ಮಡಿಕೇರಿ ಜು.22 NEWS DESK : ಸಂಘದ ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಮೈಸೂರು ವಿಭಾಗೀಯ ಉಪಾಧ್ಯಕ್ಷರು ಹಾಗೂ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಸೇರಿದಂತೆ ಕೆಲವು ಪದಾಧಿಕಾರಿಗಳನ್ನು ಪದಚ್ಯುತಗೊಳಿಸಲಾಗಿದೆ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿ ಕಿರಣ್ ಪುಣಚ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ ಯರಗಟ್ಟಿಯಲ್ಲಿ ಇದೇ ಜು.21 ರಂದು ನಡೆದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರತಿನಿಧಿಗಳ ಸಮಾವೇಶದಲ್ಲಿ ಚರ್ಚೆ ನಡೆದು ಸರ್ವಾನುಮತದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು. ಕರ್ನಾಟಕ ರಾಜ್ಯ ರೈತ ಸಂಘವು ಸೈದ್ಧಾಂತಿಕ ಹಿನ್ನೆಲೆಯಲ್ಲಿ, ವೈಚಾರಿಕ ದೃಷ್ಟಿಕೋನ ಮತ್ತು ರಾಜಕೀಯ ಸ್ಪಷ್ಟತೆಯಿಂದ ಕಳೆದ 45 ವರ್ಷಗಳಿಂದ ಕೆಲಸ ಮಾಡುತ್ತಿದೆ. ಆದರೆ, ಸಂಘÀದ ಜಿಲ್ಲಾಧ್ಯಕ್ಷರಾಗಿದ್ದ ಮನು ಸೋಮಯ್ಯ ಹಾಗೂ ಕೆಲವು ಪದಾಧಕಾರಿಗಳು ಸಂಘದ ನೀತಿ ನಿಯಮಗಳಿಗೆ ಚ್ಯುತಿ ತಂದಿದ್ದಾರೆ. ಸಂಘದ ಶಿಸ್ತು ಸಮಿತಿ ತನಿಖೆ ನಡೆಸುವ ಸಂದರ್ಭ ಮನು ಸೋಮಯ್ಯ ಅವರು ಸಹಕರಿಸಿಲ್ಲ…
ಲೇಖಕ: admin
ಮಡಿಕೇರಿ ಜು.22 NEWS DESK : ದೇಶದ ಜನತೆಯ ನೆಮ್ಮದಿಯ ಬದುಕಿಗಾಗಿ ರಾಷ್ಟçದ ಗಡಿಗಳನ್ನು ಕಾಯಲು ವಿವಿಧ ಯುದ್ಧಗಳಲ್ಲಿ ಪಾಲ್ಗೊಂಡು ನಿವೃತ್ತರಾದ 20 ‘ಯುದ್ಧ ಕಲಿ’ಗಳನ್ನು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಘಟಕದಿಂದ ಆ.11 ರಂದು ನಡೆಯಲಿರುವ ಮಹಾಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಕೊಟ್ಟುಕತ್ತೀರ ಪಿ.ಸೋಮಣ್ಣ ಅವರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠ್ಠಿಯಲ್ಲಿ ಮಾತನಾಡಿದ ಅವರು, ನಗರದ ಕಾವೇರಿ ಹಾಲ್‌ನಲ್ಲಿ ಆ.11 ರಂದು ಬೆಳಗ್ಗೆ 10.30 ಗಂಟೆಗೆ ಮಹಾಸಭೆಯನ್ನು ಆಯೋಜಿಸಲಾಗಿದೆ. ಸಭೆಗೂ ಮುನ್ನ ಬೆಳಗ್ಗೆ 9.30 ಗಂಟೆಗೆ ಇಲ್ಲಿನ ಜನರಲ್ ಕೆ.ಎಸ್. ತಿಮ್ಮಯ್ಯ ಮ್ಯೂಸಿಯಂನಲ್ಲಿರುವ ಯುದ್ಧ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಲಾಗುವುದು ಎಂದರು. ಮಹಾಸಭೆಯಲ್ಲಿ 1962ರ ಇಂಡೋ ಚೀನಾ ಯುದ್ಧ, 1965 ರ ಇಂಡೋ ಪಾಕ್ ಯುದ್ಧ ಮತ್ತು 1971 ರ ಬಾಂಗ್ಲಾ ವಿಮೋಚನಾ ಯುದ್ಧಗಳಲ್ಲಿ ಪಾಲ್ಗೊಂಡಿದ್ದ, ಇದೀಗ ನಿವೃತ್ತರಾಗಿರುವ ಇಪ್ಪತ್ತು ಯೋಧರನ್ನು ಗುರುತಿಸಿ ಗೌರವಿಸಲಾಗುತ್ತಿದೆ ಎಂದು ಹೇಳಿದರು. ಮಾಜಿ ಸೈನಿಕರಿಗೆ ಸನ್ಮಾನ- ಮಕ್ಕಳಿಗೆ ಪುರಸ್ಕಾರ- ಮಹಾಸಭೆಯಲ್ಲಿ…
ಕುಶಾಲನಗರ ಜು.22 NEWS DESK : ಗುರು ಪೂರ್ಣಿಮೆ ಅಂಗವಾಗಿ ಕುಶಾಲನಗರ ಕಾವೇರಿ ಮಹಾ ಆರತಿ ಬಳಗ ಮತ್ತು ನಮಾಮಿ ಕಾವೇರಿ ತಂಡದ ವತಿಯಿಂದ ಐವರು ಗುರುಗಳಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು. ಕುಶಾಲನಗರದ ಕಾವೇರಿ ಆರತಿ ಕ್ಷೇತ್ರದ ಬಳಿ ನಡೆದ 161ನೇ ಯ ಮಹಾ ಆರತಿ ಕಾರ್ಯಕ್ರಮದ ಸಂದರ್ಭ ನಿವೃತ್ತ ಶಿಕ್ಷಕರುಗಳಾದ ಬಾಚರಣಿಯಂಡ ಪಿ. ಅಪ್ಪಣ್ಣ, ರಾಣು ಅಪ್ಪಣ್ಣ, ಎಂ.ಹೆಚ್.ನಜೀರ್ ಅಹ್ಮದ್, ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಎ.ಪಿ.ಸುಬ್ಬಯ್ಯ ಮತ್ತು ಹಿರಿಯ ಅರ್ಚಕ ಕೃಷ್ಣಮೂರ್ತಿ ಭಟ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕುಶಾಲನಗರ ಕಾವೇರಿ ಆರತಿ ಕ್ಷೇತ್ರದ ಬಳಿ ಕಾವೇರಿ ನದಿ ತಟದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕುಶಾಲನಗರ ಕಾವೇರಿ ಮಹಾ ಆರತಿ ಬಳಗ, ನಮಾಮಿ ಕಾವೇರಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರ ಸಮ್ಮುಖದಲ್ಲಿ ಹಿರಿಯ ಗುರುಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕ ಎಂ .ಎನ್.ಚಂದ್ರಮೋಹನ್, ಬಳಗದ ಪ್ರಮುಖರಾದ ಡಿ.ಆರ್.ಸೋಮಶೇಖರ್, ಮಂಡೆಪಂಡ ಬೋಸ್ ಮೊಣ್ಣಪ್ಪ,…
ಮಡಿಕೇರಿ ಜು.22 NEWS DESK : ನಂಜರಾಯಪಟ್ಟಣ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯು ಜು.23 ರಂದು ನಡೆಯಲಿದೆ. ಗ್ರಾ.ಪಂ ಅಧ್ಯಕ್ಷ ಸಿ.ಎಲ್.ವಿಶ್ವ ಅಧ್ಯಕ್ಷತೆಯಲ್ಲಿ ಹೊಸಪಟ್ಟಣ ಸಮುದಾಯ ಭವನದಲ್ಲಿ ಪೂರ್ವಾಹ್ನ 11 ಗಂಟೆಗೆ ಸಭೆ ನಡೆಯಲಿದ್ದು, ಸಭೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷರು, ಎಲ್ಲಾ ಸದಸ್ಯರು ಹಾಗೂ ನೋಡಲ್ ಅಧಿಕಾರಿಗಳಾಗಿ ಸೋಮವಾರಪೇಟೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ದೇಗೌಡ ಪಾಲ್ಗೊಳ್ಳಲಿದ್ದಾರೆ. ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಗ್ರಾಮಸ್ಥರು, ಮಹಿಳೆಯರು, ಸಂಘ ಸಂಸ್ಥೆಗಳು ಸಭೆಯಲ್ಲಿ ಪಾಲ್ಗೊಳ್ಳುವಂತೆ ಗ್ರಾ.ಪಂ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಶ್ರೀಮಂಗಲ ಜು.22 NEWS DESK : ಕೊಡವ ಭಾಷೆಯ ಪ್ರತಿಷ್ಠಿತ ಸಂಸ್ಥೆಯಾದ ‘ಕೊಡವ ತಕ್ಕ್ ಎಳ್ತ್‌ಕಾರಡ ಕೂಟ’ದ ಆಶ್ರಯದಲ್ಲಿ ಸ್ಥಾಪನೆಯಾದ ಸಾಹಿತಿ “ಮುದ್ದಿಯಡ ಕುಶ ಪೊನ್ನಪ್ಪ ದತ್ತಿನಿಧಿ”ಯ ಕಥಾ ಸ್ಪರ್ಧೆಯನ್ನು ‘ಕೂಟ’ದ ವತಿಯಿಂದ ಆಯೋಜಿಸಲಾಗಿದ್ದು, ಲೇಖಕರು ಕಕ್ಕಡ ತಿಂಗಳಿಗೆ ಸಂಬಂಧಿಸಿದ ವಸ್ತು ವಿಷಯಗಳನ್ನೊಳಗೊಂಡಂತೆ ಕೊಡವ ಭಾಷೆಯಲ್ಲಿ ಕಥೆ ಬರೆಯಬೇಕು. ಕಥೆಯು ಇದುವರೆಗು ಎಲ್ಲಿಯೂ ಪ್ರಕಟವಾಗಿರದ ತಮ್ಮ ಸ್ವಂತ ರಚನೆಯದಾಗಿರಬೇಕು. ಕಥೆಯು ಎರಡು ಸಾವಿರ(2000) ಶಬ್ದಗಳನ್ನು ಮೀರಿರಬಾರದು. ಕನ್ನಡ ಲಿಪಿಯಲ್ಲಿ ಸ್ಪುಟವಾಗಿ ಕೈಬರಹ ಅಥವಾ ಟೈಪ್ ಮಾಡಿರಬೇಕು. ಕಕ್ಕಡ ತಿಂಗಳ ವಸ್ತು ವಿಷಯಗಳನ್ನಾಧರಿಸಿ ಕೊಡವ ಭಾಷೆಯಲ್ಲೇ ಬರೆದಿರಬೇಕು. ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಹಾಗೂ ಮಾನ್ಯತೆ ಪತ್ರ ನೀಡಲಾಗುವುದು. ತೀರ್ಪುದಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಜಾತಿ, ಧರ್ಮ ಹಾಗೂ ವಯಸ್ಸಿನ ನಿರ್ಬಂಧವಿಲ್ಲದೆ ಎಲ್ಲಾರೂ ಭಾಗವಹಿಸಬಹು. ಕಥೆಯನ್ನು ಜು.30ರ ಒಳಗೆ ಅಧ್ಯಕ್ಷರು, ಕೊಡವ ತಕ್ಕ್ ಎಳ್ತ್‌ಕಾರಡ ಕೂಟ, ಆತ್ರೆಯ ಆಸ್ಪತ್ರೆಯ ಎದುರು, ವಿರಾಜಪೇಟೆ, ಈ ವಿಳಾಸಕ್ಕೆ ಅಥವಾ 9880584732, 9448326014 , 9449998789 ಈ…
ಮಡಿಕೇರಿ ಜು.22 NEWS DESK : ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳ ಪ್ರಗತಿ ಸಂಬಂಧಿಸಿದಂತೆ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಧರ್ಮಜ ಉತ್ತಪ್ಪ, ಸರ್ಕಾರ ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಗಳನ್ನು ಅರ್ಹರಿಗೆ ತಲುಪಿಸಬೇಕು ಎಂದು ನಿರ್ದೇಶನ ನೀಡಿದರು. ಗ್ಯಾರಂಟಿ ಯೋಜನೆಗಳಿಂದ ಅರ್ಹರು ವಂಚಿತರಾಗದಂತೆ ಗಮನಹರಿಸುವುದು ಅಧಿಕಾರಿಗಳ ಜವಾಬ್ದಾರಿ ಆಗಿದೆ. ಆ ನಿಟ್ಟಿನಲ್ಲಿ ಸರ್ಕಾರದ ಉದ್ದೇಶ ಮತ್ತು ಆಶಯದಂತೆ ಗ್ಯಾರಂಟಿ ಯೋಜನೆಗಳನ್ನು ತಲುಪಿಸುವಂತೆ ಸಲಹೆ ನೀಡಿದರು. ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ, ಅನ್ನಭಾಗ್ಯ ಹೀಗೆ ಪಂಚ ಯೋಜನೆಗಳು ತಲುಪಿದಾಗ ಸರ್ಕಾರಕ್ಕೆ ಹೆಸರು ಬರಲಿದೆ. ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಸಮಸ್ಯೆಗಳು ಇದ್ದಲ್ಲಿ ಮಾಹಿತಿ ನೀಡುವಂತಾಗಬೇಕು ಎಂದು ಧರ್ಮಜ ಉತ್ತಪ್ಪ ಹೇಳಿದರು. ಗ್ಯಾರಂಟಿ ಯೋಜನೆಗಳ ಕುಶಾಲನಗರ ತಾಲ್ಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ…
ಕುಶಾಲನಗರ ಜು.22 NEWS DESK : ಹುಣ್ಣಿಮೆ ಅಂಗವಾಗಿ ಭಾಗಮಂಡಲ ಸಂಗಮದಿಂದ ಕುಶಾಲನಗರ ಹಾರಂಗಿ ಸಂಗಮ ತನಕ ಏಕಕಾಲದಲ್ಲಿ 14 ಕಡೆ ಜೀವನದಿ ಕಾವೇರಿಗೆ ನಮಾಮಿ ಕಾವೇರಿ ತಂಡದ ಮೂಲಕ ಮಹಾ ಆರತಿ ಬೆಳಗುವ ಕಾರ್ಯಕ್ರಮ ನಡೆಯಿತು. ಭಾಗಮಂಡಲ, ಚೆಟ್ಟಿಮಾನಿ, ನಾಪೋಕ್ಲು, ಸಿದ್ದಾಪುರ ,ಕರಡಿಗೋಡು ಕಕ್ಕಬೆ, ಕುಶಾಲನಗರ ಮುಳ್ಳುಸೋಗೆ ,ಕೂಡ್ಲೂರು, ಕೊಪ್ಪ, ಮಾದಾಪಟ್ಟಣ, ಚಿಕ್ಕ ಹೊಸೂರು, ಗಿರಗೂರು ಸೇರಿದಂತೆ ಕಾವೇರಿ ನದಿ ತಟದ ಉದ್ದಕ್ಕೂ ತುಂಬಿ ಹರಿಯುತ್ತಿದ್ದ ಕಾವೇರಿಗೆ ಒಟ್ಟು 14 ಕಡೆ ಏಕಕಾಲದಲ್ಲಿ ಆರತಿ ಕಾರ್ಯಕ್ರಮಗಳು ನಡೆದವು. ಕಳೆದ ಒಂದು ವಾರದಿಂದ ಉಕ್ಕಿ ಹರಿಯುತ್ತಿದ್ದ ಕಾವೇರಿ ಶಾಂತವಾಗಿ ಹರಿದು ನಾಡು ಸುಭಿಕ್ಷ ವಾಗಲಿ ಎಂದು ಬೇಡಿಕೊಳ್ಳಲಾಯಿತು. ನಮಾಮಿ ಕಾವೇರಿ ತಂಡದ ಮುಖ್ಯಸ್ಥರಾದ ವನಿತಾ ಚಂದ್ರಮೋಹನ್ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳು ಜರಗಿದವು. ಕುಶಾಲನಗರದ ಆರತಿ ಕ್ಷೇತ್ರದಲ್ಲಿ ಹುಣ್ಣಿಮೆ ಅಂಗವಾಗಿ 161ನೇ ಮಹಾ ಆರತಿ ಕಾರ್ಯಕ್ರಮ ಜರಗಿತು.
ನಾಪೋಕ್ಲು ಜು.22 NEWS DESK : ಬೇತು ಗ್ರಾಮದಿಂದ ಬಲಮುರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮಕ್ಕಿಕಡವು ಎಂಬಲ್ಲಿ ಮೋರಿ ಕುಸಿದು ವಾಹನಗಳ ಸಂಚಾರಕ್ಕೆ ತೊಡಕುಂಟಾಗಿದೆ. ಧಾರಾಕಾರ ಮಳೆಯಿಂದಾಗಿ ಗದ್ದೆಗಳ ಮಧ್ಯ ಭಾಗಕ್ಕಾಗಿ ಸಾಗುವ ರಸ್ತೆಗೆ ಅಳವಡಿಸಿದ್ದ ಮೋರಿಯ ಮಧ್ಯಭಾಗ ಕುಸಿದು ರಸ್ತೆಯಲ್ಲಿ ಗುಂಡಿ ಬಿದ್ದಿದೆ. ಇದರಿಂದಾಗಿ ವಾಹನಗಳ ಸಂಚಾರಕ್ಕೆ ತೊಡಕುಂಟಾಗುತ್ತಿದೆ. ಬಲಮುರಿ, ಪಾರಾಣೆ ಗ್ರಾಮದಂದ ನಾಪೋಕ್ಲು ಪಟ್ಟಣಕ್ಕೆ ಸಮೀಪದ ರಸ್ತೆ ಇದಾಗಿದ್ದು, ಈ ಮಾರ್ಗವಾಗಿ ಹಲವಾರು ವಾಹನಗಳು ಪ್ರತಿನಿತ್ಯ ಸಂಚರಿಸುತ್ತಿವೆ. ಆದ್ದರಿಂದ ಸಂಬಂಧಪಟ್ಟವರು ಈ ರಸ್ತೆಯಲ್ಲಿ ಕುಸಿದಿರುವ ಭಾಗವನ್ನು ಶೀಘ್ರದಲ್ಲಿ ದುರಸ್ತಿಪಡಿಸಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ವರದಿ : ದುಗ್ಗಳ ಸದಾನಂದ.
ನಾಪೋಕ್ಲು ಜು.22 NEWS DESK : ಗುರು ಪೂರ್ಣಿಮಾ ಅಂಗವಾಗಿ ಕಕ್ಕಬ್ಬೆಯಲ್ಲಿ ಕಾವೇರಿ ನದಿಗೆ ಪೂಜೆ ಸಲ್ಲಿಸಲಾಯಿತು. ಸ್ಥಳೀಯರಾದ ಉಮಾಲಕ್ಷ್ಮಿ , ಸುಧಾ, ಅಶ್ವಿನಿ, ಜ್ಯೋತಿ, ಸರಸ್ವತಿ, ಲೀಲಾ, ಬಿಂದು , ಮನೋಜ್ , ಡಾಲಿ ಕೋಮಲ್ ಕಾವೇರಿ ನದಿಗೆ ಹಾಲೆರೆದು, ಆರತಿಯನ್ನು ಬೆಳಗಿ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದರು. ವರದಿ : ದುಗ್ಗಳ ಸದಾನಂದ.
ಮೈಸೂರು ಜು.22 NEWS DESK : ಅನಾರೋಗ್ಯದ ಹಿನ್ನೆಲೆ ಮೈಸೂರಿನ ಗೋಪಾಲಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಪತ್ರಕರ್ತ ಶಶಿಧರ್ ಭಟ್ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದೂರವಾಣಿ ಮೂಲಕ ಮಾತನಾಡಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದರು. ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ ಮುಖ್ಯಮಂತ್ರಿಗಳು, ಆಸ್ಪತ್ರೆಯ ವೈದ್ಯರ ಜೊತೆಗೂ ಮಾತನಾಡಿ ಶಶಿಧರ್ ಭಟ್ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು.






