ಮಡಿಕೇರಿ ಸೆ.3 NEWS DESK : ಮಡಿಕೇರಿಯ ಕೊಡಗು ವಿದ್ಯಾಲಯದ ಟೈನಿ ಟಾಟ್ಸ್ ವಿದ್ಯಾಥಿ೯ಗಳು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಿದರು. ಮಡಿಕೇರಿಯ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೋರನ ಸರಸ್ವತಿ ಪ್ರಕಾಶ್ ಕಾರ್ಯಕ್ರಮದ ಮಹತ್ವವನ್ನು ಪುಟಾಣಿ ಮಕ್ಕಳಿಗೆ ತಿಳಿಸಿದರು. ಪುಟಾಣಿ ಮಕ್ಕಳಿಂದ ನಡೆದ ನೃತ್ಯ ಪ್ರದರ್ಶನವು ನೆರೆದಿದ್ದ ಪೋಷಕರು ಮತ್ತು ಪ್ರೇಕ್ಷಕರ ಮನಸೂರೆಗೊಂಡಿತ್ತು. ಕೊಡಗು ವಿದ್ಯಾಲಯದ ಪ್ರಾಂಶುಪಾಲಾರದ ಕೆ.ಎಸ್.ಸುಮಿತ್ರ ಆಡಳಿತ ನಿರ್ವಹಣಾಧಿಕಾರಿ ಪಿ.ರವಿ, ಪೋಷಕರು ಮತ್ತು ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.











