ಲೇಖಕ: admin

ಮಡಿಕೇರಿ ಏ.23 NEWS DESK : ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ನಿವೃತ್ತ ಜನರಲ್ ಮುಕುಂದ್ ನಾರವಣಿ ಪಿವಿಎಸ್‌ಎಂ, ಎವಿಎಸ್ ಎಂ,ಎಸ್‌ಎಂ, ವಿಎಸ್‌ಎಂ ಭೇಟಿ ನೀಡಿದರು. ಜನರಲ್ ತಿಮ್ಮಯ್ಯ ಅವರ ಸೇನಾ ಜೀವನದ ಕುರಿತಂತೆ ಸಮಗ್ರವಾಗಿ ಸ್ಮಾರಕ ಭವನದಲ್ಲಿ ಮಾಹಿತಿ ನೀಡಿರುವುದನ್ನು ಮುಕುಂದ್ ನಾರವಣಿ ಶ್ಲಾಘಿಸಿದರು. ಜನರಲ್ ತಿಮ್ಮಯ್ಯ ಜೀವನ ಯುವ ಪೀಳಿಗೆಗೆ ಸದಾ ಆದರ್ಶಪ್ರಾಯ. ಇಂತಹ ಸ್ಮಾರಕ ಭವನ ವೀಕ್ಷಣೆಯಿಂದ ಜನರಿಗೆ ಭಾರತೀಯ ಸೇನೆಯ ಹೆಮ್ಮೆಯ ಧೀರಯೋಧರ ಸಾಹಸಗಾಥೆಗಳು ತಿಳಿದಂತಾಗುತ್ತದೆ ಎಂದರಲ್ಲದೇ ಸ್ಮಾರಕ ಭವನವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲ್ಪಡುತ್ತಿರುವುದನ್ನೂ ಶ್ಲಾಘಿಸಿದರು. ಸ್ಮಾರಕ ಭವನದ ವ್ಯವಸ್ಥಾಪಕ ಸುಬೇದಾರ್ ಮೇಜರ್ ಗೌಡಂಡ ತಿಮ್ಮಯ್ಯ ಅವರು ಈ ಸಂದರ್ಭ ಸ್ಮಾರಕ ಭವನದ ಮಾಹಿತಿ ನೀಡಿದರು.

Read More

ಮಡಿಕೇರಿ ಏ.23 NEWS DESK : ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಸಂಬಂಧ ಏಪ್ರಿಲ್, 25 ರಂದು ಮಸ್ಟರಿಂಗ್ ಕಾರ್ಯ ನಡೆಯಲಿದ್ದು, ಈ ಮಸ್ಟರಿಂಗ್ ಕೇಂದ್ರಗಳಿಗೆ ಮತಗಟ್ಟೆ ಅಧಿಕಾರಿಗಳನ್ನು ಮತ್ತು ಚುನಾವಣಾ ಸಿಬ್ಬಂದಿಗಳನ್ನು ತಮ್ಮ ತಮ್ಮ ಕೇಂದ್ರ ಸ್ಥಾನದಿಂದ ಕೆಎಸ್‌ಆರ್‌ಟಿಸಿ ಬಸ್ಸುಗಳ ಮುಖಾಂತರ ಕರೆತರಲು ವ್ಯವಸ್ಥೆ ಮಾಡಲಾಗಿದೆ. ಈ ಸಂಬAಧ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗಳನ್ನು ತಮ್ಮ ತಮ್ಮ ಕೇಂದ್ರ ಸ್ಥಾನದಿಂದ ಮಸ್ಟರಿಂಗ್ ಕೇಂದ್ರಗಳಿಗೆ ಕರೆದುಕೊಂಡು ಹೋಗಲು ಕೆಎಸ್‌ಆರ್‌ಟಿಸಿ ಬಸ್ಸುಗಳನ್ನು ನಿಯೋಜಿಸಲಾಗಿದ್ದು, ಹೊರಡುವ ಮಾರ್ಗದ ವಿವರ ಇಂತಿದೆ. ಬಸ್ಸು ಹೊರಡುವ ಸ್ಥಳ, ಸಮಯ, ಮಾರ್ಗ, ಬಸ್ ತಲುಪಬೇಕಾದ ಮಸ್ಟರಿಂಗ್ ಕೇಂದ್ರದ ಹೆಸರು ಇಂತಿದೆ. ಏಪ್ರಿಲ್, 25 ರಂದು ಬೆಳಗ್ಗೆ 7 ಗಂಟೆಗೆ ನಗರದ ಗಾಂಧಿ ಮೈದಾನದಿಂದ ಬಸ್ ಹೊರಟು ಮೂರ್ನಾಡು ಮಾರ್ಗವಾಗಿ ಸಂಚರಿಸಿ ವಿರಾಜಪೇಟೆ ಸಂತ ಅನ್ನಮ್ಮ ಪ್ರೌಢ ಶಾಲೆ ಮಸ್ಟರಿಂಗ್ ಕೇಂದ್ರಕ್ಕೆ ತಲುಪಲಿದೆ. ನಗರದ ಗಾಂಧಿ ಮೈದಾನದಿಂದ ಬೆಳಗ್ಗೆ 7 ಗಂಟೆಗೆ ಬಸ್ ಹೊರಟು ಬೆಟ್ಟಗೇರಿ-ನಾಪೋಕ್ಲು-ಕಕ್ಕಬೆ-ಪಾರಾಣೆ ಮಾರ್ಗವಾಗಿ ಸಂಚರಿಸಿ ವಿರಾಜಪೇಟೆ…

Read More

ಮಡಿಕೇರಿ ಏ.23 NEWS DESK : ಸಂವಿಧಾನವನ್ನು ನಾಶ ಮಾಡುವ ಅಜೆಂಡಾ ಹೊಂದಿರುವ ಕೇಂದ್ರದ ಬಿಜೆಪಿ ನೇತೃತ್ವದ ಸರಕಾರವನ್ನು ಅಧಿಕಾರದಿಂದ ಹೊರಗಿಟ್ಟು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಈ ಬಾರಿಯ ಲೋಕಸಭಾ ಚುನಾವಣೆ ಅಸ್ತ್ರವಾಗಿದೆ ಎಂದು ರಾಜ್ಯದ ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ. ನಗರದ ಡಾ.ಅಂಬೇಡ್ಕರ್ ಭವನದಲ್ಲಿ ನಡೆದ ಕೊಡಗು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಸಮಾವೇಶವನ್ನು ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿ ಮಾತನಾಡಿದ ಅವರು, ‘ಮತ’ ಎಂದರೆ ಹಕ್ಕು ಮತ್ತು ಕರ್ತವ್ಯವಾಗಿದೆ. ಈ ರಾಷ್ಟ್ರದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನದ ಪರವಾಗಿರುವವರನ್ನು ಆಯ್ಕೆ ಮಾಡಿ ಎಂದು ಕರೆ ನೀಡಿದರು. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ರಾಷ್ಟ್ರಕ್ಕೆ ನೀಡಿರುವ ಸಂವಿಧಾನಕ್ಕೆ ವಿರುದ್ಧವಾಗಿ 1947 ರಲ್ಲಿ ಜನಸಂಘ ತನ್ನದೇ ಆದ ‘ಜನ ಸಂಘಿ ಸಂವಿಧಾನ’ವನ್ನು ಮಾಡಿಕೊಂಡಿತ್ತು. ಆ ಮೂಲಕ ಈ ರಾಷ್ಟ್ರದಲ್ಲಿ ಧರ್ಮ ಸಂಸತ್ ಹೇರುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದಿಂದ ಇದರ ಭಾಗವಾಗಿಯೇ “ಒಂದು…

Read More

ಮಡಿಕೇರಿ ಏ.23 NEWS DESK: ಕೊಡಗು ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಹಾಗೂ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ಮೇ 4 ಮತ್ತು 5 ರಂದು ಕೊಡಗಿನ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಪಂದ್ಯಾವಳಿ-2024 ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅಸೋಸಿಯೇಷನ್ ಅಧ್ಯಕ್ಷ ನೆರವಂಡ ಜಿ.ಜೀವನ್ ಹಾಗೂ ಕ್ರೀಡಾ ಸಮಿತಿ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದರು. ಪಂದ್ಯಾವಳಿ 11, 13, 15, 17 ಮತ್ತು 19 ವರ್ಷದೊಳಗಿನ ಬಾಲಕ, ಬಾಲಕಿಯರಿಗಾಗಿ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗದಲ್ಲಿ ಹಾಗೂ 15 ಮತ್ತು 19 ವರ್ಷದ ಬಾಲಕ, ಬಾಲಕಿಯರಿಗಾಗಿ ಮಿಶ್ರ ಡಬಲ್ಸ್ ಪಂದ್ಯಾವಳಿ ನಡೆಯಲಿದೆ. ಪಂದ್ಯಾವಳಿಯ ಪ್ರಥಮ ಹಾಗೂ ದ್ವಿತೀಯ ವಿಜೇತರಿಗೆ ಆಕರ್ಷಕ ನಗದು, ಟ್ರೋಫಿ ಮತ್ತು ಪ್ರಮಾಣಪತ್ರವನ್ನು ನೀಡಲಾಗುವುದು. ಬಿಎಐ ಮತ್ತು ಕೆಬಿಎ ಬ್ಯಾಡ್ಮಿಂಟನ್ ನಿಯಮಗಳಂತೆ ಪಂದ್ಯಾವಳಿ ನಡೆಯಲಿದ್ದು, ಅಂಡರ್ 11-2014, 13-2012,…

Read More

ಮಡಿಕೇರಿ ಏ.23 NEWS DESK: ಹನ್ನೆರಡನೇ ಶತಮಾನದಲ್ಲಿ ಸಮಾಜದ ಸ್ವಾಸ್ಥ್ಯ ಕದಡುತ್ತಿದ್ದವರನ್ನು ಪರಿವರ್ತಿಸಿ ಅವರಲ್ಲಿ ಅರಿವಿನ ಜ್ಯೋತಿ ಹಚ್ಚಿದವರು ಹನ್ನೆರಡನೇ ಶತಮಾನದ ಶ್ರೇಷ್ಠ ವಚನಕಾರ್ತಿ ಅಕ್ಕ ಮಹಾದೇವಿ. ಇವರ ಬದುಕು ಇಂದಿನ ಹೆಣ್ಣು ಮಕ್ಕಳಿಗೆ ಮಾದರಿಯಾಗಿದೆ ಎಂದು ಉಪನ್ಯಾಸಕಿ ಹೆಚ್.ಎಸ್.ಅನಿತಾ ಅಭಿಪ್ರಾಯಪಟ್ಟಿದ್ದಾರೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದಿಂದ ಕುಶಾಲನಗರದ ಕನ್ನಡ ಭಾರತಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಕ್ಕ ಮಹಾದೇವಿಯ ಬದುಕು ಅನುಕರಣೀಯವಾಗಬೇಕಿದೆ ಎಂದರು. ತನು – ಮನಗಳಲ್ಲಿ ಪರಿಶುದ್ಧತೆ, ಅರಿವು, ಭಾವಶುದ್ದಿ, ತ್ರಿಕರಣ ಶುದ್ದಿ, ಸಹೃದಯತೆ ಇದ್ದಾಗ ಮಾತ್ರ ಶಿವನು ಭಕ್ತನ ಪೂಜೆಯನ್ನು ಸ್ವೀಕರಿಸುತ್ತಾನೆ ಎನ್ನುವ ಆಶಯದ ಮೂಲಕ ನಿಜವಾದ ಭಕ್ತನಲ್ಲಿ ಇರಬೇಕಾದ ಅಂತರಂಗ ಶುದ್ದಿಯನ್ನು ಇಡೀ ಜೀವನದ ಉದ್ದಕ್ಕೂ ಪ್ರತಿಪಾದಿಸಿದರು. ಅಲ್ಲದೇ ವ್ಯಕ್ತಿ ತಾನು ಒಳ್ಳೆಯವನಾದರೆ ಸಮಾಜವೂ ಒಳ್ಳೆಯದಾಗುತ್ತದೆ ಎಂಬ ಧ್ಯೇಯ ಅಕ್ಕಮಹಾದೇವಿಯಲ್ಲಿತ್ತು. ಅಂತಹ ಶ್ರೇಷ್ಠ ವಚನಕಾರ್ತಿಯ ಬದುಕು ಇಂದಿನ ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು ಎಂದು ಅಕ್ಕನ ವಚನಗಳನ್ನು…

Read More

ಮಡಿಕೇರಿ ಏ.23 NEWS DESK : ಮಡಿಕೇರಿ ನಗರದ ವಿದ್ಯಾ ನಗರ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀಶಕ್ತಿ ಗಣಪತಿ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವ ಏ.24, 25 ಮತ್ತು 26 ರಂದು ನಡೆಯಲಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಸಿ.ಎಂ.ಕಿಶೋರ್ ತಿಳಿಸಿದ್ದಾರೆ. ಏ.24 ರಂದು ಸಂಜೆ ಬ್ರಹ್ಮಶ್ರೀ ವೇದವ್ಯಾಸ ತಂತ್ರಿ ಪೇರಾಜೆ ಅವರ ಆಗಮನ, 7 ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ವಾಚನ ಪ್ರಸಾದ ಸಂಗ್ರಹ ಸ್ಥಳ ಶುದ್ಧಿ ಸುದರ್ಶನ ಹೋಮ, ವಾಸ್ತು ಬಲಿ, ಪ್ರಸಾದ ಬಲಿ, ಪೂಜಾ ಪ್ರಸಾದ ವಿತರಣೆ ನಡೆಯಲಿದೆ. ಏ.25 ರಂದು ಬೆಳಗ್ಗೆ 6 ಗಂಟೆಗೆ ಗಣಪತಿ ಹೋಮ, ಪ್ರಾಯಶ್ಚಿತ ಹೋಮ, ಹೋಮ ಕಲಶಾಭಿಷೇಕ, ಅನುಜ್ಞಾ ಕಲಶ ಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆಯಾಗಲಿದೆ. ಸಂಜೆ ಬಿಂಬಶುದ್ಧಿ, ಕಲಶಪೂಜೆ-ಕಲಶಾಭಿಷೇಕ, ಶಯ್ಯಪೂಜೆ, ಬಿಂಬ ಶಯ್ಯಾಗಮನ ಪೂಜೆ, ಕಳಶ ಮಂಡಲ ರಚನೆ ವಿಧಿ ವಿಧಾನಗಳು ಜರುಗಲಿದೆ. ಏ.26 ರಂದು ಬೆಳಗ್ಗೆ 9.24 ಗಂಟೆಗೆ ನೂತನ ದೇವಾಲಯದಲ್ಲಿ ಶ್ರೀ…

Read More

ಮಡಿಕೇರಿ ಏ.22 NEWS DESK : ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಡಿಕೇರಿ ನಗರದ ಬೂತ್ 214 ಹಾಗೂ 215 ರಲ್ಲಿ ಮೈಸೂರು-ಕೊಡಗು ಲೋಕಸಭಾ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರ ಪರ ಬಿರುಸಿನ ಮತ ಪ್ರಚಾರ ನಡೆಯಿತು. ಕೊಡಗು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್, ಡಿಸಿಸಿ ಸದಸ್ಯರಾದ ರಜಾಕ್, ಖಲೀಲ್ ಭಾಷ, ಲಿಯಾಕತ್ ಅಲಿ, ಅಲ್ಪಸಂಖ್ಯಾತ ಮಡಿಕೇರಿ ಬ್ಲಾಕ್ ಅಧ್ಯಕ್ಷ ಕೆ.ಜಿ.ಪೀಟರ್ ಅವರ ನೇತೃತ್ವದಲ್ಲಿ ನಗರದ ಮಾರುಕಟ್ಟೆ, ಹಿಲ್ ರಸ್ತೆ, ಮಹದೇವಪೇಟೆ, ಮಖಾನ್ ಗಲ್ಲಿ, ಹಿಂದುಸ್ತಾನಿ ಶಾಲೆ ವಠಾರ, ಕಾಲೇಜು ರಸ್ತೆ ಹಾಗೂ ಪೇಟೆರಾಮ ಮಂದಿರ ರಸ್ತೆಗಳ ವಿವಿಧ ಅಂಗಡಿ, ಮುಂಗಟ್ಟು ಹಾಗೂ ಸಾರ್ವಜನಿಕರಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಅರಿವು ಮೂಡಿಸಿ ಮತ ಯಾಚನೆ ಮಾಡಲಾಯಿತು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ 214 ಅಧ್ಯಕ್ಷ ಎಂ.ಎನ್.ರಾವೂಫ್, ಮಡಿಕೇರಿ ನಗರದ ನಾಮನಿರ್ದೇಶಿತ ಸದಸ್ಯ ಯಾಕೂಬ್, ವಕ್ಫ್ ಸದಸ್ಯ ಇಮ್ರಾನ್, ಗ್ಯಾರೆಂಟಿ ತಾಲೂಕು ಅನುಷ್ಠಾನದ ಸಮಿತಿಯ ಇಬ್ರಾಹಿಂ, ಮಡಿಕೇರಿ ನಗರ ಕಾಂಗ್ರೆಸ್…

Read More

ಮಡಿಕೇರಿ ಏ.22 NEWS DESK : ವಾಲ್ನೂರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಿನಲ್ಲಿದ್ದವರ ವಿರುದ್ಧ ಹೂಡಲಾಗಿರುವ ಐಪಿಸಿ 302, 307 ಕಲಂಗಳಡಿಯ ಕೇಸ್ ಗಳನ್ನು ವಾಪಾಸ್ ಪಡೆಯದಿದ್ದಲ್ಲಿ ಎಸ್‍ಪಿ ಕಚೇರಿ ಚಲೋ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಕೊಡಗು ಘಟಕ ಎಚ್ಚರಿಕೆ ನೀಡಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಬ್ದುಲ್ ಅಡ್ಕರ್, ಆಕಸ್ಮಿಕವಾಗಿ ನಡೆದ ಅಪಘಾತ ಪ್ರಕರಣದ ಆರೋಪಿಗಳ ವಿರುದ್ಧ ಕೊಲೆ, ಕೊಲೆ ಯತ್ನದಂತಹ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸುವ ಮೂಲಕ ಪೊಲೀಸ್ ಇಲಾಖೆ ದ್ವಿಮುಖ ನೀತಿ ಅನುಸರಿಸಿದೆ ಎಂದು ಆರೋಪಿಸಿದರು. ಸುಂಟಿಕೊಪ್ಪದ ಗದ್ದೆಹಳ್ಳದಲ್ಲಿ ಭಾನುವಾರ ಇದೇ ಮಾದರಿಯಲ್ಲಿ ಅಪಘಾತವೊಂದು ನಡೆದು ಕಾಸರಗೋಡಿನ ರಾಬಿಯ ಎಂಬ ಮಹಿಳೆ ಮೃತಪಟ್ಟು, ಉಳಿದ ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ. ಈ ಪ್ರಕರಣದಲ್ಲಿ 302, 307 ಕಲಂಗಳಡಿಯ ಕೇಸ್ ಯಾಕೆ ದಾಖಲಿಸಿಲ್ಲ ಎಂದು ಪ್ರಶ್ನಿಸಿದರು. ಹುಬ್ಬಳ್ಳಿಯ ನೇಹ ಹತ್ಯೆ ಪ್ರಕರಣವನ್ನು ಎಸ್‍ಡಿಪಿಐ ತೀವ್ರವಾಗಿ ಖಂಡಿಸುತ್ತದೆ, ತಪ್ಪಿತಸ್ಥರಿಗೆ ಶಿಕ್ಷಯಾಗಬೇಕೆಂದು ಒತ್ತಾಯಿಸುತ್ತದೆ. ಆದರೆ…

Read More

ಮಡಿಕೇರಿ ಏ.22 NEWS DESK : ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಸೆಲ್ಫಿ contest ನಡೆಸಲು ತೀರ್ಮಾನಿಸಲಾಗಿರುತ್ತದೆ. ಈ ಸೆಲ್ಫಿ contest ನಲ್ಲಿ #Lets Vote Kodagu! ಶೀರ್ಷಿಕೆಯಲ್ಲಿ ಸ್ಪರ್ಧೆ ನಡೆಯಲಿದೆ. ಮಡಿಕೇರಿ ಜಿಲ್ಲಾಧಿಕಾರಿಗಳ ಕಚೇರಿ, ನಗರದ ರಾಜಾಸೀಟು, ಸೋಮವಾರಪೇಟೆ ತಾಲೂಕು ಪಂಚಾಯತ್ ಕಚೇರಿ, ಪೊನ್ನಂಪೇಟೆ ತಾಲ್ಲೂಕು ಪಂಚಾಯತ್ ಕಚೇರಿ, ವಿರಾಜಪೇಟೆ ತಹಸೀಲ್ದಾರ್ ಕಚೇರಿ, ಕುಶಾಲನಗರ ಕಾವೇರಿ ನಿಸರ್ಗಧಾಮ ಈ 6 ಸ್ಥಳಗಳಲ್ಲಿ ಮತದಾನ ಜಾಗೃತಿಗಾಗಿ ಸೆಲ್ಫಿ ಪಾಯಿಂಟ್‍ಗಳನ್ನು ನಿರ್ಮಿಸಲಾಗಿರುತ್ತದೆ. ಸಾರ್ವಜನಿಕರು ಮತ್ತು ಯುವ ಮತದಾರರು ಪೋಟೊವನ್ನು ಕಳುಹಿಸಬಹುದಾಗಿದೆ. ಅಲ್ಲದೆ ಏ.26 ರಂದು ಮತದಾನ ನಡೆಯಲಿರುವ ಆಯ್ದ ವಿಶೇಷ ಮತಗಟ್ಟೆಗಳಲ್ಲಿಯೂ ಸೆಲ್ಪಿ ಪಾಯಿಂಟ್ ಗಳನ್ನು ಸ್ಥಾಪಿಸಲಿದ್ದು, ಈ ಮತಗಟ್ಟೆಗಳಲ್ಲಿ ಮತದಾನ ಮಾಡಿದ ನಂತರ ಸೆಲ್ಪಿ ಪಾಯಿಂಟ್‍ನಲ್ಲಿ ಪೋಟೋಗಳನ್ನು ಕ್ರಿಯಾತ್ಮಕವಾಗಿ ಸೆಲ್ಪಿ ಕ್ಲಿಕ್ಕಿಸಿ ಕಳುಹಿಸಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಾದ್ಯಂತ ಎಲ್ಲಾ ಸಾರ್ವಜನಿಕರು, ಮತದಾರರು ಮತದಾನದ ಪೂರ್ವದಲ್ಲಿ ನಾನು ಮತ ಚಲಾಯಿಸುತ್ತೇನೆ…

Read More

ಸುಂಟಿಕೊಪ್ಪ ಏ.22 NEWS DESK : ಸುಂಟಿಕೊಪ್ಪ ಹೋಬಳಿ ಕಾಂಗ್ರೆಸ್ ಅಧ್ಯಕ್ಷರಾಗಿ ರಜಾಕ್, ನಗರ ಅಧ್ಯಕ್ಷರಾಗಿ ರಫೀಕ್‍ಖಾನ್, ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಅನೂಪ್ ಹಾಗೂ ಸುಂಟಿಕೊಪ್ಪ ಪಂಚಾಯಿತಿ ವಲಯ ಅಲ್ಪಸಂಖ್ಯಾತ ಘಟಕಕ್ಕೆ ಅಬ್ಧುಲ್ ಅಜೀಜ್ ಆಯ್ಕೆಯಾಗಿದ್ದಾರೆ. ಗದ್ದೆಹಳ್ಳದ ಎಸ್.ಎಸ್. ಇಂಟನ್ರ್ಯಾಷನಲ್ ಸಭಾಂಗಣದಲ್ಲಿ ಶಾಸಕ ಡಾ.ಮಂತರ್ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜಾ ಉತ್ತಪ್ಪ ಹಾಗೂ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಕಾಂಗ್ರೆಸ್‍ನ ವಿವಿಧ ಘಟಕಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿದರು. ಸಭೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಎ.ಉಸ್ಮಾನ್, ಸುಂಟಿಕೊಪ್ಪ ಗ್ರಾ.ಪಂ ಉಪಾಧ್ಯಕ್ಷೆ ಶಿವಮ್ಮ, ಸದಸ್ಯರಾದ ಸಬಾಸ್ಟೀನ್, ಮಾಜಿ ಸದಸ್ಯರಾದ ರೋಸ್‍ಮೇರಿ ರಾಡ್ರಿಗಸ್, ನಿರ್ಮಲಾ ಶೇಷಪ್ಪ, ರತ್ನ, ರಜಾಕ್, ಬೂತ್ ಅಧ್ಯಕ್ಷ ಷರೀಪ್, ಕುಶಾಲನಗರ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಜಾಕ್, ಸುಂಟಿಕೊಪ್ಪ ನಗರ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಅಜೀಜ್, ಎನ್‍ಎಸ್‍ಯುಐ ಘಟಕದ ಜಿಲ್ಲಾ ಉಪಾದ್ಯಕ್ಷ…

Read More