ಮಡಿಕೇರಿ ಏ.18 NEWS DESK : ಕೊಡವ ಜಾನಪದ ಹೇಳುವ ಸ್ಪರ್ಧೆಯಲ್ಲಿ ಬಾದುಮಂಡ ಬೀನಕಾಳಯ್ಯ ಪ್ರಥಮ, ಕೊಟ್ಟಂಗಡ ಕವಿತ ವಾಸುದೇವ ದ್ವಿತೀಯ ಮತ್ತು ಮಚ್ಚುರ ಶಾರದ ಅಪ್ಪಯ್ಯ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಕೊಡವಾಮೆರ ಕೊಂಡಾಟ ಸಂಘಟನೆ ಕೊಡವ ಜಾನಪದ ಕಥೆ ಹೇಳುವ ಸ್ಪರ್ಧೆಯನ್ನು ಅಂತರ್ಜಾಲದಲ್ಲಿ ಏರ್ಪಡಿಸಿತ್ತು. ಈ ಸ್ಪರ್ಧೆಯಲ್ಲಿ ನಾನಾ ಭಾಗಗಳಿಂದ ಒಟ್ಟು 17 ಸ್ಪರ್ಧಿಗಳು ಭಾಗವಹಿಸಿ ತಮ್ಮ ಜಾನಪದ ಪ್ರೌಢಿಮೆ ಮೆರೆದರು. ಕೊಡವಾಮೆರ ಕೊಂಡಾಟ ಸಂಘಟನೆ ಸಂಸ್ಥಾಪಕರೂ ಆದ ಚಾಮೆರ ದಿನೇಶ್ ಬೆಳ್ಳಪ ಪರಿಕಲ್ಪನೆಯಲ್ಲಿ ಆಯೋಜನೆಗೊಂಡ ಈ ಸ್ಪರ್ಧೆಯ ಬಹುಮಾನ ದಾನಿಗಳಾಗಿ ರಾಷ್ಟ್ರ ಮಟ್ಟದ ಸಾಮಾಜಿಕ ಕಾರ್ಯಕರ್ತ ಕೆಂಜಂಗಡ ರೋಶನ್ ನಾಣಯ್ಯ ಅವರು ನೀಡಿದರೆ, ಹಿನ್ನೆಲೆ ಚಿತ್ರವನ್ನು ಸುಪ್ರಸಿದ್ದ ಚಿತ್ರಕಲಾವಿದ ಐಮಂಡ ರೂಪೇಶ್ ನಾಣಯ್ಯ ರಚಿಸಿದರು. ಸ್ಪರ್ಧೆಯ ತೀರ್ಪುಗಾರರಾಗಿ ಹಿರಿಯ ಜಾನಪದ ತಜ್ಞರಾದ ಬಾಚರಣಿಯಂಡ ಅಪ್ಪಣ್ಣ, ರಾಣು ಅಪಣ್ಣ ಹಾಗೂ ಅಲ್ಲಾರಂಡ ವಿಠಲ್ ನಂಜಪ್ಪ ಅವರು ನಿರ್ವಹಿಸಿದರು. ಸರ್ಧಾ ಸಂಚಾಲಕರಾಗಿ ಕೊಡವಾಮೆರ ಕೊಂಡಾಟ ಸಂಘಟನೆ ಸಹ ಕಾರ್ಯದರ್ಶಿ ಮಲ್ಲಂಡ ದರ್ಶನ್…
ಲೇಖಕ: admin
ಮಡಿಕೇರಿ ಏ.18 NEWS DESK : ಲೋಕಸಭಾ ಚುನಾವಣೆಯಲ್ಲಿ ಸೋಲುವ ಆತಂಕ ಎದುರಿಸುತ್ತಿರುವ ಬಿಜೆಪಿ ಪ್ರಮುಖರು, ಇತ್ತೀಚೆಗೆ ಒಕ್ಕಲಿಗರ ಸಭೆಯಲ್ಲಿ ಉಪ ಮುಖ್ಯಮಂತ್ರಿ ಪಾಲ್ಗೊಂಡಿರುವುದಕ್ಕೆ ಜಾತಿಯ ಲೇಪನವನ್ನು ನೀಡಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್ ಟೀಕಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಭೇಟಿ ನೀಡಿದ ಸಂದರ್ಭ, ಒಕ್ಕಲಿಗ ಸಮಾಜದ ಸಮಸ್ಯೆಗಳನ್ನು ಅವರ ಮುಂದಿಡುವ ಪ್ರಯತ್ನವಾಗಿಯಷ್ಟೆ ಒಕ್ಕಲಿಗ ಸಮಾಜದ ಸಭೆ ನಡೆದಿತ್ತು ಎಂದು ಸ್ಪಷ್ಟಪಡಿಸಿದರು. ಮೈಸೂರು-ಕೊಡಗು ಕ್ಷೇತ್ರದಲ್ಲಿ ಕಳೆದ ನಾಲ್ಕು ದಶಕಗಳ ಬಳಿಕ ಕಾಂಗ್ರೆಸ್‍ನಿಂದ ಒಕ್ಕಲಿಗ ಸಮುದಾಯದ ಎಂ.ಲಕ್ಷ್ಮಣ್ ಅವರಿಗೆ ಟಿಕೆಟ್ ದೊರಕಿದೆ. ಇವರು ಒಕ್ಕಲಿಗರ ಸಭೆಯಲ್ಲಿ ಪಾಲ್ಗೊಂಡು ಮಾತನಾಡುವ ಸಂದರ್ಭ, ಸಹಜವಾಗಿ ಎಂಬಂತೆ ಸಮೂಹದ ಬೆಂಬಲಕ್ಕೆ ಮನವಿ ಮಾಡಿದ್ದಾರೆ. ಇದರಲ್ಲಿ ತಪ್ಪೇನು ಎಂದು ಪ್ರಶ್ನಿಸಿ, ಒಕ್ಕಲಿಗ ಸಮಾಜದ ಮಂದಿ ಪ್ರಬುದ್ಧರಾಗಿದ್ದು, ಬಿಜೆಪಿ ಆರೋಪಗಳನ್ನು ಅರ್ಥೈಸಿಕೊಳ್ಳಬಲ್ಲರು ಎಂದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರು…
ಮಡಿಕೇರಿ ಏ.18 NEWS DESK : ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವ ಉದ್ದೇಶದಿಂದ ಭಾರತೀಯ ಕಮ್ಯೂನಿಸ್ಟ್ ಪಕ್ಷವು ಇಂಡಿಯಾ ಒಕ್ಕೂಟದ ಭಾಗವಾಗಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಅವರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಸಿಪಿಐ ರಾಜ್ಯ ಸಹ ಕಾರ್ಯದರ್ಶಿ ಬಿ.ಅಮ್ಜದ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯಾನಂತರ ನಡೆಯುತ್ತಿರುವ 18ನೇ ಲೋಕಸಭಾ ಚುನಾವಣೆ ಭಾರತದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ ಚುನಾವಣೆಯಾಗಿದೆ. ಜನತಂತ್ರದ ಮೌಲ್ಯಗಳನ್ನು ಗಾಳಿಗೆ ತೂರಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಿ ಪ್ರಜಾತಂತ್ರ ವ್ಯವಸ್ಥೆಯನ್ನೆ ಶಿಥಿಲಗೊಳಿಸುವ ನಿಟ್ಟಿನಲ್ಲಿ ಸಾಗಿರುವ ಬಿಜೆಪಿಯನ್ನು ಅಧಿಕಾರಕ್ಕೆ ಬಾರದಂತೆ ತಡೆಯುವ ಚುನಾವಣೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಕಳೆದ ಒಂದು ದಶಕಗಳ ಅವಧಿಯ ಕೇಂದ್ರದ ಮೋದಿ ನೇತೃತ್ವದ ಸರ್ವಾಧಿಕಾರಿ ಆಡಳಿತಕ್ಕೆ ಅಂತ್ಯಹಾಡಿ, ಇಂಡಿಯಾ ಒಕ್ಕೂಟ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ::: ತನಿಖೆಯಾಗಲಿ ::: ಭ್ರಷ್ಟಾಚಾರದ ವಿರುದ್ಧವಾಗಿ ಮಾತನಾಡುತ್ತಲೆ ಮೋದಿ ನೇತೃತ್ವದ ಸರ್ಕಾರ ‘ಇಲೆಕ್ಟ್ರಾಲ್ ಬಾಂಡ್’ ಎನ್ನುವ ಭ್ರಷ್ಟಾಚಾರದ ಭಾಗೀದಾರಿ ಪಕ್ಷವಾಗಿ ಇಂದು ಗೋಚರಿಸುತ್ತಿದೆ. ಇಲೆಕ್ಟ್ರಾಲ್…
ಮಡಿಕೇರಿ ಏ.18 NEWS DESK : ವಿರಾಜಪೇಟೆಯಲ್ಲಿ ಹಲವರು ಕಾಂಗ್ರೆಸ್ ಸೇರ್ಪಡೆಗೊಂಡರು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಸಮ್ಮುಖದಲ್ಲಿ ನೂರ್ ಅಹಮದ್ , ಗಯಾಧ್ ಶರೀಫ್, ಸಲೀಂ, ನಹಿಂ, ಶಮೀರ್, ಶಬ್ಬೀರ್ ಸೇರಿದಂತೆ ಹಲವು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಂಡರು.
ಮಡಿಕೇರಿ ಏ.18 NEWS DESK : ವಿರಾಜಪೇಟೆಯ ತೆಲಗರ ಬೀದಿಯಲ್ಲಿರುವ ಶ್ರೀ ದಕ್ಷಿಣಮಾರಿಯಮ್ಮ ಮತ್ತು ಅಂಗಲಾಪರಮೇಶ್ವರಿ ದೇವಾಲಯಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಮತ್ತು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಗೌಡ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಪುತ್ತೂರು ಏ.18 NEWS DESK : ಯುವ ಪದವೀಧರರು ಸಮಾಜಕ್ಕೆ ತಮ್ಮನ್ನು ತಾವು ತೆರೆದುಕೊಂಡು ವೃತ್ತಿ ಜೀವನವನ್ನು ಪ್ರಾರಂಭಿಸುವ ಸಂದರ್ಭದಲ್ಲಿ ಪ್ರದವಿ ಪ್ರದಾನ ಸಮಾರಂಭವು ಒಂದು ಪ್ರೇರಣೆಯಾಗುತ್ತದೆ ಎಂದು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ ಹೇಳಿದರು. ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಶ್ರೀರಾಮ ಸಭಾ ಭವನದಲ್ಲಿ ನಡೆದ ಎಂಬಿಎ ಮತ್ತು ಎಂಸಿಎ ವಿಭಾಗದ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತಾಡಿದರು. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಶಿಸ್ತಿಗೆ ಮಹತ್ವವನ್ನು ನೀಡಬೇಕು ಮತ್ತು ತನ್ನ ಏಳಿಗೆಗೆ ಜೀವನವನ್ನೇ ಮುಡಿಪಾಗಿಟ್ಟ ಪೋಷಕರ ತ್ಯಾಗವನ್ನು ಸ್ಮರಿಸಬೇಕೆಂದು ನುಡಿದರು. ಸಮಾಜದಲ್ಲಿ ಅಗತ್ಯವುಳ್ಳವರಿಗೆ ಸೂಕ್ತ ಸಹಾಯವನ್ನು ಮಾಡುತ್ತಾ ಜೀವನಾನುಭವವನ್ನು ಪಡೆಯಬೇಕು ಮತ್ತು ಸಂತೋಷದ ಜೀವನವನ್ನು ನಡೆಸಬೇಕು ಎಂದರು. ಸಮಾರಂಭಕ್ಕೆ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ವಿದ್ಯಾರ್ಜನೆಯ ಸಮಯದಲ್ಲಿ ಪ್ರತಿ ಹೆಜ್ಜೆಯಲ್ಲೂ ಮಾತಾಪಿತರು, ಪೋಷಕರು, ಉಪನ್ಯಾಸಕರು ಸಹಕಾರಿಗಳಾಗಿರುತ್ತಾರೆ. ಈಗ ವೈಯಕ್ತಿಕವಾಗಿ ಜೀವನವನ್ನು…
ಮಡಿಕೇರಿ ಏ.18 NEWS DESK : ಮಾನವೀಯತೆ ಚಾರಿಟೇಬಲ್ ಟ್ರಸ್ಟ್ ನ ಕೊಡಗು ಪ್ರಾದೇಶಿಕ ಆಡಳಿತಾಧಿಕಾರಿಯಾಗಿ 7ನೆ ಹೊಸಕೋಟೆಯ ಸ್ಟೇನಿ ಜೋಸೆಫ್ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಸ್ಥಾಪಕಾಧ್ಯಕ್ಷ ಶಿವಕುಮಾರ್ ಹೂಟಗಳ್ಳಿ ತಿಳಿಸಿದ್ದಾರೆ. ಸುಂಟಿಕೊಪ್ಪದ 7ನೇ ಹೊಸಕೋಟೆಯಲ್ಲಿ ಟ್ರಸ್ಟ್ ನ ಕಚೇರಿಯಲ್ಲಿ ಮಾತನಾಡಿದ ಅವರು ಸರ್ಕಾರದಿಂದ ಮಾನ್ಯತೆ ಪಡೆದಿರುವ ಉದ್ದೇಶಗಳನ್ನು ಮೊದಲ ಹಂತದಲ್ಲಿ ಕೊಡಗಿನಲ್ಲಿ ಪ್ರಾರಂಭಿಸಲು ಟ್ರಸ್ಟ್ ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಸ್ಟೇನಿ ಜೋಸೆಫ್ ಅವರನ್ನು ನೇಮಕ ಮಾಡಿರುವುದಾಗಿ ಹೇಳಿದರು. ದುಬೈನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸ್ಟೇನಿ ಜೋಸೆಫ್ ಅವರು ನಮ್ಮ ಸಂಸ್ಥೆಯ ಮೂಲಕ ಬಡವರಿಗೆ ಸಹಾಯ ಮಾಡಲು ಮತ್ತು ಮಾನವೀಯತೆಯ ಮೌಲ್ಯಗಳನ್ನು ಎಲ್ಲರಿಗೂ ತಿಳಿಸಲು ತಮ್ಮ ಹುದ್ದೆಗೆ ರಾಜಿನಾಮೆ ನೀಡಿ ಇಲ್ಲಿಗೆ ಮರಳಿದ್ದಾರೆ. ಟ್ರಸ್ಟ್ ನ ಆಡಳಿತಾಧಿಕಾರಿ ಜವಾಬ್ದಾರಿಯನ್ನು ಹೆಮ್ಮೆಯಿಂದ ಸ್ವೀಕರಿಸಿದ್ದಾರೆ ಎಂದರು. ಕ್ರಿಮಿನಲ್ ಚಟುವಟಿಕೆ ಅಥವಾ ಮೊಕದ್ದಮೆ ಇಲ್ಲದೆ ಇರುವ ಯಾವುದೇ ಪ್ರದೇಶದ ವ್ಯಕ್ತಿಗಳು ನಮ್ಮ ಸಂಸ್ಥೆಗೆ ಸೇರಿಕೊಳ್ಳಬಹುದಾಗಿದೆ. ಆದರೆ ಮಾನವೀಯತೆಯ ಗುಣ ಇರಬೇಕು ಮತ್ತು ಅದರ ಮೌಲ್ಯಗಳನ್ನು ತಿಳಿದಿರಬೇಕು. ಸಂಸ್ಥೆ ಒಂದು…
ಹುಣುಸೂರು ಏ.18 NEWS DESK : ಪ್ರಧಾನಿ ನರೇಂದ್ರಮೋದಿ ಅವರ ನೇತೃತ್ವದ ಸರಕಾರ ಮತ್ತೊಮ್ಮೆ ದೇಶದಲ್ಲಿ ಅಧಿಕಾರಕ್ಕೆ ಬರಲಿದೆ, ಸೌಮ್ಯ ಸ್ವಭಾವದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರಿಗೆ ಅತ್ಯಧಿಕ ಮತಗಳನ್ನು ನೀಡಿ ಗೆಲ್ಲಿಸಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕರೆ ನೀಡಿದ್ದಾರೆ. ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರ ಪರ ಹುಣುಸೂರಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಮೋದಿ ಅವರ ನೇತೃತ್ವದ ಸರಕಾರದಿಂದ ಹೊಗೆಸೊಪ್ಪು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದರು. ದೇಶದ ಅಭಿವೃದ್ಧಿಯನ್ನೇ ಅಜೆಂಡವಾಗಿಸಿಕೊಂಡಿರುವ ಬಿಜೆಪಿಗೆ ಜೆಡಿಎಸ್ ಬೆಂಬಲ ಸೂಚಿಸಿದ್ದು, ಅಭ್ಯರ್ಥಿ ಯದುವೀರ್ ಅವರಿಗೆ ಬಹುಮತ ನೀಡಿ ವಿಜಯಶಾಲಿಯನ್ನಾಗಿ ಮಾಡಿ ಎಂದು ಮನವಿ ಮಾಡಿದರು. ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಮಾತನಾಡಿ ವಿಕಾಸ ಭಾರತ ನಿರ್ಮಾಣದ ಸಂಕಲ್ಪ ತೊಟ್ಟಿರುವ ನರೇಂದ್ರಮೋದಿಯವರ ಕನಸನ್ನು ನನಸಾಗಿಸಲು ತಮ್ಮನ್ನು ಬೆಂಬಲಿಸುವಂತೆ ಕೋರಿದರು. ನಮ್ಮ ಕುಟುಂಬ ಈ ನಾಡಿನ ಪ್ರಗತಿಗಾಗಿ ನೀಡಿರುವ ಕೊಡುಗೆಯಂತೆ…
ಮಡಿಕೇರಿ ಏ.18 NEWS DESK : ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯ ಅಂಗವಾಗಿ ಇಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಪರ ಮತಯಾಚನೆ ಮಾಡಿದರು. ಮೂರ್ನಾಡು, ಹೊದ್ದಾರು, ಹಾಕತ್ತೂರು, ಮೇಕೇರಿ ಹಾಗೂ ಹೊಸ್ಕೇರಿ ಮರಗೋಡು ಗ್ರಾಮಗಳಿಗೆ ಭೇಟಿ ನೀಡಿ ಬಿರುಸಿನ ಪ್ರಚಾರ ನಡೆಸಿ, ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರ ಗೆಲುವಿಗೆ ಸಹಕರಿಸುವಂತೆ ಮನವಿ ಮಾಡಿದರು. ಈ ಸಂದರ್ಭ ಪಕ್ಷದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಮುಖಂಡರು ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು. ನಂತರ ಅಮ್ಮತಿ, ಕಾರ್ಮಡು, ಹೊಸೂರು, ಚೆನ್ನಯ್ಯನಕೋಟೆ, ಮಾಲ್ದರೆ, ಪಾಲಿಬೆಟ್ಟ ಪಂಚಾಯಿತಿಗಳು ಸೇರಿದಂತೆ ಸಿದ್ದಾಪುರದಲ್ಲಿ ಶಾಸಕ ಎ.ಎಸ್ ಪೊನ್ನಣ್ಣ ಕಾರ್ಯಕರ್ತರ ಸಭೆ ಮತ್ತು ಚುನಾವಣೆಯ ಪ್ರಚಾರ ನಡೆಸಿದರು. ನಾಪೋಕ್ಲು, ಕಕ್ಕಬ್ಬೆ, ಪಾರಾಣೆ, ಬಲ್ಲಮಾವಟಿ, ಎಮ್ಮೆಮಾಡು, ಬೆಟ್ಟಗೇರಿ, ನರಿಯಂಡದ ಪ್ರಚಾರ ಮಾಡಿದರು.
ಮಡಿಕೇರಿ ಏ.18 NEWS DESK : ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಪರ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಯಿತು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪ ಸಂಖ್ಯಾಂತರ ಘಟಕದ ರಾಜ್ಯಾಧ್ಯಕ್ಷ ಅಬ್ದುಲ್ ಜಬ್ಬಾರ್ ಮಾತನಾಡಿ ನಮಗೆಲ್ಲ ಈ ಚುನಾವಣೆ ಪರೀಕ್ಷೆ ಇದ್ದಂತೆ. ಬಿಜೆಪಿ ಕಳೆದ ಹತ್ತು ವರ್ಷದಿಂದ ಜನರ ದಿಕ್ಕು ತಪ್ಪಿಸುತ್ತಿದ್ದು, ದೇಶಕ್ಕೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಮನುಷ್ಯನಿಗೆ ಊಟ ಇಲ್ಲ ಎಂದರು ನೆಮ್ಮದಿ ಇರಬೇಕು. ಆದ್ದರಿಂದ ನಮ್ಮ ಸರಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ ಎಂದರು. ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದೊಂದಿಗೆ ಅಕ್ಕಿ ಕೇಳಿದಾಗ ನಿರಾಕರಿಸಿದ್ದು, ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹತ್ತು ಸಾವಿರ ನೀಡುತ್ತಿದ್ದಾರೆ. ಅಲ್ಲದೇ 5 ಗ್ಯಾರಂಟಿ ಯೋಜನೆಗಳ ಮೂಲಕ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಅನುಕೂಲವಾಗುವಂತೆ ಮಾಡಿದ್ದಾರೆ ಎಂದು ಹೇಳಿದರು. ಬಿಜೆಪಿಗರು ಜಾತಿ ವ್ಯವಸ್ಥೆಯನ್ನು ತಂದು ಜಾತಿ, ಜಾತಿಗಳ…






