ನಾಪೋಕ್ಲು ಸೆ.9 NEWS DESK : ಚಾಲಕನ ನಿಯಂತ್ರಣ ತಪ್ಪಿದ ಜೀಪು ರಸ್ತೆಯಿಂದ ಕೆಳಗಡೆ ಉರುಳಿ ಬಿದ್ದ ಘಟನೆ ಮರಂದೋಡ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚೋಯಮಾಡoಡ ಹರೀಶ್ ಮೊಣ್ಣಪ್ಪ ಎಂಬವರು ಮನೆ ಸಮೀಪದಲ್ಲಿ ಜೀಪು ಚಲಾಯಿಸುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿ ರಸ್ತೆಯ ಕೆಳಗೆ ಉರುಳಿ ಬಿದ್ದಿದೆ. ಈ ಸಂದರ್ಭ ಜೀಪಿನಲ್ಲಿ ಹರೀಶ್ ಸಂಬಂಧಿಕರೂ ಇದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ಸ್ಥಳೀಯರ ಸಹಕಾರದೊಂದಿಗೆ ಜೀಪನ್ನು ಮೇಲೆಕೆತ್ತಲಾಯಿತು.
ವರದಿ : ದುಗ್ಗಳ ಸದಾನಂದ.