ಲೇಖಕ: admin

ಮಡಿಕೇರಿ ಅ.20 : ಕೊಡಗು ಜಿಲ್ಲೆಯ ಮೀನುಗಾರಿಕೆ ಇಲಾಖೆ ವತಿಯಿಂದ 2023-24ನೇ ಸಾಲಿನಿಂದ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ (4.1) ಹಿತ್ತಲಿನ ಅಲಂಕಾರಿಕ ಮೀನು ಸಾಕಾಣಿಕೆ ಘಟಕ. (5.4) ಬ್ಯಾಕ್ಯಾರ್ಡ್ ಮಿನಿ ಆರ್‍ಎಎಸ್ ಘಟಕಗಳ ಸ್ಥಾಪನೆ. (1.4)ಹೊಸಮೀನು ಕೃಷಿ ಕೊಳ ನಿರ್ಮಾಣ(ಪ.ಜಾತಿ). (11.2) ಸಾಂಪ್ರದಾಯಿಕ ಮೀನುಗಾರರಿಗೆ ಯಾಂತ್ರಿಕೃತ ಎಫ್‍ಆರ್‍ಪಿ ದೋಣಿಗಳು ಖರೀದಿಗೆ ಸಹಾಯಧನ. ಯೋಜನೆಗಳನ್ನು ಅನುಷ್ಠಾನಗೊಳಿಸಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್, 31 ಕೊನೆಯ ದಿನವಾಗಿದೆ. ಈ ಉಪ ಯೋಜನೆ ಪ್ರಾರಂಭಿಸಲು ಶೇ.40 ರಷ್ಟು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಮತ್ತು ಶೇ.60 ರಷ್ಟು ಪ.ಜಾತಿ/ ಪ.ಪಂಗಡ/ ಮಹಿಳಾ ಫಲಾನುಭವಿಗಳಿಗೆ ಸಹಾಯಧನ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಮಡಿಕೇರಿ, ಪೊನ್ನಂಪೇಟೆ ಮತ್ತು ಸೋಮವಾರಪೇಟೆ ಅವರನ್ನು ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಸಚಿನ್ ತಿಳಿಸಿದ್ದಾರೆ.

Read More

ಸೋಮವಾರಪೇಟೆ ಅ.20 :  ಅರಳುತ್ತಿರುವ ಮುಗ್ದ ಮನಸಿನಲ್ಲಿ ಸಂಸ್ಕಾರ ಬಿತ್ತಿ ಬೆಳೆಸಿ ಎಂದು ಸೋಮೇಶ್ವರ ದೇವಾಲಯದ ಪ್ರಧಾನ ಅರ್ಚಕ ಚಿತ್ರಕುಮಾರ ಭಟ್ ತಿಳಿಸಿದರು. ಶರನ್ನವ ರಾತ್ರಿ ಅಂಗವಾಗಿ ಪಟ್ಟಣದ ಸೋಮೇಶ್ವರ ದೇವಾಲಯದಲ್ಲಿ ಸರಸ್ವತಿ ಪೂಜೆಯಂದು ಮಕ್ಕಳಿಗೆ ಅಕ್ಷರಾಭ್ಯಾಸದ ಸಂದರ್ಭ  ಮಾತನಾಡಿದರು. ಮಕ್ಕಳಿಗೆ ಇಂದು ತಾಯಿ ಸರಸ್ವತಿಯ ಅನುಗ್ರಹದಿಂದ ಅಕ್ಷರ ಕಲಿಸುವ ಮೂಲಕ ಅವರ ಜೀವನದಲ್ಲಿ ಕಲಿಕೆಯ ಮುನ್ನುಡಿ ಬರೆಯು ತ್ತಿದ್ದೇವೆ. ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಪೋಷಕರು ಬಹಳ ಕಾಳಜಿ ವಹಿಸಬೇಕು. ಮಕ್ಕಳು ತಾವು ಹೇಳಿಕೊಟ್ಟದ್ದನ್ನು ಹಾಗೂ ನಮ್ಮ ಸುತ್ತಲಿನ ಪರಿಸರವನ್ನು ನೋಡಿ ಕಲಿಯುತ್ತಾರೆ ಆದ್ದರಿಂದ ತಂದೆ-ತಾಯಿಗಳು ಮನೆಯಲ್ಲಿ ಜಾಗೃತರಾಗಿರಬೇಕು ಹಾಗೂ ಒಳ್ಳೆಯ ಮಾತುಗಳನ್ನು ಆಡಬೇಕು. ಇದು ಮಕ್ಕಳ ಮನಸಿನ ಮೇಲೆ ಪರಿಣಾಮ ಬೀರುತ್ತದೆ ಎಂದರು. ಇಂದಿನ ಮಕ್ಕಳಲ್ಲಿ ಸಂಸ್ಕಾರ ಭಿತ್ತಬೇಕಾಗಿದೆ, ನಮ್ಮ ಆಚಾರ, ವಿಚಾರ ಕಲಿಸಬೇಕು ಆಗ ನಮ್ಮ ಸಂಪ್ರದಾಯ ಉಳಿಯುತ್ತದೆ ಎಂದು ಸಲಹೆ ನೀಡಿದರು. ದೇವಾಲಯದ ಶಕ್ತಿ ಪಾರ್ವತಿ ದೇವಿಗೆ ಸರಸ್ವತಿ ಅಲಂಕಾರ ದೊಂದಿಗೆ ವಿಶೇಷ ಪೂಜೆ, ಮಹಾಮಂಗಳಾರತಿ…

Read More

ಮಡಿಕೇರಿ ಅ.20 :  ಮಡಿಕೇರಿ ಅ.20 : ಪುಟಾಣಿ ಮಕ್ಕಳ ಸುಪ್ತ ಪ್ರತಿಭೆಯ ಅನಾವರಣದೊಂದಿಗೆ, ಸಾಮಾಜಿಕ ವ್ಯವಹಾರಗಳ ಕುರಿತು ಅವರಲ್ಲಿ ಅರಿವು ಮೂಡಿಸುವ ಮಕ್ಕಳ ಸಂತೆ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ‘ಮಕ್ಕಳ ದಸರಾ ಉತ್ಸವ’ದ ಸಂಭ್ರಮ ಗಾಂಧಿ ಮೈದಾನದ ಉದ್ದಗಲಕ್ಕೂ ವ್ಯಾಪಿಸಿ ಸಂತಸ ಮೂಡಿಸಿತು. ಮಡಿಕೇರಿ ದಸರಾ ಸಮಿತಿ ವತಿಯಿಂದ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಆಯೋಜಿತ ‘ಮಕ್ಕಳ ದಸರಾ ಉತ್ಸವ’ಕ್ಕೆ ಇಂದು ಬೆಳಗ್ಗೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ವೇಗಿ ಅವರು ಛದ್ಮವೇಷಧಾರಿ ಪುಟಾಣಿ ಮಕ್ಕಳೊಂದಿಗೆ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಹೊರ ತರುವ ನಿಟ್ಟಿನ ಅತ್ಯಂತ ರಚನಾತ್ಮಕ ಮತ್ತು ಕ್ರಿಯಾಶೀಲವಾದ ಮಕ್ಕಳ ದಸರಾ ಆಯೋಜನೆ ಶ್ಲಾಘನೀಯ. ದಸರಾ ಉತ್ಸವದ ಸಂದರ್ಭ ಮತ್ತೆಲ್ಲೂ ಕಂಡು ಬಾರದ ಮಕ್ಕಳ ದಸರಾವನ್ನು ಮಡಿಕೇರಿಯಲ್ಲಿ ಆಯೋಜಿಸುವ ಮೂಲಕ ಮಕ್ಕಳಿಗೆ ವೇದಿಕೆ ಕಲ್ಪಿಸಿಕೊಡುವುತ್ತಿರುವುದು ಉತ್ತಮವಾದ ಪ್ರಯತ್ನ. ತಾನು ತನ್ನ ಸರ್ಕಾರಿ…

Read More

ಕುಶಾಲನಗರ, ಅ.20  :  ವಿಶ್ವಕರ್ಮ ಸಮಾಜಕ್ಕೆ ತನ್ನದೇ ಆದ ಇತಿಹಾಸ ಇದ್ದು, ಜಗತ್ತನ್ನೇ ಸೃಷ್ಟಿಸಿದ ಇತಿಹಾಸಗಳು ಇವೆ. ಅಲ್ಲದೆ ಎಲ್ಲಾ ಸಮಾಜಕ್ಕೂ ನಾಗರಿಕತೆ, ಸಂಸ್ಕಾರ, ಸಂಸ್ಕೃತಿ ಕಲಿಸಿಕೊಟ್ಟ ಸಮುದಾಯ ಎಂದರೆ ಅದು ವಿಶ್ವಕರ್ಮ ಸಮುದಾಯ ಎಂದು ಗೌಡಳ್ಳಿ – ಬೀಟಿಕಟ್ಟೆಯ ಗುರುಪಾದ ಶಿಲ್ಪಾಕಲಾ ಪ್ರಧಾನ ಶಿಲ್ಪಿ ಹಾಗೂ ಕಲಾವಿದ ಶಿಲ್ಪಿ ಮಂಜುನಾಥ್ ಆಚಾರ್ಯ  ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ವತಿಯಿಂದ ಹೆಬ್ಬಾಲೆ ಕಾಳಿಕಾಂಭ ದೇವಾಲಯ ಸಮಿತಿ ಆಶ್ರಯದಲ್ಲಿ ಹೆಬ್ಬಾಲೆ ಶ್ರೀ ಕಾಳಿಕಾಂಬ ದೇವಾಲಯದ ಆವರಣದಲ್ಲಿ ದಿವಂಗತ ಪುಟ್ಟಮ್ಮ ಮತ್ತು ಹೆಬ್ಬಾಲೆ ದಿ.ನಂಜಾಚಾರ್ ಅವರ ಜ್ಞಾಪಕಾರ್ಥವಾಗಿ ಏರ್ಪಡಿಸಲಾಗಿದ್ದ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ “ಸಮಾಜಕ್ಕೆ ವಿಶ್ವಕರ್ಮರ ಕೊಡುಗೆಗಳು ” ಎಂಬ ವಿಷಯದ ಕುರಿತು ಮಾತನಾಡಿದರು. ಪ್ರಾಚೀನ ಕಾಲದಿಂದ ಬಂದ ವಿಶ್ವಕರ್ಮ ಪರಂಪರೆಯನ್ನು ನಾವು ಉಳಿಸುವತ್ತ ಚಿಂತನೆ ಮಾಡಬೇಕಿದೆ. ಚಿತ್ರಕಲೆ, ಶಿಲ್ಪಕಲೆ ಹೀಗೆ ಹಲವಾರು ಕರಕುಶಲ ಕಲೆ ಬಗ್ಗೆ ಜನರಿಗೆ ತಿಳಿಸಿದ ವಿಶ್ವಕರ್ಮವು ಕರ್ಮವನ್ನು…

Read More

ಮಡಿಕೇರಿ ಅ.20 :  ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವ ಈ ಬಾರಿ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದು, ಈಗಾಗಲೇ ಮಡಿಕೇರಿ ದಸರಾ ಅಲಂಕಾರ ಸಮಿತಿ ವತಿಯಿಂದ ರಂಗೋಲಿ ಸ್ಪರ್ಧೆಯ ತೀರ್ಪುಗಾರಿಕೆ ಹಾಗೂ ಮನೆಗಳಲ್ಲಿ ಗೊಂಬೆ ಜೋಡಣೆಯ ತೀರ್ಪುಗಾರಿಕೆ ಮುಕ್ತಾಯಗೊಂಡಿದೆ. ವಿಜೇತರನ್ನು ಆಯುಧ ಪೂಜೆ ದಿನದಂದು ಘೋಷಣೆಮಾಡಿ ಬಹುಮಾನ ವಿತರಿಸಲಾಗುವುದೆಂದು ಸಮಿತಿ ಅಧ್ಯಕ್ಷ ಮುನೀರ್ ಮಾಚರ್ ತಿಳಿಸಿದ್ದಾರೆ. ಆಯುಧ ಪೂಜೆ ದಿನವಾದ 23 ರಂದು ಅಲಂಕೃತ ವಾಹನಗಳು ಸಂಜೆ 6.30 ಗಂಟೆ ಒಳಗೆ ಗಾಂಧಿ ಮೈದಾನಕ್ಕೆ ಬರಬೇಕು ತೀರ್ಪುಗಾರರು ಸ್ಥಳಕ್ಕೆ ಆಗಮಿಸಿ ಆಕರ್ಷಕ ವಾಹನಗಳನ್ನು ಬಹುಮಾನಕ್ಕಾಗಿ ವಿವಿಧ ವಿಭಾಗಗಳಲ್ಲಿ  ಮಾಡಲಾಗುವುದು. ಸೈಕಲ್, ಲಾರಿ, ಬಸ್,  ಜೆಸಿಬಿ ಸೇರಿದಂತೆ ಎಲ್ಲಾ ರೀತಿಯ ವಾಹನಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು ಎಂದು ಸಮಿತಿ ಅಧ್ಯಕ್ಷ ಮುನೀರ್ ಮಾಚರ್ ತಿಳಿಸಿದ್ದಾರೆ. ಕಟ್ಟಡ ಅಲಂಕಾರ: ವಿಜಯದಶಮಿಯ ದಿನವಾದ 24 ರಂದು ಸಂಜೆ 6.30 ಗಂಟೆಯೊಳಗೆ ಕಟ್ಟಡಗಳ ಅಲಂಕಾರ ಪೂರ್ಣಗೊಳಿಸಬೇಕು ತೀರ್ಪುಗಾರರು ಸ್ಥಳಕ್ಕೆ ಆಗಮಿಸಿ ಕಟ್ಟಡ ಹಾಗೂ…

Read More

ಮಡಿಕೇರಿ ಅ.20 : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ದಂಡಿನ ಮಾರಿಯಮ್ಮ ದೇವಾಲಯದಲ್ಲಿ ಶರನ್ನವರಾತ್ರಿಯ  5ನೇ ದಿನ ಕಟೀಲು ಶ್ರೀ ದುರ್ಗಾ ಪರಮೇಶ್ವರಿಯ ಅಲಂಕಾರ ಮಾಡಿ  ಪೂಜಿಸಲಾಯಿತು. ಅ.21 ರಂದು ತಾವರೆ ಅಲಂಕಾರ ನೆರವೇರಲಿದೆ.

Read More

ಸುಂಟಿಕೊಪ್ಪ ಅ.20 : ಸುಂಟಿಕೊಪ್ಪ ಸ್ವಸ್ಥ ವಿಶೇಷ ಚೇತನ ಶಾಲೆ ವತಿಯಿಂದ ಸಿ.ಬಿ.ಆರ್ ಸಂಯೋಜಕ ಮುರುಗೇಶ್ ಅವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು. ಸುಂಟಿಕೊಪ್ಪದ ಸ್ವಸ್ಥ ಶಾಲಾ ಸಭಾಗಂಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಸ್ಥ ಸಂಸ್ಥೆಯ ನಿರ್ದೇಶಕರಾದ ಆರತಿ ಸೋಮಯ್ಯ, ಸ್ವಸ್ಥ ಶಾಲೆಯ ಸಂಸ್ಥಾಪಕ ಅಧ್ಯಕ್ಷೆ ಗಂಗಾ ಚಂಗಪ್ಪ, ಮೇಲ್ವಿಚಾರಕರಾದ ವನಿತಾ ಚಂಗಪ್ಪ, ಸಹ ಶಿಕ್ಷಕ ಮತ್ತು ಶಿಕ್ಷಕತೇರ ಸಿಬ್ಬಂದಿಗಳು ಒಗ್ಗೂಡಿ ನೆನಪಿನ ಕಾಣಿಕೆ ಸನ್ಮಾನಿಸಿ ಗೌರವಿಸಿದರು. ಕಳೆದ 13 ವರ್ಷಗಳಿಂದ ಸುಂಟಿಕೊಪ್ಪದ ಸ್ವಸ್ಥ ಸಂಸ್ಥೆಯಲ್ಲಿ ಸಮುದಾಯ ಆಧಾರಿತ ಪುನರ್ವಸತಿ ಯೋಜನೆಯಲ್ಲಿ ಸಂಯೋಜಕರಾಗಿ ಕರ್ತವ್ಯಕ್ಕೆ ಸೇರ್ಪಡೆಗೊಂಡು ತಮ್ಮ ವೃತ್ತಿಯನ್ನು ಆರಂಭಿಸಿದ ಮುರುಗೇಶ್ ವಿಶೇಷ ಚೇತನ ಮಕ್ಕಳು ಹಾಗೂ ವಿಶೇಷ ಚೇತನ ವ್ಯಕ್ತಿಗಳಿಗೆ ನೈಜ ಪಲಾನುಭವಿಗಳಿಗೆ ಸರಕಾರ ಇಲಾಖೆಗಳಿಂದ ದೊರೆಯುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ನೈಜ ಪಲಾನುಭವಿಗಳಿಗೆ ತಲುಪಿಸುವಲ್ಲಿ ಅತ್ತುತ್ತಮ ಸೇವೆ ಸಲ್ಲಿಸಿದ್ದರಲ್ಲದೆ ವಿಶೇಷಚೇತನರ ಪ್ರತಿಭೆಗಳನ್ನು ಅನಾವರಣಗೊಳಿಸಲು ತನ್ನದೆಯಾದ ಕೊಡುಗೆಯನ್ನು ನೀಡಿದ್ದಾರೆ. ಜಿಲ್ಲೆಯಾದ್ಯಂತ ತೆರಳಿ ವಿಶೇಷ ಚೇತನರನ್ನು ಗುರುತಿಸಿ ಸಹಾಯಕ್ಕೆ ಧಾವಿಸಿ ಅವರಿಗೆ ಮೂಲಭೂತ ಸೌಲಭ್ಯಗಳನ್ನು…

Read More

ಮಡಿಕೇರಿ ಅ.20 :  ಮಡಿಕೇರಿ ನಗರದ ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ  ಶರನ್ನವರಾತ್ರಿಯ ನಾಲ್ಕನೇ ದಿನ  ಅಲಂಕಾರ ಮಾಡಿ  ಪೂಜಿಸಲಾಯಿತು.

Read More

ಮಡಿಕೇರಿ ಅ.20 :  ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರ 10 ಹೆಚ್.ಪಿ ಪಂಪ್ ಸೆಟ್‍ಗಳಿಗೆ ವಿದ್ಯುತ್ ಬಿಲ್ ನ್ನು ವಸೂಲಾತಿ ಮಾಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕ ಮಡಿಕೇರಿಯ ಚೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿತು. ಘಟಕದ ಜಿಲ್ಲಾಧ್ಯಕ್ಷ ಮನುಸೋಮಯ್ಯ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಕಾರರು ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರಿಂದ ವಿದ್ಯುತ್ ಶುಲ್ಕ ಪಡೆಯಬಾರದೆಂದು ಒತ್ತಾಯಿಸಿದರು. ಈ ಹಿಂದೆ ರಾಜ್ಯ ಸರ್ಕಾರದ ಮಂತ್ರಿಮಂಡಲದಲ್ಲಿ ತೆಗೆದುಕೊಂಡ ನಿರ್ಧಾರದಂತೆ ವಿದ್ಯುತ್ ಸಬ್ಸಿಡಿಯನ್ನು ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಅನ್ವಯವಾಗುವಂತೆ ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರಿಗೆ 10 ಹೆಚ್.ಪಿ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ನೀಡಬೇಕೆಂದು ಆಗ್ರಹಿಸಿದರು. ಐಪಿ ಸೆಟ್ ಗಳಿಗೆ 12 ಗಂಟೆ ಗುಣಾತ್ಮಕ ಫೇಸ್ ವಿದ್ಯುತ್ ನೀಡಿ ರೈತರ ಕಾಫಿ ತೋಟಗಳಿಗೆ ನೀರು ಹಾಯಿಸಲು ತಡೆರಹಿತ ವಿದ್ಯುತ್ ಸರಬರಾಜು ಮಾಡಬೇಕು, ವಿದ್ಯುತ್ ಉಪಕೇಂದ್ರವನ್ನು ಅವಶ್ಯಕತೆ ಇರುವ ಕಡೆ ಪ್ರಾರಂಭಿಸಲು ತುರ್ತು ಕ್ರಮ ಕೈಗೊಳ್ಳಬೇಕು, ಕೆಳಮಟ್ಟದ ಮತ್ತು…

Read More

ಮಡಿಕೇರಿ ಅ.20 :   ದಕ್ಷಿಣ ವಲಯ ಮಟ್ಟದ ಹಾಕಿ ಪಂದ್ಯಾವಳಿಗೆ  ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು  ಆಯ್ಕೆಯಾಗಿದ್ದಾರೆ. ಹಾಕಿ ಇಂಡಿಯಾ  ವತಿಯಿಂದ  ಬೆಂಗಳೂರಿನಲ್ಲಿ ನಡೆದ ರಾಜ್ಯ ಹಾಕಿ ತಂಡದ ಆಯ್ಕೆ ಶಿಬಿರದಲ್ಲಿ ಕೊಡಗು ವಿದ್ಯಾಲಯದ ವಿದ್ಯಾರ್ಥಿ ಗಳಾದ ಎ.ಟಿ.ಧವನ್, ನಮನ್ ಬೆಳ್ಯಪ್ಪ, ಶ್ರೀ ವಿಷ್ಣುರಾಜ್ ಹಾಗೂ ಪರ್ಲಿನ್ ಪೊನ್ನಮ್ಮ  ದಕ್ಷಿಣ ವಲಯ ಮಟ್ಟದ ಹಾಕಿ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಪರ್ಲಿನ್ ಪೊನ್ನಮ್ಮ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದು, ಇವರು ಅ. 24 ರ ವರೆಗೆ ಚೆನ್ನೈ ನಲ್ಲಿ ನಡೆಯಲಿರುವ ಪ್ರಥಮ ಹಾಕಿ ಇಂಡಿಯಾ ಸಬ್ ಜೂನಿಯರ್ ಬಾಲಕ – ಬಾಲಕಿಯರ ದಕ್ಷಿಣ ವಲಯ ಚಾಂಪಿಯನ್ ಶಿಪ್ 2023 ರಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ. ಇವರಲ್ಲಿ ಅರಮನಮಾಡ ಉದಯ್ ಕುಮಾರ್ ಮತ್ತು ಭವ್ಯ ತಂಗಮ್ಮ ಅವರ ಪುತ್ರ, ನಮನ್ ಬೆಳ್ಯಪ್ಪ  ವಕೀಲರಾದ ಅಚ್ಚಪಂಡ ಗಿರಿ ಮತ್ತು ಪದ್ಮ ದಂಪತಿಗಳ ಪುತ್ರಿ.

Read More