗಾರಿಕೆ ಮತ್ತು ವ್ಯಾಪಾರ ಸಂಸ್ಥೆಗಳು ಟ್ರಸ್ಟ್ ಗಳು ಸಮಾಲೋಚನ ಕೇಂದ್ರಗಳು ಹಾಗೂ ಆಸ್ಪತ್ರೆಗಳ ಪ್ರಯೋಗಾಲಗಳು ಮತ್ತು ಹೋಟೆಲ್ ಹಾಗೂ ಅಂಗಡಿ ಮುಗಟ್ಟು ಹಾಗೂ ಇನ್ನಿತರ ಕಡೆಗಳಲ್ಲಿನ ನಾಮ ಫಲಕಗಳಲ್ಲಿ ಶೇ.60 ರಷ್ಟು ಬಳಕೆ ಮಾಡುವಂತೆ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ  ಒತ್ತಾಯಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ವೇದಿಕೆಯ ಪ್ರಮುಖ ರವಿಗೌಡ, ಕರ್ನಾಟಕದಲ್ಲಿ ಕನ್ನಡ ಭಾಷೆ ಕಡ್ಡಾಯವಾಗಿ ಅನುಷ್ಠಾನಗೊಳಿಸುವ ಕುರಿತು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ -2022 ಮತ್ತು ತಿದ್ದುಪಡಿ 2024 ಸಮರ್ಪಕವಾಗಿ ಜಾರಿಗೊಳಿಸುವಂತೆ ಪ್ರಕಾರ ಆದೇಶ ಹೊರಡಿಸಿದೆ ಆದರೆ ಎಲ್ಲ ರೀತಿಯ ವಾಣಿಜ್ಯ.ಕೈಗಾರಿಕೆ. ಮತ್ತು ವ್ಯಾಪಾರ ಸಂಸ್ಥೆಗಳು ಟ್ರಸ್ಟ್ ಗಳು ಸಮಾಲೋಚನ ಕೇಂದ್ರಗಳು ಹಾಗೂ ಆಸ್ಪತ್ರೆಗಳ ಪ್ರಯೋಗಾಲಗಳು ಮತ್ತು ಹೋಟೆಲ್ ಹಾಗೂ ಅಂಗಡಿ ಮುಗಟ್ಟು ಹಾಗೂ ಇನ್ನಿತರ ಕಡೆಗಳಲ್ಲಿನ ನಾಮ ಫಲಕಗಳಲ್ಲಿ ಶೇ60 ರಷ್ಟು ಜಾಗದಲ್ಲಿ ಕನ್ನಡ ಅಕ್ಷರಗಳನ್ನು ಒಳಗೊಂಡಿರಬೇಕು ಎಂದು ಸರಕಾರದ ಆದೇಶವಿದ್ದರೂ ಕೂಡ ಮಡಿಕೇರಿ ತಾಲೂಕಿನ…

Read More

ಮಡಿಕೇರಿ ಜು.15 NEWS DESK : ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಾಮಗಾರಿ ಸ್ಥಳಕ್ಕೆ ತಾಲ್ಲೂಕು ಕಾರ್ಮಿಕ ಅಧಿಕಾರಿ ಎಂ.ಎಂ.ಯತ್ನಟ್ಟಿ  ಭೇಟಿ ನೀಡಿ ಪರಿಶೀಲಿಸಿದರು. ಕಾರ್ಮಿಕರು ಕೆಲಸದ ಸಮಯದಲ್ಲಿ ಸುರಕ್ಷಿತಾ ಕ್ರಮಗಳನ್ನು ಕೈಗೊಂಡು, ಯಾವುದೇ ರೀತಿಯ ಅನಾಹುತ ಸಂಭವಿಸದಂತೆ ಎಚ್ಚರಿಗೆ ವಹಿಸುವಂತೆ ತಿಳಿವಳಿಕೆ ನೀಡಿದರು. ಹಾಗೆಯೇ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

Read More

ಮಡಿಕೇರಿ ಜು.24 NEWS DESK : ಜಿಲ್ಲೆಯಲ್ಲಿ ಧಾರಕಾರ ಮಳೆಯಾಗುತ್ತಿರುವುದರಿಂದ ಕುಶಾಲನಗರ ಸಮೀಪದ ಕಣಿವೆ ತೂಗು ಸೇತುವೆ ಬಳಿ ಜೀವನದಿ ಕಾವೇರಿಯ ನೀರಿನ ಮಟ್ಟ ಏರಿಕೆಯಾಗುತ್ತಿದೆ. ನದಿಯ ನೀರಿನ ಹರಿವು ಹೆಚ್ಚಿರುವುದರಿಂದ ತಹಶೀಲ್ದಾರ್ ಕಿರಣ್ ಗೌರಯ್ಯ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. 

Read More

ಮಡಿಕೇರಿ ಜು.15 NEWS DESK  : ಕೊಡಗಿನ ವಿವಿಧೆಡೆ ಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದ್ದು, ವಿವಿಧೆಡೆ ಹಾನಿಯಾಗಿದೆ. ಮಡಿಕೇರಿ ಹೋಬಳಿ ಮರಗೋಡು ಗ್ರಾಮದ ಎಂ.ಕೆ.ಅಣ್ಣು ಅವರ ವಾಸದ ಮನೆಯು ಸಂಪೂರ್ಣ ಹಾನಿಯಾಗಿದೆ. ಸ್ಥಳಕ್ಕೆ ತಹಸೀಲ್ದಾರ್ ಪ್ರವೀಣ್ ಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೇಟಿ ನೀಡಿ ವೀಕ್ಷಿಸಿದರು. ಕುಟುಂಬವನ್ನು ಬೇರೊಂದು ಮನೆಗೆ ಸ್ಥಳಾಂತರಿಸಿದರು. ಮಾದಾಪಟ್ಟಣ ಗ್ರಾಮದ ನಿವಾಸಿ ಬಸವರಾಜು ಅವರ ವಾಸದ ಮನೆಯ ಗೋಡೆ ಹಾನಿ ಹಾನಿಯಾಗಿದೆ. ಈ ಸಂಬಂಧ ತಹಶೀಲ್ದಾರ್ ಕಿರಣ್ ಗೌರಯ್ಯ ಹಾಗೂ ಕಂದಾಯ ಪರಿವೀಕ್ಷಕರು ಸ್ಥಳ ಪರಿಶೀಲನೆ ಮಾಡಿದರು. ಕುಶಾಲನಗರ ಹೋಬಳಿಯ ಹೆಗ್ಗಡಳ್ಳಿ ಗ್ರಾಮದ ಲಕ್ಷ್ಮಿ ಎಂಬವರ ಮನೆಯ ಗೋಡೆ ಭಾಗವು ಹಾನಿಯಾಗಿದ್ದು ತಹಶೀಲ್ದಾರ್ ಕಿರಣ್ ಗೌರಯ್ಯ ಭೇಟಿ ನೀಡಿ ಪರಿಶೀಲಿಸಿದರು. ಭಾಗಮಂಡಲ ಹೋಬಳಿ ಬೆಟ್ಟತ್ತೂರು ಗ್ರಾಮದ ದೇವರಕೊಲ್ಲಿ ಎಂಬಲ್ಲಿ ಕುಡಿಯರ ಗೌರಮ್ಮ ಕರುಂಬಯ್ಯ ಅವರ ಮನೆ ಮೇಲೆ ಮರ ಬಿದ್ದು ಹೆಚ್ಚಿನ ಹಾನಿಯಾಗಿದೆ.

Read More

ಮಡಿಕೇರಿ ಜು.15 NEWS DESK : ಮಡಿಕೇರಿಯಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆ ಹಿನ್ನೆಲೆ ನಗರಸಭಾ ವ್ಯಾಪ್ತಿಯಲ್ಲಿ ಸಣ್ಣಪುಟ್ಟ ಹಾನಿ ಆಗಿರುವ ಪ್ರದೇಶಗಳಿಗೆ ಪೌರಾಯುಕ್ತ ವಿಜಯ್  ಭೇಟಿ ನೀಡಿ ಪರಿಶೀಲಿಸಿದರು.

Read More

ಬೆಂಗಳೂರು, ಜು.15 NEWS DESK : ರಕ್ಷಣಾ ಸಚಿವಾಲಯದ ಡೈರೆಕ್ಟರ್‌ ಜನರಲ್‌ ರಿಸೆಟ್ಲಮೆಂಟ್‌ (ಡಿಜಿಆರ್), ಮಾಜಿ ಯೋಧರಿಗಾಗಿ 2024ರ ಜುಲೈ 19ರಂದು ಜಾಲಹಳ್ಳಿಯ ವಾಯುಪಡೆ ನಿಲ್ದಾಣ(ಎಂಟಿ ಕಾಂಪ್ಲೆಕ್ಸ್), ಜಾಲಹಳ್ಳಿ ಪೂರ್ವ (ಸಿಟಿಐ ಸಮೀಪ) ಉದ್ಯೋಗ ಮೇಳವನ್ನು ಆಯೋಜಿಸಿದೆ. ನಿವೃತ್ತ ಯೋಧರಿಗೆ ಎರಡನೇ ಅವಕಾಶವನ್ನು ಕಲ್ಪಿಸಲು ಉದ್ಯೋಗ ಬಯಸುವವರು ಮತ್ತು ಉದ್ಯೋಗದಾತರ ನಡುವೆ ಸಂಪರ್ಕ ಕಲ್ಪಿಸುವುದು ಈ ಉದ್ಯೋಗ ಮೇಳದ ಉದ್ದೇಶವಾಗಿದೆ. ಎಲ್ಲಾ ಮಾಜಿ ಸೈನಿಕರ ನೋಂದಣಿಯು ಬೆಳಿಗ್ಗೆ 7 ರಿಂದ 10 ರವರೆಗೆ ಸ್ಥಳದಲ್ಲಿಯೇ ನಡೆಯುತ್ತದೆ. ನೋಂದಾಯಿಸಲು, ಇಎಸ್ ಎಂ ತಮ್ಮ ಇಎಸ್ಎಂ ಗುರುತಿನ ಚೀಟಿ ಮತ್ತು ಇತ್ತೀಚಿನ ಸಿವಿ ಅಥವಾ ಸ್ವವಿವರ (ಬಯೋಡೇಟಾ)ದ ಐದು ಪ್ರತಿಗಳನ್ನು ಛಾಯಾಚಿತ್ರದೊಂದಿಗೆ ತರಬೇಕು. ಉದ್ಯೋಗಾಕಾಂಕ್ಷಿ ಇಎಸ್ ಎಂಗಳು ಬಹುಬಗೆಯ ಉದ್ಯೋಗಾವಕಾಶಗಳು ಮತ್ತು ಅಡತಡೆ ರಹಿತ ನೇಮಕ ಪ್ರಕ್ರಿಯೆಗಳನ್ನು ಪಡೆಯುತ್ತಾರೆ. ವಿವಿಧ ಕಾರ್ಪೊರೇಟ್‌ ಸಂಸ್ಥೆಗಳು ಸಂದರ್ಶನ/ಪರಿಶೀಲನೆ ಮತ್ತು ನಂತರ ಹಿರಿಯ ಮೇಲ್ವಿಚಾರಕರು, ಮಧ್ಯಮ/ಹಿರಿಯ ಮಟ್ಟದ ವ್ಯವಸ್ಥಾಪಕರಿಂದ ಹಿಡಿದು ಕಾರ್ಯತಂತ್ರದ ಯೋಜಕರು ಮತ್ತು ಯೋಜನಾ ನಿರ್ದೇಶಕರವರೆಗಿನ ನೇಮಕಾತಿಗಳಲ್ಲಿ…

Read More

ಮಡಿಕೇರಿ ಜು.15 NEWS DESK : ಭಾರೀ ಗಾಳಿ ಮಳೆಯಿಂದಾಗಿ ಮನೆಯ ಮೇಲೆ ಮರ ಬಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಸೋಮವಾರಪೇಟೆ ಹೋಬಳಿಯ ನೇಗಳ್ಳಿ ಕರ್ಕಳ್ಳಿ ಗ್ರಾಮದ ನಿವಾಸಿ ಜಯಂತಿ ಎಂಬವರ ಮನೆಯ ಮೇಲೆ ಮರ ಬಿದ್ದು ಮೇಲ್ಚಾವಣಿ ಮತ್ತು ಗೋಡೆ ಪೂರ್ಣ ಹಾನಿಯಾಗಿದೆ.  

Read More