ಲೇಖಕ: admin

ನಾಪೋಕ್ಲು ಏ.24 NEWS DESK : ಬೇಂಗೂರು ಗ್ರಾಮದ ಶ್ರೀ ಕಡಪಾಲಪ್ಪ ದೇವರ ಪುನರ್ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ದೇವಾಲಯದ ಅರ್ಚಕ ರಾಧಾಕೃಷ್ಣ ಭಟ್ ಉಪಸ್ಥಿತಿಯಲ್ಲಿ ವೈದಿಕ ವಿದ್ವಾಂಸ ಕಳತೂರು ವೇದಮೂರ್ತಿ ಬ್ರಹ್ಮಶ್ರೀ ಉದಯತಂತ್ರಿ ನೇತೃತ್ವದಲ್ಲಿ, ರಂಜಾಳ ಪೌರೋಹಿತ್ಯ ವಾಚಸ್ಪತಿ ವೇದಮೂರ್ತಿ ಗುರುರಾಜ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆಯಿತು. ಪ್ರತಿಷ್ಠಾಪನೆಯ ಬಳಿಕ ಮಧ್ಯಾಹ್ನ ಹೂವಿನಿಂದ ಅಲಂಕೃತ ದೇವರ ಬಿಂಬಕ್ಕೆ ವಿಶೇಷ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನೆರವೇರಿತು. ಈ ಸಂದರ್ಭ ಕಾರ್ಯಕ್ರಮದಲ್ಲಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ತೇಲಪಂಡ ನಂದ ಮಂದಣ್ಣ, ಉಪಾಧ್ಯಕ್ಷ ಕುಂಚೆಟ್ಟಿರ ಸುಬ್ಬಯ್ಯ, ಕಾರ್ಯದರ್ಶಿ ಕುಂಚೆಟ್ಟಿರ ಗೋಪಾಲ,ಖಜಾಂಚಿ ಪಟ್ಟಮಾಡ ಅಶೋಕ್, ಸದಸ್ಯರಾದ ಕಲ್ಲು ಮಾಡಂಡ ವಾಸು, ಕುಂಚೆಟ್ಟಿರ ರಮೇಶ್, ಚೋಕಿರ ಪೊನ್ನಣ್ಣ, ಕಲ್ಲು ಮಾಡಂಡ ಅಶೋಕ್, ಕುಂಚೆಟ್ಟಿರ ರಮೇಶ್, ಚೋಕಿರ ಪೊನ್ನಣ್ಣ, ಕೀಪಾಡಂಡ ವಾಸು, ಬೊಳ್ಳಾರ್ಪಂಡ ಚಂಗಪ್ಪ, ತಕ್ಕಮುಖ್ಯಸ್ಥರು, ಚುನಾಯಿತ ಪ್ರತಿನಿಧಿಗಳು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು…

Read More

ನಾಪೋಕ್ಲು ಏ.23 NEWS DESK : ಜೀವನದಲ್ಲಿ ನಾವು ಸುಖ, ಶಾಂತಿ, ನೆಮ್ಮದಿಯನ್ನು ಬಯಸುತ್ತೇವೆ. ನಾವು ಬಯಸಿದ ಕ್ಷಣ ಎಲ್ಲವೂ ನಮ್ಮ ಬಳಿಗೆ ಬರುವುದಿಲ್ಲ. ಅವುಗಳನ್ನು ಪಡೆಯಲು ಸತತ ಶ್ರಮಬೇಕು. ಶ್ರಮದ ಜೊತೆಗೆ ದೇವರ ಅನುಗ್ರಹ ಇದ್ದರಷ್ಟೇ ಸುಖ, ಶಾಂತಿ, ನೆಮ್ಮದಿಯನ್ನು ಗಳಿಸಲು ಸಾಧ್ಯ ಎಂದು ಉಡುಪಿ ಪೇಜಾವರ ಅದೋಕ್ಷಜ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ಬೇಂಗೂರು ಗ್ರಾಮದ ಶ್ರೀ ನಾಡುಕಡಪಾಲಪ್ಪ ದೇವಾಲಯದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಆಶೀರ್ವಚನ ನೀಡಿದರು. ದೇವರು ಗುಡಿಯಲ್ಲಿ ಮಾತ್ರ ನೆಲೆಸಿರುವುದಲ್ಲ. ಸಮಾಜದ ಎಲ್ಲರ ಹೃದಯದಲ್ಲೂ ನೆಲೆಸಿದ್ದಾರೆ. ಬದುಕಿಗಾಗಿ ನಾವು ಒಂದು ಬುತ್ತಿಯನ್ನು ಆಯ್ದುಕೊಂಡಿರುತ್ತೇವೆ. ಅದು ಬರೀ ಹಣ ಸಂಪಾದನೆಗಾಗಿ ಮಾತ್ರ ಅಲ್ಲ. ಆ ವೃತ್ತಿಯ ಮೂಲಕ ಸಮಾಜದ ಸೇವೆ ಮಾಡುತ್ತಿದ್ದೇವೆ ಎನ್ನುವ ಅರಿವು ನಮ್ಮಲ್ಲಿದ್ದರೆ ವೃತ್ತಿಗೆ ಗೌರವವಿರುತ್ತದೆ. ವೃತ್ತಿಯಲ್ಲಿ ಮೋಸ, ಅವ್ಯವಹಾರಕ್ಕೆ ಎಡೆ ಇರಬಾರದು, ಮೋಸ ಅವ್ಯವಹಾರ ರಹಿತವೃತ್ತಿಯೇ ದೇವರ ಪೂಜೆ. ಭಗವಂತನ ಆರಾಧನೆ ಎಂಬುದು…

Read More

ನಾಪೋಕ್ಲು ಏ.23 NEWS DESK  : ಜಿಲ್ಲೆಯಲ್ಲಿ ವಿವಿಧ ಕ್ರೀಡಾ ಕೂಟಗಳು ಯಶಸ್ವಿಯಾಗಿ ನಡೆಯುತ್ತಿವೆ. ಇದೇ ರೀತಿ ಮುಂಬರುವ ವರ್ಷಗಳಲ್ಲೂ ಕ್ರೀಡಾ ಉತ್ಸವಗಳು ಜರುಗಲಿ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮತ್ತು ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು. ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯ ಕ್ರೀಡಾಂಗಣದಲ್ಲಿ ಬೊಟ್ಟೋಳಂಡ ಕುಟುಂಬಸ್ಥರು ಆಯೋಜಿಸಿರುವ ಮೂರನೇ ವರ್ಷದ ಬೊಟ್ಟೋಳಂಡ ಕಪ್ ಕೊಡವ ಕೌಟುಂಬಿಕ ಹಗ್ಗ ಜಗ್ಗಾಟ ಪಂದ್ಯಾವಳಿಯ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹಾಕಿ ಅಕಾಡೆಮಿಯ ಮನವಿಯಂತೆ ಅಕಾಡೆಮಿ ಸ್ಥಾಪನೆಗಾಗಿ 5 ಎಕರೆ ಜಾಗವನ್ನು ತೋರದಲ್ಲಿ ಗುರುತಿಸಲಾಗಿದೆ. ಹೋಬಳಿವಾರು ಕ್ರೀಡಾ ಮೈದಾನದ ಪುನಶ್ಚೇತನ ಮಾಡಲು ಕ್ರಮ ಕೈಗೊಳ್ಳಲಾಗುವುದು. ಗ್ರಾಮ ಮಟ್ಟದಲ್ಲೂ ಕ್ರೀಡಾ ಮೈದಾನಗಳನ್ನು ಅಭಿವೃದ್ಧಿಪಡಿಸ ಬೇಕು. ಹಾಕಿ ಮಾತ್ರವಲ್ಲ. ಎಲ್ಲಾ ಕ್ರೀಡೆಗಳನ್ನು ಗ್ರಾಮೀಣ ಪ್ರದೇಶದ ಪ್ರತಿಭೆಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವಂತಾಗಬೇಕು .ಆ ಪ್ರತಿಭೆಗಳಿಗೆ ಸೂಕ್ತ ಅವಕಾಶ ಕಲ್ಪಿಸುವುದು ಅಗತ್ಯ ಎಂದರು. ಕರ್ನಾಟಕ ಸರ್ಕಾರದ ಚೀಫ್ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ತಿತೀರ…

Read More

ಸುಂಟಿಕೊಪ್ಪ ಏ.24 NEWS DESK : ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮಾತ್ರ ಗುರುತಿಸದೇ ಪ್ರಾದೇಶಿಕ ಪಕ್ಷವಾದ ಕೆ.ಆರ್ ಪಕ್ಷದ ಕಡೆಗೂ ಒಲವು ತೋರಿಸಿದರೆ ಜನ ಸೇವೆ, ದೇಶ ಸೇವೆಗೂ ನಾವು ಕಟ್ಟಿಬದ್ಧರಾಗಿ ಸಿದ್ದರಿದ್ದೇವೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕೊಡಗು- ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಎಸ್.ಪ್ರವೀಣ್ ಹೇಳಿದರು. ಸುಂಟಿಕೊಪ್ಪ ಕನ್ನಡ ವೃತ್ತದಲ್ಲಿ ಮತಯಾಚನೆ ಮಾಡಿ ಅವರು ಮಾತನಾಡಿದರು. ನಮ್ಮ ಪಕ್ಷ ಕಳೆದ ಹಲವು ವರ್ಷಗಳಿಂದಲೂ ಜನ ಪರವಾದ ಸೇವೆಗಳು ಸೂಕ್ತ ರೀತಿಯಲ್ಲಿ ದೊರಯಬೇಕೆಂದು ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದೆ. ಬಡವರ ಸೇವೆ, ಜನಪರ ಕಾಳಜಿಯೊಂದಿಗೆ ನಿರಂತರವಾಗಿ ಕೆಲಸ ಮಾಡುವ ಮೂಲಕ ಬಡವರ ಪರವಾಗಿ ನಿಂತಿದ್ದೇವೆ. ಭ್ರಷ್ಟಚಾರದಿಂದ ಕೂಡಿರುವ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಪಕ್ಷವನ್ನು ತೊಡೆದು ಹಾಕಿ ಪ್ರಾದೇಶಿಕ ಪಕ್ಷವಾದ ಕೆಆರ್‍ಎಸ್ ಪಕ್ಷವನ್ನು ಗೆಲ್ಲಿಸಿ ಅರ್ಹ, ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು. ನಂತರ ಪಟ್ಟಣದ ಅಂಗಡಿ, ಮನೆ ಮನೆಗೆ ತೆರಳಿ ಭಿತ್ತಿಪತ್ರ ನೀಡಿ ಮತಯಾಚನೆ…

Read More

ಸುಂಟಿಕೊಪ್ಪ ಏ.24 NEWS DESK : ಕೊಡಗರಹಳ್ಳಿ ಮಾರುತಿ ನಗರದ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ವಾರ್ಷಿಕೋತ್ಸವ ಹಾಗೂ ಹನುಮಾನ್ ಜಯಂತಿ ಶ್ರದ್ಧಾಭಕ್ತಿಯಿಂದ ನಡೆಯಿತು. ಮುಂಜಾನೆ ಪುಣ್ಯಾಹ ಗಣಪತಿ ಹೋಮ, ನವಕಲಶ ಪೂಜೆ, ಕಲಶಾಭಿಷೇಕ, ಮಂತ್ರಾಕ್ಷತೆ, ಮಹಾಪೂಜೆ ಹಾಗೂ ಮಹಾ ಮಂಗಳಾರತಿ ನಡೆಯಿತು. ನಂತರ ತೀರ್ಥ ಪ್ರಸಾದ ವಿತರಿಸಲಾಯಿತು. ದಿನದ ವಿಶೇಷ ಪೂಜಾ ಕೈಕರ್ಯಗಳನ್ನು ದೇವಾಲಯದ ಆರ್ಚಕರಾದ ನರಸಿಂಹ ಭಟ್ ಹಾಗೂ ಗಣೇಶ್ ಶರ್ಮಾ ನೇರವೇರಿಸಿದರು. ವಿವಿಧೆಡೆಯಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ನೆರೆದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಿತು.

Read More

ಮಡಿಕೇರಿ ಏ.23 NEWS DESK : ಮೈಸೂರು- ಕೊಡಗು ಲೋಕಸಭಾ ಚುನಾವಣೆಯ ಮತದಾನದ ದಿನವಾದ ಏ.26 ಸಮೀಪಿಸುತ್ತಿದೆ. ಕೊಡಗು ಜಿಲ್ಲೆಯಾದ್ಯಂತ ಕಾಂಗ್ರೆಸ್ ಬಿರುಸಿನ ಪ್ರಚಾರ ನಡೆಸಿದೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ದಕ್ಷಿಣ ಕೊಡಗಿನ ಹಲವು ಭಾಗಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಗೌಡ ಅವರ ಪರ ಮತಯಾಚಿಸಿದರು. ರಾಜ್ಯ ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿ ಯೋಜನೆಗಳು ಮತ್ತು ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ ವೈಫಲ್ಯಗಳನ್ನು ಮತದಾರರೆದುರು ವಿವರಿಸಿದರು. ತೋರ ಗ್ರಾಮ, ಕೆದಮಳ್ಳೂರು ಪಂಚಾಯತಿ ವ್ಯಾಪ್ತಿಯ  ಬಾರಿಕಾಡು ಪೈಸಾರಿ ಸೇರಿದಂತೆ ಅನೇಕ ಭಾಗಗಳಿಗೆ ಭೇಟಿ ನೀಡಿ ಎಂ.ಲಕ್ಷ್ಮಣ ಅವರ ಪರ  ಮತಯಾಚಿಸಿದರು. ಈ ಸಂದರ್ಭ ಪಕ್ಷದ  ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

Read More

ಸುಂಟಿಕೊಪ್ಪ ಏ.23 NEWS DESK : ಸುಂಟಿಕೊಪ್ಪ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಮೈಸೂರು-ಕೊಡಗು ಲೋಕಸಭಾ ಅಭ್ಯರ್ಥಿ ಯದುವೀರ್ ಪರ ಮತಯಾಚನೆ ನಡೆಸಿದರು. ಬಿಜೆಪಿ ನಗರಾಧ್ಯಕ್ಷ ಧನುಕಾವೇರಪ್ಪ ಅವರ ನೇತೃತ್ವದಲ್ಲಿ ಪಟ್ಟಣದ ಮನೆ, ಅಂಗಡಿಗಳಿಗೆ ತೆರಳಿ ಯದುವೀರ್ ಅವರನ್ನು ಗೆಲ್ಲಿಸಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು. ಮತಯಾಚನೆ ಮಾಡುವುದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ, ನಾಯಕರುಗಳಾದ ಅಮೀತ್ ಶಾ, ಯಡಿಯೂರಪ್ಪ,ಅಭ್ಯರ್ಥಿ ಯದುವೀರ್, ಸ್ಥಳೀಯ ನಾಯಕರು ಮತ್ತು ಪಕ್ಷದ ಪರ ಘೋಷಣೆ ಕೂಗಿದರು. ನಂತರ ಕಾಲ್ನನಡಿಗೆ ಮೂಲಕ ಗದ್ದೆಹಳ್ಳದಿಂದ ಪಟ್ಟಣದವರೆಗೆ ನೂರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಿತ್ತಿ ಪತ್ರ ವಿತರಿಸಿ ಮತಯಾಚನೆ ಮಾಡಿದರು. ಮುಖಂಡರಾದ ಪಿ.ಆರ್.ಸುನಿಲ್ ಕುಮಾರ್, ವಿಘ್ನೇಶ್, ಬಿ.ಕೆ.ಮೋಹನ್, ಈಶ್ವರ, ವಸಂತಿ,ಸಿಸಿ.ಸುನಿಲ್, ಓಡಿಯಪ್ಪನ ಸುದೇಶ್, ಅನಿಲ್, ರಾಜ, ಸಹದೇವನ್, ಬಿ.ಕೆ.ಪ್ರಶಾಂತ್, ಶಾಂತಿ ಸೇರಿದಂತೆ ಕಾರ್ಯಕರ್ತರು ಇದ್ದರು.

Read More

ಸೋಮವಾರಪೇಟೆ ಏ.23 NEWS DESK : ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಅಂಕನಹಳ್ಳಿ ಶ್ರೀ ಮನೆಹಳ್ಳಿ ತಪೋಕ್ಷೇತ್ರದಲ್ಲಿ ತಾ. 24 ಮತ್ತು 25ರಂದು ಶ್ರೀ ಗುರುಸಿದ್ಧವೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ನೆರವೇರಲಿದ್ದು, ಮೂರು ದಿನಗಳ ಕಾಲ ಮಠದ ಆವರಣದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದು ಮಠಾಧೀಶರಾದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. 23ರಂದು ಬೆಳಿಗ್ಗೆ 8 ಗಂಟೆಗೆ ಮಠದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಪ್ರಸಕ್ತ ವರ್ಷದ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. ಸಂಜೆ 6.30ರಿಂದ ಶ್ರೀ ಸ್ವಾಮಿಗೆ ಕಂಕಣ ಧಾರಣೆ, ಮಹಾಮಂಗಳಾರತಿ ನೆರವೇರಲಿದೆ ಎಂದರು. ತಾ. 24ರಂದು ಬೆಳಿಗ್ಗೆ 8 ಗಂಟೆಗೆ ಶ್ರೀಮದನಾಧಿ ಅನಘ ನಿರಂಜನ ಜಂಗಮ ಪೂಜೆ, ಸಂಜೆ 6.30ಕ್ಕೆ ಸೂರ್ಯ ಮಂಡಲೋತ್ಸವ, 8.30ಕ್ಕೆ ದಾಸೋಹ ನಡೆಯಲಿದೆ. ತಾ, 25ರಂದು ಬೆಳಿಗ್ಗೆ 5 ಗಂಟೆಗೆ ಶ್ರೀಕ್ಷೇತ್ರನಾಥ ವೀರಭದ್ರೇಶ್ವರ ಸ್ವಾಮಿಯವರ ಪ್ರೀತ್ಯರ್ಥ ದುಗ್ಗಳ ಸೇವೆ ಹಾಗೂ ಅಗ್ನಿಕೊಂಡೋತ್ಸವ ಸೇವೆ ನಡೆಯಲಿದೆ. 7…

Read More

ಮಡಿಕೇರಿ ಏ.23 NEWS DESK :  ಮಡಿಕೇರಿ ತಾಲ್ಲೂಕು ಚೆಂಬು ಗ್ರಾಮದ ಊರುಬೈಲು ಮತ್ತು ಕುದುರೆಪಾಯ ಭಾಗದ ಸುಮಾರು 20 ಕ್ಕೂ ಹೆಚ್ಚು ಕಾಂಗ್ರೆಸ್ ಹಾಗೂ ವಿವಿಧ ಪಕ್ಷಗಳ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು. ಇಂದು ಬಾಲಂಬಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ವಿಧಾನಸಭಾ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಹಾಗೂ ಬಿಜೆಪಿ  ಜಿಲ್ಲಾದ್ಯಕ್ಷ ನಾಪಂಡ ರವಿ ಕಾಳಪ್ಪ ಅವರು ಕಾರ್ಯಕರ್ತರನ್ನು ಬರಮಾಡಿಕೊಂಡರು. ಬಿಜೆಪಿ ಮಂಡಲ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಜಿಲ್ಲಾ ವಕ್ತಾರ ಸುಬ್ರಹ್ಮಣ್ಯ ಉಪಾಧ್ಯಾಯ, ಪಯಸ್ವಿನಿ ಸೊಸೈಟಿ ಅಧ್ಯಕ್ಷ ಅನಂತ್ ಊರುಬೈಲು, ಪಂಚಾಯತ್ ಅದ್ಯಕ್ಷ ತೀರ್ಥರಾಮ ಪೂಜಾರಿ ಗದ್ದೆ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

Read More

ಮಡಿಕೇರಿ ಏ.23 NEWS DESK : ಮೊಬೈಲ್ ಬಳಕೆ ಕಡಿಮೆ ಮಾಡಿ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಿ, ಕತ್ತಲು ಆವರಿಸಿದ ನಂತರ ಗ್ಯಾಜ಼ಟಿಯರ್ ಗಳಿಂದ ದೂರ ಇರಿ. ಸರಿಯಾದ ಆಹಾರ ಕ್ರಮವನ್ನು, ಬದುಕಿನ ನಿರ್ವಹಣೆಯನ್ನು ರೂಪಿಸಿಕೊಳ್ಳುವ ಮೂಲಕ ಆರೋಗ್ಯವಂತರಾಗಿ ಬದುಕಿ ಎಂದು ನೇತ್ರ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಪ್ರಶಾಂತ್ ಸಿ.ಆರ್ ಕರೆ ನೀಡಿದ್ದಾರೆ. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ರೆಡ್ ಕ್ರಾಸ್, ಎನ್ ಸಿಸಿ, ಎನ್ ಎಸ್ ಎಸ್, ಇಸಿ/ಸಿಸಿ, ಐಕ್ಯೂಎಸಿ ಹಾಗೂ ಸೂಕ್ಷ್ಮ ಜೀವವಿಜ್ಞಾನ ವಿಭಾಗದ ವತಿಯಿಂದ ನಡೆದ ರಕ್ತದಾನ ಶಿಬಿರ ಹಾಗೂ ಕಣ್ಣಿನ ಆರೋಗ್ಯ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸೂರ್ಯನಮಸ್ಕಾರ, ಬಸ್ಕಿ ಹೊಡೆಯುವ ಮತ್ತು ಭಾರ ಎತ್ತುವ ಕ್ರಮಗಳಿಂದ ನಮ್ಮ ಆರೋಗ್ಯವನ್ನು ಸಮತೋಲನದಲ್ಲಿಟ್ಟುಕೊಳ್ಳಬಹುದು ಎಂದರು. ಕಣ್ಣು ದೇಹದ ಅತ್ಯಂತ ಅಮೂಲ್ಯ ಅಂಗ. ಅದನ್ನು ಜತನದಿಂದ ಕಾಪಾಡಿಕೊಳ್ಳಬೇಕು. ಪ್ರೊಟಿನ್, ವಿಟಮಿನ್ ಯುಕ್ತ ಆಹಾರ ಸೇವಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಸಂಪನ್ಮೂಲ ವ್ಯಕ್ತಿ, ರೋಗ ಶಾಸ್ತ್ರಜ್ಞರಾದ ಡಾ.ಗಾಯತ್ರಿ…

Read More