ಮಡಿಕೇರಿ ಜೂ. 1 : ನಗರದ ಹಾಪ್ ಕಾಮ್ಸ್ ಆವರಣದಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ಮಾವು ಮತ್ತು ಹಲಸು ಮೇಳ ಉತ್ತಮ ಯಶಸ್ಸು ಕಂಡಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕಾ ಇಲಾಖಾ ವತಿಯಿಂದ ನಡೆದ ಮೇಳದಲ್ಲಿ ರಾಜ್ಯದ ವಿವಿಧೆಡೆಗಳ ಮಾವು ಬೆಳೆಗಾರರು ಹಾಗೂ ಹಲಸು ಬೆಳೆಗಾರರು ತಮ್ಮ ಉತ್ಪನ್ನಗಳೊಂದಿಗೆ ಪಾಲ್ಗೊಂಡಿದ್ದು, ಜಿಲ್ಲೆಯ ಜನರಿಂದ ಉತ್ತಮ ಸ್ಪಂದನೆ ದೊರೆತಿದೆ. ಮೂರು ದಿನಗಳಲ್ಲಿ ಸುಮಾರು 6 ಸಾವಿರದಿಂದ 17 ಸಾವಿರದಷ್ಟು ಮಂದಿ ಭಾಗಿಗಳಾಗಿ ವಹಿವಾಟು ನಡೆಸಿದ್ದಾರೆ.
21 ಸಾವಿರ ಕೆ.ಜಿ. (21 ಮೆಟ್ರಿಕ್ ಟನ್) ಗಳಷ್ಟು ವ್ಯಾಪಾರ ನಡೆದಿದೆ. ಇದರ ಒಟ್ಟು ಮೊತ್ತ ಅಂದಾಜು 20 ರಿಂದ 21 ಲಕ್ಷಗಳಷ್ಟಾಗಿದೆ ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಚೆಕ್ಕೇರ ಪ್ರಮೋದ್ ಮಾಹಿತಿ ನೀಡಿದ್ದಾರೆ.