ಲೇಖಕ: admin

ಮಡಿಕೇರಿ ಸೆ.23 NEWS DESK : ಡಾ.ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಕುಂದಚೇರಿ ಗ್ರಾ.ಪಂ ವಿಶೇಷ ಗ್ರಾಮ ಸಭೆ ಪಂಚಾಯಿತಿ ಆಡಳಿತಾಧಿಕಾರಿ ಸಚಿನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕುಂದಚೇರಿ ಗ್ರಾ.ಪಂ ವ್ಯಾಪ್ತಿಗೆ ನಾಲ್ಕು ಗ್ರಾಮಗಳು ಒಳಪಡುತ್ತಿದ್ದು, ನಾಲ್ಕು ಸಾವಿರಕ್ಕೂ ಅಧಿಕ ಮಂದಿ ವಾಸಿಸುತ್ತಿದ್ದಾರೆ. ಗ್ರಾಮಗಳು ಶಾಲೆ, ಅಂಗನವಾಡಿ, ಆಸ್ಪತ್ರೆ, ಸಮುದಾಯ ಭವನ, ಪರಿಶಿಷ್ಟ ಜಾತಿ, ಪಂಗಡಗಳ ಕಾಲೋನಿಗಳು, ಕುಡಿಯುವ ನೀರಿನ ಕಟ್ಟೆಗಳು, ಪೈಪ್ ಲೈನ್ ಗಳು ಸೇರಿದಂತೆ ಜನ ವಸತಿ ಪ್ರದೇಶಗಳನ್ನು ಹೊಂದಿವೆ. 2014 ರ ಕಸ್ತೂರಿ ರಂಗನ್ ವರದಿಯಲ್ಲಿ ಶೇ.37ರಷ್ಟು ಅರಣ್ಯ ಪ್ರದೇಶವನ್ನು ಹೊಂದಲು ಶಿಫಾರಸ್ಸು ಮಾಡಲಾಗಿತ್ತು. ಕುಂದಚೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ 7388 ಹೆಕ್ಟೇರ್ ಭೂಪ್ರದೇಶವಿದ್ದು, 4152 ಹೆಕ್ಟೇರ್ ಎಂದರೆ ಶೇ.56.25 ಅರಣ್ಯ ಪ್ರದೇಶವಾಗಿದೆ. ಕಸ್ತೂರಿ ರಂಗನ್ ವರದಿಯಲ್ಲಿ ಉಲ್ಲೇಖಿಸಿರುವುದಕ್ಕಿಂತ ಹೆಚ್ಚಿನ ಭಾಗ ಅರಣ್ಯವಿರುವುದರಿಂದ ಸೂಕ್ಷ್ಮ ವಲಯ ಪ್ರದೇಶಗಳನ್ನು ಶೂನ್ಯ ಮಾಡುವಂತೆ ಸಭೆಯಲ್ಲಿ ಒಮ್ಮತದ ಒತ್ತಾಯದ ನಿರ್ಧಾರ ಕೈಗೊಳ್ಳಲಾಯಿತು. ಹಿಂದೆ 1980 ರಿಂದ ಸರಕಾರದ ವತಿಯಿಂದ ರೈತರು, ಕಾರ್ಮಿಕರು ಹಾಗೂ…

Read More

ಭಾಗಮಂಡಲ, NEWS DESK ಸೆ.23: ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಸಂಪಾಜೆಯಲ್ಲಿ ನಡೆದ ಜಿಲ್ಲಾ ಮಟ್ಟದ ಅಂಡರ್–14 ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು, ಉಡುಪಿಯಲ್ಲಿ ನಡೆಯಲಿರುವ ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಈ ಕ್ರೀಡಾ ಸಾಧನೆಗೆ ಶಾಲೆಯ ಪ್ರಾಂಶುಪಾಲರಾದ ಲೋಕೇಶ್, ನಿಲಯ ಪಾಲಕರಾದ ದೀಪಕ್ ಕೆ. ಕೆ. ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಪವನ್ ಸಾಗರ್ ಕೆ. ಪಿ. ಸಂತೋಷ ವ್ಯಕ್ತಪಡಿಸಿದ್ದಾರೆ.

Read More

ಮಡಿಕೇರಿ, NEWS DESK ಸೆ. 23: ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಹಾಗೂ ಸರಳ ಜೀವನಶೈಲಿಯನ್ನು ರೂಢಿಸಿಕೊಳ್ಳುವ ಮೂಲಕ ಮಹಿಳೆಯರು ತಮ್ಮ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಬಹುದು ಎಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ತುರ್ತು ಚಿಕಿತ್ಸಾ ವೈದ್ಯಾಧಿಕಾರಿ ಡಾ. ಎ.ಟಿ. ಸುಮುಖ್ ಹೇಳಿದರು. ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ವುಡ್ಸ್ ವತಿಯಿಂದ ಮಡಿಕೇರಿ ಗೌಳಿಬೀದಿಯ ಅಂಗನವಾಡಿ ಕಾರ್ಯಕರ್ತೆಯರ ಸಹಯೋಗದಲ್ಲಿ ಆಯೋಜಿಸಿದ್ದ 5ನೇ ವರ್ಷದ ಪೋಷಣ್ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಹಿಳೆಯರು ಉತ್ತಮ ಪೌಷ್ಟಿಕಾಂಶ ಹೊಂದಿರುವ ಆಹಾರ ಸೇವನೆಯತ್ತ ಸದಾ ಗಮನ ಹರಿಸಬೇಕು. ಸಾಮಾನ್ಯವಾಗಿ ಮಹಿಳೆಯರು ತಮ್ಮ ಕುಟುಂಬ ಸದಸ್ಯರ ಆರೋಗ್ಯ ಮತ್ತು ಆಹಾರದ ಬಗ್ಗೆ ಕಾಳಜಿ ವಹಿಸುವ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ಆರೋಗ್ಯ ಮತ್ತು ಆಹಾರದ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. ಇದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆಯೂ ಗಂಭೀರವಾಗಿ ಗಮನಹರಿಸಿ, ಸಮಯಕ್ಕೆ ಸರಿಯಾಗಿ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಬೇಕು ಎಂದು ಸಲಹೆ ನೀಡಿದರು. 50…

Read More

ಮಡಿಕೇರಿ, NEWS DESK ಸೆ.23: ಅಸಹಾಯಕರು, ಬಡವರು, ಶೋಷಿತರು ಹಾಗೂ ದುರ್ಬಲ ವರ್ಗದವರ ಧ್ವನಿಯಾಗಿ ಕಳೆದ 35 ವರ್ಷಗಳಿಂದ ಸಾರ್ವಜನಿಕ ಬದುಕಿನಲ್ಲಿ ಸೇವೆ ಸಲ್ಲಿಸುತ್ತಿರುವ ಸಾಮಾಜಿಕ ಹೋರಾಟಗಾರ ಹಾಗೂ ಚಿಂತಕ ವಿ.ಪಿ.ಶಶಿಧರ್ ಅವರಿಗೆ ಸಮಾನ ಮನಸ್ಕರು ಹಾಗೂ ಹಿತೈಷಿಗಳ ಬಳಗದ ವತಿಯಿಂದ ಸೆ.27ರಂದು ಕುಶಾಲನಗರದಲ್ಲಿ ‘ಪೌರ ಸನ್ಮಾನ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಳಗದ ಗೌರವಾಧ್ಯಕ್ಷ ಹಾಗೂ ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಕೆ.ಎಸ್.ಕೃಷ್ಣೇಗೌಡ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ದಶಕಗಳಿಂದ ಕುಶಾಲನಗರ ವ್ಯಾಪ್ತಿಯ ಜನರ ಪ್ರಮುಖ ಆಶಯವಾಗಿರುವ ಹಾಗೂ ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರ ಕಾವೇರಿ ತಾಲ್ಲೂಕಿನ ಕನಸನ್ನು ಸಾಕಾರಗೊಳಿಸುವ ಹೋರಾಟದಲ್ಲಿ ವಿ.ಪಿ.ಶಶಿಧರ್ ಸಕ್ರಿಯವಾಗಿ ತೊಡಗಿಸಿಕೊಂಡು ಅವಿಶ್ರಾಂತವಾಗಿ ಶ್ರಮಿಸಿದ್ದಾರೆ. ಜನಸಾಮಾನ್ಯರ ಸಮಸ್ಯೆಗಳ ಪರವಾಗಿ ನಿರಂತರವಾಗಿ ಹೋರಾಡಿರುವ ಅವರ ಸಾರ್ವಜನಿಕ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಈ ನಾಗರಿಕ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಸೆ.27ರಂದು ಸಂಜೆ 5 ಗಂಟೆಗೆ ಕುಶಾಲನಗರದ ತಾವರೆಕೆರೆಯ ಎಸ್‌ಎಲ್‌ಎನ್…

Read More

ಸುಂಟಿಕೊಪ್ಪ, NEWS DESK ಸೆ.23: ಕೊಡಗಿನ ಜನಜೀವನ ಮತ್ತು ಕೃಷಿ ಬದುಕಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಡಾ. ಕೆ. ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸಲು ಆಕ್ಷೇಪಣೆ ಇಲ್ಲ ಎಂಬ ಅಭಿಪ್ರಾಯವನ್ನು ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯ ವಿಶೇಷ ಗ್ರಾಮಸಭೆಯಲ್ಲಿ ಒಕ್ಕೊರಲಿನಿಂದ ವ್ಯಕ್ತಪಡಿಸಲಾಯಿತು. ಬುಧವಾರ ಕೊಡಗರಹಳ್ಳಿಯ ಮಹಾತ್ಮ ಗಾಂಧಿ ಕಾರ್ಯಾಲಯ ಸಭಾಂಗಣದಲ್ಲಿ ಕೊಡಗರಹಳ್ಳಿ, ಅಂದಗೋವೆ ಹಾಗೂ ಕಲ್ಲೂರು ಗ್ರಾಮಗಳನ್ನು ಒಳಗೊಂಡಂತೆ ಕಸ್ತೂರಿ ರಂಗನ್ ವರದಿ ಜಾರಿಯ ಸಾಧಕ-ಬಾಧಕಗಳು ಹಾಗೂ ಸಾರ್ವಜನಿಕರ ಸಲಹೆ-ಸೂಚನೆಗಳನ್ನು ಪಡೆಯಲು ವಿಶೇಷ ಗ್ರಾಮಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಪಂಚಾಯಿತಿ ಆಡಳಿತಾಧಿಕಾರಿ ವೀರಣ್ಣ ವಹಿಸಿದ್ದರು. ನೋಡಲ್ ಅಧಿಕಾರಿಯಾಗಿ 7ನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸೋಮಯ್ಯ ಉಪಸ್ಥಿತರಿದ್ದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾತನಾಡಿ, ಕಸ್ತೂರಿ ರಂಗನ್ ವರದಿಯ 7ನೇ ಕರಡು ಅಧಿಸೂಚನೆಯು 257 ಪುಟಗಳನ್ನು ಒಳಗೊಂಡಿದ್ದು, 179ನೇ ಪುಟದಲ್ಲಿ ಕೊಡಗು ಜಿಲ್ಲೆಯ 53 ಗ್ರಾಮಗಳು ಸೂಕ್ಷ್ಮ ಪರಿಸರ ವಲಯದ ವ್ಯಾಪ್ತಿಗೆ ಒಳಪಡುತ್ತವೆ ಎಂದು ಉಲ್ಲೇಖಿಸಲಾಗಿದೆ. ಕೊಡಗರಹಳ್ಳಿ ಗ್ರಾಮವು ನೇರವಾಗಿ ಈ…

Read More

ಮಡಿಕೇರಿ NEWS DESK ಸೆ.22 : ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿ ವತಿಯಿಂದ ಕೊಡಗು ಜಾನಪದ ಪರಿಷತ್ ಸಹಯೋಗದಲ್ಲಿ 5 ನೇ ವಷ೯ದ ಜಾನಪದ ದಸರಾವನ್ನು ಅಕ್ಟೋಬರ್ 18 ರಂದು ಭಾನುವಾರ ಆಯೋಜಿಸಲಾಗಿದೆ ಎಂದು ಜಿಲ್ಲಾ ಜಾನಪದ ಪರಿಷತ್  ಅಧ್ಯಕ್ಷ  ಬಿ.ಜಿ. ಅನಂತಶಯನ ಮತ್ತು ಜಾನಪದ ದಸರಾ ಸಂಚಾಲಕ ಅನಿಲ್ ಹೆಚ್.ಟಿ. ತಿಳಿಸಿದ್ದಾರೆ. ಅ.18 ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ಮಡಿಕೇರಿಯ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಜಾನಪದ ಕಲಾ ಪ್ರದಶ೯ನಗಳು ಆಯೋಜಿಸಲ್ಪಟ್ಟಿವೆ. ಇದೇ ಸಂದಭ೯ ವೇದಿಕೆ ಮುಂಬದಿ ಜಾನಪದ ವಸ್ತು ಪ್ರದಶ೯ನ, ಮಡಿಕೇರಿಯ ಹಳೇ ಖಾಸಗಿ ಬಸ್ ನಿಲ್ದಾಣದಿಂದ ಜಾನಪದ ಕಲಾಜಾಥಾ ಕೂಡ ಜರುಗಲಿದೆ ಎಂದು ಜಾನಪದ ಪರಿಷತ್ ಪ್ರಕಟಣೆ ತಿಳಿಸಿದೆ. ಜಾನಪದ ದಸರಾ ಸಂದಭ೯ ಕೊಡಗಿನ ಜಾನಪದ ಕಲಾವಿದರಿಗೆ ವೈವಿಧ್ಯಮಯ ಕಲಾ ಪ್ರದಶ೯ನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೊಡಗಿನ ಜಾನಪದ ಕಲಾತಂಡಗಳು, ಕಲಾವಿದರು ಜಾನಪದ ದಸರಾ ಸಂದಭ೯ ನೀಡಲು ಇಚ್ಛಿಸುವ ಪ್ರದಶ೯ನದ ಬಗ್ಗೆ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಆಸಕ್ತ ಕಲಾವಿದರು, ಕಲಾತಂಡಗಳು ಅಕ್ಟೋಬರ್…

Read More

ಮಡಿಕೇರಿ NEWS DESK ಸೆ.23 : ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರದ ಹಿನ್ನೆಲೆಯಲ್ಲಿ ಸೆ.28, 29 ಮತ್ತು 30ರಂದು ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಅಗತ್ಯ ಸೇವೆಗಳ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಬ್ಯಾಂಕ್ ವತಿಯಿಂದ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಗ್ರಾಹಕರು ಯಾವುದೇ ಅನಾನುಕೂಲತೆಯನ್ನು ತಪ್ಪಿಸಲು ತಮ್ಮ ಬ್ಯಾಂಕಿಂಗ್ ವಹಿವಾಟುಗಳನ್ನು ಮುಂಚಿತವಾಗಿ ಯೋಜಿಸಿಕೊಳ್ಳುವಂತೆ ಹಾಗೂ ಪರ್ಯಾಯ ಡಿಜಿಟಲ್ ಸೇವೆಗಳನ್ನು ಬಳಸಿಕೊಳ್ಳುವಂತೆ ವಿವಿಧ ಬ್ಯಾಂಕ್ ಗಳು ಮನವಿ ಮಾಡಿವೆ. ಬ್ಯಾಂಕ್ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸತತ ಮೂರು ದಿನಗಳ ಕಾಲ ಬ್ಯಾಂಕ್ ಮುಷ್ಕರ ಘೋಷಣೆಯಾಗಿದ್ದು, ದೇಶಾದ್ಯಂತ ಹಣಕಾಸು ವಹಿವಾಟು ಹಾಗೂ ಪ್ರಮುಖ ಬ್ಯಾಂಕಿಂಗ್ ಸೇವೆಗಳಲ್ಲಿ ಭಾರಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ನಿಯಮಿತ ಬ್ಯಾಂಕಿಂಗ್ ಅಗತ್ಯಗಳಿಗಾಗಿ ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್, ಎಟಿಎಂಗಳು, ಬಿಸಿ ಪಾಯಿಂಟ್‌ಗಳು ಸೇರಿದಂತೆ ಇತರ ಡಿಜಿಟಲ್ ಸೇವೆಗಳು ಲಭ್ಯವಿರಲಿವೆ. ಅಲ್ಲದೆ, ಯುಪಿಐ ಮೂಲಕವೂ ವಿವಿಧ ವಹಿವಾಟುಗಳನ್ನು ನಡೆಸಬಹುದಾಗಿದೆ. ಗ್ರಾಹಕರ ಸಹಕಾರ ಹಾಗೂ…

Read More

ಮಡಿಕೇರಿ NEWS DESK ಸೆ.22 : ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿ ವತಿಯಿಂದ ಕೊಡಗು ಜಾನಪದ ಪರಿಷತ್ ಸಹಯೋಗದಲ್ಲಿ 5 ನೇ ವಷ೯ದ ಜಾನಪದ ದಸರಾವನ್ನು ಅಕ್ಟೋಬರ್ 18 ರಂದು ಭಾನುವಾರ ಆಯೋಜಿಸಲಾಗಿದೆ ಎಂದು ಜಿಲ್ಲಾ ಜಾನಪದ ಪರಿಷತ್  ಅಧ್ಯಕ್ಷ  ಬಿ.ಜಿ. ಅನಂತಶಯನ ಮತ್ತು ಜಾನಪದ ದಸರಾ ಸಂಚಾಲಕ ಅನಿಲ್ ಹೆಚ್.ಟಿ. ತಿಳಿಸಿದ್ದಾರೆ. ಅ.18 ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ಮಡಿಕೇರಿಯ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಜಾನಪದ ಕಲಾ ಪ್ರದಶ೯ನಗಳು ಆಯೋಜಿಸಲ್ಪಟ್ಟಿವೆ. ಇದೇ ಸಂದಭ೯ ವೇದಿಕೆ ಮುಂಬದಿ ಜಾನಪದ ವಸ್ತು ಪ್ರದಶ೯ನ, ಮಡಿಕೇರಿಯ ಹಳೇ ಖಾಸಗಿ ಬಸ್ ನಿಲ್ದಾಣದಿಂದ ಜಾನಪದ ಕಲಾಜಾಥಾ ಕೂಡ ಜರುಗಲಿದೆ ಎಂದು ಜಾನಪದ ಪರಿಷತ್ ಪ್ರಕಟಣೆ ತಿಳಿಸಿದೆ. ಜಾನಪದ ದಸರಾ ಸಂದಭ೯ ಕೊಡಗಿನ ಜಾನಪದ ಕಲಾವಿದರಿಗೆ ವೈವಿಧ್ಯಮಯ ಕಲಾ ಪ್ರದಶ೯ನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೊಡಗಿನ ಜಾನಪದ ಕಲಾತಂಡಗಳು, ಕಲಾವಿದರು ಜಾನಪದ ದಸರಾ ಸಂದಭ೯ ನೀಡಲು ಇಚ್ಛಿಸುವ ಪ್ರದಶ೯ನದ ಬಗ್ಗೆ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಆಸಕ್ತ ಕಲಾವಿದರು, ಕಲಾತಂಡಗಳು ಅಕ್ಟೋಬರ್…

Read More

ಮಡಿಕೇರಿ NEWS DESK ಸೆ.23 : ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ನಿಯೋಗವು ಇಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ, ನೂತನವಾಗಿ ನಿರ್ಮಾಣವಾಗುತ್ತಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಧನಸಹಾಯ ನೀಡುವಂತೆ ಮನವಿ ಮಾಡಿತು. ನಿಯೋಗದೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ನೂತನ ಕಾಂಗ್ರೆಸ್ ಭವನದ ರೂಪುರೇಷೆಗಳ ಕುರಿತು ಮಾಹಿತಿ ಪಡೆದರು. ಭವನ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡುವುದರೊಂದಿಗೆ ಧನಸಹಾಯ ಮಾಡುವುದಾಗಿ ಭರವಸೆ ನೀಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೊಲ್ಯದ ಗಿರೀಶ್ ಹಾಗೂ ಎಸ್.ಐ.ಮುನೀರ್ ಅಹ್ಮದ್, ಪೊನ್ನಂಪೇಟೆ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್ ಹಾಗೂ ಜಿಲ್ಲಾ ಕಾಂಗ್ರೆಸ್ ಸದಸ್ಯ ಚೊಟ್ಟೆಯಂಡಮಾಡ ವಿಷು ನಿಯೋಗದಲ್ಲಿದ್ದರು.

Read More

ಮಡಿಕೇರಿ ಸೆ.22 NEWS DESK : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ದೆಹಲಿ ಕರ್ನಾಟಕ ಸಂಘದಲ್ಲಿ ನಡೆದ ಕೊಡವ ಸಾಂಸ್ಕೃತಿಕ ಉತ್ಸವ ಹಾಗೂ ಕೊಡವ ಸಾಂಸ್ಕೃತಿಕ ಸಿರಿಯು ನೆರೆದಿದ್ದವರನ್ನು ಮೆರಗುಗೊಳಿಸಿತು. ದೆಹಲಿ ಕರ್ನಾಟಕ ಸಂಘ ಹಾಗೂ ದೆಹಲಿ ಕೊಡವ ಸಮಾಜದ ಸಹಯೋಗದಲ್ಲಿ ನಡೆದ ಕೊಡವ ಸಾಹಿತ್ಯ ಉತ್ಸವದಲ್ಲಿ ಬಟ್ಟೆಪಾಟ್, ದುಡಿಕೊಟ್ಟ್ ಪಾಟ್, ಬಾಳೋಪಾಟ್, ಉಮ್ಮತ್ತಾಟ್, ಬೊಳಕಾಟ್, ಕತ್ತಿಯಾಟ್, ಕೋಲಾಟ್, ತಾಲಿಪಾಟ್, ಗೆಜ್ಜೆತಂಡ್, ಕೊಡವ ನೃತ್ಯ ಹಾಗೂ ಕೊಂಬುಕೊಟ್ಟ್ ವಾಲಗತಾಟ್ ಇಡೀ ಕಾರ್ಯಕ್ರಮದ ಯಶಸ್ಸನ್ನು ಉತ್ತುಂಗಕ್ಕೆ ಏರಿಸಿತು. ಕರ್ನಾಟಕ ಕೊಡವ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಅವರ ಮುಂದಾಳತ್ವದಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರು, ಸಭಿಕರನ್ನು ಬಟ್ಟೆಪಾಟ್ ಮೂಲಕ ಸಭಾಂಗಣಕ್ಕೆ ಕರೆದೊಯ್ಯಲಾಯಿತು. ದೆಹಲಿ ಕರ್ನಾಟಕ ಸಂಘದ ಅದ್ಯಕ್ಷರಾದ ವೇಣುಕುಮಾರ್, ದೆಹಲಿ ಕೊಡವ ಸಮಾಜ ಅಧ್ಯಕ್ಷರಾದ ಮಾಚಿಮಂಡ ಎ ಕಾರ್ಯಪ್ಪ, ಅಕಾಡೆಮಿ ಅದ್ಯಕ್ಷ ಮಹೇಶ್ ನಾಚಯ್ಯ ಜಂಟಿಯಾಗಿ ಉದ್ಘಾಟಿಸಿದರು. ನಂತರ ಪ್ರಾಸ್ತಾವಿಕ ನುಡಿಗಳನ್ನಾಡಿದ ಅಕಾಡೆಮಿ ಅಧ್ಯಕ್ಷ ಮಹೇಶ್ ನಾಚಯ್ಯ ಅವರು ಕೊಡವ…

Read More