ಮಡಿಕೇರಿ ಏ.19 NEWS DESK : ವಾಲ್ನೂರಿನಲ್ಲಿ ನಡೆದ ಅಪಘಾತದಲ್ಲಿ ಸಾವಿಗೀಡಾದ ರಾಮಪ್ಪ ಅವರ ಪಾರ್ಥಿವ ಶರೀರವನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಆಸ್ಪತ್ರೆಯಲ್ಲಿ ವೀಕ್ಷಿಸಿ, ಅಂತಿಮ ನಮನ ಸಲ್ಲಿಸಿದರು. ಕುಟುಂಬದವರಿಗೆ ಸಾಂತ್ವನ ಹೇಳಿ ಮಾತನಾಡಿದ ಶಾಸಕರು, ಸರಕಾರದಿಂದ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವುದಲ್ಲದೆ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.
ಲೇಖಕ: admin
ಮಡಿಕೇರಿ.ಏ.19 NEWS DESK : ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ ಚುನಾವಣಾ ಕರ್ತವ್ಯ ನಿರತ ಅಧಿಕಾರಿ ಹಾಗೂ ಸಿಬ್ಬಂಧಿಗಳಿಗೆ ಅಂಚೆ ಸೌಲಭ್ಯ ಕೇಂದ್ರ ಸ್ಥಾಪಿಸಲು ಚುನಾವಣಾ ಆಯೋಗದಿಂದ ನಿರ್ದೇಶನ ನೀಡಲಾಗಿದೆ. ಅದರಂತೆ 21-ಮೈಸೂರು ಕೊಡಗು ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಸಂಬಂಧ, 208-ಮಡಿಕೇರಿ ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಮೂನೆ-12 ರಲ್ಲಿ ನೀಡಲಾದ ಅರ್ಜಿಗಳಿಗೆ ಮತ ಚಲಾಯಿಸಲು ಸೌಲಭ್ಯವನ್ನು ಒದಗಿಸಬೇಕಾಗಿರುತ್ತದೆ. ಮತದಾರರಿಗೆ ಅನುಕೂಲವಾಗುವಂತೆ ಅಂಚೆ ಮತದಾನ ಸೌಲಭ್ಯ ಕೇಂದ್ರವನ್ನು (Postal Ballot Facilitation Center) ಮಡಿಕೇರಿಯ ಸಂತ ಜೋಸೇಫರ ಶಾಲೆಯಲ್ಲಿ ಸ್ಥಾಪಿಸಲಾಗಿದ್ದು, ಚುನಾವಣಾ ಕರ್ತವ್ಯದಲ್ಲಿ ನಿರತರಾದ ಅಧಿಕಾರಿ/ಸಿಬ್ಬಂಧಿಗಳಿಗೆ ಏ.20, 21 ಹಾಗೂ 22 ರಂದು ಪೂರ್ವಾಹ್ನ 9 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಅಂಚೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿರುವುದರಿಂದ ಅಂಚೆ ಮತದಾರರು ತಪ್ಪದೆ ಮತ ಚಲಾಯಿಸಲು ಮಡಿಕೇರಿ ಉಪವಿಭಾಗಾಧಿಕಾರಿಗಳು ಕೋರಿದ್ದಾರೆ.
ಮಡಿಕೇರಿ ಏ.19 NEWS DESK : ವಿರಾಜಪೇಟೆ ತಾಲ್ಲೂಕಿನಲ್ಲಿ ಯರವ ಸಮಾಜ ಆಯೋಜಿಸಿರುವ ಯರವ ಕ್ರಿಕೆಟ್ ಹಬ್ಬದ ಲೋಗೋವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಬಿಡುಗಡೆ ಮಾಡಿದರು. ಪಂದ್ಯಾವಳಿಯು ಮೇ 1 ರಿಂದ 5ರ ವರೆಗೆ ತಿತಿಮತಿ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ.
ಮಡಿಕೇರಿ ಏ.18 : ಪೊನ್ನಂಪೇಟೆ ತಾಲ್ಲೂಕಿನ ನಿಟ್ಟೂರು ಜಾಗಲೆ ಗ್ರಾಮದಲ್ಲಿ ಇಂದು ಸಂಜೆ ಅಸ್ಸಾಂ ಮೂಲದ ಕಾರ್ಮಿಕ ಮುಝೀದ್ ರೆಹಮಾನ್ (55) ಮೇಲೆ ಹುಲಿ ದಾಳಿ ನಡೆಸಿದೆ. ಕುತ್ತಿಗೆ ಹಾಗೂ ತಲೆಬಾಗಕ್ಕೆ ಗಾಯಗೊಳಿಸಿದ ಪರಿಣಾಮ ರೆಹಮಾನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗದ್ದೆಯಲ್ಲಿ ಹಸುಗಳನ್ನು ಮೇಯಿಸುತ್ತಿದ್ದಾಗ ಹುಲಿ ದಾಳಿ ನಡೆಸಿದೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಪೊನ್ನಂಪೇಟೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಡಿಕೇರಿ ಏ.18 NEWS DESK : ಕಾಂಗ್ರೆಸ್ಸಿಗರು ಕುರ್ಚಿ ಅಜೆಂಡಾದಿಂದ ಇನ್ನೂ ಹೊರ ಬಂದಿಲ್ಲ, ಲೋಕಸಭಾ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ರಾಜ್ಯದ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಭವಿಷ್ಯ ನುಡಿದಿದ್ದಾರೆ. ಕುಶಾಲನಗರದ ಗೌಡ ಸಮಾಜದ ಆವರಣದಲ್ಲಿ ಮೈಸೂರು- ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಅವರ ಪರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜ್ಯ ಸರಕಾರ ನೀಡಿರುವ ಗ್ಯಾರಂಟಿ ಯೋಜನೆ ಸರಕಾರದ ಖಜಾನೆ ಖಾಲಿಯಾದ ನಂತರ ಬಂದ್ ಆಗಲಿದೆ ಎಂದು ಹೇಳಿದ ಸದಾನಂದ ಗೌಡರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರದ್ದು ನಿರಂತರ ಹಾಗೂ ಶಾಶ್ವತ ಯೋಜನೆಯಾಗಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಎನ್‍ಡಿಎ ಮೈತ್ರಿಕೂಟ 28 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್ ಅಪಪ್ರಚಾರದ ಆಧಾರದಲ್ಲಿ ಗೆಲುವಿಗೆ ಶತ ಪ್ರಯತ್ನ ಮಾಡುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದಿರುವುದು ಜನರ ದುರ್ದೈವ, ಈ ಬಾರಿಯ ಚುನಾವಣೆ ವಿಭಿನ್ನವಾದ ಚುನಾವಣೆಯಾಗಿದ್ದು, ಜಾತಿ ಲೆಕ್ಕಾಚಾರ ನಡೆಯುವುದಿಲ್ಲ. ಮೋದಿ ಅವರ…
ಮಡಿಕೇರಿ ಏ.18 NEWS DESK : ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ ಅಗತ್ಯ ಸೇವೆಗಳ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂಧಿಗಳ ಗೈರು ಮತದಾರರ (AVES) ವರ್ಗದ ಮತದಾರರಿಗೆ ಸ್ಥಾಪಿಸಲಾದ ಅಂಚೆ ಮತ ಕೇಂದ್ರ (PVC) ಗಳನ್ನು ಸ್ಥಾಪಿಸಲು ಚುನಾವಣಾ ಆಯೋಗದಿಂದ ನಿರ್ದೇಶನ ನೀಡಲಾಗಿದೆ. ಅದರಂತೆ 21-ಮೈಸೂರು ಕೊಡಗು ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಸಂಬಂಧ, 208-ಮಡಿಕೇರಿ ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಟ್ಟು 107 ಅಗತ್ಯ ಸೇವೆಗಳ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂಧಿಗಳಿಗೆ ಅಂಚೆ ಮತಪತ್ರದ ಸೌಲಭ್ಯವನ್ನು ಒದಗಿಸಬೇಕಾಗಿದ್ದು, ಮತದಾರರಿಗೆ ಅನುಕೂಲವಾಗುವಂತೆ ಅಂಚೆ ಮತ ಕೇಂದ್ರವನ್ನು (Postal Voting Center) ಜಿಲ್ಲಾಧಿಕಾರಿಗಳ ಹೊಸ ಕಛೇರಿ, ನೆಲ ಮಹಡಿ ಕೊಠಡಿ ಸಂಖ್ಯೆ-10 ಬನ್ನೂರು ರಸ್ತೆ ಸಿದ್ದಾರ್ಥ ನಗರ, ಮೈಸೂರು ಸ್ಥಾಪಿಸಲಾಗಿದೆ. ಅಗತ್ಯ ಸೇವೆಗಳಡಿ ಕೆಲಸ ನಿರ್ವಹಿಸುತ್ತಿರುವ ಮತದಾರರು ಏ.19, 20 ಹಾಗೂ 21 ರಂದು (AVES) ವರ್ಗದ ಮತದಾರರು ಮೇಲ್ಕಂಡ ಸ್ಥಳದಲ್ಲಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿರುವುದರಿಂದ ಎಲ್ಲಾ (AVES) ವರ್ಗದ…
ಸೋಮವಾರಪೇಟೆ ಏ.18 NEWS DESK : ಶತಮಾನಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ದಲಿತರು, ಅಸ್ಪೃಶ್ಯರಿಗೆ ಗೌರವಯುತ ಬದುಕನ್ನು ಕಟ್ಟಿಕೊಟ್ಟ, ಡಾ.ಅಂಬೇಡ್ಕರ್ ಅವರ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದು ದಲಿತಪರ ಹೋರಾಟಗಾರ ಜಯಪ್ಪ ಹಾನಗಲ್ ಅಭಿಪ್ರಾಯಪಟ್ಟರು. ಸಮೀಪದ ಯಡೂರು ಗ್ರಾಮದ ಬಿ.ಟಿ.ಚನ್ನಯ್ಯ ಗೌರಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೆ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಬಾಬಾ ಸಾಹೇಬರ ಸಾಧನೆ ಅಸಾಧಾರಣವಾದುದು. ಅವರು ಬದುಕಿನುದ್ದಕ್ಕೂ ಅವಮಾನ ಶೋಷಣೆಗಳಿಗೆ ಒಳಗಾಗಿ, ಅವುಗಳನ್ನು ಮೆಟ್ಟಿನಿಂತು ನೊಂದವರ ಬಾಳಿಗೆ ಬೆಳಕಾದವರು ಎಂದು ಹೇಳಿದರು. ಇನ್ನು ಮುಂದಿನ ದಿನಗಳಲ್ಲಿ ಮೀಸಲಾತಿಯಿಂದ ನೌಕರಿ ಪಡೆಯುವುದು ಅಸಾಧ್ಯದ ಮಾತು. ದೇಶದ ಸ್ವಾಯುತ ಸರ್ಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗಿದೆ. ಸರ್ಕಾರಿ ಸಂಸ್ಥೆಗಳು ಇಲ್ಲದೇ ಹೋದರೆ, ಮೀಸಲಾತಿ ಇಲ್ಲವಾಗುತ್ತದೆ ಎಂಬುದನ್ನು ಆಡಳಿತ ಮಾಡುವವರು ತಿಳಿದುಕೊಂಡಿದ್ದಾರೆ. ಶಿಕ್ಷಣ ತಾರಾತಮ್ಯದಿಂದ ಅನೇಕ ಬಡವರು, ದೀನದಲಿತರು ನೌಕರಿಯಿಂದ ವಂಚಿತರಾಗುವ ಸಂದರ್ಭ ಬರಲಿದೆ. ಈಗಾಗಲೇ ವಿದ್ಯಾರ್ಥಿಗಳು ಎಚ್ಚರ ವಹಿಸಬೇಕಾಗಿದೆ.…
ಮಡಿಕೇರಿ ಏ.18 NEWS DESK : ಆಸ್ಟ್ರಿಯಾದ ವಿಯೆನ್ನಾದಲ್ಲಿ ಏ.21ರಂದು ನಡೆಯಲಿರುವ ಮ್ಯಾರಥಾನ್ ಸ್ಪರ್ಧೆಯಲ್ಲಿ ಮ್ಯಾರಥಾನ್ ಓಟಗಾರ ಕೊಡಗಿನ ಅಪ್ಪಚಂಗಡ ಬಿ.ಬೆಳ್ಯಪ್ಪ ಭಾರತವನ್ನು ಪ್ರತಿನಿಧಿಸಲಿದ್ದಾರೆ. 42.195 ಕಿ.ಮೀ. ಮ್ಯಾರಥಾನ್ ಸ್ಪರ್ಧೆಯಲ್ಲಿ ಇಬ್ಬರು ಭಾರತೀಯರು ಸ್ಪರ್ಧಿಸುತ್ತಿದ್ದಾರೆ. ಅದರಲ್ಲಿ ಕರ್ನಾಟಕದ ಕೊಡಗಿನ ಬೆಳ್ಯಪ್ಪ ಒಬ್ಬರಾಗಿದ್ದಾರೆ. ಮತ್ತೊಬ್ಬರು ಉತ್ತರಾಖಂಡ್‍ನ ಮಾನ್‍ಸಿಂಗ್. ಈ ಮ್ಯಾರಥಾನ್‍ನಲ್ಲಿ ವಿಶ್ವಾದ್ಯಂತ 40 ಸಾವಿರ ಓಟಗಾರರು ಭಾಗವಹಿಸುತ್ತಿದ್ದು, ಉತ್ತಮ ಪ್ರದರ್ಶನ ತೋರಿದವರನ್ನು ಪ್ಯಾರಿಸ್ ಒಲಿಂಪಿಕ್ಸ್ ಗೆ ಆಯ್ಕೆ ಮಾಡಲಾಗುತ್ತದೆ. ಈ ಮ್ಯಾರಥಾನ್‍ನಲ್ಲಿ 50 ವರ್ಷಗಳ ಹಿಂದೆ ಪಂಜಾಬ್‍ನ ಶಿವನಾಥ್ ಸಿಂಗ್ ಎಂಬುವರು 2 ಗಂಟೆ 11 ನಿಮಿಷ 59 ಸೆಕೆಂಡ್‍ಗಳಲ್ಲಿ 42.195 ಕಿಲೋ ಮೀಟರ್ ದೂರವನ್ನು ಕ್ರಮಿಸಿ ದಾಖಲೆ ನಿರ್ಮಿಸಿದ್ದರು.
ಮಡಿಕೇರಿ ಏ.18 NEWS DESK : ಸಮಾಜವಾದಿ ಪಕ್ಷದ ಕೊಡಗು ಜಿಲ್ಲಾ ಮಾಜಿ ಅಧ್ಯಕ್ಷ ಚೀಯಾಂಡಿರ ಕಿಶನ್ ಉತ್ತಪ್ಪ ಅವರು ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಮಡಿಕೇರಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡು ರಾಜ್ಯ ಸರಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆ, ಕಾರ್ಯವೈಖರಿ ಮತ್ತು ಜನತೆಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸಿದ ದಿಟ್ಟ ಹೆಜ್ಜೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲು ಸ್ಫೂರ್ತಿ ನೀಡಿತು. ಇನ್ನು ಮುಂದೆ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯನಾಗಿರುವುದಾಗಿ ಎಂದು ಕಿಶನ್ ಉತ್ತಪ್ಪ ತಿಳಿಸಿದರು. ಇವರೊಂದಿಗೆ ಕೊರವಂಡ ದೇವಯ್ಯ ಅವರು ಕೂಡ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಸೋಮವಾರಪೇಟೆ ಏ.18 NEWS DESK : ಶ್ರೀ ರಾಮ ಉತ್ಸವ ಸಮಿತಿ ಮತ್ತು ಹಿಂದು ಜಾಗರಣಾ ವೇದಿಕೆ ವತಿಯಿಂದ ರಾಮನವಮಿ ಪ್ರಯುಕ್ತ ಪಟ್ಟಣದಲ್ಲಿ ಬೃಹತ್ ಶೋಭಯಾತ್ರೆ ನಡೆಯಿತು. ಶ್ರೀರಾಮ ವಿಗ್ರಹವನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ವಿವಿಧ ಭಾಗಗಳಿಂದ ಆಗಮಿಸಿದ ವಿದ್ಯುತ್ ಅಲಂಕೃತ ಮಂಟಪಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ಜಾನಪದ ಕಲಾತಂಡಗಳ ನೃತ್ಯ ನೋಡುಗರನ್ನು ಆಕರ್ಷಿಸಿದವು. ಭಕ್ತಾಧಿಗಳು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಪಟಾಕಿ ಸಿಡಿಮದ್ದು ಪ್ರದರ್ಶನ ನಡೆಯಿತು. ವಿವಿಧ ಸ್ಥಳಗಳಲ್ಲಿ ಪಾನಕ, ಮಜ್ಜಿಗೆ ವಿತರಿಸಲಾಯಿತು. ಅಂಜನೇಯ ದೇವಾಲಯ ಹಾಗು ರಾಮಮಂದಿರದಲ್ಲಿ ವಿಶೇಷ ಪೂಜೆ, ಪ್ರಸಾದ ವಿನಿಯೋಗ ನಡೆಯಿತು.






