ಲೇಖಕ: admin

ನಾಪೋಕ್ಲು ಜೂ.11 NEWS DESK : ಗಿಡಗಳನ್ನು ನೆಡುವುದು ಮುಖ್ಯವಲ್ಲ, ನೆಟ್ಟ ಗಿಡಗಳನ್ನು ಪೋಷಣೆ ಮಾಡುವುದು ಮುಖ್ಯ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ ಸಂಸ್ಥೆಯ ಸಂಪಾಜೆ ವಲಯ ಅಧ್ಯಕ್ಷ ಎಂ.ಧನಂಜಯ ಹೇಳಿದರು. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಸ್ಥಳೀಯ ಸಂಸ್ಥೆ ಸಂಪಾಜೆ ವತಿಯಿಂದ ವಿವಿಧ ಶಾಲೆಗಳಲ್ಲಿ ಭೂಮಿಯ ಮರುಸ್ಥಾಪನೆ ಮತ್ತು ಹಸಿರು ಬರ ಪರಿಸ್ಥಿತಿ ನಿರ್ವಹಣೆ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಆಯೋಜಿಸಲಾದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಬಲ್ಲಮಾವಟಿಯ ನೇತಾಜಿ ಪ್ರೌಢಶಾಲೆಯಲ್ಲಿ ಗಿಡ ನೆಟ್ಟು ಮಾತನಾಡಿದರು. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯಿಂದ ಪರಿಸರ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಮಡಿಕೇರಿ ತಾಲ್ಲೂಕಿನ ಆಯ್ದ 15 ಶಾಲೆಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಅಂಗವಾಗಿ ನಾಪೋಕ್ಲು ಹೋಬಳಿಯ ನಾಲ್ಕು ಶಾಲೆಗಳಲ್ಲಿ ಗಿಡ ನೆಡಲಾಯಿತು ಎಂದರು. ಬಲ್ಲಮಾವಟಿ ಮತ್ತು ಭಾಗಮಂಡಲ ಪಂಚಾಯತಿ ವ್ಯಾಪ್ತಿಯ ವಿವಿಧ ಶಾಲೆಗಳಲ್ಲಿ ಗಿಡಗಳನ್ನು ನೆಟ್ಟು ಪೋಷಣೆ ಮಾಡಿ ಸಂರಕ್ಷಿಸುವಂತೆ ವಿದ್ಯಾರ್ಥಿಗಳಿಗೆ…

Read More

ನಾಪೋಕ್ಲು ಜೂ.11 NEWS DESK : ಮಹಿಳೆಯರು ಸಂಘ-ಸಂಸ್ಥೆಗಳ ಪ್ರತಿನಿಧಿಗಳಾಗಿ ಪಾಲ್ಗೊಂಡು ಸಮಾಜದಲ್ಲಿ ಬೆರೆತು ಅಭಿವೃದ್ಧಿ ಹೊಂದಬೇಕು ಎಂದು ಜಿ.ಪಂ ಮಾಜಿ ಸದಸ್ಯೆ, ನಿವೃತ್ತ ಪ್ರಾಧ್ಯಾಪಕಿ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ಹೇಳಿದರು. ಕೂರುಳಿ ಸುಭಾಷ್ ನಗರ ಸಮುದಾಯ ಭವನದಲ್ಲಿ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೂರುಳಿ ಸುಭಾಷ್ ನಗರ ಕಾರ್ಯಕ್ಷೇತ್ರದ ಪರಮೇಶ್ವರಿ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು, ಮಾತನಾಡಿದರು. ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದು ಒಂದು ಕಲೆ ಎಂದ ಅವರು ಮಕ್ಕಳಿಗೆ ಶಿಕ್ಷಣ ಕೊಡುವಲ್ಲಿ ಪೋಷಕರ ಪಾತ್ರ ಬಗ್ಗೆ ಮಾತನಾಡಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರುದರು. ಸಂಘದ ಮೇಲ್ವಿಚಾರಕ ಸುನಿಲ್ ಸಂಘದ ಧ್ಯೇಯೋದ್ದೇಶಗಳ ಬಗ್ಗೆ ವಿವರಿಸಿದರು. ಪರಮೇಶ್ವರಿ ಜ್ಞಾನ ವಿಕಾಸ ಕೇಂದ್ರದ ಅಧ್ಯಕ್ಷೆ ದೈನಬ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರತಿನಿಧಿ ಉಮಾಲಕ್ಷ್ಮಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು. ಸಂಘದ ಸದಸ್ಯ ಟಿ.ಆರ್.ಪೊನ್ನಮ್ಮ ಸ್ವಾಗತಿಸಿದರು. ಸಾವಿತ್ರಿ ನಿರೂಪಿಸಿ, ವಂದಿಸಿದರು. ವರದಿ : ದುಗ್ಗಳ ಸದಾನಂದ.

Read More

ಮಡಿಕೇರಿ ಜೂ.11 NEWS DESK :  ದಾರುಲ್ ಉಲೂಮ್ ಹೈಯರ್ ಸೆಕೆಂಡರಿ ಮದರಸಾದ ಎಸ್.ಕೆ.ಎಸ್.ಬಿ.ವಿ ವಾರ್ಷಿಕ ಮಹಾ ಸಭೆಯು ವ್ಯವಸ್ಥಾಪಕ  ಉನೈಸ್ ಫೈಝಿ ಅದ್ಯಕ್ಷತೆಯಲ್ಲಿ ನಡೆಯಿತು. ಪ್ರಾಂಶುಪಾಲ  ಎಂ.ತಮ್ಲೀಖ್ ದಾರಿಮಿ ಸಭೆಯನ್ನು ಉದ್ಘಾಟಿಸಿ ಮಹೋನ್ನತ  ಉಲಮಾರು ರಚಿಸಿದ ವಿದ್ಯಾರ್ಥಿ ಸಂಘದ ಶಕ್ತಿಯನ್ನು ಬಲಪಡಿಸಲು ಕರೆ ನೀಡಿದರು. ಪ್ರಮುಖರಾದ ರಾಝಿಕ್ ರೆಹ್ಮಾನಿ ಸ್ವಾಗತಿಸಿದರು. ಸಭೆಯ ನಂತರ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಚೇರ್‌ಮೆನ್ ಆಗಿ ಮುಹಮ್ಮದ್‌ ರಾಝಿಕ್ ರಹ್ಮಾನಿ, ಸಂಚಾಲಕರಾಗಿ ಶಕೀರ್ ಪೈಝಿ, ಸಂಯೋಜಕರಾಗಿ ನಫೀರ್ ಮುಸ್ಲಿಯಾರ್, ಅಧ್ಯಕ್ಷರಾಗಿ ಎಂ.ಎಸ್.ಶಾಹಿದ್, ಕಾರ್ಯದರ್ಶಿಯಾಗಿ ಅಮಾನ್ ಶಾನಿದ್ ನೇಮಕಗೊಂಡರು. ಕೋಶಾಧಿಕಾರಿಯಾಗಿ ಅರ್ಶದ್, ಕಾರ್ಯನಿರತ ಕಾರ್ಯದರ್ಶಿಯಾಗಿ ಜಾಫರ್, ಉಪಾಧ್ಯಕ್ಷರುಗಳಾಗಿ ತೌಫೀಖ್, ಅಶ್ವಾಕ್, ನಿಯಾಸ್, ಸಹ ಕಾರ್ಯದರ್ಶಿಗಳಾಗಿ ಮುಹಮ್ಮದ್ ಕೈಫ್, ಕೆ.ಎನ್.ನಿಹಾಲ್, ಅಬ್ದುಲ್ ಅಹದ್ ನೇಮಕಗೊಂಡರು. ಅದಬ್ ಸಂಯೋಜಕರಾಗಿ ಹಾಶಿರ್ ಮುಸ್ತಫಾ, ಟೆಕ್ ಸಂಯೋಜಕರಾಗಿ ಸವಾದ್ ಸಮದ್,  ಅಲಿಫ್ ಸಂಯೋಜಕರಾಗಿ ಎಂ.ಯು.ರಿಹಾನ್,  ಕಿದ್ಮ ಕ್ಯಾಪ್ಟನ್ ಬಿ.ಯು.ಸ್ವಫ್ವಾನ್  ಸೇರಿದಂತೆ ಹಲವು ಸದಸ್ಯರನ್ನು ನೇಮಕ ಮಾಡಲಾಯಿತು.

Read More

ಮಡಿಕೇರಿ ಜೂ.11 NEWS DESK : ಬೀದರ್’ನಲ್ಲಿ ಎನ್.ಸಿ.ಸಿ ಆಯೋಜಿಸಿದ್ದ ರಾಷ್ಟ್ರೀಯ ವಾಯುಪಡೆ ಬೆಸುಗೆ ಶಿಬಿರ (National Airforce Attachment Camp- NAAC) ದಲ್ಲಿ ಎನ್.ಸಿ.ಸಿ ಕೆಡೆಟ್(ಏರ್ ವಿಂಗ್) ಪಾಲಚಂಡ ತರುಣ್ ತಿಮ್ಮಯ್ಯ ಭಾಗಹಿಸಿ ವಿವಿಧ  ತರಬೇತಿ ಪಡೆದಿದ್ದಾರೆ. ವಾಯುಪಡೆಯ ಪೈಲಟ್’ಗಳಿಗೆ ಅತ್ಯಾಧುನಿಕ ಯುದ್ಧ ವಿಮಾನಗಳ ಮೂರನೇ ಹಂತದ ಚಾಲನಾ ತರಬೇತಿಯನ್ನು ನೀಡುವ ಕೇಂದ್ರವಾದ ಬೀದರ್’ನ ವಾಯುಪಡೆಯ ತರಬೇತಿ ಕೇಂದ್ರದಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿತ್ತು. ಮಂಗಳೂರಿನ ಸೆಂಟ್ ಅಲೋಶಿಯಸ್ ಕಾಲೇಜಿನ ಬಯೊಟೆಕ್ ಎರಡನೇ  ವರ್ಷದ ವಿದ್ಯಾರ್ಥಿಯಾಗಿರುವ ತರುಣ್ ತಿಮ್ಮಯ್ಯ ಸೇರಿದಂತೆ ಕರ್ನಾಟಕ  ಗೋವ ವಿಭಾಗದ 14 ಕೆಡೆಟ್’ಗಳು ಈ ಶಿಬಿರದಲ್ಲಿ ಪಾಲ್ಗೊಂಡು ವಾಯುಪಡೆಯ ವಿವಿಧ ತರಬೇತಿಗಳನ್ನು ಪಡೆದುಕೊಂಡಿದ್ದಾರೆ. ಶಿಬಿರದಲ್ಲಿ ಸೇನೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಾದAir Force Common Admission test (AFCAT), Combined Difference Service (CDS), National Difference Academy (NDA) ಮತ್ತು Services Selection Board (SSB) ಮುಂತಾದ ಪರೀಕ್ಷೆಗೆ ಬೇಕಾದ ಮಾಹಿತಿ ಹಾಗು ತರಬೇತಿ ಕಾರ್ಯಾಗಾರ ಹಮ್ಮಿಕೊಂಡು…

Read More

ನಾಪೋಕ್ಲು ಜೂ.11 NEWS DESK : ವಾಹನಗಳ ಚಾಲನಾ ಪರವಾನಗಿ, ಸೂಕ್ತ ದಾಖಲೆಗಳು ಇಲ್ಲದೇ ವಾಹನಗಳನ್ನು ಚಲಾಯಿಸಬಾರದು ಎಂದು ನಾಪೋಕ್ಲು ಪೊಲೀಸ್ ಠಾಣೆಯ ಠಾಣಾಧಿಕಾರಿ ಮಂಜುನಾಥ್ ಹೇಳಿದರು. ಸಮೀಪದ ಚೆರಿಯಪರಂಬುವಿನ ಕರ್ನಾಟಕ ಪಬ್ಲಿಕ್ ಶಾಲಾ(ಞಠಿs) ಮೈದಾನದಲ್ಲಿ ಸ್ಥಳೀಯ ಯುವಕರಿಗೆ ಹಾಗೂ ವಾಹವ ಸವಾರರಿಗೆ ತಿಳಿಹೇಳಿದ ಅವರು ಜೀವ ಅಮೂಲ್ಯವಾದದ್ದು,.ರಸ್ತೆ ಸುರಕ್ಷತಾ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಿ ಕಾನೂನುಗಳನ್ನು ಗೌರವಿಸಬೇಕು ಎಂದರು. ವಾಹನ ಸವಾರರನ್ನು ತಪಾಸಣೆ ಮಾಡಿ ಹೆಲ್ಮೆಟ್ ಹಾಕದೆ ಚಲಾಯಿಸದವರಿಗೆ, ಇನ್ಸೂರೆನ್ಸ್ ಇಲ್ಲದ, ಸೀಟ್ ಬೆಲ್ಟ್ ಇಲ್ಲದೆ ಚಾಲನೆ ಮಾಡಿದವರಿಗೆ, ಬೈಕ್ ಗಳಲ್ಲಿ ಎರಡಕ್ಕಿಂತ ಹೆಚ್ಚು ಮಂದಿ ಕುಳಿತು ಸಾಗಿದವರಿಗೆ ತಿಳುವಳಿಕೆ ಮೂಡಿಸಿ, ಎಚ್ಚರಿಕೆ ನೀಡಲಾಯಿತು. ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಾಯಿಸುವುದು, ಪಟ್ಟಣ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡಿ ಸಂಚಾರಿ ವಾಹನಗಳಿಗೆ ಜನಸಾಮಾನ್ಯರಿಗೆ ಅಡ್ಡಿಪಡಿಸುವುದು, ಅಪ್ರಾಪ್ತ ಯುವಕರು ವಾಹನ ಚಾಲನೆ ಮಾಡುವುದು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ವರದಿ : ದುಗ್ಗಳ ಸದಾನಂದ. 

Read More

ನಾಪೋಕ್ಲು ಜೂ.11 NEWS DESK : ಮರಂದೋಡ ಶಕ್ತಿ ಕೇಂದ್ರದಿಂದ ಬಿಜೆಪಿ ಕಾರ್ಯಕರ್ತರು ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ ಹಿನ್ನೆಲೆ ಹಾಗೂ ದೇಶದ ಸುಭಿಕ್ಷೆಗಾಗಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಚಂಡೀರ ಜಗದೀಶ್, ಚಂಡೀರ ಮುದ್ದಪ್ಪ, ಬೂತ್ ಮಟ್ಟದ ಕಾರ್ಯದರ್ಶಿ ಬಾರಿಕೆ ನಂದ ಮತ್ತು ಯುವಮೋರ್ಚಾ ಪದಾಧಿಕಾರಿಗಳಾದ ಚಂಡೀರ ರೋಷನ್, ಮೇರಿಯಂಡ ಆದೇಶ ಬೋಪಯ್ಯ, ಮಾರ್ಚಂಡ ಪಳಂಗಪ್ಪ, ಚಂಡೀರ ವಿಜಯ್, ಚಂಡೀರ ನಂದ, ಮೇರಿಯಂಡ ನೀತಾ ಆದೇಶ್, ಕೊಲೆಯಂಡ ಅಶೋಕ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ದೇವಾಲಯದ ಮುಖ್ಯ ಅರ್ಚಕ ಕುಶ ಭಟ್, ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ವರದಿ : ದುಗ್ಗಳ ಸದಾನಂದ.   

Read More

ಮಡಿಕೇರಿ ಜೂ.11 NEWS DESK : ಸೋಮವಾರಪೇಟೆ ಹೋಂ ಸ್ಟೇ ಅಸೋಸಿಯೇಷನ್ ವತಿಯಿಂದ ಹೋಂಸ್ಟೇ ಸದಸ್ಯರುಗಳಿಗೆ ಕೈಗಾರಿಕ ಭೇಟಿ ನಡೆಯಿತು. ಅಯಾತನ ರೆಸಾರ್ಟ್ ಗೆ ಭೇಟಿ ನೀಡಿದ ಸದಸ್ಯರು  ರೆಸಾರ್ಟ್ ನ ಕಾರ್ಯ ನಿರ್ವಹಣೆ, ಆಡಳಿತ, ರೆಸಾರ್ಟ್ ನ ಸೌಲಭ್ಯಗಳು, ಕೊಟ್ಟಡಿಗಳ ನಿರ್ವಹಣೆ, ರೆಸಾರ್ಟ್ ನ ರೆಸ್ಟೋರೆಂಟ್, ಸ್ಪಾ, ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಹೋಂಸ್ಟೇ ಅಸೋಸಿಯೇಷನ್ ಸದಸ್ಯರುಗಳಿಗೆ ಐಇಂದ್ರ ಹೋಂ ಸ್ಟೇಯಲ್ಲಿ ಅಡುಗೆ ಸ್ಪರ್ಧೆ ನಡೆಯಿತು.  ಸ್ಪರ್ಧೆಯ ತೀರ್ಪುಗಾರರಾಗಿ ಅಯಾತನ ರೆಸಾರ್ಟ್ ನ ಜನರಲ್ ಮ್ಯಾನೇಜರ್ ಎಂ.ಜಿಷ್ಣು , ಸೀನಿಯರ್ ಎಕ್ಸಿಕ್ಯೂಟಿವ್ ಷಪ್ ಜೂಲಿಯಸ್ ಬಿಸ್ವಾಸ್, ಮ್ಯಾನೇಜರ್ ಉನ್ನಿಕೃಷ್ಣನ್ ಕಾರ್ಯನಿರ್ವಹಿಸಿದರು. ಅಡುಗೆ ಸ್ಪರ್ಧೆ ವಿಜೇತರಿಗೆ ಐಇಂದ್ರ ಹೋಂ ಸ್ಟೇ ಮಾಲೀಕರಾದ ಜಯಪ್ರಕಾಶ್  ಬಹುಮಾನ ವಿತರಿಸಿದರು. ಈ ಸಂದರ್ಭ ಹೋಂಸ್ಟೇಷನ್ ಅಧ್ಯಕ್ಷ ಸಿ.ಕೆ.ರೋಹಿತ್, ಉಪಾಧ್ಯಕ್ಷ  ಯೋಗೇಶ್ ಪಟೇಲ್, ಕಾರ್ಯದರ್ಶಿ ಅಭಿನಂದ್ ಹಾಗೂ ಖಜಾಂಚಿ ಪ್ರೀತಮ್ ಗೌಡ ಹಾಗೂ ಹೋಂ ಸ್ಟೇ ಅಸೋಸಿಯೇಷನ್ ನ ಎಲ್ಲಾ ಸದಸ್ಯಗಳು ಹಾಜರಿದ್ದರು.

Read More

ಮಡಿಕೇರಿ ಜೂ.11 NEWS DESK : ಮೂಲತಃ ಸುಂಟಿಕೊಪ್ಪದವರಾದ ಹೊಸಕೋಟೆ ಸಮೀಪದ ಅಂದಗೋವೆ ಪೈಸಾರಿಯಲ್ಲಿ ನೆಲೆಸಿದ್ದ ಬಾಲ ಸುಂದರಂ (58) ನಿಧನ ಹೊಂದಿದ್ದಾರೆ. ಮೃತರು ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ.

Read More

ಮಡಿಕೇರಿ ಜೂ.10 NEWS DESK : ಕೊಡಗು ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಸರಕಾರಿ ಜಾಗವನ್ನು ಕಡಿಮೆ ದರಕ್ಕೆ ಗುತ್ತಿಗೆ ಆಧಾರದಲ್ಲಿ ನೀಡುವ ಆದೇಶ ಹಿಂಪಡೆಯಬೇಕು, ಅಪಾಯಕಾರಿ ಜಾಗದಲ್ಲಿರುವ ಬಡ ಕುಟುಂಬಗಳಿಗೆ ನಿವೇಶನ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಎಂ) ನೆಲ್ಲಿಹುದಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನೆಲ್ಲಿಹುದಿಕೇರಿ ಗ್ರಾ.ಪಂ ಎದುರು ಜಮಾಯಿಸಿದ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಬಡವರ, ಕೂಲಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆಗಳನ್ನು ಕೂಗಿದರು. ಈ ಸಂದರ್ಭ ಮಾತನಾಡಿದ ಸಿಪಿಐಎಂ ಕಾರ್ಯದರ್ಶಿ ಪಿ.ಆರ್.ಭರತ್, ಉಳ್ಳವರ ಪರವಾದ ನಿಯಮಗಳನ್ನು ತಕ್ಷಣ ರೂಪಿಸುವ ಸರಕಾರಗಳು ಬಡವರು ಹಾಗೂ ಕೂಲಿ ಕಾರ್ಮಿಕರನ್ನು ನಿರ್ಲಕ್ಷಿಸುತ್ತಲೇ ಬರುತ್ತಿವೆ. ಬಡವರಿಗೆ ವಾಸವಿರಲು ನಿವೇಶನ ಅಥವಾ ವಸತಿಯನ್ನು ನೀಡಿ ಎಂದು ಒತ್ತಾಯಿಸಿ ಕಳೆದ ಹಲವು ವರ್ಷಗಳಿಂದ ಸಿಪಿಐಎಂ ಪಕ್ಷ ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದರೂ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಪಂದಿಸಿಲ್ಲವೆಂದು ಟೀಕಿಸಿದರು. ನೆಲ್ಲಿಹುದಿಕೇರಿ ಗ್ರಾಮ ವ್ಯಾಪ್ತಿಯಲ್ಲಿ ಕಡು ಬಡತನದಲ್ಲಿರುವ ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು, ದಲಿತರು, ಆದಿವಾಸಿಗಳು,…

Read More

ಮಡಿಕೇರಿ ಜೂ.10 NEWS DESK : ಕೊಡಗು ಜಿಲ್ಲೆಯಾದ್ಯಂತ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ವಿರುದ್ಧ ಕೊಡವರು ಜಾಗೃತರಾಗದಿದ್ದರೆ ಅಪಾಯ ಕಾದಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿರುವ ಭೂಪರಿವರ್ತನೆಗಳ ವಿರುದ್ಧ ಸಿಎನ್‌ಸಿ ಸಂಘಟನೆ ವತಿಯಿಂದ ಬಾಳೆಲೆಯಲ್ಲಿ ಆಯೋಜಿಸಿದ್ದ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಒಂದು ಸಾವಿರ ಮರಗಳನ್ನು ಕಡಿಯಲು ಅನುಮತಿ ಪಡೆದು ಕೋಟ್ಯಾಂತರ ರೂ. ಬೆಲೆ ಬಾಳುವ ಸುಮಾರು 3 ರಿಂದ 4 ಸಾವಿರ ಮರಗಳನ್ನು ಹನನ ಮಾಡಲಾಗಿದೆ. ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು. ಕಾಫಿ ತೋಟಗಳ ಭೂಪರಿವರ್ತನೆಯಿಂದ ಕೊಡಗಿನ ಎಲ್ಲಾ ಗ್ರಾಮಗಳು ನಾಶವಾಗುತ್ತಿವೆ. ಮಣ್ಣು ಅಗೆಯುವ ಕೆಲಸದಿಂದ ಬಹುವಾರ್ಷಿಕ ಜಲಮೂಲಗಳ ನರ ಕೇಂದ್ರಗಳು ಈಗಾಗಲೇ ಮುಚ್ಚಿವೆ. ಇದರಿಂದ ಕೊಡಗಿನ ಮೇಲಾಗುವ ಅಪಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕು. ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ, ಎಸ್.ಟಿ ಟ್ಯಾಗ್, ಕೊಡವರ ಆಂತರಿಕ ರಾಜಕೀಯ…

Read More