ಮಡಿಕೇರಿ ಏ.26 NEWS DESK : ಬಿಜೆಪಿ ಅಭ್ಯರ್ಥಿ ಯದುವೀರ್ ಮೈಸೂರಿನಲ್ಲಿ ಮತದಾನ ಮಾಡಿದರು. ಪತ್ನಿ ತೃಷಿಕಾ, ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಜೊತೆ ಮತಗಟ್ಟೆಗೆ ಬಂದು ಮತಚಲಾಯಿಸಿದರು.
ಲೇಖಕ: admin
ಮಡಿಕೇರಿ ಏ.26 NEWS DESK : ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಮತಚಲಾಯಿಸಿದರು. ಪತ್ನಿ ಕಾಂಚನ ಪೊನ್ನಣ್ಣ ಹಾಗೂ ಸಹೋದರ ನರೇನ್ ಕಾರ್ಯಪ್ಪ ಅವರೊಂದಿಗೆ ಹುದಿಕೇರಿಯ ಬೆಳ್ಳೂರು ಬೂತ್ ನಂ.246ರಲ್ಲಿ ಮತಚಲಾಯಿಸಿದರು.
ಮಡಿಕೇರಿ ಏ.26 NEWS DESK : ಬಿಜೆಪಿ ನಾಯಕ, ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮತಚಲಾಯಿಸಿದರು. ಪತ್ನಿ ಕುಂತಿ ಬೋಪಯ್ಯ ಹಾಗೂ ಪುತ್ರಿ ಯಶಿಕ ರೊಂದಿಗೆ ನಗರದ ಜೂನಿಯರ್ ಕಾಲೇಜು ಆವರಣದ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು.
ಮಡಿಕೇರಿ ಏ.26 NEWS DESK : ಜಿಲ್ಲಾಧಿಕಾರಿ ವೆಂಕಟ್ ರಾಜ್ ಅವರು ಮಡಿಕೇರಿ ತಾಲ್ಲೂಕು ಪಂಚಾಯತ್ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಮಡಿಕೇರಿ ಏ.25 NEWS DESK : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಸೇರಿದಂತೆ ಒಟ್ಟು 18 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಇವರ ರಾಜಕೀಯ ಭವಿಷ್ಯವನ್ನು ಏ.26ರಂದು ಮತದಾನ ಮಾಡುವ ಮೂಲಕ ಮತದಾರ ನಿರ್ಧರಿಸಲಿದ್ದಾನೆ. ಕೊಡಗು ಜಿಲ್ಲೆಯಲ್ಲಿ ಒಟ್ಟು 546 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಒಟ್ಟು 4,70,766 ಮತದಾರರಿದ್ದು, 2,30,568 ಪುರುಷರು ಮತ್ತು 2,40,182 ಮಹಿಳಾ ಮತದಾರರು, 16 ಇತರ ಮತದಾರರು ಇದ್ದಾರೆ.
ಮಡಿಕೇರಿ ಏ.25 NEWS DESK : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 18 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕಾಂಗ್ರೆಸ್‌ನ ಎಂ.ಲಕ್ಷ್ಮಣ್ ಗೌಡ, ಕರ್ನಾಟಕ ರಾಷ್ಟ್ರ ಸಮಿತಿಯ ಎಂ.ಎಸ್.ಪ್ರವೀಣ್, ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷದ ಸುನಿಲ್ ಟಿ.ಆರ್, ಉತ್ತಮ ಪ್ರಜಾಕೀಯ ಪಾರ್ಟಿಯ ಪ್ರಜಾಕೀಯ ಲೀಲಾ, ಸೋಷಿಯಲಿಸ್ಟ್ ಪಾರ್ಟಿ(ಇಂಡಿಯಾ)ಯ ಹರೀಶ್ ಗೌಡ, ಸೆಕ್ಯುಲರ್ ಡೆಮಾಕ್ರೆಟಿಕ್ ಕಾಂಗ್ರೆಸ್‌ನ ಎ.ಸಿ. ರಾಮಚಂದ್ರರಾವ್, ಕರ್ನಾಟಕ ಜನತಾ ಪಕ್ಷದ ಕದಂಬ ನ.ಅಂಬರೀಶ್, ಸಮಾಜವಾದಿ ಜನತಾ ಪಾರ್ಟಿ ಕರ್ನಾಟಕದ ಡಾ. ಹೆಚ್.ಎಂ.ನಂಜುಂಡ ಸ್ವಾಮಿ, ಕರುನಾಡು ಪಾರ್ಟಿಯ ಹೆಚ್.ಕೆ.ಕೃಷ್ಣ, ಇಂಡಿಯನ್ ಮೂವ್‌ಮೆಂಟ್ ಪಾರ್ಟಿಯ ಕ್ರಿಸ್ಟೋಫರ್ ರಾಜ್ ಕುಮಾರ್, ಪಕ್ಷೇತರರಾದ ಎ.ಎಸ್. ಸತೀಶ್, ರಾಮ ಮೂರ್ತಿ ಎಂ., ರಂಗ ಸ್ವಾಮಿ ಎಂ., ಪಿ.ಎಸ್. ಯಡೂರಪ್ಪ, ಅಂಬೇಡ್ಕರ್ ಸಿ.ಜೆ., ರಾಜು ಮತ್ತು ದರ್ಶನ್ ಕೆ. ಪೊನ್ನೆಟ್ಟಿ ಕಣದಲ್ಲಿದ್ದಾರೆ.
ಮಡಿಕೇರಿ ಏ.25 NEWS DESK : ಕುಂಡ್ಯೋಳಂಡ ಹಾಕಿ ಕಾರ್ನಿವಲ್ ಕೊಡವ ಕೌಟುಂಬಿಕ ಹಾಕಿ ಹಬ್ಬದ ಸೆಮಿಫೈನಲ್ ಪಂದ್ಯಾವಳಿ ಏ.27 ರಂದು ಶನಿವಾರ ಬೆಳಿಗ್ಗೆ 10.30 ಗಂಟೆಗೆ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಚೆಪ್ಪುಡಿರ ಮೊಣ್ಣಪ್ಪ ಪೂಣಚ್ಚ ಹಾಗೂ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಪಾಲ್ಗೊಳ್ಳಲಿದ್ದಾರೆ. ಏ.27 ರ ಶನಿವಾರ ಬೆಳಗ್ಗೆ 7 ಗಂಟೆಗೆ ಕಕ್ಕಬ್ಬೆಯಿಂದ ನಾಪೋಕ್ಲುವರೆಗೆ ಕೊಡವ ಕುಟುಂಬಗಳ ನಡುವೆ 2.50 * 4 ಕಿ.ಮೀ ದೂರದ ಓಟದ ಸ್ಪರ್ಧೆ “ಫ್ಯಾಮಿಲಿ ರಿಲೇ” ನಡೆಯಲಿದೆ. ಒಂದು ಕುಟುಂಬ ತಂಡದಲ್ಲಿ ಓರ್ವ ಮಹಿಳೆ ಸೇರಿ ನಾಲ್ವರು ಪಾಲ್ಗೊಳ್ಳಬಹುದಾಗಿದೆ. ವಿಜೇತರಿಗೆ ಮೊದಲ ಬಹುಮಾನ ರೂ.50 ಸಾವಿರ, ದ್ವಿತೀಯ ಬಹುಮಾನ 30 ಸಾವಿರ ಹಾಗೂ ತೃತೀಯ 20 ಸಾವಿರ ರೂ. ನೀಡಲಾಗುವುದು. ಸ್ಪರ್ಧಿಗಳು ಅಂದು ಬೆಳಗ್ಗೆ 6 ಗಂಟೆಗೆ ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಹಾಜರಿರಬೇಕು. ನೋಂದಣಿಗೆ ಏ.26 ಬೆಳಗ್ಗೆ 11 ಗಂಟೆಯವರೆಗೆ ಕಾಲಾವಕಾಶವಿದ್ದು,…
ಮಡಿಕೇರಿ ಏ.25 NEWS DESK : ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆಯಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತಗಟ್ಟೆಗಳಿಗೆ ಸಿಬ್ಬಂದಿಗಳನ್ನು ನಿಯೋಜಿಸುವ ‘ಮಸ್ಟರಿಂಗ್’ ಕಾರ್ಯ ಸಕಲ ಪೊಲೀಸ್ ಬಂದೋಬಸ್ತ್ ನೊಂದಿ ಸುಸೂತ್ರವಾಗಿ ನಡೆಯಿತು. ಜಿಲ್ಲಾ ಕೇಂದ್ರ ಮಡಿಕೇರಿಯ ಸಂತ ಜೋಸೆಫರ ಕಾನ್ವೆಂಟ್‌ನಲ್ಲಿ ಇಂದು ಬೆಳಗ್ಗಿನಿಂದ ಸಂಜೆಯವರೆಗೆ ಮಡಿಕೇರಿ ಕ್ಷೇತ್ರ ವ್ಯಾಪ್ತಿಯ 273 ಮತಗಟ್ಟೆಗಳಿಗೆ 1208 ಸಿಬ್ಬಂದಿಗಳನ್ನು ನಿಯೋಜಿಸಲಾಯಿತು. ಇಷ್ಟೇ ಸಂಖ್ಯೆಯ ಸಿಬ್ಬಂದಿಗಳನ್ನು ವಿರಾಜಪೇಟೆಯಲ್ಲಿ ನಡೆದ ಮಸ್ಟರಿಂಗ್ ಕಾರ್ಯದ ಮೂಲಕ ಆ ಕ್ಷೇತ್ರ ವ್ಯಾಪ್ತಿಯ 273 ಮತಗಟ್ಟೆಗಳಿಗೆ ನಿಯೋಜಿಸಲಾಯಿತು. ಚುನಾವಣೆ ಪ್ರಜಾಪ್ರಭುತ್ವದ ಹಬ್ಬ- ಮಡಿಕೇರಿಯ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿಯನ್ನಿತ್ತು, ಅಲ್ಲಿನ ಸಿಬ್ಬಂದಿ ನಿಯೋಜನೆ ಕಾರ್ಯಗಳನ್ನು ಜಿಲ್ಲಾಧಿಕಾರಿ ವೆಂಕಟ್ ರಾಜಾ ಮತ್ತು ಉಪ ವಿಭಾಗಾಧಿಕಾರಿ ವರ್ಣಿತ್ ನೇಗಿ ವೀಕ್ಷಿಸಿದರು. ಮತಗಟ್ಟೆಗಳಿಗೆ ನಿಯುಕ್ತರಾದ ಸಿಬ್ಬಂದಿಗಳಿಗೆ ಕೊನೆಯ ಹಂತದ ಮಾಹಿತಿ ಮತ್ತು ತರಬೇತಿಯನ್ನು ಈ ಸಂದರ್ಭ ನೀಡಲಾಯಿತು. ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾಧ್ಯಮಗಳೊಂದಿಗೆ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಎನ್ನುವುದು ಒಂದು ಹಬ್ಬವಾಗಿದೆ. ಇದನ್ನು ಅತ್ಯಂತ ಶಾಂತಿಯುತವಾಗಿ…
ಮಡಿಕೇರಿ ಏ.25 NEWS DESK : ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ಜೆ.ಇ.ಇ (ಮೈನ್) ಅಂತಿಮ ಹಂತದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ. ವಿದ್ಯಾರ್ಥಿಗಳಾದ ದುರ್ಗಾಶ್ರೀ ಎಮ್ 99.1312779, ನೇಹಾ ಕೆ ಉದಪುಡಿ 98.9485981, ಪ್ರಣವ್ ಟಿ ಎಮ್ 98.6313992, ಆದಿತ್ಯ ಅಲಗೌಡ ಪಾಟೀಲ್ 98.5573008, ಯುವರಾಜ್ ಬಿ ಕೆ 98.287914, ಅಕುಲ್ ಕೃಷ್ಣ ಎಮ್ ಎಸ್ 98.0229479, ಪಾರ್ಥ ಎ ಬಿ 98.0229479 ಪರ್ಸಂಟೈಲ್ ಗಳಿಸಿರುತ್ತಾರೆ. ಈ ಮೂಲಕ ಪರೀಕ್ಷೆ ಬರೆದ 441 ವಿದ್ಯಾರ್ಥಿಗಳಲ್ಲಿ 126 ವಿದ್ಯಾರ್ಥಿಗಳು ಮುಂಬರುವ ಜೆ.ಇ.ಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಪಡೆದಿರುತ್ತಾರೆ. ಈ ಎಲ್ಲಾ ವಿದ್ಯಾರ್ಥಿಗಳು ಎನ್.ಐ.ಟಿ ಅಂತಹ ಸಂಸ್ಥೆಗಳಲ್ಲಿ ಬಿ.ಇ ಪದವಿಗೆ ಪ್ರವೇಶ ಪಡೆಯುವ ಅವಕಾಶದ ಜೊತೆಗೆ ಐ.ಐ.ಟಿ ಸಂಸ್ಥೆ ಸೇರಲು ಮಾನದಂಡವಾಗಿರುವ ಜೆ.ಇ.ಇ ಅಡ್ವಾನ್ಸ್ ಪರೀಕ್ಷೆ ಬರೆಯಲು ಅರ್ಹತೆ ಪಡೆದಿರುತ್ತಾರೆ. ಜೆ.ಇ.ಇ (ಮೈನ್) ಪರೀಕ್ಷೆಯಲ್ಲಿ ಸಾಧನೆಗೈದ ಎಲ್ಲಾ…
ಮಡಿಕೇರಿ ಏ.25 NEWS DESK : ಕುಶಾಲನಗರ 220/11 ಕೆವಿ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಎಫ್9 ಬಲಮುರಿ, ಎಫ್6 ಇಂಡಸ್ಟ್ರೀಯಲ್ ಏರಿಯಾ, ಎಫ್8 ಸೋಮೇಶ್ವರ, ಎಫ್6 ಕೂಡಿಗೆ, ಎಫ್2 ಕಾವೇರಿ, ಎಫ್ 13 ಎಸ್‍ಎಲ್‍ಎನ್, ಎಫ್15 ಭುವನಗಿರಿ, ಹಾಗೂ ಎಫ್1 ಹೆಬ್ಬಾಲೆ ಫೀಢರ್‍ನಲ್ಲಿ ಎಂಐಡಿ ನಿರ್ವಹಣೆ ಕಾಮಗಾರಿಯನ್ನು ನಿರ್ವಹಿಸಬೇಕಿರುವುದರಿಂದ ಏಪ್ರಿಲ್, 28 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಹಳೆಮಾರ್ಕೆಟ್ ರಸ್ತೆ, ತ್ಯಾಗರಾಜ ರಸ್ತೆ, ಕೆಪಿಟಿಸಿಎಲ್ ಜಂಕ್ಷನ್, ಗೊಂದಿ ಬಸವನಹಳ್ಳಿ, ಮುಳ್ಳುಸೋಗೆ, ಗುಮ್ಮನಕೊಲ್ಲಿ, ಸಾಯಿ ಲೇಔಟ್, ಜನತಾ ಕಾಲೋನಿ, ಹಾರಂಗಿ, ವೀರಭೂಮಿ ಸರ್ಕಲ್, ದೊಡ್ಡತ್ತೂರು, ಬಸವನತ್ತೂರು, ಕೂಡಿಗೆ, ಕೂಡುಮಂಗಳೂರು, ಕುವೆಂಪು ಲೇಔಟ್, ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.






