ಮಡಿಕೇರಿ ಏ.26 NEWS DESK : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಮೈಸೂರಿನಲ್ಲಿ ಮತದಾನ ಮಾಡಿದರು. ಮೈಸೂರಿನ ಯಾದವಗಿರಿ ಸುನಂದ ಪಬ್ಲಿಕ್ ಶಾಲೆಯ ಮತಗಟ್ಟೆ 145 ರಲ್ಲಿ ಪತ್ನಿ, ಮಕ್ಕಳ ಜೊತೆ ಆಗಮಿಸಿ ಮತಚಲಾಯಿಸಿದರು.
ಲೇಖಕ: admin
ಮಡಿಕೇರಿ ಏ.26 NEWS DESK : ಕೊಡಗಿನಲ್ಲಿ ಮತದಾನ ಪ್ರಕ್ರಿಯೆ ಮುಂದುವರೆದಿದ್ದು, ಮಧ್ಯಾಹ್ನ 1 ಗಂಟೆಗೆ ವೇಳೆಗೆ ಶೇ.46.97 ರಷ್ಟು ಮತದಾನ ನಡೆದಿದೆ. ಮತದಾರರು ಉತ್ಸಹದಿಂದ ಮತಗಟ್ಟೆಗೆ ಆಗಮಿಸಿ ಮತಚಲಾಯಿಸುತ್ತಿದ್ದಾರೆ.
ಮಡಿಕೇರಿ ಏ.26 NEWS DESK : ಮಡಿಕೇರಿ ನಗರದ ಸಂತ ಮೈಕಲರ ಶಾಲೆಯ ಮತಗಟ್ಟೆಯಲ್ಲಿ ಹಿರಿಯ ರಾಜಕಾರಣಿ ಮಿಟ್ಟು ಚಂಗಪ್ಪ ಪತ್ನಿ ಯಶಿ ಚಂಗಪ್ಪ ಅವರೊಂದಿಗೆ 31ನೇ ಬಾರಿಗೆ ಮೊದಲಿಗರಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಕ್ಕು ಚಲಾಯಿಸಿದ್ದಾರೆ. ಎಐಸಿಸಿ ಸದಸ್ಯ, ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಹಲವು ಹುದ್ದೆಗಳನ್ನು ನಿರ್ವಹಿಸಿರುವ 82 ವರ್ಷದ ಮಿಟ್ಟು ಚಂಗಪ್ಪ ಅವರು ಯುವ ಮತದಾರರಿಗೆ ಸ್ಫೂರ್ತಿಯಾಗಿದ್ದಾರೆ.
ಮಡಿಕೇರಿ ಏ.26 NEWS DESK : ಕೊಡಗರಹಳ್ಳಿಯ ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯದ ವಾರ್ಷಿಕ ಉತ್ಸವವು ಏ.29 ರಂದು ನಡೆಯಲಿದೆ. ದೇವಾಲಯದಲ್ಲಿ ಮುಂಜಾನೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿದ್ದು, ಪೂರ್ವಾಹ್ನ 7 ಗಂಟೆಗೆ ಮಹಾಗಣಪತಿ ಹೋಮ, 12 ಗಂಟೆಗೆ ಮಹಾಪೂಜೆ ಹಾಗೂ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ತಕ್ಕಾರ ಮನೆಯಿಂದ ಭಂಡಾರ ತರುವುದು, 1.30 ರಿಂದ ಹಬ್ಬಾಚರಣೆ, 1.45 ರಿಂದ ಅನ್ನ ಸಂತರ್ಪಣೆ ನೆರವೇರಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯ ಟ್ರಸ್ಟ್‍ನ ಪ್ರಮುಖರು ಕೋರಿದ್ದಾರೆ.
ಮಡಿಕೇರಿ ಏ.26 NEWS DESK : ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣೀತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್ ಮತ್ತು ಉಪವಿಭಾಗಾಧಿಕಾರಿ ವಿನಾಯಕ್ ನಾರ್ವಡೆ ಮತಚಲಾಯಿಸಿದರು. ನಂತರ “ನಾನು ಮತ ಚಲಾಯಿಸಿದ್ದೇನೆ” ಎಂಬ ಸಂದೇಶ ಸಾರಿ ಮತದಾನ ಜಾಗೃತಿ ಮೂಡಿಸಿದರು.
ಮಡಿಕೇರಿ ಏ.26 NEWS DESK : ವಿರಾಜಪೇಟೆ ಅರಮೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅರಮೇರಿ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಮಡಿಕೇರಿ ಏ.26 NEWS DESK : ಶನಿವಾರಸಂತೆ ಸಮೀಪದ ಶಿಡಿಗಳಲೇ ಮಠದ ಶ್ರೀ ಇಮ್ಮಡಿ ಶಿವಲಿಂಗ ಸ್ವಾಮೀಜಿ ಹಾರೆಹೊಸೂರು ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸಿದರು.
ಮಡಿಕೇರಿ ಏ.26 NEWS DESK : ಲೋಕಸಭಾ ಚುನಾವಣೆಗೆ ಮುಂಜಾನೆ 7 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಜಿಲ್ಲೆಯಲ್ಲಿ 11 ಗಂಟೆ ವೇಳೆಗೆ 30.11ರಷ್ಟು ಮತದಾನ ನಡೆದಿದೆ.
ಮಡಿಕೇರಿ ಏ.26 NEWS DESK : ಕೊಡ್ಲಿಪೇಟೆಯ ಕಲ್ಲು ಮಠದ ಶ್ರೀ ಮಹಾಂತ ಸ್ವಾಮೀಜಿ ಕೊಡ್ಲಿಪೇಟೆ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಮಡಿಕೇರಿ ಏ.26 NEWS DESK : ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಮತಚಲಾಯಿಸಿದರು. ಪತ್ನಿ ದಿವ್ಯ ಅವರೊಂದಿಗೆ ಬೇಳೂರು ಗ್ರಾಮ ಪಂಚಾಯಿತಿ ಬಜೆಗುಂಡಿಯ ಬಳಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ್ ಸಂಖ್ಯೆ74(ನಗರೂರು) ರಲ್ಲಿ ಮತದಾನ ಮಾಡಿದರು.






