ವಿರಾಜಪೇಟೆ ಜ.31 : ಮನೆಯ ಬಳಿ ನಿಲ್ಲಿಸಿದ್ದ ಕಾರಿನ ಮೇಲೆ ಕಾಡಾನೆ ದಾಳಿ ಮಾಡಿ ಹಾನಿಗೊಳಿಸಿರುವ ಘಟನೆ ವಿರಾಜಪೇಟೆ ತಾಲ್ಲೂಕಿನ ಕೆದಮಳ್ಳೂರು ಗ್ರಾಮದಲ್ಲಿ ನಡೆದಿದೆ.
ಮುಂಜಾನೆ ವೇಳೆ ದಟ್ಟ ಮಂಜಿನ ವಾತಾವರಣದಲ್ಲಿ ಕಾಡಾನೆ ದಾಳಿ ಮಾಡಿದ್ದು, ಕಾರು ಜಖಂಗೊAಡಿದೆ. ಗ್ರಾಮದ ನಿವಾಸಿ ಶ್ರೀಧರ ಅವರ ಪುತ್ರ ಕುಶ ಎಂಬುವವರಿಗೆ ಸೇರಿದ ಕಾರು ಇದಾಗಿದೆ.
ಕಳೆದ ಹಲವು ತಿಂಗಳುಗಳಿoದ ಈ ಭಾಗದಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಕಾಫಿ ತೋಟ ಸೇರಿದಂತೆ ಕೃಷಿ ಭೂಮಿಗಳನ್ನು ಧ್ವಂಸ ಮಾಡಿದೆ. ಕಾಡಾನೆಗಳು ನಾಡಿಗೆ ಬಾರದಂತೆ ತಡೆಯಲು ಅರಣ್ಯ ಇಲಾಖೆ ಅರಣ್ಯದಂಚಿನಲ್ಲಿ ಬೃಹತ್ ಕಂದಕ ನಿರ್ಮಾಣ ಮಾಡುತ್ತಿದೆ. ಅರಣ್ಯದಿಂದ ಗ್ರಾಮಕ್ಕೆ ಬಂದಿರುವ ಕಾಡಾನೆಗಳನ್ನು ಕಾಡಿಗಟ್ಟದೆ ಕಂದಕ ನಿರ್ಮಾಣ ಮಾಡುತ್ತಿರುವುದು ಅವೈಜ್ಞಾನಿಕ ಕ್ರಮ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ಆತಂಕದ ವಾತಾವರಣ ಮುಂದುವರೆದಿದ್ದು, ಕಾಡಾನೆಗಳ ಉಪಟಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Breaking News
- *ಕರಾಟೆ ಚಾಂಪಿಯನ್ಶಿಪ್ : ಪೆರುಂಬಾಡಿ ಕರಾಟೆ ತರಬೇತಿ ಶಾಲೆಯ ವಿದ್ಯಾರ್ಥಿಗಳ ಸಾಧನೆ*
- *ಪ್ರಿಯಾಂಕ ಗಾಂಧಿ ಅವರನ್ನು ಅಭಿನಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ*
- *ಕೊಡಗಿನ ಪುತ್ತರಿ ಆಚರಣೆಗೆ ದಿನ ನಿಗದಿ*
- *ನಾಪೋಕ್ಲುವಿನಲ್ಲಿ ಸಂಭ್ರಮದ 69ನೇ ಕನ್ನಡ ರಾಜ್ಯೋತ್ಸವ : ಕನ್ನಡ ಅಭಿಮಾನದ ಭಾಷೆಯಾಗಲಿ : ಎಂ.ಪಿ.ಕೇಶವ ಕಾಮತ್*
- *ಸೋಮವಾರಪೇಟೆಯಲ್ಲಿ ವಿಶೇಷ ಚೇತನರ ಕ್ರೀಡಾಕೂಟ : ವಿಕಲಚೇತನರನ್ನು ಸಮಾಜ ಗೌರವದಿಂದ ಕಾಣಬೇಕು : ಜೆ.ಕೆ.ಪೊನ್ನಪ್ಪ*
- *ಸೋಮವಾರಪೇಟೆಯಲ್ಲಿ ತಾಲ್ಲೂಕು ಮಟ್ಟದ ಪ್ರಬಂಧ ಸ್ಪರ್ಧೆ*
- *ಕುಶಾಲನಗರ : ಸಾಧಕರಿಗೆ ಕೌಶಲ್ಯ ಸಿರಿ ಪ್ರಶಸ್ತಿ ಪ್ರದಾನ*
- *ಬಾಳುಗೋಡುವಿನಲ್ಲಿ ಸಂಭ್ರಮದ ಕೊಡವ ನಮ್ಮೆ : ಕೊಡವ ಸಂಸ್ಕೃತಿ, ಪರಂಪರೆಗಳ ಉಳಿವಿಗೆ ಶ್ರಮಿಸಿ : ಶಾಸಕ ಎ.ಎಸ್.ಪೊನ್ನಣ್ಣ*
- *ವಿರಾಜಪೇಟೆಯಲ್ಲಿ ಶಾಸಕರಿಂದ ಕೃಷಿ ಯಂತ್ರೋಪಕರಣ ವಿತರಣೆ*
- *ಮಡಿಕೇರಿ : ನ್ಯುಮೋನಿಯಾ ಯಶಸ್ವಿಯಾಗಿ ಕೊನೆಗೊಳಿಸಲು ಸಾಮಾಜಿಕ ಜಾಗೃತಿ ಅಭಿಯಾನ*