ಮಡಿಕೇರಿ ಸೆ.3 NEWS DESK : ಚೇತನ ಫೌಂಡೇಷನ್ ಧಾರವಾಡದ ಅಂಗಸಂಸ್ಥೆಯಾದ ಕಾವ್ಯ ಶ್ರೀ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ನಡೆದ ಆಶುಕವಿತೆ ಬರೆಯುವ ಸ್ಪರ್ಧೆಯಲ್ಲಿ ನಾಲಡಿ ಗ್ರಾಮದ ಪ್ರಿತುನ್ ಪೂವಣ್ಣ ಅಯ್ಯನೆರವಂಡ ಆಶುಕವಿತೆ ಬರೆದು ಬರೆಯುವ ಮೂಲಕ ವಿಶ್ವದಾಖಲೆಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೇವಲ 24 ನಿಮಿಷಗಳಲ್ಲಿ 224 ಮಂದಿ ಕವಿಗಳು ವಾಟ್ಸಾಪ್ ಮೂಲಕ ಏಕಕಾಲದಲ್ಲಿ ಆಶುಕವಿತೆ ಬರೆದು ವಿಶ್ವದಾಖಲೆ ನಿರ್ಮಿಸಿದ್ದಾರೆ. ಇತ್ತೀಚಿಗೆ ವರ್ಲ್ಡ್ ಪ್ರೆಸ್ ಬುಕ್ ಆಫ್ ರೆಕಾರ್ಡ್ ವತಿಯಿಂದ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ವಂದೇ ಮಾತರಂ ಕಾರ್ಯಕ್ರಮದಲ್ಲಿ 224 ಕವಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಪ್ರಿತುನ್ ಪೂವಣ್ಣ ಕಕ್ಕಬ್ಬೆ ನಾಲಡಿ ಗ್ರಾಮದ ಪೂವಯ್ಯ, ಪ್ರಭಾ ದಂಪತಿಯ ಪುತ್ರ.











