ಲೇಖಕ: admin

ಸೋಮವಾರಪೇಟೆ NEWS DESK ಮಾ.24 : ಬರಹಗಾರ್ತಿ ಗೀತಾಂಜಲಿ ಮಹಿಳಾ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಂಗಳೂರಿನ ಸ್ವರ್ಣ ಭಾರತಿ ಫೌಂಡೇಶನ್ ಮಹಿಳಾ ದಿನಾಚರಣೆ ಅಂಗವಾಗಿ  ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಕೊಡಮಾಡುವ  ಮಹಿಳಾ ರತ್ನ 2025 ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ನೀಡಲಾಗಿದೆ. ಭಾನುವಾರ ಬೆಂಗಳೂರಿನ ಈಸ್ಟ್ ಕಲ್ಚರಲ್ ಕ್ಲಬ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಯವರು ಪ್ರಶಸ್ತಿ ಪ್ರಧಾನ ಮಾಡಿದರು. ಈ ಸಂದರ್ಭ ಬೆಂಗಳೂರು  ಸಹಾಯಕ ಪೊಲೀಸ್ ಕಮಿಷನರ್ ರಂಗಪ್ಪ,ಟಿವಿ9 ನಿರೂಪಕಿ ಸುಕನ್ಯಾ, ಸ್ವರ್ಣ ಭಾರತ್ ಪೌಂಡೇಶನ್ ಅಧ್ಯಕ್ಷೆ ಡಾ.ರಜನಿ ಸಂತೋಷ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Read More

ಸೋಮವಾರಪೇಟೆ ಮಾ.24 NEWS DESK : ತಥಾಸ್ತು ಸಾತ್ವಿಕ ಸಂಸ್ಥೆ ನೇತೃತ್ವದಲ್ಲಿ ಅಬಕಾರಿ ಇಲಾಖೆ, ಬಿ.ಟಿ.ಸಿ.ಜಿ ಕಾಲೇಜು ಸಂಯುಕ್ತಾಶ್ರಯದಲ್ಲಿ ಪಟ್ಟಣದ ಮಹಿಳಾ ಸಮಾಜದಲ್ಲಿ ನಡೆಯಿತು.  ತಹಶೀಲ್ದಾರ್ ಕೃಷ್ಣಮೂರ್ತಿ ಶಿಬಿರ ಉದ್ಘಾಟಿಸಿ ಮಾತನಾಡಿ, ರಕ್ತದಾನ ಬಹಳ ಶ್ರೇಷ್ಠವಾದ ದಾನವಾಗಿದೆ, ರಕ್ತ ನೀಡುವ ಮೂಲಕ ಮತ್ತೊಂದು ಜೀವವನ್ನು ಉಳಿಸುವ ಮಹತ್ತರವಾದ ಕಾರ್ಯಮಾಡಬಹುದಾಗಿದೆ ಎಂದರು. ಹಿಂದೆ ಅಪಘಾತ ಅಥವಾ ಶಸ್ತ್ರ ಚಿಕಿತ್ಸೆಯ ಸಂದರ್ಭ ರಕ್ತಕ್ಕಾಗಿ ಪರದಾಡಬೇಕಾಗಿತ್ತು. ಆದರೆ ಇಂದು ಎಲ್ಲೆಡೆ ಬ್ಲಡ್ಡ್ ಬ್ಯಾಂಕ್ ಇರುವುದರಿಂದ ಸಕಾಲದಲ್ಲಿ ಸಿಗುತ್ತದೆ ಆದರೂ ಕೆಲವೊಮ್ಮೆ ವಿಶೇಷ ಗ್ರೂಪಿನ ರಕ್ತ ಸಿಗದೇ ಪರದಾಡುವಂತಹ ಸ್ಥಿತಿ ಇದೆ ಎಂದರು. ಶಿವಕುಮಾರ ಸ್ವಾಮೀಜಿಗಳ ಸ್ಮರಣಾರ್ಥ ರಕ್ತದಾನ ಶಿಬಿರ ಮಾಡುತಿರು ವುದು ಅಭಿನಂದನಾರ್ಹ ಕಾರ್ಯವೆಂದರು.  ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕೊಡ್ಲಿಪೇಟೆ ಕಿರಿಕೂಡ್ಲಿ ಮಠದ ಶ್ರೀ.ಸದಾಶಿವ ಸ್ವಾಮೀಜಿ ಮಾತನಾಡಿ ನೂರಾಹನ್ನೊಂದು ವರ್ಷಗಳ ಸಾರ್ಥಕ ಬದುಕು ಸವೆಸಿದ ಕಾಯಕಯೋಗಿ, ನಡೆದಾಡುವ ದೇವರು, ಕರ್ನಾಟಕ ರತ್ನ , ಡಾ.ಶ್ರೀ. ಶಿವಕುಮಾರ ಸ್ವಾಮೀಜಿ ಜಯಂತಿಯ ಸ್ಮರಣಾರ್ಥ ನಾಡಿನಾದ್ಯಂತ ರಕ್ತದಾನ ಶಿಬಿರ ಸೇರಿದಂತೆ…

Read More

ಮಡಿಕೇರಿ ಮಾ.24 NEWS DESK : ಇಡೀ ವಿಶ್ವದ ಗಮನ ಸೆಳೆದಿರುವ ಕೊಡವ ಕುಟುಂಬ ತಂಡಗಳ ನಡುವಿನ ಹಾಕಿ ಉತ್ಸವ ಈ ಬಾರಿ ‘ಮುದ್ದಂಡ ಕಪ್ ಹಾಕಿ ಉತ್ಸವ’ದ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಲಿ ಮತ್ತು ರಾಷ್ಟ್ರೀಯ ಕ್ರೀಡಾಪಟುಗಳು ಉದಯವಾಗಲಿ ಎಂದು ಅರೆಕಾಡು ಹೊಸ್ಕೇರಿಯ ಕೊಡವ ವೆಲ್‍ಫೇರ್ ಐಂಡ್ ರಿಕ್ರಿಯೇಷನ್ ಅಸೋಸಿಯೇಷನ್ ಆಶಯ ವ್ಯಕ್ತಪಡಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಅಸೋಸಿಯೇಷನ್ ನ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಅವರು, 1997ರಿಂದ ಆರಂಭಗೊಂಡ ಕೊಡವ ಹಾಕಿ ಉತ್ಸವ ಈ ಬಾರಿ 396 ತಂಡಗಳ ನೋಂದಣಿ ಮೂಲಕ ಹೊಸ ದಾಖಲೆಯನ್ನೇ ನಿರ್ಮಿಸಿದೆ. ಕೊಡವ ಹಾಕಿ ಹಬ್ಬದ ಜನಕರಾದ ಪಾಂಡಂಡ ಕುಟ್ಟಪ್ಪ ಅವರು ಕಂಡ ಕನಸು ನನಸಾಗುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಮಾ.28 ರಿಂದ ಏ.27 ರವರೆಗೆ ನಡೆಯುವ ಹಾಕಿ ಉತ್ಸವದಲ್ಲಿ ಕ್ರೀಡಾಪಟುಗಳು ಹೆಚ್ಚು ಉತ್ಸಾಹದಿಂದ ಪಾಲ್ಗೊಂಡು ರಾಷ್ಟ್ರೀಯ ಹಾಕಿಯಲ್ಲಿ ಸ್ಥಾನ ಗಳಿಸುವಂತ್ತಾಗಲಿ ಎಂದು ತಿಳಿಸಿದ್ದಾರೆ. ಹಾಕಿ ಹಬ್ಬದ ಯಶಸ್ಸಿಗೆ ಎಲ್ಲರ ಸಹಕಾರದ ಅಗತ್ಯವಿದೆ, ಕ್ರೀಡಾಭಿಮಾನಿಗಳು ಒಂದು…

Read More

ಮಡಿಕೇರಿ ಮಾ.24 NEWS DESK : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆ ಬ್ಲಾಕ್, ಗೋಣಿಕೊಪ್ಪದಲ್ಲಿರುವ ಜ್ಯೂಸ್ ಫ್ಯಾಕ್ಟರಿ ಬಳಿಯಿಂದ ಹೊಸೂರಿಗೆ ಹಾದುಹೋಗುವ ಲಿಂಕ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ ನೀಡಿದರು. ಈ ಸಂದರ್ಭ ಗ್ರಾಮಸ್ಥರು ಮಾತನಾಡಿ, ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆಗೆ ಸ್ಪಂದಿಸಿದ ಶಾಸಕರು ತಮ್ಮ ಅನುದಾನದಲ್ಲಿ ಕಾಮಗಾರಿಗೆ ಹಣ ಮೀಸಲಿಟ್ಟು, ಇಲ್ಲಿನ ದಾರಿಹೋಕರಿಗೆ ಸುಸಜ್ಜಿತ ರಸ್ತೆ ಒದಗಿಸುವುದು ಸಂತಸ ಮೂಡಿಸಿದೆ ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಗೋಣಿಕೊಪ್ಪ ಪಂಚಾಯಿತಿ ಉಪಾಧ್ಯಕ್ಷರಾದ ಮಂಜುಳ, ಕಾಂಗ್ರೆಸ್ ಮುಖಂಡರು, ಸ್ಥಳೀಯ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Read More

ಮಡಿಕೇರಿ ಮಾ.24 NEWS DESK : ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ಮಾ.26 ರಂದು ಇಪ್ಪತ್ತನೇ ವರ್ಷದ ಸೌಹಾರ್ದ ಇಫ್ತಾರ್ ಕೂಟ ನಡೆಯಲಿದೆ. ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ಅಪರಾಹ್ನ 5 ಗಂಟೆಗೆ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅರಂತೋಡು ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಇಸ್ಮಾಯಿಲ್ ಫೈಝಿ ದುಃವಾಶೀರ್ವಾಚನ ನೀಡಲಿದ್ದಾರೆ. ವಿಶೇಷ ಅತಿಥಿಗಳಾಗಿ ಸುಳ್ಯದ ಬೀರಮಂಗಲ ಸೈಂಟ್ ಬ್ರಿಜಿಡ್ಸ್ ಚರ್ಚ್‍ನ ಧರ್ಮ ಗುರು ಫಾದರ್ ವಿಕ್ಟರ್ ಡಿ’ಸೋಜ ಹಾಗೂ ಮರ್ಕಂಜದ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರ ಯೋಗೇಶ್ವರ ಸಿದ್ಧಪುರುಷಮಠದ ಧರ್ಮದರ್ಶಿ ಹಾಗೂ ಕರ್ನಾಟಕ ಅಖಿಲ ಭಾರತೀಯ ಸಂತ ಸಮಿತಿಯ ಮುಖ್ಯ ಕಾರ್ಯದರ್ಶಿ ರಾಜೇಶ್‍ನಾಥ್ ಜಿ ಸೇರಿದಂತೆ ಅಧಿಕಾರಿಗಳು, ಸಾಮಾಜಿಕ, ಧಾರ್ಮಿಕ, ರಾಜಕೀಯ ಮುಖಂಡರುಗಳು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನವು ಕಳೆದ 3 ದಶಕಗಳಿಂದ ಶೈಕ್ಷಣಿಕ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿ ಮತ್ತು ಕ್ರೀಡಾ ಚಟುವಟುಕೆಗಳನ್ನು ನಡೆಸುತ್ತ ಬಂದಿದ್ದು, ಪ್ರಾಕೃತಿಕ…

Read More

ಮಡಿಕೇರಿ ಮಾ.24 NEWS DESK : ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಹುತಾತ್ಮ ದಿನವನ್ನು ಆಚರಿಸಲಾಯಿತು. ಭಗತ್ ಸಿಂಗ್, ಸುಖದೇವ್, ರಾಜ್ ಗುರು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಬೆನಡಿಕ್ಟ್ ಆರ್ ಸಲ್ದಾನ ಈ ಮೂರು ಕ್ರಾಂತಿಕಾರಿಗಳು ಅಸಂಖ್ಯಾತ ಭಾರತೀಯರ ಮನದಲ್ಲಿ ಇಂದಿಗೂ ಜೀವಂತವಾಗಿದ್ದಾರೆ. ದೇಶಕ್ಕಾಗಿ ಅವರು ಮಾಡಿದ ತ್ಯಾಗ ಬಲಿದಾನ ಸದಾ ಅಚ್ಚಳಿಯದೆ ಇರುತ್ತದೆ. ಈ ಮೂರು ಮಹನೀಯರಲ್ಲಿ ಇದ್ದ ದೇಶ ಪ್ರೇಮ, ದೇಶಾಭಿಮಾನದ ಎಲ್ಲಾರಲ್ಲು ನೆಳೆಯಾಗ ಬೇಕು ನಾವೆಲ್ಲ ಭಾರತೀಯರೆಂಬ ಹೆಮ್ಮೆಯಿಂದ ದೇಶ ಸೇವೆಗೆ ಸದಾ ಸಿದ್ದರಾಗಿರಬೇಕು ಎಂದರು. ಕಾಲೇಜಿನ ಐ.ಕ್ಯೂ.ಎ.ಸಿ ಸಂಚಾಲಕಿ ಪ್ರಿಯ ಮುದ್ದಪ್ಪ ಮಾತನಾಡಿ, ಮೂವರು ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟಿಷರು 1931 ಮಾರ್ಚ್ 23 ರಂದು ಗಲ್ಲಿಗೇರಿಸಿದ್ದರು. ಈ ದಿನವನ್ನು ಹುತಾತ್ಮ ದಿನವೆಂದು ಪ್ರತಿ ವರ್ಷ ಆಚರಿಸಲಾಗುತ್ತದೆ. ಭಗತ್ ಸಿಂಗ್ ಸುಖದೇವ್, ರಾಜ್ ಗುರುರ ತ್ಯಾಗ ಮತ್ತು ಶೌರ್ಯದ ಕಥೆ ಭಾರತೀಯ ಸ್ವಾತಂತ್ರ್ಯ ಚಳವಳಿಯ ಅತ್ಯಂತ ಸ್ಪೂರ್ತಿದಾಯಕವಾದದ್ದು. ಯುವ ಜನತೆ ಮೋಜು ಮಸ್ತಿ…

Read More

ಚೆಟ್ಟಳ್ಳಿ ಮಾ.24 NEWS DESK : ಚೆಟ್ಟಳ್ಳಿ ಲಕ್ಷ್ಮಿ ಫಂಡಿನ ನೂತನ ಅಧ್ಯಕ್ಷರಾಗಿ ನಿವೃತ್ತ ಸೇನಾನಿ ಪುತ್ತರಿರ ದೇವಯ್ಯ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಬಟ್ಟೀರ ರಕ್ಷುಕಾಳಪ್ಪ, ಕಾರ್ಯದರ್ಶಿ ಮುಳ್ಳಂಡ ಕಾಳಪ್ಪ, ನಿರ್ದೇಶಕರಾಗಿ ಬಟ್ಟೀರ ಶರೀನ್, ಬಟ್ಟೀರ ಗಿರೀಶ್ ಬಿದ್ದಪ್ಪ, ಪುತ್ತರಿರ ಶಿವು ನಂಜಪ್ಪ, ಬಟ್ಟೀರ ಚಿರಂತ್ ಚಂಗಪ್ಪ ಅವರನ್ನು ವಾರ್ಷಿಕ ಮಹಾ ಸಭೆಯಲ್ಲಿ ಆಯ್ಕೆಮಾಡಲಾಯಿತು. ಮುಳ್ಳಂಡ ಕಾಳಪ್ಪ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಬಟ್ಟೀರ ಶರೀನ್ ಸ್ವಾಗತಿಸಿ, ರಕ್ಷುಕಾಳಪ್ಪ ವಂದಿಸಿದರು.

Read More

ಮಡಿಕೇರಿ ಮಾ.24 NEWS DESK : ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ 2024 ನೇ ಸಾಲಿನ ವಾರ್ಷಿಕ ಪ್ರಶಸ್ತಿಗಾಗಿ ವರದಿಗಳನ್ನು ಆಹ್ವಾನಿಸಲಾಗಿದೆ.  ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾದವರು ಮಾತ್ರ ವರದಿ ಸಲ್ಲಿಸಬಹುದಾಗಿದ್ದು ಏಪ್ರಿಲ್ 5 ರೊಳಗೆ ತಮ್ಮ ವರದಿಯನ್ನು ಪತ್ರಿಕಾಭವನಕ್ಕೆ ತಲುಪಿಸಬೇಕಾಗಿದೆ.ನಂತರ ಬಂದ ವರದಿಗಳನ್ನು ಸ್ವೀಕರಿಸಲಾಗುವುದಿಲ್ಲ. ವರದಿಗಳು 2024 ರ ಜನವರಿಯಿಂದ 2024 ಡಿಸೆಂಬರ್ 31 ರೊಳಗೆ ಪ್ರಕಟವಾಗಿರಬೇಕು. ಪ್ರಶಸ್ತಿಗೆ ವರದಿ ಹಾಕುವವರು ಮೂರು ಪ್ರತಿಗಳನ್ನು ತಪ್ಪದೇ ಹಾಕಬೇಕು.ದೃಶ್ಯಮಾಧ್ಯಮದವರು ತಮ್ಮ ಚಾನಲ್​ ಗಳಲ್ಲಿ ಪ್ರಸಾರವಾದ ವರದಿಯ ಸಿಡಿ ಯನ್ನು ಸಲ್ಲಿಸಬೇಕು. 1.ಪಂದ್ಯಂಡ ಬೆಳ್ಯಪ್ಪ ಸ್ಮರಣಾರ್ಥ ಅತ್ಯುತ್ತಮ ಗ್ರಾಮೀಣ ವರದಿ ಪ್ರಶಸ್ತಿ, 2.ಸಂಘದ ಮಾಜಿ ಅಧ್ಯಕ್ಷರಾದ ಕೆ.ಕೆ.ಶಶಿಧರ್ ಸ್ಮರಣಾರ್ಥ ಕ್ರೀಡಾ ವರದಿ ಪ್ರಶಸ್ತಿ, 3. ಸಂಘದ ಉಪಾಧ್ಯಕ್ಷರಾಗಿದ್ದ ಸಿ.ಎನ್.ಸುನಿಲ್ ಕುಮಾರ್ ಸ್ಮರಣಾರ್ಥ ಅತ್ಯುತ್ತಮ ವೀಡಿಯೋಗ್ರಫಿ ಪ್ರಶಸ್ತಿ, 4.ನಿವೃತ್ತ ವಾರ್ತಾಧಿಕಾರಿ ಪಳೆಯಂಡ ಪೊನ್ನಪ್ಪ ಸ್ಥಾಪಿಸಿದ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿ,  5.ಕೋವರ್ ಕೊಲ್ಲಿ ಇಂದ್ರೇಶ್ ತಮ್ಮ ತಂದೆ ಚಂದ್ರಶೇಖರ್ ಅವರ ಹೆಸರಲ್ಲಿ ಸ್ಥಾಪಿಸಿದ ಮಾನವೀಯ…

Read More

ನಾಪೋಕ್ಲು ಮಾ.24 NEWS DESK : ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವ ಪೊಲೀಸರು ಕೌಟುಂಬಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲೂ ಕಾರ್ಯ ಪ್ರವೃರ್ತರಾಗಿ ಗಮನ ಸೆಳೆದಿದ್ದಾರೆ. ನಾಪೋಕ್ಲು ಪೊಲೀಸ್ ಠಾಣೆಯ ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿಯವರು ತಮ್ಮ ಸಹೋದ್ಯೋಗಿ ಮಹಿಳಾ ಸಹೋದ್ಯೋಗಿಯ ಸೀಮಂತ ಕಾರ್ಯವನ್ನು ಸಾಂಪ್ರದಾಯಿಕವಾಗಿ ನೆರವೇರಿಸಿ ಮಾದರಿಯಾಗಿದ್ದಾರೆ..ಸಿಬ್ಬಂದಿ ಸಿ.ಪಿ ಪೂರ್ಣಿಮಾ ಅವರ ಸೀಮಂತ ಕಾರ್ಯವನ್ನು ಪೊಲೀಸ್ ಠಾಣೆಯಲ್ಲಿ ಸಂಭ್ರಮದಿಂದ ನೆರವೇರಿಸಲಾಯಿತು. ಮಡಿಲು ತುಂಬಿ ಬಳೆ, ಕುಂಕುಮ, ವಸ್ತ್ರ, ವಿವಿಧ ಬಗೆಯ ತಿಂಡಿ ತಿನಿಸುಗಳು, ಹಣ್ಣು ಹಂಪಲು, ತಾಂಬೂಲ ಸೇರಿದಂತೆ ಶೋಡೋಪಚಾರಗಳನ್ನು ನೆರವೇರಿಸಿ ಹಾರೈಸಿದರು. ಠಾಣಾಧಿಕಾರಿ ಮಂಜುನಾಥ ಮಾತನಾಡಿ, ಮಹಿಳೆಯ ಜೀವನದಲ್ಲಿ ನವಮಾಸಗಳು ಒಂದು ಪ್ರಮುಖ ಘಟ್ಟ. ತಾಯಿಯಾಗಿ ಜೀವನ ನಿರ್ವಹಣೆ ಮಾಡಬೇಕಾದಲ್ಲಿ ಆಕೆಗೆ ದೇವರ ಅನುಗ್ರಹವು ಮುಖ್ಯ ಹಾಗೂ ನಮ್ಮೆಲ್ಲರ ಹಾರೈಕೆ ಅಗತ್ಯ. ಈ ನಿಟ್ಟಿನಲ್ಲಿ ಸೀಮಂತ ಕಾರ್ಯವನ್ನು ನೆರವೇರಿಸಲಾಗಿದೆ. ದೇವರು ಸಿಬ್ಬಂದಿಗೆ ಉತ್ತಮ ಆರೋಗ್ಯ ಭಾಗ್ಯವನ್ನು ಕರುಣಿಸಲಿ ಎಂದು ಹಾರೈಸಿದರು. ಈ ಸಂದರ್ಭ ಠಾಣೆಯ ಎಲ್ಲ ಸಿಬ್ಬಂದಿ…

Read More

ಮಡಿಕೇರಿ ಮಾ.24 NEWS DESK :  ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡುಮಂಗಳೂರು ಪೂರ್ಣಚಂದ್ರ ಬಡಾವಣೆಯಲ್ಲಿರುವ ದಂಡಿನ ಚೌಡೇಶ್ವರಿ ಅಮ್ಮನವರ ವಾರ್ಷಿಕ ಮಹೋತ್ಸವು ಎರಡು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಶ್ರದ್ಧಾಭಕ್ತಿಯಿಂದ ಜರುಗಿತು. ದೇವಾಲಯದಲ್ಲಿ ಗಣಪತಿ ಹೋಮ, ದುರ್ಗಾ ಹೋಮ, ವನಕಳಸ ಸ್ಧಾಪನೆ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ಗಳನ್ನು ಕುಶಾಲನಗರದ ಪರಮೇಶ್ ಭಟ್ ಮತ್ತು ತಂಡದವರು ನೆರವೇರಿಸಿದರು. ಸಂಜೆ ವಿದ್ಯುತ್ ಅಲಂಕೃತ ಭವ್ಯ ಮಂಟಪದಲ್ಲಿ ಶ್ರೀ ದೇವಿಯ ವಿಗ್ರಹವನ್ನು ಕುಳ್ಳಿರಿಸಿ ಪೂಜೆ ಸಲ್ಲಿಸಿ ನಾಡ ವಾದ್ಯ ಮೇಳದೊಂದಿಗೆ ಮೆರವಣಿಗೆಯು ಕೂಡುಮಂಗಳೂರು ಗ್ರಾಮದಿಂದ ಹಾಸನ ಹೆದ್ದಾರಿ ರಸ್ತೆಯ ಮೂಲಕ ಕೂಡಿಗೆ ಡೈರಿ ಸರ್ಕಲ್ ಮತ್ತು ಸರ್ಕಲ್ ಮೂಲಕ ಸಾಗಿ ದೇವಸ್ಥಾನದ ಸ್ವ ಸ್ಧಾನಕ್ಕೆ ತೆರಳಿತು. ಈ ಸಂದರ್ಭ ದಂಡಿನ ಚೌಡೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷ ನಂಜಪ್ಪ, ಕಾರ್ಯದರ್ಶಿ ಹರೀಶ್ ಕುಮಾರ್, ಖಜಾಂಚಿ ಮಹೇಶ್ ಕುಮಾರ್, ಗೌರವ ಕಾರ್ಯದರ್ಶಿ ಸುಕೇಶ್ ಗೌರವ ಅಧ್ಯಕ್ಷ ರಮೇಶ್ ಸೇರಿದಂತೆ ಸಮಿತಿಯ ಸದಸ್ಯರು,…

Read More