ಮಡಿಕೇರಿ NEWS DESK ನ.26 : ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ಬಳಸಿ ವೀರ ಸೇನಾನಿಗಳಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರನ್ನು ಅವಹೇಳನ ಮಾಡಿರುವ ವ್ಯಕ್ತಿಯ ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಅರ್ಚಕರ ಸಂಘ ಪೊನ್ನಂಪೇಟೆ ಠಾಣೆಯಲ್ಲಿ ದೂರು ದಾಖಲಿಸಿದೆ. ನಕಲಿ ಖಾತೆಯಲ್ಲಿ ಬಳಸಿರುವ ಹೆಸರು ಬ್ರಾಹ್ಮಣ ಸಮಾಜಕ್ಕೆ ಕಳಂಕ ತರುವ ಉದ್ದೇಶದಿಂದ ಕೂಡಿದ್ದು, ಇದನ್ನು ಖಂಡಿಸುವುದಾಗಿ ಸಂಘದ ಪ್ರಮುಖರು ತಿಳಿಸಿದರು. ಇನ್ನು ಮುಂದೆ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ದೂರು ಸಲ್ಲಿಸುವ ಸಂದರ್ಭ ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸದಸ್ಯರು ಹಾಜರಿದ್ದರು.
Breaking News
- *ಹೆಬ್ಬೆಟ್ಟಗೇರಿ : ಡಿ.1 ರಂದು ಕೊರಗಜ್ಜ ದೈವದ ಕೋಲೋತ್ಸವ*
- *ವಿರಾಜಪೇಟೆ : ಪ್ರಾಧ್ಯಾಪಕರು ಮತ್ತು ಅಂತಿಮ ಪದವಿ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಕಾರ್ಯಾಗಾರ*
- *ಮಂಚಳ್ಳಿ ಮತ್ತು ಟಿ.ಶೆಟ್ಟಿಗೇರಿಯಲ್ಲಿ ಬಿಜೆಪಿ ಬೆಂಬಲಿತರಿಗೆ ಗೆಲುವು*
- *ನ.27 ರಂದು ಚೆಂಬೆಳ್ಳೂರು ಗ್ರಾಮ ಸಭೆ*
- *ಮೂರ್ನಾಡಿನಲ್ಲಿ ವಾತ್ಸಲ್ಯ ಶ್ರೀ ಕಾರ್ಯಕ್ರಮ*
- *ಡಿ.10 ರಂದು ಪೊನ್ನಂಪೇಟೆಯಲ್ಲಿ ಕೊಡವ ವಾಲಗತ್ತಾಟ್ ನಮ್ಮೆ*
- *ಕುಶಾಲನಗರದಲ್ಲಿ ಸ್ಕೌಟ್ಸ್, ಗೈಡ್ಸ್ ಪದಾಧಿಕಾರಿಗಳೊಂದಿಗೆ ಸಮಾಲೋಚನೆ : ದೇಶದ ಭವಿಷ್ಯ ನಿರ್ಮಿಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಪಾತ್ರ ಪ್ರಮುಖ : ಪಿ.ಜಿ.ಆರ್.ಸಿಂಧ್ಯ*
- *ವೀರ ಸೇನಾನಿಗಳಿಗೆ ಅಗೌರವ : ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಖಂಡನೆ*
- *ಕೊಡಗು ಜಿಲ್ಲಾ ಅರ್ಚಕರ ಸಂಘದಿಂದ ದೂರು*
- *ವಿರಾಜಪೇಟೆ : ಸಂವಿಧಾನಕ್ಕೆ ಗೌರವವನ್ನು ನೀಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ : ರೆ.ಫಾ.ಮದಲೈ ಮುತ್ತು*