ಮಡಿಕೇರಿ ಮಾ.13 : ಕೊಡವ ಕೂಟಾಳಿಯಡ ಕೂಟದಿಂದ ಮಹಿಳಾ ದಿನಾಚರಣೆ ಅಂಗವಾಗಿ ವಿಶೇಷ ಚೇತನರಾದ ಗೋಣಿಕೊಪ್ಪದ ಕಂಜಿತಂಡ ಯಶೋಧಾ ವತ್ಸಲಾ ಅವರನ್ನು ಸನ್ಮಾನಿಸಲಾಯಿತು. ಯಶೋಧಾ ಅವರ ಮನೆ ಗೆ ಭೇಟಿ ನೀಡಿದ ಕೂಟದ ಪ್ರಮುಖರು ಹಾಗೂ ಪದಾಧಿಕಾರಿಗಳು ವಿಶೇಷ ಚೇತನರಾದರೂ ಸ್ವಾವಲಂಬಿ ಬದುಕು ನಡೆಸುತ್ತ, ನಡೆಯಲು ಆಗದವರಿಗೆ ಗಾಲಿ ಕುರ್ಚಿಗಳು ಒದಗಿಸುವ ಮೂಲಕ ಸಾಮಾಜಿಕ ಜವಾಬ್ದಾರಿ ನಿಭಾಯಿಸುತ್ತಿರುವ ಯಶೋಧಾ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ಕೊಡವ ಕೂಟಾಳಿಯಡ ಕೂಟದ ಅಧ್ಯಕ್ಷೆ ಚಿಮ್ಮಚ್ಚಿರ ಪವಿತ ರಜನ್, ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ, ಸಲಹೆಗಾರ ಚಂಗುಲಂಡ ಸೂರಜ್, ಸಾಂಸ್ಕೃತಿಕ ನಿರ್ದೇಶಕಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಸದಸ್ಯ ಕಾಳಮಂಡ ರಾಬಿನ್ ಅಚ್ಚಮ್ಮ ಇದ್ದರು.
ಲೇಖಕ: admin
ಎಸ್.ಎಸ್.ರಾಜಮೌಳಿ ಅವರ ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಲಭ್ಯವಾಗಿದೆ. ಅತ್ಯುತ್ತಮ ಹಾಡು ವಿಭಾಗದಲ್ಲಿ ನಾಟು ನಾಟು ಹಾಡಿಗೆ ಆಸ್ಕರ್ ಅವಾರ್ಡ್ ಲಭ್ಯವಾಗಿದೆ. ‘ನಾಟು ನಾಟು..’, ‘ಲಿಫ್ಟ್ ಮಿ ಅಪ್’, ‘ದಿಸ್ ಈಸ್ ಲೈಫ್’, ಹೋಲ್ಡ್ ಮೈ ಹ್ಯಾಂಡ್, ಅಪ್ಲೌಸ್ ಮೊದಲಾದ ಹಾಡುಗಳು ರೇಸ್ನಲ್ಲಿದ್ದವು. ಈ ಪೈಕಿ ‘ನಾಟು ನಾಟು..’ ಹಾಡು ಆಸ್ಕರ್ ಗೆದ್ದಿದೆ. ಅಮೆರಿಕಾದ ಲಾಸ್ ಏಂಜಲೀಸ್ ಡಾಲ್ಬಿ ಥಿಯೇಟರ್ ನಲ್ಲಿ ನಡೆಯುತ್ತಿರುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಜಗತ್ತಿನ ಹೆಸರಾಂತ ಕಲಾವಿದರು ಹಾಗೂ ತಂತ್ರಜ್ಞರು ಭಾಗಿಯಾಗಿದ್ದಾರೆ. ಅಲ್ಲದೇ ನಿರ್ದೇಶಕ ರಾಜಮೌಳಿ, ನಟರಾದ ರಾಮ್ ಚರಣ್, ಜ್ಯೂನಿಯರ್ ಎನ್.ಟಿ.ಆರ್ ಸೇರಿದಂತೆ ಆರ್.ಆರ್.ಆರ್ ಚಿತ್ರತಂಡ ಭಾಗಿಯಾಗಿದೆ.
ಮಡಿಕೇರಿ ಮಾ.13 : ಬ್ಲ್ಯಾಕ್ ಪಾಂಥರ್ಸ್ ಮಹಿಳಾ ಕ್ಲಬ್ ವತಿಯಿಂದ ಪ್ರಥಮ ವರ್ಷದ ಜಿಲ್ಲಾ ಮಟ್ಟದ ಪುರುಷರ ವಾಲಿಬಾಲ್ ಮತ್ತು ಮಹಿಳೆಯರ ಥ್ರೋಬಾಲ್ ಪಂದ್ಯಾವಳಿ ಏ.9 ರಂದು ಮರಗೋಡು ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ. ಸುದ್ದಿ ಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕ್ಲಬ್ ಅಧ್ಯಕ್ಷರಾದ ಮಿಲನ ಕಟ್ಟೆಮನೆ, ಅಂದು ಬೆಳಗ್ಗೆ 9 ಗಂಟೆಗೆ ಪಂದ್ಯಾವಳಿ ನಡೆಯಲಿದ್ದು, ವಾಲಿಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಆಸಕ್ತ ತಂಡಗಳು 2 ಸಾವಿರ ಪ್ರವೇಶ ಶುಲ್ಕದೊಂದಿಗೆ ಹಾಗೂ ಥ್ರೋಬಾಲ್‍ನಲ್ಲಿ ಪಾಲ್ಗೊಳ್ಳುವ ತಂಡಗಳು 1 ಸಾವಿರ ರೂ. ಪ್ರವೇಶ ಶುಲ್ಕದೊಂದಿಗೆ ತಂಡದ ಹೆಸರನ್ನು ಏ.6ರ ಸಂಜೆ 5 ಗಂಟೆಯ ಒಳಗಾಗಿ ನೋಂದಾಯಿಸಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.9483426474, 9482022100, 9110689940ವನ್ನು ಸಂಪರ್ಕಿಸಬಹುದೆಂದು ತಿಳಿಸಿದರು. ವಾಲಿಬಾಲ್‍ನಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ 25 ಸಾವಿರ ರೂ. ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನಕ್ಕೆ 15 ಸಾವಿರ ರೂ. ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ಇದರೊಂದಿಗೆ ಬೆಸ್ಟ್ ಅಟ್ಯಾಕರ್,…
ಮಡಿಕೇರಿ ಮಾ.13 : ಭಾವೈಕ್ಯತೆಯ ಕೇಂದ್ರವಾಗಿ ಪ್ರಸಿದ್ಧವಾಗಿರುವ ಕೊಡಗು-ದಕ್ಷಿಣ ಕನ್ನಡ ಗಡಿ ಭಾಗದ ಪೇರಡ್ಕದ ದರ್ಗಾ ಶರೀಫ್ ಆವರಣದಲ್ಲಿ ಎಸ್‍ಕೆಎಸ್‍ಎಸ್‍ಎಫ್ ಗೂನಡ್ಕ ಶಾಖೆಯ ವತಿಯಿಂದ ಮಾ.19 ರಂದು ದ್ವಿತೀಯ ವರ್ಷದ ‘ನೂರೇ ಅಜ್ಮೀರ್ ಆಧ್ಯಾತ್ಮಿಕ ಮಜ್ಲಿಸ್’ ಹಾಗೂ ಮಜ್ಲಿಸ್‍ನ್ನೂರು ವಾರ್ಷಿಕ ಕಾರ್ಯಕ್ರಮ ನಡೆಯಲಿದೆ. ಸುದ್ದಿ ಗೋಷ್ಠಿಯಲ್ಲಿ ಈ ಕುರಿತ ಮಾಹಿತಿ ನೀಡಿದ ಪೇರಡ್ಕ ಜಮಾಅತ್‍ನ ಗೌರವಾಧ್ಯಕ್ಷರಾದ ಶಾಹೀದ್ ತೆಕ್ಕಿಲ್, ಪೇರಡ್ಕ ದರ್ಗಾ ಶರೀಫ್ ವಠಾರದ ತೆಕ್ಕಿಲ್ ಮಹಮ್ಮದ್ ಹಾಜಿ ವೇದಿಕೆಯಲ್ಲಿ ನಡೆಯಲಿರುವ ನೂರೇ ಅಜ್ಮೀರ್ ಮಜ್ಲಿಸ್ ಕಾರ್ಯಕ್ರಮದ ನೇತೃತ್ವವನ್ನು ಕೇರಳದ ಕಲ್ಲಿಕೋಟೆಯ ಮಲಪುರಂನ ಖ್ಯಾತ ಧಾರ್ಮಿಕ ಉಪನ್ಯಾಸಕರಾದ ಉಸ್ತಾದ್ ವಲಿಯುದ್ದೀನ್ ಫೈಝಿ ವಾಝಕ್ಕಾಡ್ ವಹಿಸಿ ನಡೆಸಿಕೊಡಲಿದ್ದಾರೆ. ಮೊಹಮದ್ ಪೈಗಂಬರರ ತತ್ತ್ವಾದರ್ಶಗಳನ್ನು ಜನರಿಗೆ ತಲುಪಿಸುವುದು ಮತ್ತು ಅವರ ಸಂಕೀರ್ತನೆಗಳನ್ನು ಹೇಳುವುದು ನೂರೇ ಅಜ್ಮೀರ್‍ನ ಮುಖ್ಯ ಉದ್ದೇಶವಾಗಿದೆಯೆಂದು ಹೇಳಿದರು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಮಿಯತ್ ಉಲೆಮಾ ಸಂಘಟನೆಯ ಅಧ್ಯಕ್ಷರಾದ ಸೈಯ್ಯದ್ ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ, ಖ್ಯಾತ ವಾಗ್ಮಿಗಳಾದ ಉಸೈನ್ ದಾರಿಮಿ ರೆಂಜಿಲಾಡಿ, ಎಮ್ಮೆಮಾಡು…
ಮಡಿಕೇರಿ ಮಾ.13 : ತೋಟದಲ್ಲಿದ್ದ ನೀರು ಸಂಗ್ರಹದ ತೊಟ್ಟಿಗೆ ಆಯತಪ್ಪಿ ಬಿದ್ದ ಕಾಡೆಮ್ಮೆಯನ್ನು ಅರಣ್ಯ ಇಲಾಖೆ ಹಾಗೂ ಸ್ಥಳೀಯರು ರಕ್ಷಿಸಿರುವ ಘಟನೆ ಶನಿವಾರಸಂತೆಯ ಎಳನೀರುಗುಂಡಿ ಎಂಬಲ್ಲಿ ನಡೆದಿದೆ. ತಾಪಾಮಾನ ಹೆಚ್ಚಾಗುತ್ತಿರುವಂತೆ ನೀರು ಮತ್ತು ಆಹಾರದ ಕೊರತೆಯನ್ನು ಎದುರಿಸುತ್ತಿರುವ ವನ್ಯಜೀವಿಗಳು ತೋಟದ ಫಸಲು ಮತ್ತು ಕೆರೆಗಳೆಡೆಗೆ ಮುಖ ಮಾಡುತ್ತಿವೆ. ಇಂದು ನೀರು ಕುಡಿಯಲೆಂದು ಎಳನೀರುಗುಂಡಿ ಗ್ರಾಮದ ಎಸ್ಟೇಟ್ ಗೆ ನುಗ್ಗಿದ ಕಾಡೆಮ್ಮೆ ನೀರು ಸಂಗ್ರಹದ ತೊಟ್ಟಿ ಬಳಿ ಸಾಗಿದೆ. ನೀರು ಕುಡಿಯುವ ಪ್ರತ್ನದಲ್ಲಿದ್ದಾಗ ಆಯತಪ್ಪಿ ತೊಟ್ಟಿಗೆ ಬಿದ್ದಿದೆ. ನೀರಿನಲ್ಲಿ ಕಾಡೆಮ್ಮೆ ಪರದಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಪ್ರಪುಲ್ ಶೆಟ್ಟಿ ನೇತೃತ್ವದ ತಂಡ ತೋಟದ ಮಾಲೀಕರು ಹಾಗೂ ಕಾರ್ಮಿಕರ ಸಹಕಾರದಿಂದ ಕಾರ್ಯಾಚರಣೆ ನಡೆಸಿದರು. ಜೆಸಿಬಿ ಯಂತ್ರದ ಮೂಲಕ ನೀರಿನ ತೊಟ್ಟಿಯ ಒಂದು ಭಾಗದಲ್ಲಿ ಕಾಡೆಮ್ಮೆ ಮೇಲೆ ಬರಲು ದಾರಿ ಮಾಡಿಕೊಡಲಾಯಿತು. ನಂತರ ಮೇಲೆ ಬಂದ ಕಾಡೆಮ್ಮೆಯನ್ನು ಅರಣ್ಯ ಸಿಬ್ಬಂದಿಗಳು ಕಾಡಿಗಟ್ಟುವಲ್ಲಿ ಯಶಸ್ವಿಯಾದರು. ವರದಿ…
ಮಡಿಕೇರಿ ಮಾ.13 : ಕೊಡಗಿನಲ್ಲಿ ಕಳೆದ 25 ವರ್ಷಗಳಿಂದ ಬಿಜೆಪಿಯನ್ನು ಸಹಿಸಿದ್ದು ಸಾಕು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಚಂದ್ರಮೌಳಿ ಕರೆ ನೀಡಿದ್ದಾರೆ. ಮಡಿಕೇರಿ ನಗರದ ವಿವಿಧೆಡೆ ವಿವಿಧ ಭರವಸೆಗಳ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆಯ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ವಿನೂತನ ಯೋಜನೆಗಳ ಮೂಲಕ ಬಡವರ ಹಾಗೂ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ಕಾಂಗ್ರೆಸ್ ಮಾಡಲಿದೆ ಎಂದರು. ಕಾAಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ “ಗೃಹಜ್ಯೋತಿ” ಯೋಜನೆಯಡಿ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಪೂರೈಕೆ, ಪ್ರತಿ ಮನೆಯೊಡತಿಗೆ 2 ಸಾವಿರ ರೂ. ಪ್ರೋತ್ಸಾಹ ಧನ ನೀಡಲು “ಗೃಹಲಕ್ಷಿ÷್ಮ” ಯೋಜನೆ ಜಾರಿ ಮತ್ತು ಅನ್ನಭಾಗ್ಯ ಯೋಜನೆ ಮೂಲಕ ಬಿಪಿಎಲ್ ಕಾರ್ಡ್ದಾರರಿಗೆ 10 ಕೆ.ಜಿ.ಅಕ್ಕಿ ಉಚಿತವಾಗಿ ನೀಡುವ ಯೋಜನೆ ರಾಜ್ಯದಲ್ಲಿ ಜಾರಿಗೆ ಬರಲಿದೆ. ಈ ಯೋಜನೆ ದೇಶದಲ್ಲೇ ಮೊದಲು ಎಂದು ತಿಳಿಸಿದರು. ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ 600 ಭರವಸೆಗಳಲ್ಲಿ 589…
ಮಡಿಕೇರಿ ಮಾ.13 : ಮಂಗಳೂರು ವಿಶ್ವವಿದ್ಯಾನಿಲಯವು ನಡೆಸಿದ ಅಂತಿಮ ವರ್ಷದ ಕನ್ನಡ ಎಂ.ಎ. ಪದವಿ ಪರೀಕ್ಷೆಯಲ್ಲಿ ಸುಂಟಿಕೊಪ್ಪ ಸಮೀಪದ ಕಲ್ಲೂರು ಗ್ರಾಮದ ಹೆಚ್. ಪಿ. ವಂದನಾ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಪ್ರಥಮ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಕಲ್ಲೂರು ಗ್ರಾಮದ ಪ್ರಕಾಶ್ ಮತ್ತು ಅನುರಾಧ ದಂಪತಿಯ ಪುತ್ರಿಯಾಗಿರುವ ವಂದನಾ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದ ವಿದ್ಯಾರ್ಥಿನಿಯಾಗಿದ್ದಾರೆ.
ಸೋಮವಾರಪೇಟೆ ಮಾ.13 : ವಿಧಾನಸಭಾ ಚುನಾವಣೆ ಹಿನ್ನೆಲೆ ವಿವಿಧ ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಪ್ರಚಾರದಲ್ಲಿ ಕೊಡಗು ಬಿಜೆಪಿ ಮುಂದಿದ್ದು, ಇಂದು ಸೋಮವಾರಪೇಟೆ ಪಟ್ಟಣದಲ್ಲಿ ಯುವ ಮೋರ್ಚಾದ ಯುವಶಕ್ತಿ ಸಂಗಮದ ಮೂಲಕ ಶಕ್ತಿ ಪ್ರದರ್ಶನವಾಗಿದೆ. ಒಂದು ಸಾವಿರಕ್ಕೂ ಅಧಿಕ ಬೈಕ್ ಗಳಲ್ಲಿ ಜಾಥಾ ನಡೆಸಿದ ಬಿಜೆಪಿ ಕಾರ್ಯಕರ್ತರು ಪ್ರಧಾನಮಂತ್ರಿ ನರೇಂದ್ರಮೋದಿ ಹಾಗೂ ಜಾಥಾದ ನೇತೃತ್ವ ವಹಸಿದ್ದ ಶಾಸಕ ಅಪ್ಪಚ್ಚುರಂಜನ್ ಪರ ಘೋಷಣೆಗಳನ್ನು ಕೂಗಿದರು.
ನಾಪೋಕ್ಲು ಮಾ.13 : ಕಬಡಕೇರಿ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ಸಾಧಕರನ್ನು ಸನ್ಮಾನಿಸಲಾಯಿತು. ಹೊದ್ದೂರು ಗ್ರಾ.ಪಂ ಅಧ್ಯಕ್ಷರಾದ ಕುಸುಮಾವತಿ ಕಾರ್ಯಕ್ರಮವನ್ನು ಉದ್ಘಾಟಿಸಿ ದಿನದ ಮಹತ್ವದ ಕುರಿತು ಮಾತನಾಡಿದರು. ನಂತರ ಕಬಡಕೇರಿಯ ಹಿಂದೂ ರುಧ್ರ ಭೂಮಿ ಸೇವಾ ಸಮಿತಿ ವತಿಯಿಂದ ಸಮಾಜದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆ ಮುಮ್ತಾಜ್, ಅಂಗನವಾಡಿ ಕಾರ್ಯಕರ್ತೆ ಎಂ.ಈ.ತಂಸೀನ ಬಾನು ಹಾಗೂ ಅಂಗನವಾಡಿ ಸಹಾಯಕಿ ಪ್ರೇಮ ಧರ್ಮಸ್ಥಳ ಸಂಘದ ವತಿಯಿಂದ ಸೇವಾಪ್ರತಿನಿಧಿಯಾಗಿ 11 ವರ್ಷಗಳ ಕಾಲ ಕಾರ್ಯ ಉತ್ತಮವಾಗಿ ನಿರ್ವಹಿಸುತ್ತಿರುವ ಮುಮ್ತಾಜ್, ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಹಂಸಾವತಿ ಹಾಗೂ ಪೂಜಾಶ್ರೀ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಹೊದ್ದೂರು ಗ್ರಾ.ಪಂ ಉಪಾಧ್ಯಕ್ಷರಾದ ಸರಸು, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಹಂಸಾವತಿ, ಹಿಂದೂ ರುದ್ರ ಭೂಮಿಯ ಅಧ್ಯಕ್ಷ ಸತೀಶ್, ಕಾರ್ಯದರ್ಶಿ ಕುಮಾರ ಪ್ರಸಾದ್, ಚೌರಿರಾ ಸಲೀನ ಜಗತ್, ಜ್ಞಾನ ಜ್ಯೋತಿ ವಿದ್ಯಾ ಸಂಸ್ಥೆಯ ಶಿಕ್ಷಕಿ ಸ್ಮಿತಾ, ಮಹಿಳಾ ಸಮಾಜದ ಉಪಾಧ್ಯಕ್ಷೆ ರುಕ್ಮುಣಿ, ಆಶಾ ಕಾರ್ಯಕರ್ತೆ ಎಂ.ಈ.ಮುಮ್ತಾಜ್, ಕಾವೇರಿ,…
ಮಡಿಕೇರಿ ಮಾ.13 : ವೃದ್ದರೊಬ್ಬರು ಗುಂಡೇಟಿನಿಂದ ಸಾವಿಗೀಡಾಗಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ಕಿಕ್ಕರಳ್ಳಿ ಗ್ರಾಮದಲ್ಲಿ ನಡೆದಿದೆ. ಕೆ.ಎ.ಮಂದಣ್ಣ(73) ಎಂಬುವವರೇ ಮೃತ ವ್ಯಕ್ತಿಯಾಗಿದ್ದು, ಸೊಸೆಯಿಂದಲೇ ಕೊಲೆ ನಡೆದಿದೆ ಎಂದು ಆರೋಪಿಸಲಾಗಿದೆ. ಆರೋಪಿ ನೀಲಮ್ಮ (ಜ್ಯೋತಿ) (28) ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈಕೆಗೆ ಒಂದು ಗಂಡು ಮಗುವಿದೆ. ಪತಿ ನಾಣಯ್ಯ ಅವರೇ ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರು ಎಂದು ತಿಳಿದು ಬಂದಿದೆ. ಕೌಟುಂಬಿಕ ಕಲಹ ಘಟನೆಗೆ ಕಾರಣ ಎಂದು ಹೇಳಲಾಗಿದೆ. ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.






