ಮಡಿಕೇರಿ ಮೇ 10 NEWS DESK : ಗಾಂಧಿ ಯುವಕ ಸಂಘ ಕಂಡಕರೆ ಹಾಗೂ ಸರ್ವಧಮೀಯ ಬಡ ಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ಆಚರಣಾ ಸಮಿತಿ ವತಿಯಿಂದ ಇದೇ ಮೊದಲ ಬಾರಿಗೆ ನೀಡಲಾಗುತ್ತಿರುವ “ಭರವಸೆಯ ನಾಯಕ” ಪ್ರಶಸ್ತಿಗೆ ಅಂತರಾಷ್ಟ್ರೀಯ ಮಾಜಿ ರಗ್ಬಿ ಆಟಗಾರ ಹಾಗೂ ವಿರಾಜಪೇಟೆ ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಜೂ.9 ರಂದು ಕಂಡಕೆಯಲ್ಲಿ ನಡೆಯಲಿರುವ ಸರ್ವಧರ್ಮೀಯ ಬಡಹೆಣ್ಣ ಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆ ಎಂದು ಗಾಂಧಿ ಯುವಕ ಸಂಘದ ಅಧ್ಯಕ್ಷ ಇಸ್ಮಾಯಿಲ್ ಕಂಡಕರೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲೇಖಕ: admin
ಮಡಿಕೇರಿ ಮೇ 10 NEWS DESK : ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಸರಳವಾಗಿ ಆಚರಿಸಲಾಯಿತು. ನಗರದ ಜಿಲ್ಲಾಡಳಿತ ಭವನದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಡಿನ ಸಾಂಸ್ಕೃತಿಕ ನಾಯಕ ಬಸವೇಶ್ವರರು ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಲಾಯಿತು. ಬಳಿಕ ಮಾತನಾಡಿದ ಜಿ.ಪಂ.ಸಿಇಒ ವರ್ಣಿತ್ ನೇಗಿ ಅವರು ಕರ್ನಾಟಕ ಸಾಂಸ್ಕೃತಿಕ ನಾಯಕ, ವಿಶ್ವ ಗುರು ಬಸವಣ್ಣ ಅವರ ಚಿಂತನೆಗಳು ಸಾರ್ವಕಾಲಿಕ ಎಂದು ಬಣ್ಣಿಸಿದರು. 12ನೇ ಶತಮಾನದಲ್ಲಿ ಕಾಯಕ ಜೀವಿಗಳ ಚಳುವಳಿಯ ಮೂಲಕ ಸಾಮಾಜಿಕ ಕ್ರಾಂತಿಯನ್ನೇ ನಡೆಸಿ ವಚನಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದರು ಎಂದರು. ಬಸವೇಶ್ವರರು ವಚನಗಳ ಮೂಲಕ ನಾಡಿಗೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ವರ್ಣಿತ್ ನೇಗಿ ಹೇಳಿದರು. ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸೇರಿದಂತೆ ಬಸವಾದಿ ಶರಣರು ವಚನಕಾರರ ಬಗ್ಗೆ ಅಧ್ಯಯನ ಮಾಡಬೇಕು. ಜೊತೆಗೆ…
ಮಡಿಕೇರಿ ಮೇ 10 NEWS DESK : ಎಮ್ಮೆಮಾಡು ಗ್ರಾ.ಪಂ ವ್ಯಾಪ್ತಿಯ ನೆಲಜಿ ಪಡಿಯಾನಿ ಜಂಕ್ಷನ್ ನಿಂದ ಎಮ್ಮೆಮಾಡು ದರ್ಗಾದವರೆಗಿನ ರಸ್ತೆ ಕೊನೆಗೂ ಅಭಿವೃದ್ಧಿ ಹೊಂದಿದೆ. ಸುಮಾರು 3 ಕಿ.ಮೀ ದೂರದ ರಸ್ತೆ ಹದಗೆಟ್ಟು 20 ವರ್ಷಗಳೇ ಕಳೆದಿತ್ತು. ರಸ್ತೆ ಅಭಿವೃದ್ಧಿಗಾಗಿ ಹಲವು ಬಾರಿ ಮನವಿ ಮಾಡಿಕೊಂಡರೂ ಯಾರೂ ಕೂಡ ರಸ್ತೆ ಕಾಮಗಾರಿ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು, ವಿಧಾನಸಭಾ ಚುನಾವಣೆ ಸಂದರ್ಭ ನೀಡಿದ ಭರವಸೆಯಂತೆ ನಡೆದುಕೊಂಡಿದ್ದಾರೆ. ಇದೀಗ ರಸ್ತೆ ಅಭಿವೃದ್ಧಿಪಡಿಸಿ ದೊಡ್ಡ ಉಪಕಾರ ಮಾಡಿದ್ದಾರೆ ಎಂದು ಸ್ಥಳೀಯ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು. ಎಮ್ಮೆಮಾಡು ವಲಯ ಕಾಂಗ್ರೆಸ್ ಅಧ್ಯಕ್ಷ ಹಂಸ ಪಡಿಯಾನಿ ಮಾತನಾಡಿ ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆ ಕೊನೆಗೂ ಈಡೇರಿದೆ. ಶಾಸಕರ ಅನುದಾನ ಒದಗಿಸಿ ರಸ್ತೆ ಅಭಿವೃದ್ಧಿಗೆ ಆಸಕ್ತಿ ತೋರಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಅಭಿನಂದನಾರ್ಹರು. ಉಳಿದ ರಸ್ತೆಗಳ…
ಮಡಿಕೇರಿ ಮೇ 10 NEWS DESK : ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗ ಸಂಸ್ಥೆಯಾಗಿರುವ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವತಿಯಿಂದ “ದಿ ರೋಲ್ ಆಪ್ ಐಸಿಟಿ ಇನ್ ಅಗ್ರಿಕಲ್ಚರಲ್ ಮತ್ತು ಅಲೈಡ್ ಸೆಕ್ಟರ್ಸ್” ವಿಷಯದ ಮೇಲೆ ಮೇ 15 ರಿಂದ 24 ರವರೆಗೆ ತರಬೇತಿ ಕಾರ್ಯಾಗಾರ ನಡೆಯಲಿದೆ. ಕಾರ್ಯಾಗಾರದಲ್ಲಿ ವಿವಿಧ ಪ್ರತಿಷ್ಠಿತ ಸಂಸ್ಥೆಗಳ ವಿಜ್ಞಾನಿಗಳು ವಿಷಯಾಧಾರಿತ ಉಪನ್ಯಾಸ ನೀಡಲಿದ್ದಾರೆ. ರಾಜ್ಯದ ವಿವಿಧ ಕೃಷಿ, ತೋಟಗಾರಿಕೆ, ಪಶುವೈದ್ಯಕೀಯ ಹಾಗೂ ಮೀನುಗಾರಿಕಾ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ಕೃಷಿ, ತೋಟಗಾರಿಕೆ, ಪಶುವೈದ್ಯಕೀಯ ಹಾಗೂ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಮೇ 13 ರೊಳಗೆ Registration Link : https://forms.gle/CEGK5P6dqJbkTnUw8 ಮೂಲಕ ನೋಂದಾಯಿಸಿಕೊಂಡು ತರಬೇತಿ ಕಾರ್ಯಕ್ರಮದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸಬಹುದು. ಹೆಚ್ಚಿನ ವಿವರಗಳಿಗೆ ಕಾರ್ಯಕ್ರಮ ಸಂಯೋಜಕರು(ಮೊ.9620767819) ಅಥವಾ ಅಕಾಡೆಮಿಯ ವೆಬ್‍ಸೈಟ್ www.kstacademy.in ನ್ನು ವೀಕ್ಷಿಸಬಹುದು ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ.ಎಂ.ರಮೇಶ್ ತಿಳಿಸಿದ್ದಾರೆ.
ಸಿದ್ದಾಪುರ ಮೇ 10 NEWS DESK : ಮಾಲ್ದಾರೆಯ ಬಾಡಗ ಬಾಣಂಗಾಲದ ಜನತಾ ಕಾಲೋನಿಯ ಶ್ರೀ ಅನಂತನಾಗ ದೇವಾಲಯದ 16ನೇ ವರ್ಷದ ವಾರ್ಷಿಕ ಪೂಜೆ ಇಂದು ಸಂಜೆ (ಮೇ 10) ಹಾಗೂ ಮೇ 11 ರಂದು ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಮೇ 11 ರಂದು ಬೆಳಗ್ಗೆ 7.30ಕ್ಕೆ ಪಂಚಗವ್ಯ, ಬಿಂಬಶುದ್ಧಿ, ಗಣಹೋಮ, 8 ಗಂಟೆಗೆ ಆಶ್ಲೇಷ ಬಲಿ, ಆಶ್ಲೇಷ ಹೋಮ, 10.30ಕ್ಕೆ ಮಹಾಪೂಜೆ, ಮಧ್ಯಾಹ್ನ 12.30ಕ್ಕೆ ತೀರ್ಥ ಪ್ರಸಾದ ಹಾಗೂ ಹರಕೆ ಮತ್ತು ವಿಶೇಷ ಪೂಜೆಗಳು ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ಆಡಳಿತ ಮಂಡಳಿ ಕೋರಿದೆ.
ಸುಂಟಿಕೊಪ್ಪ ಮೇ 10 NEWS DESK : ಹತ್ತನೇ ತರಗತಿಯ ಫಲಿತಾಂಶ ಪ್ರಕಟಗೊಂಡಿದ್ದು, ಸುಂಟಿಕೊಪ್ಪ ಹೋಬಳಿ ಪ್ರೌಢಶಾಲೆಯ ವಿದ್ಯಾರ್ಧಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಕೊಡಗರಹಳ್ಳಿಯ ಶಾಂತಿನೀಕೇತನ ಪ್ರೌಢಶಾಲೆ ಮತ್ತು ಸುಂಟಿಕೊಪ್ಪದ ಸಂತಮೇರಿ ಪ್ರೌಢಶಾಲೆ ಶೇ.100 ಫಲಿತಾಂಶ ಪಡೆದಿವೆ. ಶಾಂತಿನಿಕೇತನ ಶಾಲೆಯ 84 ವಿದ್ಯಾರ್ಥಿಗಳಲ್ಲಿ ಅತ್ಯುನ್ನತ್ತ ಶ್ರೇಣಿಯಲ್ಲಿ 21 ಮಕ್ಕಳು ಮತ್ತು ಪ್ರಥಮ ದರ್ಜೆಯಲ್ಲಿ 57 ಹಾಗೂ ದ್ವಿತೀಯ ಶ್ರೇಣಿಯಲ್ಲಿ 6 ಮಕ್ಕಳು ಉತ್ತೀರ್ಣರಾಗಿದ್ದಾರೆ. ಶಾಲೆಯ ವಿದ್ಯಾರ್ಥಿನಿ ಪಿ.ಡಿ.ಡಿಲಿಶಾ ಮುತ್ತಮ್ಮ 608 ಅಂಕಗಳಿಸಿ ಶೇ. 97.28 ಅಂಕಗಳನ್ನು ಗಳಿಸಿದ್ದು, ದ್ವಿತೀಯ ಸ್ಥಾನದಲ್ಲಿ ನಿಶ್ಮಿತಾ 597 ಅಂಕಗಳಿಸಿ ಶೇ. 95.52 ಅಂಕಗಳನ್ನು ಗಳಿಸಿದ್ದಾರೆ, ಆಯುಶ್ ಗೌಡ ಶೇ.93.28 ಅಂಕಗಳೊಂದಿಗೆ 3ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಸಂತಮೇರಿ 92 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲಾರೂ ಉತ್ತೀರ್ಣರಾಗುವ ಮೂಲಕ ಶೇ.100 ಫಲಿತಾಂಶ ದಾಖಲಿಸಿದ್ದಾರೆ. ಅತ್ಯುನ್ನತ್ತ ಶ್ರೇಣಿಯಲ್ಲಿ ಓರ್ವ ಬಾಲಕ, 5 ಮಂದಿ ಬಾಲಕಿಯರು ಒಟ್ಟು 6 ಮಂದಿ ತೇರ್ಗಡೆಗೊಂಡರೇ, ಪ್ರಥಮ ಶ್ರೇಣಿಯಲ್ಲಿ 27 ಮಂದಿ ಬಾಲಕರು, 25 ಮಂದಿ…
ಮಡಿಕೇರಿ ಮೇ 10 NEWS DESK : ಸೂರ್ಲಬ್ಬಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಮೀನಾ (16) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಪತ್ತೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಭೇಟಿ ನೀಡಿ ಮಾಹಿತಿ ಪಡೆದಿದ್ದು, ಆರೋಪಿಯನ್ನು ಶೀಘ್ರ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ. ಸೋಮವಾರಪೇಟೆ ತಾಲ್ಲೂಕಿನ ಸೂರ್ಲಬ್ಬಿಯ ಸರಕಾರಿ ಪ್ರೌಢ ಶಾಲೆಯ 10ನೇ ತರಗತಿಯಲ್ಲಿದ್ದ ಏಕೈಕ ವಿದ್ಯಾರ್ಥಿನಿ ಯು.ಎಸ್.ಮೀನ ಈ ಬಾರಿಯ ಪರೀಕ್ಷೆಯಲ್ಲಿ 314 ಅಂಕಗಳನ್ನು ಗಳಿಸಿ ತೇರ್ಗಡೆ ಹೊಂದಿದ್ದಳು. ಇದರ ಸಂತೋಷದ ನಡುವೆಯೇ ಮನೆಯವರು ಈಕೆಯ ವಿವಾಹಕ್ಕೆಂದು ಅದೇ ಹಮ್ಮಿಯಾಲ ಗ್ರಾಮದ ಪ್ರಕಾಶ್ (32) ಎಂಬಾತನೊಂದಿಗೆ ನಿಶ್ಚಿತಾರ್ಥ ಮಾಡಲು ಮುಂದಾಗಿದ್ದರು ಎಂದು ತಿಳಿದು ಬಂದಿದೆ. ಈ ಬಗ್ಗೆ ಮಾಹಿತಿ ತಿಳಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ 18 ವರ್ಷದ ನಂತರ ವಿವಾಹ ಮಾಡುವಂತೆ ಕಾನೂನಿನ ಅರಿವು ಮೂಡಿಸಿದ್ದರು. ನಂತರ ಎರಡೂ ಮನೆಯವರು ಮೀನಾಳಿಗೆ 18 ವರ್ಷ ತುಂಬಿದ ಮೇಲೆ…
ಮಡಿಕೇರಿ ಮೇ 9 NEWS DESK : ಸರಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು, ಆದರೆ ಇಲ್ಲೊಂದು ಸರಕಾರಿ ಶಾಲೆಯ 10ನೇ ತರಗತಿಯಲ್ಲಿ ಒಬ್ಬಳೇ ವಿದ್ಯಾರ್ಥಿನಿ ಇದ್ದರೂ ಶಿಕ್ಷಕರು ಮನಮುಟ್ಟುವಂತೆ ಪಾಠ ಮಾಡಿ ಆಕೆ ತೇರ್ಗಡೆಯಾಗುವಂತೆ ಮಾಡಿದ್ದಾರೆ. ಕೊಡಗಿನ ಕುಗ್ರಾಮಗಳಲ್ಲಿ ಒಂದಾದ ಸೋಮವಾರಪೇಟೆ ತಾಲ್ಲೂಕಿನ ಸೂರ್ಲಬ್ಬಿಯ ಸರಕಾರಿ ಪ್ರೌಢ ಶಾಲೆಯ ಏಕೈಕ ವಿದ್ಯಾರ್ಥಿನಿ ತೇರ್ಗಡೆಯಾಗುವುದರೊಂದಿಗೆ ಶಾಲೆಗೆ ಶೇ.100 ಫಲಿತಾಂಶ ಲಭಿಸಿದೆ. ಗ್ರಾಮೀಣ ಭಾಗದ ಶಾಲೆಗಳಲ್ಲಿ ದಿನದಿಂದ ದಿನಕ್ಕೆ ದಾಖಲಾತಿ ಕುಸಿಯುತ್ತಿದೆ. ಇದೇ ಪರಿಸ್ಥಿತಿ ಸೂರ್ಲಬ್ಬಿ ಸರಕಾರಿ ಶಾಲೆಯಲ್ಲೂ ಇದ್ದು, 8, 9 ಮತ್ತು 10 ನೇ ತರಗತಿಗಳಲ್ಲಿ ಒಟ್ಟು 7 ವಿದ್ಯಾರ್ಥಿಗಳು ಮಾತ್ರ ಅಭ್ಯಾಸ ಮಾಡುತ್ತಿದ್ದರು. 10ನೇ ತರಗತಿಯಲ್ಲಿದ್ದ ಏಕೈಕ ವಿದ್ಯಾರ್ಥಿನಿ ಯು.ಎಸ್.ಮೀನ ಈ ಬಾರಿಯ ಪರೀಕ್ಷೆಯಲ್ಲಿ 314 ಅಂಕಗಳನ್ನು ಗಳಿಸಿ ತೇರ್ಗಡೆ ಹೊಂದಿದ್ದಾಳೆ. ಮಡಿಕೇರಿ ತಾಲ್ಲೂಕಿನ ಮುಟ್ಲು ಗ್ರಾಮದಿಂದ 5 ಕಿ.ಮೀ ದೂರದ ಶಾಲೆಗೆ ನಡೆದುಕೊಂಡು ಬರುತ್ತಿದ್ದ ಮೀನಾಳಿಗೆ ಶಿಕ್ಷಕ ವೃಂದ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದರು. ಅಭಿಪ್ರಾಯ ಹಂಚಿಕೊAಡ ಶಾಲೆಯ…
ಮಡಿಕೇರಿ ಮೇ 9 NEWS DESK : ಕೊಡಗು ಜಿಲ್ಲೆಯಲ್ಲಿ ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದ 5,905 ವಿದ್ಯಾರ್ಥಿಗಳಲ್ಲಿ, 5,393 ವಿದ್ಯಾರ್ಥಿಗಳು ಉತ್ತೀರ್ಣರಾಗಿ, ಶೇ.91.24 ರಷ್ಟು ಫಲಿತಾಂಶ ಬಂದಿದೆ. ಇವರಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಹಾಜರಾದ 2,859 ಬಾಲಕರಲ್ಲಿ, 2,531 ಬಾಲಕರು ಉತ್ತೀರ್ಣರಾಗಿದ್ದು, ಶೇ.88.53 ರಷ್ಟು ಫಲಿತಾಂಶ ಪಡೆದಿದ್ದಾರೆ. ಹಾಗೆಯೇ ಪರೀಕ್ಷೆಗೆ ಹಾಜರಾದ 3,046 ಬಾಲಕಿಯರಲ್ಲಿ 2,862 ಬಾಲಕಿಯರು ಉತ್ತೀರ್ಣರಾಗಿ ಶೇ.93.96 ರಷ್ಟು ಫಲಿತಾಂಶ ಪಡೆದಿದ್ದಾರೆ. ಜಿಲ್ಲೆಯ 27 ಪರೀಕ್ಷಾ ಕೇಂದ್ರಗಳಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆದಿದ್ದು, ಈ ಬಾರಿ ವೆಬ್‍ಕಾಸ್ಟಿಂಗ್ ಮೂಲಕ ಪರೀಕ್ಷೆ ನಡೆದಿರುವುದು ವಿಶೇಷವಾಗಿದೆ. ಶೇ.100 ರಷ್ಟು ಫಲಿತಾಂಶ ಪಡೆದ ಶಾಲೆಗಳ ತಾಲ್ಲೂಕುವಾರು ವಿವರ: ಮಡಿಕೇರಿ ಶೈಕ್ಷಿಣಿಕ ತಾಲ್ಲೂಕಿನಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದ ಶಾಲೆಗಳ ವಿವರ : ಮಡಿಕೇರಿಯ ಬ್ಲಾಸಂ ಪ್ರೌಢ ಶಾಲೆ, ಚೆಟ್ಟಳ್ಳಿ ಪ್ರೌಢಶಾಲೆ, ನಾಪೋಕ್ಲು ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ, ಗಾಳಿಬೀಡು ಸರ್ಕಾರಿ ಪ್ರೌಢ ಶಾಲೆ, ಕಡಗದಾಳು ಸರ್ಕಾರಿ ಪ್ರೌಢ ಶಾಲೆ, ಮಕ್ಕಂದೂರು ಸರ್ಕಾರಿ ಪ್ರೌಢ ಶಾಲೆ,…
ಮಡಿಕೇರಿ ಮೇ 9 NEWS DESK : ಪ್ರಸಕ್ತ (2024-25) ಶೈಕ್ಷಣಿಕ ಅವಧಿಗೆ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿ ಪ್ರಥಮ ವರ್ಷಕ್ಕೆ 44 ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಹಾಗೂ ಲ್ಯಾಟರಲ್ ಎಂಟ್ರಿ ಮುಖಾಂತರ 2ನೇ ವರ್ಷದ ಡಿಪ್ಲೋಮಾ ಕೋರ್ಸ್ ಕಲಿಕೆಗಾಗಿ 44 ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವ್ಯಾಸಂಗದ ಸಮಯದಲ್ಲಿ ಮಾರ್ಗಸೂಚಿಯ ಪ್ರಕಾರ ಪ್ರತಿ ವಿದ್ಯಾರ್ಥಿಗೆ ಪ್ರತಿ ತಿಂಗಳು ರೂ. 2,500 ರವರೆಗೆ ಶಿಷ್ಯವೇತನ ನೀಡಲಾಗುವುದು ಹಾಗೂ ವಸತಿ ನಿಲಯದ ಸೌಲಭ್ಯವನ್ನು ಹಣ ಪಾವತಿಸುವ ಆಧಾರದ ಮೇಲೆ ಕಲ್ಪಿಸಲಾಗುವುದು. ಎಸ್‍ಎಸ್‍ಎಲ್‍ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಇಂಗ್ಲೀಷನ್ನು ಒಂದು ವಿಷಯವಾಗಿ ಅಭ್ಯಸಿಸಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 2024 ರ ಜುಲೈ, 01 ಕ್ಕೆ ಅನ್ವಯಿಸುವಂತೆ ಸಾಮಾನ್ಯ ವರ್ಗದ ಅಭ್ಯರ್ಥಿಗಳು 15 ರಿಂದ 23 ವರ್ಷಗಳ ವಯೋಮಿತಿಯಲ್ಲಿರಬೇಕು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು 15 ರಿಂದ 25…






