ಮಡಿಕೇರಿ ಆ.5 NEWS DESK : ವಿರಾಜಪೇಟೆಯ ತಾಲ್ಲೂಕು ಮೈದಾನವನ್ನು ಉಳಿಸಿ ಅಭಿವೃದ್ಧಿ ಪಡಿಸಬೇಕೆಂದು ಕ್ರೀಡಾಪಟುಗಳು ಮತ್ತು ಕ್ರೀಡಾಭಿಮಾನಿಗಳ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ, ತಾಲ್ಲೂಕು ಮೈದಾನದಲ್ಲಿ ಮೆಶ್ ಅಳವಡಿಕೆ ಕಾಮಗಾರಿಗೆ ಅನುದಾನ ಒದಗಿಸಿದ್ದು, ಮೈದಾನದಲ್ಲಿ ಮೆಶ್ ಅಳವಡಿಕೆ ಕಾಮಗಾರಿ ಕೊನೆ ಹಂತದಲ್ಲಿದೆ.
ಈ ಹಿಂದೆ ವಿರಾಜಪೇಟೆ ನಗರ ಕಾಂಗ್ರೆಸ್ ಅಧ್ಯಕ್ಷ ಹಾಗೂ ಅಂತರಾಷ್ಟ್ರೀಯ ಮಾಜಿ ರಗ್ಗಿ ಆಟಗಾರ ಮಾದಂಡ ತಿಮ್ಮಯ್ಯ ಅವರ ನೇತೃತ್ವದಲ್ಲಿ ವಿರಾಜಪೇಟೆಯ ಕ್ರೀಡಾಪಟುಗಳು ಮತ್ತು ಕ್ರೀಡಾಭಿಮಾನಿಗಳು ತಾಲ್ಲೂಕು ಮೈದಾನವನ್ನು ಉಳಿಸಿ ಅಭಿವೃದ್ಧಿ ಪಡಿಸಬೇಕೆಂದು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದರು. ನಂತರ ತಾಲ್ಲೂಕು ಮೈದಾನದಲ್ಲಿ ಮೆಶ್ ಮತ್ತು ಫೆಡ್ ಲೈಟ್ ಅಳವಡಿಕೆ ಮಾಡಬೇಕೆಂದು ಶಾಸಕ ಎ.ಎಸ್ ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸದ್ದರು. ಮನವಿಗೆ ತಕ್ಷಣ ಸ್ಪಂದಿಸಿದ್ದ ಶಾಸಕ ಪೊನ್ನಣ್ಣ ಅವರು, ಮೈದಾನವನ್ನು ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದ್ದರು. ಇದೀಗ ತಾಲ್ಲೂಕು ಮೈದಾನದಲ್ಲಿ ಮೆಶ್ ಅಳವಡಿಕೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಸದ್ಯದಲ್ಲೇ ಫೆಡ್ ಲೈಟ್ ಅಳವಡಿಕೆ ಕೆಲಸ ಕೂಡ ಆಗಲಿದೆ.
ಕೊಟ್ಟಮಾತಿನಂತೆ ನಡೆದುಕೊಂಡ ವಿರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣನವರಿಗೆ ವಿರಾಜಪೇಟೆಯ ಕ್ರೀಡಾಪಟುಗಳ ಪರವಾಗಿ ವಿರಾಜಪೇಟೆ ನಗರ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಅಂತರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಧನ್ಯವಾದ ಸಲ್ಲಿಸಿದ್ದು, ಮೆಶ್ ಅಳವಡಿಕೆಯಿಂದ ಕ್ರೀಡಾಕೂಟ ಆಯೋಜಕರಿಗೆ ದೊಡ್ಡ ಮಟ್ಟದ ಸಹಾಯವಾಗಲಿದೆ.ಅದಲ್ಲದೇ ಫೆಡ್ ಲೈಟ್ ಅಳವಡಿಕೆಯಿಂದ ರಾತ್ರಿ ವೇಳೆ ಕ್ರೀಡಾಕೂಟವನ್ನು ಆಯೋಜಿಸುವುದು ಸಂಘ-ಸಂಸ್ಥೆಗಳಿಗೆ ಉಪಕಾರವಾಗಲಿದೆ ಎಂದರು.