ಪುತ್ತೂರು ಜ.9 : ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಸಿಎ ವಿಭಾಗದ ವಿದ್ಯಾರ್ಥಿಗಳು ಮಂಗಳೂರಿನ ಶ್ರೀದೇವಿ ಇನ್ಸ್ ಟ್ಯುಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ಮೇಳ ಮೇಧಾ-2K24 ಇದರ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಒಟ್ಟು 17 ವಿದ್ಯಾರ್ಥಿಗಳ ಕಾಲೇಜು ತಂಡವು ಭಾಗವಹಿಸಿದ್ದು, ಇದರಲ್ಲಿ 8 ವಿದ್ಯಾರ್ಥಿಗಳು ತಾಂತ್ರಿಕ ವಿಭಾಗದಲ್ಲಿ ಹಾಗೂ 9 ವಿದ್ಯಾರ್ಥಿಗಳು ಸಾಂಸ್ಕೃತಿಕ ವಿಭಾಗದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ವಿವಿಧ ಪ್ರಶಸ್ತಿಗಳೊಂದಿಗೆ ಮೇಳದ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಾಲೇಜಿನ ಎಂಸಿಎ ವಿಭಾಗದ ನಿರ್ದೇಶಕಿ ಡಾ.ವಂದನಾ.ಬಿ.ಎಸ್ ಹಾಗೂ ಉಪನ್ಯಾಸಕರ ಮಾರ್ಗದರ್ಶನದಲ್ಲಿ ವಿಧ್ಯಾರ್ಥಿಗಳು ಈ ಸಾಧನೆಯನ್ನು ಮಾಡಿದ್ದಾರೆ ಎಂದು ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ ತಿಳಿಸಿದ್ದಾರೆ.
ಲೇಖಕ: admin
ಕುಶಾಲನಗರ ಜ.9 : ಕೊಡಗು ಹಾಗೂ ಮೈಸೂರು ಜಿಲ್ಲೆಗಳ ಹಸಿ ಶುಂಠಿ ವರ್ತಕರ ಸಂಘದ ಉದ್ಘಾಟನಾ ಸಮಾರಂಭ ಕುಶಾಲನಗರದಲ್ಲಿ ನಡೆಯಿತು. ಸಂಘವನ್ನು ಉದ್ಘಾಟಿಸಿ ಮಾತನಾಡಿದ ಹಸಿ ಶುಂಠಿ ವರ್ತಕರ ಸಂಘದ ರಾಜ್ಯಾಧ್ಯಕ್ಷ ಸಾಗರ್ ಬಾಬು, ಹಸಿ ಶುಂಠಿ ವರ್ತಕರ ಹಿತರಕ್ಷಣೆಗಾಗಿ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದರು. ಹಿಂದೆ ಚೀನಾದ ರೈತರು ಬೆಳೆದ ಶುಂಠಿಯ ಫಸಲನ್ನು ನಮ್ಮ ದೇಶಕ್ಕೆ ಆಮದು ಮಾಡಿಕೊಂಡು ನಮ್ಮ ದೇಶದ ಶುಂಠಿ ಕೃಷಿಕರ ಹಿತವನ್ನು ಕಡೆಗಣಿಸಲು ಹೊರಟ ಕೇಂದ್ರ ಸರ್ಕಾರದ ಧೋರಣೆಯ ವಿರುದ್ಧ ಹಸಿ ಶುಂಠಿ ವರ್ತಕರ ಸಂಘ ಬಲವಾದ ಹೋರಾಟ ರೂಪಿಸಿದ್ದರ ಫಲವಾಗಿ ಚೀನಾದ ಶುಂಠಿಯ ಆಮದನ್ನು ನಿಷೇಧಗೊಳಿಸಲಾಯಿತು ಎಂದು ವಿವರಿಸಿದರು. ಈ ಸಂದರ್ಭ ಕೊಡಗು ಮೈಸೂರು ಹಸಿ ಶುಂಠಿ ವರ್ತಕರ ಸಂಘದ ಅಧ್ಯಕ್ಷ ಹೆಚ್.ಎನ್.ರಾಜಶೇಖರ್, ರಾಜ್ಯ ಸಂಘದ ಉಪಾಧ್ಯಕ್ಷ ವಿಶ್ವನಾಥ ಗೌಡ, ಮೊಹಮ್ಮದ್ ಅನೀಶ್, ತೌಫಿಕ್, ಖಜಾಂಚಿ ಮುನ್ನಾ, ದಿನೇಶ್ ಬಿ.ಎಲ್. ಯತೀಶ್, ಜನಾರ್ಧನ್, ರೇವಣ್ಣ, ಹಿನಾಯತ್ ಹಾಗೂ ಕೊಡಗು ಮೈಸೂರು ಜಿಲ್ಲೆಗಳ ಸಂಘದ ಪದಾಧಿಕಾರಿಗಳಾದ…
ಮಡಿಕೇರಿ ಜ.9 : ಕರ್ನಾಟಕ ಸ್ಪೋರ್ಟ್ಸ್ ಡ್ಯಾನ್ಸ್ ಅಸೋಸಿಯೇಷನ್ ಹಾಗೂ ಇಂಟರ್ ನ್ಯಾಷನಲ್ ಸ್ಪೋರ್ಟ್ಸ್ ಡ್ಯಾನ್ಸ್ ಫೆಡರೇಷನ್ ವತಿಯಿಂದ ಮಂಡ್ಯದ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಕೆದಮುಳ್ಳೂರು ಗ್ರಾಮದ ಕೌಶಿ ಕಾವೇರಮ್ಮ ಚಿನ್ನದ ಪದಕ ಪಡೆದುಕೊಂಡು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ವಿದುಷಿ ಹೇಮಾವತಿ ಕಾಂತರಾಜ್ ಹಾಗೂ ಕಾವ್ಯಶ್ರೀ ಅವರ ಬಳಿ ತರಬೇತಿ ಪಡೆಯುತ್ತಿರುವ ಕೌಶಿ ಕಾವೇರಮ್ಮ , ಕೆದಮುಳ್ಳೂರು ಗ್ರಾಮದ ವಿ.ಡಿ.ಡಾಲಿ ಮತ್ತು ವಿ.ಡಿ.ಸೀಮ ದಂಪತಿಯ ಪುತ್ರಿ.
ಬೆಂಗಳೂರು ಜ.9 : ಲೇಖಕ ಡಾ.ಎಂ.ಎಸ್.ಮುತ್ತುರಾಜ್ ಅವರ “ಮಂಗಳವಾದ್ಯ” ಕಾದಂಬರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆಗೊಳಿಸಿದರು. ಸವಿತಾ ಸಮಾಜ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾದಂಬರಿ ಅನಾವರಣಗೊಳಿಸಿ ಮಾತನಾಡಿ, ನಟರಾಗಿ ಜನಪ್ರಿಯತೆಗಳಿಸಿರುವ ಎಂ.ಆರ್.ಮುತ್ತುರಾಜ್ ಅವರು ಬಹುಮುಖ ಪ್ರತಿಭೆ. ವೃತ್ತಿ ಘನತೆಯನ್ನು ಕಾಪಾಡುವ ವ್ಯಕ್ತಿತ್ವ. ಇವರು ಕಾಯಕ ಜೀವಿ. ಪ್ರತಿಯೊಬ್ಬರೂ ಘನತೆಯಿಂದ ಕಾಯಕ ಮಾಡಬೇಕು. ಇದನ್ನೇ ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿದ್ದಾರೆ. ಕೈಲಾಸ, ಸ್ವರ್ಗ, ನರಕ ಎನ್ನುವುದು ಬೇರೆಲ್ಲೂ ಇಲ್ಲ. ಎಲ್ಲವೂ ಇಲ್ಲೇ ಇದೆ. ಯಾವ ಕಾಯಕವು ಮೇಲೂ ಅಲ್ಲ, ಯಾವುದು ಕೀಳು ಅಲ್ಲ. ಎಲ್ಲ ಕಾಯಕವೂ ಸಮಾನ ಮಹತ್ವ ಮತ್ತು ಸಮಾನ ಘನತೆ ಹೊಂದಿವೆ. ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ ಎಂದು ಬಸವಣ್ಣನವರು ಹೇಳಿದ್ದು ಇದೇ ಕಾರಣಕ್ಕೆ. ಪರಸ್ಪರ ಮನುಷ್ಯರನ್ನು ಮನುಷ್ಯರು ಗೌರವಿಸುವುದೇ ದೊಡ್ಡ ಮೌಲ್ಯ. ಮನುಷ್ಯ ದ್ವೇಷಕ್ಕಿಂತ ಕೆಟ್ಟ ಮೌಲ್ಯ ಬೇರೆ ಇಲ್ಲ. ಅದಕ್ಕೇ ರಾಷ್ಟ್ರಕವಿ ಕುವೆಂಪು ಅವರು “ಸರ್ವ ಜನಾಂಗದ ಶಾಂತಿಯ ತೋಟ” ಎಂದು ಕರೆದಿದ್ದಾರೆ. ಧರ್ಮದ…
ಮಡಿಕೇರಿ ಜ.9 : ಮಡಿಕೇರಿಯ ಕೊಡಗು ವಿದ್ಯಾಲಯದ 8ನೇ ತರಗತಿ ವಿದ್ಯಾಥಿ೯ಗಳು ರಾಜ್ಯಮಟ್ಟದ ರಾಷ್ಟ್ರೀಯ ವಿಜ್ಞಾನ ಸಮಾವೇಶಕ್ಕೆ ಆಯ್ಕೆಯಾಗಿದ್ದು, ಏಡಿಗಳ ಸಂರಕ್ಷಣೆ ಸಂಬಂಧಿತ ಪ್ರಬಂಧ ಮಂಡಿಸುತ್ತಿದ್ದಾರೆ. ಕೊಡಗು ವಿದ್ಯಾಲಯದ ವಿಜ್ಞಾನ ಶಿಕ್ಷಕಿ ಟಿ.ಜಯಶ್ರೀ ಅವರ ಮಾಗ೯ದಶ೯ನದಲ್ಲಿ ವಿದ್ಯಾಥಿ೯ಗಳಾದ ಎಂ.ಪಿ.ಯಶಿಕಾ ಶೆಟ್ಟಿ ಮತ್ತು ಯಶ್ ಕಾರ್ಯಪ್ಪ ಪಿ. ಎಸ್. ಸಂಶೋಧನಾತ್ಮಕ ಪ್ರಬಂಧವನ್ನು ಏಡಿಗಳ ಕುರಿತಂತೆ ಮಂಡಿಸಲಿದ್ದಾರೆ. ಪರಿಸರ ವ್ಯವಸ್ಥೆಯೊಳಗೆ ಏಡಿಗಳು ನಿಣಾ೯ಯಕ ಪಾತ್ರ ವಹಿಸಿದೆ. ಏಡಿಗಳು ಬಹು ಉಪಕಾರಿ ಜೀವಿಯಾಗಿದ್ದು, ಏಡಿಗಳು ಅಕಶೇರುಕಗಳಲ್ಲಿ ಸಂಧಿಪದಿ ವರ್ಗದ, ಕ್ರಸ್ಟೇಶಿಯ ಎಂಬ ಉಪವಗ೯ಕ್ಕೆ ಸೇರಿದ ಜೀವಿಗಳಾಗಿವೆ. ಏಡಿಗಳು ರೈತನ ಮಿತ್ರರೇ ಹೊರತು ಶತ್ರುವಲ್ಲ. ಏಡಿಗಳು ಮಣ್ಣನ್ನುಸಮೃದ್ಧಗೊಳಿಸಿ, ರಂಧ್ರಗಳನ್ನು ತಮ್ಮ ಅಡಗು ತಾಣವಾಗಿ ಪರಿವತಿ೯ಸುವುದರ ಮೂಲಕ ನೀರಿನ ಒಳಹರಿವಿಗೆ ಹಾಗೂ ಇಂಗುವಿಕೆಗೆ ಸಹಾಯ ಮಾಡುತ್ತವೆ. ಕಳೆಗಳನ್ನು ತಿಂದು, ಮಣ್ಣನ್ನು ಗಾಳಿಯಾಡುವಂತೆ ಏಡಿಗಳು ಮಾಡುತ್ತವೆ. ಇವು ಜಲಮಾಲಿನ್ಯದ ತೀವ್ರತೆಯನ್ನು ನಿಯಂತ್ರಿಸುವಲ್ಲಿ ಬಹು ಮುಖ್ಯ ಪಾತ್ರವನ್ನುವಹಿಸುತ್ತವೆ. ಅತ್ಯಂತ ರುಚಿಕರ ಹಾಗೂ ಆರೋಗ್ಯಕರ ಆಹಾರದ ಮೂಲವಾಗಿ ಕಾಯ೯ನಿವ೯ಹಿಸುತ್ತದೆ. ಹೀಗಾಗಿಯೇ ಏಡಿಗಳು ಕೖಷಿಕರಿಗೆ…
ಮಡಿಕೇರಿ ಜ.9 : ಬಸ್ ತಂಗುದಾಣವೆಂದರೆ ಬಿರುಕು ಬಿಟ್ಟ ಗೋಡೆಗಳು, ಮುರಿದ ಛಾವಣಿ, ಕಸದ ರಾಶಿ, ದುರ್ನಾತ ಬೀರುವ ಶೌಚಾಲಯ ಕಣ್ಣ ಮುಂದೆ ಹಾದು ಹೋಗುತ್ತದೆ. ಪರಿಣಾಮವಾಗಿ ತಂಗುದಾಣವಿದ್ದರೂ ಪ್ರಯಾಣಿಕರು ಹೊರಗೆ ಮರದ ನೆರಳಲ್ಲೋ, ರಸ್ತೆ ಬದಿಯ ಅಂಗಡಿಗಳಲ್ಲೋ ಆಶ್ರಯ ಪಡೆಯುವುದು ಸಾಮಾನ್ಯವಾಗಿದೆ. ಆದರೆ ಇದಕ್ಕೆ ವ್ಯತಿರಿಕ್ತ ಎಂಬಂತೆ ಬಣ್ಣ ಬಣ್ಣದ ಚಿತ್ರಗಳೊಂದಿಗೆ ಹಲವು ಸಂದೇಶಗಳನ್ನು ಸಾರುವ ಬಸ್ ತಂಗುದಾಣವೊಂದು ಕೊಡಗಿನ ತೀರ್ಥಕ್ಷೇತ್ರವಾದ ಭಾಗಮಂಡಲ ಸಮೀಪದ ಕೋರಂಗಾಲ ಗ್ರಾಮದಲ್ಲಿ ನಿರ್ಮಾಣವಾಗಿದ್ದು, ಇದೀಗ ಈ ಬಸ್ ತಂಗುದಾಣ ಜನಾಕರ್ಷಣೆಯ ಕೇಂದ್ರವಾಗಿದೆ. ಭಾಗಮಂಡಲ ಗ್ರಾಮ ಪಂಚಾಯತ್ ಅಧ್ಯಕ್ಷ ಕಾಳನ ರವಿ ಅವರ ಕಲ್ಪನೆಯ ಕೂಸಾಗಿರುವ ಈ ತಂಗುದಾಣದಲ್ಲಿ ನೇಗಿಲ ಯೋಗಿ, ಬೆಳೆಯ ಸಿರಿ ಮೊಳಕೆಯಲ್ಲಿ, ಎಪಿಜೆ ಅಬ್ದುಲ್ ಕಲಾಂ, ಚಂದ್ರಯಾನದ ವಿಕ್ರಂ ಲ್ಯಾಂಡರ್ ಸೇರಿದಂತೆ ಆಕರ್ಷಕ ಚಿತ್ರಗಳು ರಾರಾಜಿಸುತ್ತಿವೆ. ಸುಮಾರು 32 ಅಡಿ ಉದ್ದ, 10 ಅಡಿ ಅಗಲದ ಅಂದಾಜು 10 ಜನ ಕೂರಲು ಸ್ಥಳಾವಕಾಶವಿರುವ ಈ ತಂಗುದಾಣದಲ್ಲಿ ಶೌಚಾಲಯದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಗ್ರಾಮೀಣ…
ಮಡಿಕೇರಿ ಜ.9 : ಮಧ್ಯ ಪ್ರದೇಶದ ಭೂಪಾಲ್ ನಲ್ಲಿ ಡಿ.26 ರಿಂದ 31 ರ ವರೆಗೆ ನಡೆದ ಸಿ ಬಿ ಎಸ್ ಇ ರಾಷ್ಟ್ರ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಮಡಿಕೇರಿಯ ಕೊಡಗು ವಿದ್ಯಾಲಯದ ಬಾಲಕರ ತಂಡವು ತೃತೀಯ ಸ್ಥಾನವನ್ನು ಪಡೆದಿದೆ. ಈ ತಂಡದ ತರಬೇತುದಾರರಾಗಿ ಹೆಚ್.ಡಿ.ದೀನ ಹಾಗೂ ತಂಡದ ವ್ಯವಸ್ಥಾಪಕರಾಗಿ ಕೆಚ್ಚೆಟ್ಟಿರ ಪಾರ್ವತಿ ಕಾರ್ಯ ನಿರ್ವಹಿಸಿದ್ದರು. ತಂಡದ ಆಟಗಾರರು, ತರಬೇತುದಾರರನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ನಾಪೋಕ್ಲು ಜ.4 : ಮನೆ ಮನೆಗೆ ಪವಿತ್ರ ಮಂತ್ರಾಕ್ಷತೆ ವಿತರಣಾ ಅಭಿಯಾನದ ಅಂಗವಾಗಿ ಅಯೋಧ್ಯ ಶ್ರೀರಾಮ ಮಂದಿರದ ಪವಿತ್ರ ಮಂತ್ರಾಕ್ಷತೆಯನ್ನು ಬೆಟ್ಟಗೇರಿಯಲ್ಲಿ ವಿತರಿಸಲಾಯಿತು. ಪವಿತ್ರ ಮಂತ್ರಾಕ್ಷತೆ ಗೆ ಶ್ರೀ ಭಗವತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ಬೆಟ್ಟಗೇರಿ ಗ್ರಾಮದ ಹಿಂದೂ ಸಂಘಟನೆಗಳ ಪ್ರಮುಖರಿಗೆ ಹಸ್ತಾಂತರಿಸಲಾಯಿತು . ಹಿಂದೂ ಸಂಘಟನೆಗಳ ಪ್ರಮುಖರು ಬೆಟ್ಟಗೇರಿ ಗ್ರಾ.ಪಂ ವ್ಯಾಪ್ತಿಯ ಮನೆ ಮನೆಗಳಿಗೆ ತೆರಳಿ ಕುಟುಂಬದ ಸದಸ್ಯರಿಗೆ ಪವಿತ್ರ ಮಂತ್ರಾಕ್ಷತೆಯನ್ನು ಶ್ರದ್ಧಾ ಭಕ್ತಿಯಿಂದ ವಿತರಿಸಿದರು. ಅಲ್ಲದೆ ಜ.22 ರಂದು ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಉದ್ದೇಶ ಹಾಗೂ ಆಚರಣೆಯ ಬಗ್ಗೆ ಮಾಹಿತಿಯನ್ನು ನೀಡಿ ಮನವಿ ಮಾಡಿದರು. ಈ ಸಂದರ್ಭ ಶ್ರೀ ರಾಮ ಭಕ್ತ ಸ್ವಯಂ ಸೇವಕರಾದ ಬೊಳ್ಳಿಯಂಡ ಮಂಜುನಾಥ್, ನೆಯ್ಯಣಿರ ಉಮೇಶ್, ಕಡ್ಲೇರ ತುಳಸಿ ಮೋಹನ್, ವಿ.ಟಿ.ಗಿರೀಶ್ ಸೇರಿದಂತೆ ಪ್ರಮುಖರು ಹಾಜರಿದ್ದರು. ವರದಿ : ದುಗ್ಗಳ ಸದಾನಂದ
ಸುಂಟಿಕೊಪ್ಪ ಜ.9 : ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ ಅದುವೆ ಕನ್ನಡದ ಹಿರಿಮೆ ಗರಿಮೆ ಎಂದು ಕೊಡಗು ಜಿಲ್ಲಾ ಕಸಾಪದ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಬಣ್ಣಿಸಿದ್ದಾರೆ. ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೊಡಗು ಜಿಲ್ಲಾ ಕ.ಸಾ.ಪ ಮತ್ತು ಕುಶಾಲನಗರ ತಾಲೂಕು ಕ.ಸಾ.ಪ. ಸಂಯುಕ್ತಾಶ್ರಯದಲ್ಲಿ ಸುಂಟಿಕೊಪ್ಪದ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ನಡೆದ ಸುವರ್ಣ ಕರ್ನಾಟಕ-50 ರ ಅಂಗವಾಗಿ “ಕನ್ನಡ ಕೊಡವ ಭಾಷೆ ಬೆಳವಣಿಗೆ” ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, ಭಾರತದ ಇತಿಹಾಸದಲ್ಲಿ ಕರ್ನಾಟಕದ ಭಾಷೆ ಸಂಸ್ಕೃತಿ ಪದ್ಧತಿ ಪರಂಪರೆ ಹಬ್ಬ ಹರಿದಿನಗಳಿಗೆ ವಿಶೇಷವಾದ ಮಹತ್ವವಿದೆ. ಇವೆಲ್ಲಾವೂ ಕನ್ನಡ ಭಾಷೆಯ ಮೂಲಕ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಹೊರಹೊಮ್ಮಿದ್ದು, ಈ ಹಿನ್ನೆಯಲ್ಲಿ ಕನ್ನಡಭಾಷೆ 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದು ದೇಶಿಯ ಭಾಷೆಗಳಲ್ಲಿ ಪ್ರಮುಖ ಸ್ಥಾನ ಹೊಂದಿದೆ ಎಂದು ಅವರು ಬಣ್ಣಿಸಿದರು. ಕನ್ನಡ ಭಾಷೆ ಕೊಡವ, ತುಳು, ಬ್ಯಾರಿ, ಅರೆಭಾಷೆ ಮತ್ತು ಕೊಂಕಣಿ ಭಾಷೆಗಳಿಗೆ ಲಿಪಿಯಾಗಿದ್ದು,…
ಚೆಟ್ಟಳ್ಳಿ ಜ.9 : ಚೆಟ್ಟಳ್ಳಿ ಕೊಡವ ಸಮಾಜದ ವತಿಯಿಂದ ಎರಡನೇ ವರ್ಷದ ನೂರೊಕ್ಕ ನಾಡ್ ಒತ್ತೊರ್ಮೆ ಕೂಟವು ಸಾಂಪ್ರದಾಯಿಕ ಆಚರಣೆಯೊಂದಿಗೆ ಸಂಭ್ರಮದಿಂದ ನಡೆಯಿತು. ಚೆಟ್ಟಳ್ಳಿ ಮಂಗಳ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರು ದೇವರ ನೆಲೆಯಲ್ಲಿ ದೀಪ ಬೆಳಗಿದರು. ಸಾಂಪ್ರದಾಯಿಕ ಉಡುಪು ತೊಟ್ಟಪುರುಷರು ದುಡಿಕೊಟ್ಟು ಹಾಡಿನೊಂದಿಗೆ ದೇವರ ನೆಲೆಗೆ ಬಂದು ಅಕ್ಕಿ ಹಾಕಿ ಸರ್ವರಿಗೂ ಒಳಿತಗಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭ ನಿವೃತ್ತ ವಾಯುಸೇನಾಧಿಕಾರಿ ಪುತ್ತರಿರ ಗಣೇಶ್ ಭೀಮಯ್ಯ ಮಾತನಾಡಿ, ನೂರೊಕ್ಕ ನಾಡಿಗೆ ಒಳಪಡುವ ಚೆಟ್ಟಳ್ಳಿ ಕೊಡವ ಸಮಾಜ ಜನಾಂಗದ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಏಳಿಗೆಯನ್ನು ಪಡೆಯಲೆಂದು ಬೇಡಿಕೊಂಡರು. ಹಿರಿಯ ಸದಸ್ಯೆ ಐಚೆಟ್ಟೀರ ಚೋಂದಮ್ಮ ಚೆಟ್ಟಳ್ಳಿ ಕೊಡವ ಸಮಾಜಕ್ಕೆ ಎರಡು ಕುತ್ತುದೀಪವನ್ನು ಉದಾರವಾಗಿ ನೀಡಿದರು. ಮಹಿಳೆಯರ ಉಮ್ಮತಾಟ್, ಪುರುಷರ ಬೊಳಕಾಟ್, ತಾಲಿಪಾಟ್ ಹಾಗೂ ಕೊಡವ ಹಾಡುಗಾರಿಗೆ ನೆರವೇರಿತು. ನಂತರ ದಂಪತಿಗಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಕ್ರೀಡಾಕೂಟಗಳು ನಡೆದವು. ಕಾರ್ಯಕ್ರಮದ ಅಂಗವಾಗಿ ದೇವರ ನೆಲೆಯಲ್ಲಿ ಮೀದಿನೀರಿಟ್ಟು ತಂಬುಟ್ಟ್ ಹಾಗೂ ವಿಶೇಷ ಬೋಜನವನ್ನು ಸವಿದರು. ನಂತರ…






