ಲೇಖಕ: admin

ನಾಪೋಕ್ಲು ಜು.17 NEWS DESK : ವಿದ್ಯಾರ್ಥಿಗಳು ತಮ್ಮ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಲು ಸತತ ಪರಿಶ್ರಮ ಹಾಗೂ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಹಾಗೂ ಶಾಲೆಯಲ್ಲಿ ನಡೆಸುವ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲೆ ಕೆ.ಡಿ.ನೀತಾ ಹೇಳಿದರು. ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ 2024-25 ನೇ ಸಾಲಿನ ಶೈಕ್ಷಣಿಕ ವರ್ಷದ 6 ರಿಂದ 10ನೇ ತರಗತಿಗಳ ವಿದ್ಯಾರ್ಥಿಗಳ ಮೊದಲನೇ “ಪೋಷಕರ ಸಭೆ”  ಹಾಗೂ ವಿದ್ಯಾರ್ಥಿಗಳಿಗೆ ವೃತ್ತಿ ಯೋಜನೆ ತರಬೇತಿ ನೀಡಲು “ವೃತ್ತಿ ಮಾರ್ಗದರ್ಶನ” ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭ 2023-24ನೇ ಸಾಲಿನಲ್ಲಿ ಒಂಬತ್ತನೆ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಕೆ.ಎಂ. ಖುಷಿ ಅವರಪೋಷಕರು ‘ವೃತ್ತಿ ಮಾರ್ಗದರ್ಶನ’ ಕ್ಕೆ ಚಾಲನೆ ನೀಡಿದರು. ಶಾಲಾ ದೈಹಿಕ ಶಿಕ್ಷಕಿ ಶ್ಯಾಮಿಲಿ ವೃತ್ತಿ ತರಬೇತಿಯ ಬಗ್ಗೆ  ಸಂಪೂರ್ಣ ಮಾಹಿತಿ ನೀಡಿದರು. ಗಣಕಯಂತ್ರ ಶಿಕ್ಷಕಿ ಸುಶ್ಮಿತಾ 2023-24ನೇ ಯ ಹಾಗೂ ಪ್ರಸಕ್ತ ಸಾಲಿನಲ್ಲಿ ಇದುವರೆಗೂ ಶಾಲೆಯಲ್ಲಿ ನಡೆಸಿದ ಶೈಕ್ಷಣಿಕ ಚಟುವಟಿಕೆಗಳ…

Read More

ನಾಪೋಕ್ಲು ಜು.17 NEWS DESK : ಸಾಹಿತಿ, ಪತ್ರಕರ್ತ, ಕುಲಪುರೋಹಿತ ಎಂಬ ಬಿರುದಿಗೆ ಭಾಜನರಾಗಿದ್ದ ಆಲೂರು ವೆಂಕಟರಾಯರ ಜನ್ಮ ದಿನಾಚರಣೆಯನ್ನು ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಪಾರಾಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಗೆ, ರಾಯರ ಕುರಿತ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿ, ವಿಜೇತರನ್ನು ಚಪ್ಪಾಳೆಗಳ ಮೂಲಕ ಅಭಿನಂದಿಸಿ, ಪ್ರೋತ್ಸಾಹಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ವೇದಪ್ರಸಾದ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕ ಕಿಶೋರ್ ಕುಮಾರ್ ವಿದ್ಯಾರ್ಥಿಗಳಿಗೆ ಆಲೂರು ವೆಂಕಟರಾಯರ ಭಾವಚಿತ್ರದೊಂದಿಗೆ, ರಾಯರ ಬದುಕು ಸಾಧನೆಯನ್ನು ವಿವರಿಸಿದರು. ಶಿಕ್ಷಕಿಯರಾದ ಸುಮಿತ್ರ, ಮಂಜುಳ ರಸಪ್ರಶ್ನೆ ಸ್ಪರ್ಧೆ ನಡೆಸಿದರು. ವರದಿ : ದುಗ್ಗಳ ಸದಾನಂದ.

Read More

ನಾಪೋಕ್ಲು ಜು.17 NEWS DESK : ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ನಾಪೋಕ್ಲುವಿನ ವಿವಿಧ ರಸ್ತೆಗಳು ಜಲಾವೃತಗೊಂಡಿದ್ದು, ಮನೆಗಳಿಗೆ ಹಾನಿಯಾಗಿದೆ. ನಾಪೋಕ್ಲುವಿನ ಕಾವೇರಿ ನದಿ ತುಂಬಿ ಹರಿಯುತ್ತಿದ್ದು, ನಾಪೋಕ್ಲು-ಮೂರ್ನಾಡು ಸಂಪರ್ಕ ರಸ್ತೆಯ ಹೊದ್ದೂರಿನ ಗ್ರಾಮದ ಬೊಳಿಬಾಣೆ ಎಂಬಲ್ಲಿ ರಸ್ತೆ ಜಲಾವೃತವಾಗಿದೆ. ಕಿರು ವಾಹನಗಳ ಸಂಚಾರ ಕಷ್ಟಕರವಾಗಿದ್ದು, ನಿರಂತರ ಮಳೆಯಿಂದ ಮೂರ್ನಾಡು ರಸ್ತೆ ಸಂಪರ್ಕ ಕಡಿತವಾಗುವ ಸಾಧ್ಯತೆ ಇದೆ. ಚೆರಿಯಪರಂಬುವಿನಲ್ಲೂ ರಸ್ತೆ ಜಲಾವೃತವಾಗಿ ನಾಪೋಕ್ಲು-ಕಲ್ಲುಮೊಟ್ಟೆ ಸಂಪರ್ಕ ರಸ್ತೆ ಕಡಿತಗೊಂಡಿದೆ. ಇಲ್ಲಿಗೆ ಸಮೀಪದ ಎಮ್ಮೆಮಾಡಿನಲ್ಲಿರುವ ಗದ್ದೆಗಳು ಕಾವೇರಿ ಪ್ರವಾಹದಿಂದ ಸಂಪೂರ್ಣ ಜಲಾವೃತವಾಗಿದೆ. ಚೆರಿಯಪರಂಬುವಿನಲ್ಲಿ ನದಿ ತಟದ ಮನೆಗಳಲ್ಲಿ ವಾಸಿಸುತ್ತಿರುವವರಿಗೆ ಈ ಹಿಂದೆ ಕಂದಾಯ ಇಲಾಖೆಯಿಂದ ನೋಟಿಸು ಜಾರಿ ಮಾಡಲಾಗಿದ್ದು ಹಲವರು ಮನೆ ಖಾಲಿ ಮಾಡಿದ್ದಾರೆ. ಇನ್ನುಳಿದಂತೆ ಹಲವರ ಮನೆ ಜಲಾವೃತವಾಗುವ ಸಾಧ್ಯತೆಗಳಿವೆ. ಕೊಟ್ಟ ಮುಡಿಯಲ್ಲಿ ಕಾವೇರಿ ನದಿ ತುಂಬಿ ಹರಿಯುತ್ತಿದ್ದು, ಬಹುತೇಕ ಕಾಫಿ ತೋಟಗಳು ಪ್ರವಾಹದಲ್ಲಿ ಮುಳುಗಿದೆ . ಗಾಳಿ ಮಳೆಗೆ ಚೇಲಾವರ ಗ್ರಾಮದ ಮುತ್ತಪ್ಪ ಎಂಬವರ ವಾಸದ ಮನೆಯ ಹೆಂಚುಗಳು ಹಾನಿಯಾಗಿದೆ. ಕುಂಜಿಲ…

Read More

ಮಡಿಕೇರಿ ಜು.17 NEWS DESK : ಕೊಡಗು ಜಿಲ್ಲೆಯಾದ್ಯಂತ ಮುಂಗಾರು ಮಳೆ-ಗಾಳಿ ಬಿರುಸು ಪಡೆದಿದೆ. ಈ ಹಿನ್ನೆಲೆ ವಿದ್ಯುತ್ ಸರಬರಾಜಿನಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ ಅಡಚಣೆಗಳು ಉಂಟಾಗುವ ಸಾಧ್ಯತೆ ಇದೆ. ಸಾರ್ವಜನಿಕರು ಯಾವುದೇ ರೀತಿಯ ವಿದ್ಯುತ್ ಜಾಲದ ವ್ಯತ್ಯಯಗಳನ್ನು (ವಿದ್ಯುತ್ ಮಾರ್ಗದ ತಂತಿ ಹಾಗೂ ಕಂಬಗಳು ತುಂಡಾಗುವುದು) ಗಮನಿಸಿದಲ್ಲಿ, ಸ್ವತಃ ಕ್ರಮಕೈಗೊಳ್ಳದೇ (ವಿದ್ಯುತ್ ತಂತಿಗಳನ್ನು ಸ್ಪರ್ಶಿಸದೇ) ತಕ್ಷಣ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ದೂರವಾಣಿ ಸಂಖ್ಯೆಗಳಲ್ಲಿ ತಮ್ಮ ದೂರುಗಳನ್ನು ದಾಖಲಿಸುವಂತೆ ಕೋರಿದೆ. ಗ್ರಾಹಕರು ಸಂಪರ್ಕಿಸಲು ಸಾಧ್ಯವಾಗದಿದ್ದಲ್ಲಿ ಪರ್ಯಾಯವಾಗಿ ವಾಟ್ಸ್‌ಆಪ್ ಮೂಲಕ ಪೋಟೋ ಸಂದೇಶವನ್ನು ನೀಡಬಹುದು. ಕೊಡಗು ಜಿಲ್ಲೆಯ(24*7) ಟೋಲ್ ಪ್ರೀ ಸರ್ವೀಸ್ ಸೆಂಟರ್‍ನ ದೂರವಾಣಿ ಸಂಖ್ಯೆ 1912, ಗ್ರಾಹಕರ ಸೇವಾ ಕೇಂದ್ರ ಸಂಖ್ಯೆ 9449598665. ಮಡಿಕೇರಿ ತಾಲ್ಲೂಕಿಗೆ ಸಂಬಂಧಿಸಿದಂತೆ ಮಡಿಕೇರಿ, ತಾಳತ್‍ಮನೆ, ಮೂರ್ನಾಡು, ಸಂಪಾಜೆ, ಭಾಗಮಂಡಲ, ನಾಪೋಕ್ಲು ಶಾಖೆಗಳಿಗೆ ಮತ್ತು ಗ್ರಾಹಕರ ಸೇವಾ ಕೇಂದ್ರಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿನಯಕುಮಾರ್ 9449598602, ಸಹಾಯಕ ಜೂನಿಯರ್ ಎಂಜಿನಿಯರ್‍ಗಳು ಸಂಪತ್ ಕುಮಾರ್(ಮಡಿಕೇರಿ) 9449598603,…

Read More

ಮಡಿಕೇರಿ ಜು.17 NEWS DESK : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಪ್ರಥಮ ಸರ್ವ ಸದಸ್ಯರ ಸಭೆಯು ಅಕಾಡೆಮಿ ಕಚೇರಿಯಲ್ಲಿ ನಡೆಯಿತು. ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ  ಮುಂದಿನ ಕಾರ್ಯ ಯೋಜನೆಯ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಸದಸ್ಯರ ಅಭಿಪ್ರಾಯಗಳೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ನೀಡುವಂತೆ ಒಮ್ಮತದ ತೀರ್ಮಾನಕ್ಕೆ ಬರಲಾಯಿತು. ಕಕ್ಕಡ 18 ಹಾಗೂ ಬೇಲ್‍ನಮ್ಮೆ ಕಾರ್ಯಕ್ರಮವನ್ನು ಸಂಸ್ಕೃತಿಯ ಅನಾವರಣದೊಂದಿಗೆ ಮಡಿಕೇರಿ, ಅಮ್ಮತ್ತಿ, ಪೊನ್ನಂಪೇಟೆ ಸೇರಿದಂತೆ ಹಲವು ಕಡೆಗಳಲ್ಲಿ ನಡೆಸಲು ಸದಸ್ಯರಿಗೆ ಜವಾಬ್ದಾರಿ ಕೊಡಲಾಯಿತು. ಮಂಗಳೂರಿನಲ್ಲಿ ಆಯೋಜಿಸಲಿರುವ ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಕೊಡವ ಸಂಸ್ಕೃತಿ ಹಾಗೂ ಸಾಹಿತ್ಯದ ಪ್ರದರ್ಶನಗಳೊಂದಿಗೆ ನಡೆಸುವಂತೆ ಹಾಗೂ ಇದಕ್ಕೆ ಪೂರ್ವಕವಾಗಿ ಕೊಡಗು ಜಿಲ್ಲೆಯಾದ್ಯಂತ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಲವು ಸ್ಪರ್ಧಾ ಕಾರ್ಯಕ್ರಮಗಳನ್ನು ಏರ್ಪಡಿಸಲು ತೀರ್ಮಾನಿಸಲಾಯಿತು. ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ, ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಿರುಚಿತ್ರ ಸ್ಪರ್ಧೆಗಳನ್ನು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಕನ್ನಡ…

Read More

ಮಡಿಕೇರಿ ಜು.17 NEWS DESK : ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ತುರ್ತುಗಾಗಿ, ಶಸ್ತ್ರಚಿಕಿತ್ಸೆಗೆ ಪಡಿತರ ಚೀಟಿ ಅವಶ್ಯಕತೆ ಇರುವುದಾಗಿ ಫಲಾನುಭವಗಳು ಕುಶಾಲನಗರ ತಾಲ್ಲೂಕಿನ ಶಾಸಕರ ಕಚೇರಿಗೆ ಮನವಿ ಸಲ್ಲಿಸಿದರು. ರೋಗಿಗಳ ಮನವಿಗೆ ತಕ್ಷಣವೇ ಸ್ಪಂದಿಸಿದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಆಹಾರ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ತಕ್ಷಣವೇ ಪಡಿತರ ಚೀಟಿಯನ್ನು ನೀಡುವಂತೆ ಸೂಚನೆ ನೀಡಿದ್ದರು. ಕುಶಾಲನಗರ ತಾಲ್ಲೂಕು ಆಡಳಿತ ಕಚೇರಿಯಲ್ಲಿ ತಾಲ್ಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ, ತಾಲ್ಲೂಕು ಆಹಾರ ನಿರೀಕ್ಷಕರಾದ ಸ್ವಾತಿ  ಅರ್ಹ 4 ಫಲಾನುಭವಿಗಳಿಗೆ ವೈದ್ಯಕೀಯ ಉದ್ದೇಶಕ್ಕಾಗಿ ಪಡಿತರ ಚೀಟಿ ವಿತರಿಸಿದರು.

Read More

ಕುಶಾಲನಗರ ಜು.17 NEWS DESK : ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನಿಂದ ನಾಟಿ ವೈದ್ಯೆ ಅಯಿನಮಂಡ ಲೀಲಾವತಿ ಗಣಪತಿ ಅವರಿಗೆ ರಾಜ್ಯಮಟ್ಟದ ಕಾಯಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬೀದರ್ ನಲ್ಲಿ ನಡೆದ ಕಾಯಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗಣ್ಯರು ಪ್ರಶಸ್ತಿ ನೀಡಿ, ಸನ್ಮಾನಿಸಿ ಗೌರವಿಸಿದರು. ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್, ಸ್ಥಳೀಯ ಜನಪ್ರತಿನಿಧಿಗಳು, ಪರಿಷತ್ತಿನ ಕೊಡಗು ಜಿಲ್ಲಾ ಅಧ್ಯಕ್ಷೆ ವನಿತಾ ಚಂದ್ರಮೋಹನ್ ಮತ್ತು ಪದಾಧಿಕಾರಿಗಳು ಇದ್ದರು.

Read More

ಮಡಿಕೇರಿ ಜು.17 NEWS DESK : ಕೊಡಗು ಜಿಲ್ಲೆಯಲ್ಲಿ ಗಾಳಿ ಸಹಿತ ಮಹಾಮಳೆ ಮುಂದುವರೆದಿದೆ. ಸಾರ್ವಜನಿಕ ಆಸ್ತಿಪಾಸ್ತಿಗೆ ಅಪಾರ ಹಾನಿ ಉಂಟಾಗಿದೆ. ಅಪಾಯದಂಚಿನಲ್ಲಿ ವಾಸಿಸುತ್ತಿರುವವರಿಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಸೋಮವಾರಪೇಟೆಯ ಶಾಂತಳ್ಳಿಯಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ ಒಂಭತ್ತೂವರೆ ಇಂಚು ಮಳೆ ಸುರಿದಿದೆ. ಕಾವೇರಿಯ ಉಗಮ ಸ್ಥಾನ ತಲಕಾವೇರಿ ವ್ಯಾಪ್ತಿಯ ಭಾಗಮಂಡಲದಲ್ಲಿ 6 ಇಂಚು ಮಳೆಯಾಗಿದೆ. ನದಿ, ತೊರೆ, ಹಳ್ಳಕೊಳ್ಳ, ಜಲಾಶಯಗಳಲ್ಲಿನ ನೀರಿನ ಮಟ್ಟ ಏರಿಕೆಯಾಗಿದ್ದು, ವಿವಿಧೆಡೆ ಮನೆಗಳಿಗೆ ಹಾನಿಯಾಗಿದೆ. ಹಲವು ಭಾಗಗಳಲ್ಲಿ ಅಪಾಯದ ಮುನ್ಸೂಚನೆ ಕಂಡು ಬಂದಿದ್ದು, ಜನರ ಸುರಕ್ಷತೆಗೆ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ನದಿ ಪಾತ್ರದ ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುತ್ತಿರುವ 15 ಕುಟುಂಬಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಕುಶಾಲನಗರ ತಹಶೀಲ್ದಾರ್ ನೋಟಿಸ್ ನೀಡಿದ್ದಾರೆ. ಮಳೆ ಹೆಚ್ಚಿರುವ ಹಿನ್ನೆಲೆ ಕಾವೇರಿ ನದಿ ಉಕ್ಕಿ ಹರಿದು ಪ್ರವಾಹ ಹಾಗೂ ಭೂಕುಸಿತ ಸಾಧ್ಯತೆ ಇರುವ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ತಾಲ್ಲೂಕಿನ…

Read More

ಕುಶಾಲನಗರ ಜು.17 NEWS DESK : ಅರಣ್ಯ ಇಲಾಖೆ ಕೈಗೊಂಡ ಕೌನ್ಸಿಲಿಂಗ್ ವರ್ಗಾವಣೆಯಲ್ಲಿ ಮಡಿಕೇರಿ ವಿಭಾಗದ ಕುಶಾಲನಗರ ಅರಣ್ಯ ವಲಯದಿಂದ ಆರು ಮಂದಿ ಅಧಿಕಾರಿಗಳಿಗೆ ವರ್ಗಾವಣೆ ಮಾಡಲಾಗಿದೆ. ಉಪವಲಯ ಅರಣ್ಯ ಅಧಿಕಾರಿ ಕನ್ನಂಡ ಪಿ.ರಂಜನ್ ಅವರನ್ನು ಪುಷ್ಪಗಿರಿ ವನ್ಯಜೀವಿ ವಲಯಕ್ಕೆ, ಉಪವಲಯ ಅರಣ್ಯ ಅಧಿಕಾರಿ ಅನಿಲ್ ಡಿಸೋಜಾ ಮಾಕುಟ್ಟ ವಲಯಕ್ಕೆ, ಮಂಜುನಾಥ ಗೂಳಿ  ಮಾಕುಟ್ಟ ವಲಯಕ್ಕೆ, ಗಸ್ತು ಪಾಲಕ ಹನುಮಂತ ರಾಯಪ್ಪ ಮಡಿಕೇರಿ ವನ್ಯಜೀವಿ ವಲಯಕ್ಕೆ, ಟಿ.ಕೆ.ಸಚಿನ್ ತಿತಿಮತಿ ಹಾಗೂ ಮಣಿಕಂಠ ಅವರನ್ನು ಪೊನ್ನಂಪೇಟೆ ವಲಯಕ್ಕೆ ವರ್ಗಾಯಿಸಲಾಗಿದ್ದು, ಅವರ ಸ್ಥಾನಕ್ಕೆ ನೂತನ ಅಧಿಕಾರಿಗಳನ್ನು ಸರಕಾರ ನೇಮಿಸಿದೆ. ಈ ಸಂಬಂಧ ವರ್ಗಾವಣೆಗೊಂಡ ಅಧಿಕಾರಿಗಳಿಗೆ ಇಲಾಖೆ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.

Read More

ಸೋಮವಾರಪೇಟೆ ಜು.17 NEWS DESK : ಕರ್ನಾಟಕ ರಾಜ್ಯದ ಪ್ರತಿಷ್ಥಿತ ಸಂಸ್ಥೆಯಾದ ಬೆಂಗಳೂರಿನ ಚೈಲ್ಡ್‌ ರೈಟ್ಸ್‌ ಟ್ರಸ್ಟ್ ವತಿಯಿಂದ ನೀಡುವ 2024ನೇ ಸಾಲಿನ ಡಾ.ಪದ್ಮನಿ ಮಕ್ಕಳ ಹಕ್ಕುಗಳ ಫೆಲೋಶಿಪ್-2024 ಕ್ಕೆ ನಾವು ಪ್ರತಿಷ್ಠಾನ ಸಂಸ್ಥೆಯ ಪಿ.ಸುಮನ್‌ ಮ್ಯಾಥ್ಯೂ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಎಸ್.ಸಿ.ಎಂ ಹೌಸ್ ನಲ್ಲಿ ನಡೆದ ಡಾ.ಪದ್ಮಿನಿ ಅವರ ಜನ್ಮದಿನಾಚರಣೆಯಂದು ಫೆಲೋಶಿಪ್ ಪ್ರದಾನ ಮಾಡಲಾಯಿತು. ಸಮೂದಾಯಗಳ ತಳಮಟ್ಟದ ಮಕ್ಕಳ ಹಕ್ಕುಗಳನ್ನು ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು, ತರಬೇತಿ, ಉಸ್ತುವಾರಿ, ಮಾಹಿತಿ ಸಂಗ್ರಹ ಮತ್ತು ವಿಶ್ಲೇಷಣೆ ಮೂಲಕ ಎಲ್ಲ ಮಕ್ಕಳಿಗೂ ಎಲ್ಲ ಹಕ್ಕುಗಳುʼ ದೊರಕುವಂತೆ ಕಾರ್ಯನಿರ್ವಹಿಸಲು ಮತ್ತು ತಮ್ಮ ಸಮುದಾಯದೊಡನೆ ತೊಡಗಿಸಿಕೊಂಡು ಎಲ್ಲ ಮಕ್ಕಳ ಬದುಕು, ರಕ್ಷಣೆ, ಅಭಿವೃದ್ದಿ ಹಾಗೂ ಭಾಗವಹಿಸುವ ಹಕ್ಕುಗಳನ್ನು ಎತ್ತಿಹಿಡಿಯುವುದು ಇದರ ಉದ್ದೇಶವಾಗಿದೆ ಎಂದು ಸುಮನಾ ತಿಳಿಸಿದ್ದಾರೆ.

Read More