ಮಡಿಕೇರಿ ಸೆ.3 NEWS DESK : ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ನೂತನ ಅಧ್ಯಕ್ಷರಾಗಿ ರಾಮಚಂದ್ರ ಮೂಗೂರ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ನಗರದ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದಲ್ಲಿ ನಡೆದ ನಿಧಿಯ ವಾಷಿ೯ಕ ಮಹಾಸಭೆಯಲ್ಲಿ ನೂತನ ಆಡಳಿತ ಮಂಡಳಿಗೆ ನಿದೇ೯ಶಕರ ಆಯ್ಕೆ ನಡೆಯಿತು. ನಿಧಿಯ ಉಪಾಧ್ಯಕ್ಷರಾಗಿ ರಾಜಶೇಖರ್, ಕಾರ್ಯದರ್ಶಿಯಾಗಿ ಬಿ.ಕೆ.ಜಗದೀಶ್, ಸಹಕಾರ್ಯದರ್ಶಿಯಾಗಿ ಎ.ವಿ.ಮಂಜುನಾಥ್, ಖಜಾಂಚಿಯಾಗಿ ಜಿ.ಆರ್.ರವಿಶಂಕರ್ ಆಯ್ಕೆಯಾಗಿದ್ದಾರೆ.










