ಮಡಿಕೇರಿ ಮಾ.13 : ಬಿ.ಜೆ.ಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಹಲವು ಕಾರ್ಯಕರ್ತರು ಸೇರ್ಪಡೆಗೊಂಡರು. ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿ ಕೆಪಿಸಿಸಿ ಕಾನೂನು ಘಟಕ ಅಧ್ಯಕ್ಷ ಅಜ್ಜಿಕುಟ್ಟಿರ.ಎಸ್. ಪೊನ್ನಣ್ಣ ಅವರ ನೇತೃತ್ವದಲ್ಲಿ ಉಪ್ಪಂಗಡ ಹರೀಶ್,ಉಪ್ಪಂಗಡ ಅಶ್ವಿನ್,ಉಪ್ಪಂಗಡ ಕವನ್,ಮಚ್ಚಿಮಾಡ ರಾಜೇಶ್,ರನ್ನು ಅಯ್ಯಪ್ಪ,ಅಕ್ಷಿತ್,ಬಿಪಿನ್, ಯತೀಶ್,ದಿನೇಶ್,ಪ್ರತ್ಯು, ಚೊಟ್ಟೆಯಾಂಡಮಾಡ ಲಿಕಿತ್,ನಾಚಪ್ಪ.ಬಲ್ಯಾಂಡಮಾಡ ಬಿಪಿನ್ ಅವರನ್ನು ಹುದಿಕೇರಿ ಸಮೀಪದ ಬೆಳ್ಳೂರು ಗ್ರಾಮದ ನಿವಾಸದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪಕ್ಷದ ಶಾಲು ಹೊದಿಸಿ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಮುಖಂಡರಾದ ಮೀದೇರಿರ ನವೀನ್, ಪಲ್ವಿನ್ ಪೂಣಚ್ಚ,ಅಪ್ಪಚ್ಛಂಗಡ ಮೋಟಯ್ಯ, ಚಂಗುಲಂಡ ಸೂರಜ್, ಚೊಟ್ಟೆಯಾಂಡಮಾಡ ಉದಯ, ಪೆಮ್ಮಂಡ ರಾಜ ಕುಶಾಲಪ್ಪ,ಇಟ್ಟಿರ ಭವಿನ್,ನರೇನ್ ಕಾರ್ಯಪ್ಪ ಹಾಜರಿದ್ದರು.
ಲೇಖಕ: admin
ಮಡಿಕೇರಿ ಮಾ.13 : ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್, ಕೊಡಗು ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಯ ರಕ್ತ ನಿಧಿ ಕೇಂದ್ರದ ವತಿಯಿಂದ ಮಾ.14 ರಂದು ರಕ್ತದಾನ ಶಿಬಿರ ನಡೆಯಲಿದೆ. ನಗರದ ಕೊಹಿನೂರು ರಸ್ತೆಯಲ್ಲಿರುವ ಚೇಂಬರ್ ಬ್ಯಾಂಕ್ ಕಟ್ಟಡದ ಸಭಾಂಗಣದಲ್ಲಿ ಅಂದು ಬೆಳಗ್ಗೆ 10 ಗಂಟೆಯಿಂದ 1 ಗಂಟೆಯವರೆಗೆ ಶಿಬಿರ ನಡೆಯಲಿದೆ ಎಂದು ಚೇಂಬರ್ ಆಫ್ ಕಾಮರ್ಸ್ ನಗರಾಧ್ಯಕ್ಷ ಎಂ.ಧನಂಜಯ ತಿಳಿಸಿದ್ದಾರೆ. ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿರುವ ಅವರು, ಮಾಹಿತಿಗೆ 98444 61777 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದ್ದಾರೆ.
ಕಡಂಗ ಮಾ.13 : ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಮತ್ತು ಓಯಸಿಸ್ ಸ್ಪೋರ್ಟ್ಸ್ ಕ್ಲಬ್ ಹೋದವಾಡ ಆಶ್ರಯದಲ್ಲಿ ನಡೆದ 19ನೇ ವರ್ಷದ ಕೊಡಗು ಮುಸ್ಲಿಂ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿರಾಜಪೇಟೆ ಬ್ಲಾಕ್ ಕೋಬ್ರಾ ತಂಡ ಚಾಂಪಿಯನ್ ಪಟ್ಟ ಪಡೆದುಕೊಂಡಿತು. ಚರಿಯಪರಂಬು ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ 19ನೇ ವರ್ಷದ ಕೊಡಗು ಮುಸ್ಲಿ0 ಕಪ್ ಕ್ರೀಡಾಕೋಟದ ಕ್ವಾಟರ್ ಫೈನಲ್ನ ಮೊದಲ ಪಂದ್ಯದಲ್ಲಿ ಬ್ಯಾರಿ ಮಡಿಕೇರಿ ತಂಡವನ್ನು ಆಶಿಶ್ ಗೋಣಿಕೊಪ್ಪ ಮಣಿಸಿ ಸೆಮಿಫೈನಲ್ ಪ್ರವೇಸಿದರು. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಇನ್ನಿಂಗ್ಸ್ ನಲ್ಲಿ ಆಶಿಶ್ ತಂಡ 5 ಓವರ್ ನಲ್ಲಿ 54 ರನ್ ಗಳಿಸಿದರು. ಈ ಮೊತ್ತ ವನ್ನು ಬೆನ್ನೆಟಿದ ಬ್ಲಾಕ್ ಕೋಬ್ರಾ ತಂಡ 4 ಓವರಗಳಲ್ಲಿ ಪಂದ್ಯ ವಿಜಯ ಶಾಲಿ ಯಾಗಿ ಫೈನಲ್ ಪ್ರವೇಶಿಸಿದರು. 2ನೇ ಸೆಮಿಫೈನಲ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಕೆ ವೈ ಸಿ ಸಿ ಕಡಂಗ ತಂಡ 5 ಓವರ್ ನಲ್ಲಿ 2 ವಿಕೆಟ್ 93ರನ್ ಕಲೆ ಹಾಕಿದರು ಈ ಮೊತ್ತ…
ಮಡಿಕೇರಿ ಮಾ.13 : ಇತಿಹಾಸ ಪ್ರಸಿದ್ಧದ ಬೊಟ್ಟಿಯತ್ ನಾಡ್ ಈಶ್ವರ ದೇವರ ವಾರ್ಷಿಕೋತ್ಸವವು ಮಾ.15 ಹಾಗೂ 16 ರಂದು ನಡೆಯಲಿದೆ ಎಂದು ನಾಡ್ ತಕ್ಕರಾದ ಅಡ್ಡಂಡ ಪ್ರಕಾಶ್ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು ಪೊನ್ನಂಪೇಟೆ ತಾಲೂಕು ಕುಂದಾ ಮುಗುಟಿಗೇರಿ ಗ್ರಾಮದಲ್ಲಿರುವ ಆರು ಗ್ರಾಮಗಳಿಗೆ ಸೇರಿದ ನಾಡ್ ದೇವಸ್ಥಾನ ಅಥವಾ ಈಶ್ವರ ದೇವಸ್ಥಾನಕ್ಕೆ ಶತಶತಮಾನಗಳ ಇತಿಹಾಸವಿದ್ದು, ಇದರ ವಾರ್ಷಿಕ ಉತ್ಸವವು ಈಗಾಗಲೇ ಮಾ.8ರಂದು ಸಂಜೆ ಕೊಡಿಮರ ನಿಲ್ಲಿಸುವುದರ ಮೂಲಕ ಆರಂಭಗೊಂಡಿದೆ. ಮಾ.15 ರಂದು ನೆರ್ಪು ಹಾಗೂ ಮಾ.16 ರಂದು ದೇವರ ಅವಭೃತ ಸ್ಥಾನ (ದೇವ ಕುಳಿಪೊ) ನಡೆಯಲಿದೆ ಎಂದು ಮಾಹಿತಿ ನೀಡಿದರು. ಕುಂದಾ, ಮುಗುಟಗೇರಿ, ಈಚೂರು, ಹುದೂರು, ಹಳ್ಳಿಗಟ್ಟು, ಅರ್ವತೋಕ್ಲು ಈ ಆರು ಗ್ರಾಮಗಳಿಗೆ ಸೇರಿರುವ ನಾಡ್ ದೇವಸ್ಥಾನದಲ್ಲಿ (ಕುಂದಾ ಬೆಟ್ಟದ ಕೆಳಗಿರುವ ಈಶ್ವರ ದೇವಸ್ಥಾನ) ಮಾ.8 ರಿಂದ ಪ್ರತಿನಿತ್ಯ ಮುಂಜಾನೆ ಮತ್ತು ಸಂಜೆ ಉತ್ಸವ ಮೂರ್ತಿ ಹೊರಗೆ ಬರುವ ಮೂಲಕ ವಿಶೇಷ ಪೂಜೆ ಸೇರಿದಂತೆ ಮಧ್ಯಾಹ್ನ ಮತ್ತು ಸಂಜೆ…
ನಾಪೋಕ್ಲು ಮಾ.13 : ಬಲಮುರಿಯ ಅಗಸ್ತ್ಯೇಶ್ವರ ದೇವಾಲಯದಲ್ಲಿ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಉತ್ಸವ ಒಂದು ವಾರಗಳ ಕಾಲ ನಡೆಯಿತು. ಸುತ್ತಮುತ್ತಲಿನ ಊರುಗಳ ಭಕ್ತರು ಪಾಲ್ಗೊಂಡಿದ್ದರು. ಉತ್ಸವಕ್ಕೆ ಸಂಬಂಧಿಸಿದಂತೆ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂಜೆ ಕಾವೇರಿ ಹೊಳೆಯಲ್ಲಿ ದೇವರ ಅವಭೃತ ಸ್ನಾನ ನೆರವೇರಿ ದೇವಾಲಯದ ಪ್ರಾಂಗಣದಲ್ಲಿ ದೇವರ ನೃತ್ಯಬಲಿ ನಡೆಯಿತು. ಅರ್ಚಕ ಮಹಾಬಲೇಶ್ವರ ಅವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನೆರವೇರಿದವು. ನಂತರ ಅಜ್ಜಪ್ಪ ಕೋಲ ಹಾಗೂ ಚಾಮುಂಡಿ ಕೋಲಗಳು ಜರುಗಿ ಶುದ್ಧ ಕಲಶದೊಂದಿಗೆ ಉತ್ಸವ ಸಂಪನ್ನಗೊಂಡಿತು. ಈ ಸಂದರ್ಭ ದೇವಾಲಯದ ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಊರ ಪರ ಊರಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವರದಿ : ದುಗ್ಗಳ ಸದಾನಂದ.
ಮಡಿಕೇರಿ ಮಾ.11 : ಯಾರದೋ ಮಗು ನಮ್ಮದು ಎಂದು ಪ್ರತಿಪಾದಿಸುವುದಕ್ಕೆ ಬದಲಾಗಿ, ಸಾಧನೆಯ ನಿಮ್ಮ ಕೂಸನ್ನು ಹುಡುಕಿಕೊಳ್ಳಿ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರು ಪ್ರತಿ ಪಕ್ಷದ ಪ್ರಮುಖರನ್ನು ಕುಟುಕಿದ್ದಾರೆ. ಮೈಸೂರು -ಬೆಂಗಳೂರು ದಶಪಥ ರಸ್ತೆಯ ಸಾಧನೆಯನ್ನು ಕಾಂಗ್ರೆಸ್‌ನ ಸಿದ್ದರಾಮಯ್ಯ ಸೇರಿದಂತೆ ಇತರರು ತಮ್ಮದೆಂದು ಹೇಳಿಕೊಳ್ಳುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಮಡಿಕೇರಿಯಲ್ಲಿ ಅವರು ಪ್ರತಿಕ್ರಿಯಿಸಿದ್ದು ಹೀಗೆ. ದಶಪಥ ಯೋಜನೆಗೆ ಕಾಂಗ್ರೆಸ್ ಚಿಕ್ಕಾಸನ್ನು ಒದಗಿಸಿಲ್ಲ. ಪ್ರಸ್ತುತ ಕೇಂದ್ರದ ಬಿಜೆಪಿ ಸರ್ಕಾರ ಈ ಬೃಹತ್ ಯೋಜನೆಯನ್ನು ಕಾರ್ಯಗತಗೊಳಿಸಿದೆ. ಈ ಸಾಧನೆ ತಮ್ಮದೆನ್ನುವ ಕಾಂಗ್ರೆಸ್ ಮುಖಂಡರು ತಮ್ಮ ಸಾಧನೆಗಳ ಕೂಸನ್ನು ಹುಡುಕಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಮಡಿಕೇರಿ ಮಾ.11 : ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಅಭಿವೃದ್ಧಿ ಪರ ಚಿಂತನೆ, ಕಾರ್ಯಕರ್ತರ ಸಂಘಟನಾ ಶಕ್ತಿ, ಭಾರತೀಯ ಸಂಸ್ಕೃತಿಯ ಸಂರಕ್ಷಣೆ ಮತ್ತು ರಾಷ್ಟ್ರೀಯ ಚಿಂತನೆಗಳು, ಈ ನಾಲ್ಕು ಪ್ರಮುಖ ಅಂಶಗಳನ್ನು ಮುಂದಿಟ್ಟುಕೊoಡು ಬಿಜೆಪಿ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಎದುರಿಸಲಿದೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ನಗರದ ಕ್ರಿಸ್ಟಲ್ ಹಾಲ್ ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ 150 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಸಾಧನೆಗಳನ್ನು ಮುಂದಿಟ್ಟು ಮತಯಾಚಿಸುವುದಾಗಿ ಹೇಳಿದರು. ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ, ಈಗಿನ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಅಭ್ಯುದಯಕ್ಕೆ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಟಾನಗೊಳಿಸಲಾಗಿದೆ. ಸದಾನಂದ ಗೌಡರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಶಾಲೆ, ವಸತಿ ನಿಲಯಗಳಿಗಾಗಿಯೇ ರೂ.108 ಕೋಟಿ ಅನುದಾನವನ್ನು ಒದಗಿಸಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು, ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ…
ಮಡಿಕೇರಿ ಮಾ.11 : ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಶಾಸಕ, ಮಾಜಿ ಸಂಸದ ಹಾಗೂ ಪಕ್ಷದ ಕೊಡಗು ಜಿಲ್ಲಾ ಉಸ್ತುವಾರಿ ಆರ್.ಧ್ರುವ ನಾರಾಯಣ್ ಅವರ ನಿಧನಕ್ಕೆ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಸಂತಾಪ ವ್ಯಕ್ತಪಡಿಸಿದೆ. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪ್ರಚಾರ ಸಮಿತಿಯ ಅಧ್ಯಕ್ಷ ಟಿ.ಪಿ.ರಮೇಶ್ ಅವರ ನೇತೃತ್ವದಲ್ಲಿ ನಡೆದ ಸಂತಾಪ ಸಭೆಯಲ್ಲಿ ಧ್ರುವನಾರಾಯಣ್ ಅವರ ಭಾವಚಿತ್ರಕ್ಕೆ ಪ್ರಮುಖರು ಪುಷ್ಪ ನಮನ ಸಲ್ಲಿಸಿದರು. ಮೌನಾಚರಣೆಯ ಮೂಲಕ ಶಾಂತಿ ಕೋರಿದರು. ಟಿ.ಪಿರಮೇಶ್, ಗೌರವ ಕಾರ್ಯದರ್ಶಿ ವಿ.ಪಿ.ಸುರೇಶ್, ಮಡಿಕೇರಿ ಬ್ಲಾಕ್ ಅಧ್ಯಕ್ಷ ಹೆಚ್.ಎ.ಹಂಸ ಹಾಗೂ ನಗರ ಕಾಂಗ್ರೆಸ್ ಅಧ್ಯಕ್ಷ ಬಿ.ವೈ.ರಾಜೇಶ್ ಹಿರಿಯ ನಾಯಕ ಧ್ರುವ ನಾರಾಯಣ್ ಅವರ ವ್ಯಕ್ತಿತ್ವದ ಬಗ್ಗೆ ಗುಣಗಾನ ಮಾಡಿದರು. ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ನಗರಾಧ್ಯಕ್ಷೆ ಹೊಟ್ಟೆಯಂಡ ಫ್ಯಾನ್ಸಿ ಬೆಳ್ಯಪ್ಪ, ಪ್ರಮುಖರಾದ ಕಾನೆಹಿತ್ಲು ಮೊಣ್ಣಪ್ಪ, ಟಿ.ಹೆಚ್.ಉದಯಕುಮಾರ್, ಪ್ರಕಾಶ್ ಆಚಾರ್ಯ, ಜಗದೀಶ್, ಮುದ್ದು ರಾಜು, ಕೆ.ಜಿ.ಪೀಟರ್, ಪ್ರೇಮ ಕೃಷ್ಣಪ್ಪ, ಕೆ.ಆರ್.ದಿನೇಶ್, ಕಲೀಲ್ ಬಾಷಾ, ಎಂ.ಇ.ಫಾರೂಖ್, ರಿಯಾಬ್‌ವುದ್ದೀನ್, ಆರ್.ಪಿ.ಚಂದ್ರಶೇಖರ್, ಎಂ.ಎನ್.ರವೂಫ್, ಎಂ.ಜಿ.ನಾಗೇಶ್, ಪುಷ್ಪ…
ಮಡಿಕೇರಿ ಮಾ.11 : ಮಡಿಕೇರಿಯ ಬಸ್ ತಂಗುದಾಣವೊAದರ ಬಳಿ ಆನೆಯ ಕಾಲು ಮೂಳೆ, ಗಜಮುತ್ತುವಿನಂತೆ ಇರುವ ಮೊಟ್ಟೆಯಾಕಾರದ ಮೂರು ವಸ್ತುಗಳು ಮತ್ತು ಗಜಮುತ್ತುವಿನಂತೆ ಇರುವ ಮುತ್ತುವೊಂದನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಸಿಐಡಿ ಪೊಲೀಸ್ ಅರಣ್ಯ ಘಟಕದ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖಚಿತ ಮಾಹಿತಿ ದೊರೆತ ಹಿನ್ನೆಲೆ ದಾಳಿ ನಡೆಸಿದ ಪೊಲೀಸರು ಮಾಲು ಸಹಿತ ಆರೋಪಿ ನಿಜಾಮುದ್ದಿನ್ ಎಂಬಾತನನ್ನು ವಶಕ್ಕೆ ಪಡೆದರು. ಸಿಐಡಿ ಪೊಲೀಸ್ ಅರಣ್ಯ ಘಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ.ವಿ.ಶರತ್‌ಚಂದ್ರ ಅವರ ನಿರ್ದೇಶನದಂತೆ ಮಡಿಕೇರಿ ಸಿ.ಐ.ಡಿ ಪೊಲೀಸ್ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಕೆ.ಬಿ.ವಿಶ್ವನಾಥ್ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಅರಣ್ಯ ಸಂಚಾರಿ ದಳದ ಪಿ.ಎಸ್.ಐ ಸಿ.ಯು.ಸವಿ, ಹೆಡ್ ಕಾನ್ಸ್ಟೇಬಲ್ ಗಳಾದ ಶೇಖರ್, ರಾಘವೇಂದ್ರ, ಯೋಗೇಶ್, ಉಮೇಶ್, ಮೋಹನ, ಕಾನ್ಸ್ಟೇಬಲ್ ಗಳಾದ ಸ್ವಾಮಿ ಹಾಗೂ ಮಂಜುನಾಥ ಕಾರ್ಯಾಚರಣೆ ನಡೆಸಿದರು.
ಮಡಿಕೇರಿ ಮಾ.11 : ಟಿಪ್ಪರ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಧಳದಲ್ಲೇ ಸಾವನ್ನಪ್ಪಿದ ಘಟನೆ ಹುದುಗೂರು- ಹಾರಂಗಿ ಮಾರ್ಗವಾಗಿ ಯಡವನಾಡು- ಸೋಮವಾರಪೇಟೆ ಕಡೆಗೆ ತೆರಳುವ ರಸ್ತೆಯಲ್ಲಿ ನಡೆದಿದೆ. ಮೃತರನ್ನು ಯಡವನಾಡು ಗ್ರಾಮದ ನಿವಾಸಿ ಪ್ರವೀಣ್ ಅಲಿಯಾಸ್ ದೊರೆಮಣಿ(46) ಎಂದು ಗುರುತಿಸಲಾಗಿದೆ. ಯಡವನಾಡು ಕಡೆಯಿಂದ ಹಾರಂಗಿ ಕಡೆಗೆ ಬರುತ್ತಿದ್ದ ಟಿಪ್ಪರ್ ಹಾಗೂ ಹಾರಂಗಿಯಿoದ ಯಡವನಾಡು ಕಡೆಗೆ ಹೋಗುತ್ತಿದ್ದ ಬೈಕ್ ಪರಸ್ಪರ ಡಿಕ್ಕಿಯಾದ ಪರಿಣಾಮ ದೊರೆಮಣಿ ಸ್ಧಳದಲ್ಲೇ ಸಾವಿಗೀಡಾದರು. ಘಟನೆಗೆ ಸಂಬoಧಿಸಿದoತೆ 7ನೇ ಹೊಸಕೋಟೆ ನಿವಾಸಿ ಟಿಪ್ಪರ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






