ಲೇಖಕ: admin

ಮಡಿಕೇರಿ ಅ.20 : ಶ್ರೀ ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಹಾಗೂ ಗೋಸೇವಾ ಗತಿವಿಧಿ ಕರ್ನಾಟಕ ಇವರ ನೇತೃತ್ವದಲ್ಲಿ ನ.14 ರಿಂದ 24 ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುದು ಗ್ರಾಮದಲ್ಲಿ ನಡೆಯಲಿರುವ ಅಷ್ಟೋತ್ತರ ಶ್ರೀಮದ್ ಭಾಗವತ ಸಪ್ತಾಹ ಮತ್ತು 1108 ನಾರಾಯಣ ಕವಚದ ಮಹಾಯಜ್ಞದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸಲಿರುವ ಗೋ ಸಂರಕ್ಷಣಾ ರಥ ಮೂರ್ನಾಡಿಗೆ ಆಗಮಿಸಿತು. ವಿರಾಜಪೇಟೆಯಿಂದ ಮೂರ್ನಾಡಿಗೆ ಆಗಮಿಸಿದ ರಥಕ್ಕೆ ಶ್ರೀಅಯ್ಯಪ್ಪ ದೇವಾಲಯದ ಬಳಿ ಶ್ರದ್ಧಾಭಕ್ತಿಯಿಂದ ಭವ್ಯ ಸ್ವಾಗತ ನೀಡಲಾಯಿತು. ವಿಶ್ವ ಹಿಂದೂ ಪರಿಷತ್ ಹಾಗೂ ಮಾತೃಶಕ್ತಿ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ವಿಹೆಚ್‌ಪಿ ಪ್ರಮುಖರು ಗೋ ಸಂರಕ್ಷಣೆ ಮತ್ತು ಗೋ ರಥ ಯಾತ್ರೆ ಕುರಿತು ವಿವರಿಸಿದರು. ಗೋವುಗಳ ಸಂರಕ್ಷಣೆ ಹಿಂದೂಗಳ ಆದ್ಯ ಕರ್ತವ್ಯವಾಗಿದೆ ಎಂದು ಕರೆ ನೀಡಿದರು. ನವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಸಿಹಿ ಹಂಚಲಾಯಿತು. ನಂತರ ಗೋವುಗಳ ರಕ್ಷಣೆ ಕುರಿತು ಜಾಗೃತಿ ಮಾತುಗಳನ್ನಾಡಿ ಗೋ ಸಂರಕ್ಷಣಾ ರಥವನ್ನು ಶ್ರದ್ಧಾಭಕ್ತಿಯಿಂದ…

Read More

ಕುಶಾಲನಗರ ಅ.19 : ಸ್ವಚ್ಛ ಕಾವೇರಿಗಾಗಿ ಹಮ್ಮಿಕೊಳ್ಳಲಾದ 13ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಅಖಿಲ ಭಾರತ ಸನ್ಯಾಸಿ ಸಂಘದ ಸಾಧು ಸಂತರು ಗುರುವಾರ ಕೊಡಗು ಜಿಲ್ಲೆಗೆ ಆಗಮಿಸಿದರು.  ಕರ್ನಾಟಕ ತಮಿಳುನಾಡಿನ ಗಡಿ ಭಾಗ  ಹೊಸೂರು  ಮೂಲಕ ರಾಜ್ಯಕ್ಕೆ ಆಗಮಿಸಿ ತಲಕಾವೇರಿ ಕ್ಷೇತ್ರಕ್ಕೆ ತೆರಳುವ ಸಂದರ್ಭ ಕುಶಾಲನಗರ ಗಡಿಭಾಗದಲ್ಲಿ ಕಾವೇರಿ ಮಹಾ ಆರತಿ ಬಳಗದ ಪ್ರಮುಖರು ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು.  ಸನ್ಯಾಸಿ ಸಂಘದ ಪ್ರಮುಖರಾದ ಶ್ರೀ ಮುರುಗಾನಂದ ಸರಸ್ವತಿ , ಶ್ರೀ ಮೇಘಾನಂದ ಸರಸ್ವತಿ, ಮತ್ತು ಶ್ರೀ ಶಿವರಾಮನಂದ ಪುರಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಆಗಮಿಸಿದ 20ಕ್ಕೂ ಅಧಿಕ ಸಾಧು ಸಂತರು ಆಗಮಿಸಿದರು. ಕಾವೇರಿ ಮಹಾ ಆರತಿ ಬಳಗದ ಪ್ರಮುಖರಾದ ವನಿತಾ ಚಂದ್ರಮೋಹನ್, ಕೊಕ್ಕಲೆರ ಧರಣಿ ಸೋಮಣ್ಣ, ಚೈತನ್ಯ ಮತ್ತಿತರರು ಸಾಧುಸಂತರನ್ನು ಜಿಲ್ಲೆಯ ಗಡಿಭಾಗದಲ್ಲಿ  ಬರಮಾಡಿಕೊಂಡು  ರಥಯಾತ್ರೆಯಲ್ಲಿ ತಂದ ಮಾತೆ ಕಾವೇರಿಗೆ ಪೂಜೆ ಸಲ್ಲಿಸಲಾಯಿತು.  ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸ್ಥಾಪಕರಾದ ಶ್ರೀ ಗಣೇಶ ಸ್ವರೂಪನಂದ ಗಿರಿ ಸ್ವಾಮೀಜಿ ಮತ್ತು…

Read More

ಮಡಿಕೇರಿ ಅ.19 : ಮೈಸೂರು ವಿಶ್ವವಿದ್ಯಾನಿಲಯದ 103ನೇ ಘಟಿಕೋತ್ಸವದಲ್ಲಿ ಎಂ.ಎ ತತ್ವಶಾಸ್ತ್ರ ವಿಷಯದಲ್ಲಿ ವಿರಾಜಪೇಟೆಯ ಮರಿಯಾ ವಿನ್ಸಿ ಜೋಸ್ ಅವರು ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. 7 ಚಿನ್ನದ ಪದಕ ಮತ್ತು 4 ನಗದು ಬಹುಮಾನ ಪಡೆಯುವ ಮೂಲಕ ಮೈಸೂರು ವಿಶ್ವವಿದ್ಯಾನಿಲಯದ ಕಲಾ ವಿಭಾಗದಲ್ಲಿ 3ನೇ ಸ್ಥಾನ ಗಳಿಸಿದ್ದಾರೆ. ಮರಿಯಾ ವಿನ್ಸಿ ಜೋಸ್ ಅವರು ಪ್ರಸ್ತುತ ಕೊಡಗು ವಿಶ್ವವಿದ್ಯಾನಿಲಯದ ವಿರಾಜಪೇಟೆಯ ಸರ್ವೋದಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಇಡಿ. ಪದವಿಯನ್ನು ವ್ಯಾಸಂಗ ಮಾಡುತ್ತಿದ್ದಾರೆ. ಇವರು ವಿರಾಜಪೇಟೆಯ ಹೆಗ್ಗಳ ಗ್ರಾಮದ ನಿರ್ಮಲ ಗಿರಿ ನಿವಾಸಿ ಪಿ.ಪಿ.ಜೋಸ್ ಹಾಗೂ ಅನ್ನಮ್ಮ ಜೋಸ್ ದಂಪತಿಯ ಕಿರಿಯ ಪುತ್ರಿ ಮತ್ತು ಜಾನ್ಸನ್ ಟಿ.ಟಿ ಅವರ ಪತ್ನಿ.

Read More

ಮಡಿಕೇರಿ ಅ.19 : ನಾಡಹಬ್ಬ ದಸರಾ ಆಚರಣೆ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಅ.24 ರ ಬೆಳಗ್ಗೆ 6 ಗಂಟೆಯಿಂದ ಅ.25 ರ ಬೆಳಗ್ಗೆ 10 ಗಂಟೆಯವರೆಗೆ ಮಡಿಕೇರಿ ನಗರ ಠಾಣಾ ಸರಹದ್ದಿನ ಸುತ್ತಮುತ್ತ 10 ಕಿ.ಮೀ ವ್ಯಾಪ್ತಿಯಲ್ಲಿ ಮತ್ತು ಗೋಣಿಕೊಪ್ಪ, ಪೊನ್ನಂಪೇಟೆ ಠಾಣಾ ಸರಹದ್ದಿನ ಸುತ್ತಮುತ್ತ 10 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಮದ್ಯದ ಅಂಗಡಿ, ಬಾರ್, ಹೋಟೆಲ್, ರೆಸ್ಟೋರೆಂಟ್ ಮತ್ತು ಕ್ಲಬ್‍ಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ ರಾಜಾ ಅವರು ಆದೇಶ ಹೊರಡಿಸಿದ್ದಾರೆ.

Read More

ಮಡಿಕೇರಿ ಅ.24 : ಮಡಿಕೇರಿ ನಗರ ಮತ್ತು ಗೋಣಿಕೊಪ್ಪ ಪಟ್ಟಣದಲ್ಲಿ ನಡೆಯಲಿರುವ ನಾಡಹಬ್ಬ ದಸರಾ ಸಂಬಂಧ ವಾಹನ ದಟ್ಟಣೆ ನಿಯಂತ್ರಿಸಿ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ ವಾಹನ ಸಂಚಾರ ಮತ್ತು ನಿಲುಗಡೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಅ.24 ರಂದು ಮಧ್ಯಾಹ್ನ 2 ಗಂಟೆಯಿಂದ ಅ.25 ರ ಬೆಳಗ್ಗೆ 10 ಗಂಟೆಯವರೆಗೆ ಮಂಗಳೂರು ಕಡೆಯಿಂದ ಮಡಿಕೇರಿ ಮುಖಾಂತರ ಮೈಸೂರು ಕಡೆಗೆ ತೆರಳುವ ಭಾರಿ ವಾಹನಗಳು (ಟ್ಯಾಂಕರ್, ಕ್ಯಾಂಟರ್, ಸರಕು ಲಾರಿಗಳು) ಬದಲಿ ಮಾರ್ಗವಾದ ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ, ಸಕಲೇಶಪುರ, ಮೈಸೂರು ಮಾರ್ಗವಾಗಿ ಸಂಚರಿಸುವುದು. ಅ.24 ರಂದು ಮಧ್ಯಾಹ್ನ 2 ಗಂಟೆಯಿಂದ ಅ.25 ರ ಬೆಳಗ್ಗೆ 10 ಗಂಟೆಯವರೆಗೆ ಮೈಸೂರು ಕಡೆಯಿಂದ ಮಂಗಳೂರು ಕಡೆಗೆ ತೆರಳುವ ಭಾರಿ ವಾಹನಗಳನ್ನು (ಟ್ಯಾಂಕರ್, ಕ್ಯಾಂಟರ್, ಸರಕು ಲಾರಿಗಳು) ಬಿಳಿಕೆರೆ, ಕೆ.ಆರ್.ನಗರ, ಹೊಳೆನರಸೀಪುರ ಹಾಸನ ಸಕಲೇಶಪುರ ಮಾರ್ಗವಾಗಿ ಸಂಚರಿಸುವುದು. ಅ.24 ರಂದು ಸಂಜೆ 4 ಗಂಟೆಯಿಂದ ಅ.25 ರ ಬೆಳಗ್ಗೆ 10 ಗಂಟೆಯವರೆಗೆ ಮಡಿಕೇರಿ ನಗರದೊಳಗೆ…

Read More

ಮಡಿಕೇರಿ ಅ.19 : ಅಡುಗೆ ಅನಿಲದ ಸಿಲಿಂಡರ್ ಸಾಗಿಸುತ್ತಿದ್ದ ಲಾರಿಯೊಂದು ಮಗುಚಿ ಬಿದ್ದ ಘಟನೆ ಮಡಿಕೇರಿ-ಸುಂಟಿಕೊಪ್ಪ ರಾಷ್ಟ್ರೀಯ ಹೆದ್ದಾರಿ ಬೊಯಿಕೇರಿ ಬಳಿ ನಡೆದಿದೆ. ಇಳಿಜಾರು ರಸ್ತೆಯಲ್ಲಿ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದ ಗುಡ್ಡಕ್ಕೆ ಡಿಕ್ಕಿಯಾಗಿ ಮಗುಚಿಕೊಂಡಿದೆ. ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಸಿಲಿಂಡರ್‍ಗಳು ರಸ್ತೆಯಲ್ಲಿ ಉರುಳಿ ಬಿದ್ದಿದ್ದವು. ಬೇರೊಂದು ಲಾರಿಯಲ್ಲಿ ಸಿಲಿಂಡರ್‍ಗಳನ್ನು ಸಾಗಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಸ್ಥಳಕ್ಕೆ ಮಡಿಕೇರಿ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡರು.

Read More

ಮಡಿಕೇರಿ ಅ.19 : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಡಗು ಜಿಲ್ಲಾ ಘಟಕದ ವತಿಯಿಂದ ಅ.29 ರಂದು ಪತ್ರಿಭಾ ಪುರಸ್ಕಾರ, ಹಾನಗಲ್ ಶ್ರೀ ಕುಮಾರಸ್ವಾಮಿಗಳ 156ನೇ ಜಯಂತಿ, ಡಾ.ಶ್ರೀ ಶಿವಕುಮಾರಸ್ವಾಮಿ ಜಯಂತಿ ಹಾಗೂ ಜನಜಾಗೃತಿ ಸಭೆ ನಡೆಯಲಿದೆ ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ಹೆಚ್.ವಿ.ಶಿವಪ್ಪ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಅಧ್ಯಕ್ಷತೆಯಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ಕುಶಾಲನಗರದ ರೈತ ಸಹಕಾರ ಭವನದಲ್ಲಿ ನಡೆಯಲಿರುವ ಮೊದಲನೇ ಅಧಿವೇಶನವನ್ನು ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಅರಣ್ಯ, ಜೈವಿಕ, ಪರಿಸರ ಸಚಿವ ಈಶ್ವರಖಂಡ್ರೆ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು. ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಕೊಡ್ಲಿಪೇಟೆ ಕಲ್ಮಠ ಶ್ರೀ ಮಹಾಂತ ಸ್ವಾಮೀಜಿ, ಅಮ್ಮತ್ತಿ ಕನ್ನಡ ಮಠದ ಶ್ರೀ ಚನ್ನಬಸವದೇಶಿಕೇಂದ್ರ ಸ್ವಾಮೀಜಿ, ಶನಿವಾರಸಂತೆ ಮುದ್ದಿನಕಟ್ಟೆ ಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ತೊರೆನೂರು ವಿರಕ್ತ ಮಠ ಶ್ರೀ ಮಲ್ಲೇಶ್ ಸ್ವಾಮೀಜಿ, ಶನಿವಾರಸಂತೆ ಮನೆಹಳ್ಳಿ ತಪೋವನ ಕ್ಷೇತ್ರದ ಮಹಾಂತ ಶಿವಲಿಂಗ…

Read More

ಮಡಿಕೇರಿ ಅ.19 : ಪ್ರೀತಿ, ಸೌಹಾರ್ದತೆ, ಮಾನವೀಯ ಕಳಕಳಿಯನ್ನು ತನ್ನೊಳಗೆ ಮಿಳಿತವಾಗಿಸಿಕೊಂಡಿರುವ ‘ಜಾನಪದ’ವೆನ್ನುವುದು ಬದುಕಿನ ಪದ್ಧತಿಯೇ ಆಗಿದ್ದು, ಇಂತಹ ಜಾನಪದ ಸಂಸ್ಕೃತಿಯನ್ನು ವೈವಿಧ್ಯಮಯ ಕಲಾ ಪ್ರಕಾರಗಳ ಪ್ರದರ್ಶನಗಳೊಂದಿಗೆ ಸಮರ್ಥವಾಗಿ ಕಟ್ಟಿಕೊಡುವಲ್ಲಿ ಮಡಿಕೇರಿಯ ಜಾನಪದ ದಸರಾ ಉತ್ಸವ ಯಶಸ್ವಿಯಾಯಿತು. ಜಾನಪದ ಉಡುಪು ತೊಟ್ಟ ಮಕ್ಕಳು, ಪುಟಾಣಿಗಳ ಚೆಂಡೆ ಮೇಳ, ವೀರಗಾಸೆ, ಪಟ ಕುಣಿತ, ಡೊಳ್ಳು ಕುಣಿತಗಳೊಂದಿಗೆ ಗುರುವಾರ ಬೆಳಗ್ಗೆ ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿಯಿಂದ ಗಾಂಧಿ ಮೈದಾನದವರೆಗೆ ನಡೆದ ‘ಕಲಾ ಜಾಥ’ ದಸರಾ ಉತ್ಸವಕ್ಕೆ ವಿಶೇಷ ಮೆರುಗನ್ನು ನೀಡಿ, ಈ ನೆಲದ ಶ್ರೀಮಂತ ಜಾನಪದ ಸಂಸ್ಕೃತಿಯ ಸೌಗಂಧವನ್ನು ಪಸರಿಸಿತು. ಕಲಾ ಜಾಥಕ್ಕೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಚಾಲನೆ ನೀಡಿದರೆ, ಜಾನಪದ ದಸರಾ ಉತ್ಸವದ ಪ್ರಮುಖ ರೂವಾರಿಯಾದ ಕೊಡಗು ಜಿಲ್ಲಾ ಜಾನಪದ ಪರಿಷತ್‍ನ ಅಧ್ಯಕ್ಷರಾದ ಬಿ.ಜಿ.ಅನಂತಶಯನ ಮತ್ತು ಪದಾಧಿಕಾರಿಗಳು, ಮಡಿಕೇರಿ ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ ಮತ್ತು ಪದಾಧಿಕಾರಿಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಜಾನಪದ ಸಂಸ್ಕೃತಿಯೊಂದಿಗೆ ಮುನ್ನಡೆಯಿರಿ- ಜಾನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತೆ…

Read More

ಮಡಿಕೇರಿ ಅ.19 :  ಜಲಜೀವನ್ ಮಿಷನ್ ಇಂಪ್ಲಿಮೆಂಟೇಶನ್ ಅಯಿಂಡ್ ಸ್ಫೋರ್ಟ್ಸ್ಂಗ್ ಏಜೆನ್ಸಿ ತಂಡದ ವತಿಯಿಂದ  ಜಲಜೀವನ್ ಮಿಷನ್ ಮತ್ತು ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ  ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲ್ಲೂಕಿನ ನೀರುಗಂಟಿಗಳಿಗೆ, ವಾಟರ್‌ಮ್ಯಾನ್, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ  ಜಲಜೀವನ್ ಮಿಷನ್ ಇಂಪ್ಲಿಮೆಂಟೇಶನ್ ಅಯಿಂಡ್ ಸ್ಫೋರ್ಟ್ಸ್ಂಗ್ ಏಜೆನ್ಸಿ ತಂಡದ ವತಿಯಿಂದ ಫೀಲ್ಡ್ ಟೆಸ್ಟ್ ಕಿಟ್ ನಿಂದ ಕುಡಿಯುವ ನೀರಿನ ಗುಣಮಟ್ಟ, ಪರೀಕ್ಷೆಯ ಕುರಿತು ತರಬೇತಿ ಕಾರ್ಯಾಗಾರ ನಡೆಯಿತು. ಪೊನ್ನಂಪೇಟೆ  ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ  ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಲರಿಗೆ ಜೆ ಜೆ ಎಂ ಯೋಜನೆಯ ಅನುಷ್ಠಾನದ ಕುರಿತು, ಯೋಜನೆಯ ಅನುಷ್ಠಾನದಲ್ಲಿ ಸ್ಥಳೀಯರ ಸಹಭಾಗೀತ್ವದ ಕುರಿತು, ಜಲ ಮೂಲಗಳ ಸಂರಕ್ಷಣೆಯ ಕುರಿತು, ಮಳೆ ನೀರು ಕೊಯ್ಲು ಪದ್ಧತಿ ಅಳವಡಿಕೊಳ್ಳುವುದರಿಂದ ಆಗುವ ಪ್ರಯೋಜನದ ಕುರಿತು ಮತ್ತು ಘನ ಮತ್ತು ದ್ರವ ತ್ಯಾಜ್ಯ ಸಮರ್ಪಕ ನಿರ್ವಹಣೆ ಕುರಿತು ಜಲಜೀವನ್ ಮಿಷನ್ ಐನ್ಪಲಿಟೇಸನ್ ಅಯಿಂಡ್ ಸ್ಫೋರ್ಟ್ಸ್ಂಗ್ ಏಜೆನ್ಸಿ ತಂಡದ ಸದಸ್ಯರು ಮಾಹಿತಿ ನೀಡಿದರು. ಕುಡಿಯುವ ನೀರು ಮತ್ತು ನೈರ್ಮಲ್ಯ ಬಗ್ಗೆ ಹಾಗೂ…

Read More

ಮಡಿಕೇರಿ ಅ.19 : ಕೊಡವ ಕ್ರಿಕೆಟ್ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆ ಕಲ್ಪಿಸುವ ಉದ್ದೇಶದಿಂದ ಕೊಡವ ಕ್ರಿಕೆಟ್ ಅಕಾಡೆಮಿ ವತಿಯಿಂದ ನ.11 ರಿಂದ 14ರ ವರೆಗೆ ವಿರಾಜಪೇಟೆಯಲ್ಲಿ “ಕೊಡವ ಸಮಾಜಗಳ ನಡುವಿನ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ”ಯನ್ನು ಆಯೋಜಿಸಲಾಗಿದೆ ಎಂದು ಅಕಾಡೆಮಿಯ ಖಜಾಂಚಿ ಕೊಕ್ಕೆಂಗಡ ರಂಜನ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳು ಹೆಚ್ಚಾಗಿ ನಡೆಯದ ಕಾರಣ ಬಹಳಷ್ಟು ಲೆದರ್ ಬಾಲ್ ಕ್ರಿಕೆಟ್ ಆಟಗಾರರಿಗೆ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಅವಕಾಶ ಸಿಗುತ್ತಿಲ್ಲ. ಅಲ್ಲದೆ ರಾಜ್ಯ ತಂಡದಲ್ಲಿ ಸ್ಥಾನ ಪಡೆಯವ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಕೊಡವ ಯುವ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ರಾಜ್ಯ ತಂಡಗಳಲ್ಲಿ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೊಡವ ಸಮಾಜಗಳ ನಡುವಿನ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ನಡೆಸಲು ನಿರ್ಧರಿಸಿದೆ ಎಂದು ಹೇಳಿದರು. ವಿರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜಿನ ಮೈದಾನದಲ್ಲಿ ನಾಲ್ಕು ದಿನಗಳ ಕಾಲ…

Read More