ಲೇಖಕ: admin

ಮಡಿಕೇರಿ ಆ.21-  ಮಕ್ಕಂದೂರಿನ ಸಕಾ೯ರಿ ಪ್ರೌಡಶಾಲೆಯಲ್ಲಿ ಮಡಿಕೇರಿ   ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ  ವಿಶ್ವಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ “ ಹಿರಿಯ” ಜೀವಿಗಳಿಗೆ ಗೌರವಾಪ೯ಣೆಯ ವಿನೂತನ ಕಾಯ೯ಕ್ರಮ ಆಯೋಜಿತವಾಗಿತ್ತು. ವಿಧಾನಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಕಾಯ೯ಕ್ರಮದಲ್ಲಿ ಪಾಲ್ಗೊಂಡು ಹಿರಿಯರಿಗೆ ಗೌರವ ಸಲ್ಲಿಸುವ ಇಂಥ ಕಾಯ೯ಕ್ರಮ ಸಮಾಜಕ್ಕೆ ಅತ್ಯಗತ್ಯವಾಗಿದೆ ಎಂದು ಹೇಳಿದರು. ಕಾಯ೯ಕ್ರಮದಲ್ಲಿ ಶಾಂತೆಯಂಡ ಅಪ್ಪಣ್ಣ, ಎಲ್. ಮುತ್ತವ್ವ, ಶಾರದಾ ಪ್ರಭಾಕರ್ ಆಚಾಯ೯, ವೆಂಕಮ್ಮ,  ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಬಾರ ಮುಖ್ಯ ಶಿಕ್ಷಕಿ ಹರಿಣಾಕ್ಷಿ ಸ್ವಾಗತಿಸಿ,   ಮಿಸ್ಟಿ ಹಿಲ್ಸ್ ಸ್ತಾಪಕಾಧ್ಯಕ್ಷ ಬಿ.ಜಿ. ಆನಂತ ಶಯನ ಬಿ.ಜಿ.  , ಮಿಸ್ಟಿ ಹಿಲ್ಸ್ ಕಾಯ೯ದಶಿ೯ ಡಾ.ಚೇತನ್ ಜಿ.ಡಿ. ನಿದೇ೯ಶಕರಾದ ಲಿಂಗರಾಜು  ರವೀಂದ್ರರೈ, ಪ್ರಕಾಶ್ ಪೂವಯ್ಯ, , , ದಿವ್ಯಚೇತನ್, ಸುಮನಾ ಶ್ರೀಹರಿ, ಪಾಲ್ಗೊಂಡಿದ್ದರು. ಶಾಲಾ ಶಿಕ್ಷಕಿ ಲೀಲಾವತಿ ವಂದಿಸಿದ, ರತಿಕುಮಾರಿ ನಿರೂಪಿಸಿದರು.

Read More

ಮಡಿಕೇರಿ, NEWS DESK ಆ. 21 –    ರೋಟರಿ ಮಿಸ್ಟಿ ಹಿಲ್ಸ್‌ ವತಿಯಿಂದ  ಗಾಳಿಬೀಡುವಿನ ಸಕಾ೯ರಿ   ಪ್ರೌಡಶಾಲೆಯಲ್ಲಿ   ವಿಶ್ವಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಹಿರಿಯರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು. ಗ್ರಾಮದ ಹಿರಿಯ ನಾಗರಿಕರಾದ ಎಂ.ಬಿ.ದೇವಯ್ಯ   ರಾಮಪ್ಪ,  ಚೋಂದಮ್ಮ ಅವರನ್ನ ಮಿಸ್ಟಿ ಹಿಲ್ಸ್ ವತಿಯಿಂದ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಎಸ್‌.ಡಿ.ಎಂ.ಸಿ ಅಧ್ಯಕ್ಷರು ,ಉಪಾಧ್ಯಕ್ಷರು ,ಸದಸ್ಯರು,ಪೋಷಕರು,ರೋಟರಿ ಮಿಸ್ಟಿ ಹಿಲ್ಸ್‌ ನ  ಅಧ್ಯಕ್ಷ  ಪಿ.ಆರ್. ರಾಜೇಶ್,  ವಲಯ ಸೇನಾನಿ ಪೊನ್ನಚ್ಚನ ಮಧುಸೂದನ್ ಹಾಜರಿದ್ದರು. ರೋಟರಿ ಮಿಸ್ಟಿ ಹಿಲ್ಸ್‌ ನ ಸ್ಥಾಪಕಾಧ್ಯಕ್ಷ   ಬಿ.ಜಿ.  ಅನಂತಶಯನ  ಮಾತನಾಡಿ, ಹಿರಿಯರ ಮಹತ್ವದ ಬಗ್ಗೆ  ,ಹಲವು ನಿದಶ೯ನಗಳ ಬಗ್ಗೆ  ತಿಳಿಸಿದರು. ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾದ ಕಾವೇರಿ  ಹಿರಿಯರನ್ನು ನಾವು ಹೇಗೆ ಗೌರವಿಸಿ ಅವರ ಮಾಗ೯ದಶ೯ನ ಪಡೆಯಬೇಕೇಂದು ಸಲಹೆ ನೀಡಿದರು.    ಹೆಲೆನ್‌ ನಿಕ್ವೇರ    ನಿರೂಪಿಸಿದರು. ಶಿಲ್ಪ  ಸ್ವಾಗತಿಸಿ, ವಿನುತ ವಂದಿಸಿದರು. ಮಿಸ್ಟಿ ಹಿಲ್ಸ್ ನಿಕಟಪೂವ೯ ಅಧ್ಯಕ್ಷ  ರತ್ನಾಕರ್ ರೈ,  ವಲಯ ಸೇನಾನಿ ಮಧುಸೂದನ್…

Read More

ಮಡಿಕೇರಿ, NEWS DESK ಆ.21- ಮಕ್ಕಳು  ಓದಿನ ಕಡೆ ಹೆಚ್ಚಿನ ಗಮನ ಕೊಡಬೇಕು  ಟಿವಿ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕು   ಟಿವಿಯಲ್ಲಿ ಬರುವ ಒಳ್ಳೆಯ ಕಾರ್ಯಕ್ರಮವನ್ನು ಮಾತ್ರ ನೋಡಬೇಕು ಎಂದು ಅತ್ತೂರಿನ ಹಿರಿಯ ನಾಗರಿಕರಾದ ಕೆ.ಬೋಜಮ್ಮ ಕಿವಿಮಾತು  ಹೇಳಿದ್ದಾರೆ. ಅತ್ತೂರಿನ ಜ್ಞಾನಗಂಗಾ ವಸತಿ ಶಾಲೆಯಲ್ಲಿ ಜ್ಞಾನ ಗಂಗಾ ಇಂಟರಾಕ್ಟ್ ಕ್ಲಬ್ ಮತ್ತು ರೋಟರಿ ಮಿಸ್ಟಿ ಹಿಲ್ಸ್ ಮಡಿಕೇರಿ ಇವರ ಸಹಯೋಗದೊಂದಿಗೆ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಕಾರ್ಯಕ್ರಮವನ್ನು  ನೆರವೇರಿಸಲಾಯಿತು. ಈ ಕಾಯ೯ಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಬೋಜಮ್ಮ ಮಾತನಾಡಿರು. ಸಮಾರಂಭದಲ್ಲಿ  ಸನ್ಮಾನ ಸ್ವೀಕರಿಸಿ ಮಾತನಾಡಿದ   ಎ. ವಿ ಜೋಯಪ್ಪ  ಶಿಕ್ಷಣದ ಜತೆಜತೆಗೇ, ಕ್ರೀಡೆಯತ್ತ ಗಮನ ಹರಿಸಬೇಕು  , ವಿದ್ಯಾರ್ಥಿಗಳಲ್ಲಿ ಬಹಳಷ್ಟು ಶಿಸ್ತು ಇರಬೇಕು ಶಿಸ್ತು ಇದ್ದಾಗ ಮಕ್ಕಳ ಉತ್ತಮ ಬೆಳವಣಿಗೆಗೆ ಸಹಾಯಕವಾಗುತ್ತದೆ. ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಜ್ಞಾನವನ್ನು ಕೊಡುವುದರ ಮೂಲಕ ಉತ್ತಮ ಉದ್ಯೋಗವನ್ನು ಪಡೆದು ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ  ಶಂಭುಲಿಂಗಪ್ಪ   ವಿದ್ಯಾರ್ಥಿಗಳು…

Read More

ಮಡಿಕೇರಿ, NEWS DESK ಆ.21 – ನಮ್ಮೆಲ್ಲರ ಜೀವನ ಪರಿಪೂಣ೯ ಎನಿಸಿಬೇಕಾದರೆ ಹಿರಿಯರ ಮಾಗ೯ದಶ೯ನ ಅತ್ಯಗತ್ಯ ಎಂದು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರಾದ  ಮಂಡುವಂಡ ಮುತ್ತಪ್ಪ ಹೇಳಿದ್ದಾರೆ. ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ನಿಂದ ಆಯೋಜಿತ ಹಿರಿಯ ಜೀವಿಗಳಿಗೆ ನಮನ ಕಾಯ೯ಕ್ರಮದಲ್ಲಿಗೌರವ  ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಜೀವನದಲ್ಲಿ ನಾವು ಏನನ್ನು ಸಾಧಿಸುತೇವೋ  ಅದು ಬಹಳ   ಮುಖ್ಯವಾಗುತ್ತದೆ. ನಮ್ಮ ಜೀವನ ಪರಿಪೂರ್ಣವಾಗಬೇಕಾದರೆ    ಹಿರಿಯರ ಮಾರ್ಗದರ್ಶನ ಅಗತ್ಯ , ಮಕ್ಕಳು ತಮ್ಮ ಸಾಧನೆಯನ್ನು ತೋರಬೇಕಾದರೆ ಮುಂದಿನ ಜೀವನಕ್ಕೆ ಉಪಯೋಗವಾಗುವ ವಿಷಯಗಳನ್ನು ಅರಿತುಕೊಂಡು ಶಿಕ್ಷಕರಿಗೆ, ಹಿರಿಯರಿಗೆ ಯಾವತ್ತೂ ಗೌರವವನ್ನು ಕೊಡಿ ಎಂದು ಎಂ.ಪಿ. ಮುತ್ತಪ್ಪ  ಕರೆ  ನೀಡಿದರು. ಸನ್ಮಾನಿತರಾದ ಡಾ.  ಕೆ.ಬಿ. ಸೂರ್ಯ ಕುಮಾರ್ ಮಾತನಾಡಿ,   ಹಿಂದಿನ ಕಾಲ ಮತ್ತು ಈಗಿನ ಕಾಲದ ವ್ಯತ್ಯಾಸವು ಪ್ರಕೃತಿ ನಿಯಮದಂತೆ ಬದಲಾಗಿದೆ, ಮನೆಯಲ್ಲಿ ಇರುವ ಹಿರಿಯರು ಬದುಕಿರುವ ಜ್ಞಾನಬಂಡಾರದಂತೆ. ಅಮೂಲ್ಯ  ಕಥೆ ಪುಸ್ತಕಗಳು ಎಂದರು. ಇಂತಹ ಹಿರಿಯ…

Read More

ಮಡಿಕೇರಿ NEWS DESK ಆ.21 : ರೋಟರಿ ಮಡಿಕೇರಿ ವತಿಯಿಂದ 80ನೇ  ಸ್ವಾತಂತ್ರ್ಯೋತ್ಸವವನ್ನು  ಸಂಭ್ರಮದಿ0ದ ಆಚರಿಸಲಾಯಿತು. ರಾಷ್ಟ್ರ ಧ್ವಜಾರೋಹಣದ ನಂತರ ರೋಟರಿ ಮಡಿಕೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಶೌರ್ಯ ಚಕ್ರ ಪುರಸ್ಕೃತ ನಿವೃತ್ತ ಕರ್ನಲ್ ಸಿ.ಎಂ.ತಿಮ್ಮಣ್ಣ ಅವರು ಯುವಜನರಲ್ಲಿ ದೇಶಸೇವೆ ಹಾಗೂ ರಕ್ಷಣಾ ಕ್ಷೇತ್ರದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ಹಾಗೂ ಯುವಕರಿಗೆ ರಕ್ಷಣಾ ಪಡೆಗಳಿಗೆ ಸೇರುವ ಅವಕಾಶಗಳ ಕುರಿತು ಅರಿವು ಮೂಡಿಸುವುದರ ಜೊತೆಗೆ ವೃತ್ತಿ ಮಾರ್ಗದರ್ಶನ ಕಾರ್ಯಾಗಾರಗಳನ್ನು ಕೂಡ ಆಯೋಜಿಸುವಂತೆ ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಮಡಿಕೇರಿ ಅಧ್ಯಕ್ಷ ರೊ.ಮನೋಹರ್ ಕಾಮತ್ ಅವರಿಗೆ ಸರ್ಜೆಂಟ್ ಅಟ್ ಆರ್ಮ್ಸ್ ರೊ.ಮಲ್ಲಿಗೆ ಪೈ ಅವರು ಕಾಲರ್ ಅಲಂಕರಿಸುವ ಮೂಲಕ ಗೌರವ ಸಲ್ಲಿಸಿದರು. ಅಧ್ಯಕ್ಷರು ಸಭಿಕರನ್ನು ಸ್ವಾಗತಿಸಿ, ಸ್ವಾತಂತ್ರ‍್ಯ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿದರು. ಕಾರ್ಯದರ್ಶಿ ರೊ.ಬಿ.ಎಂ.ಸೋಮಣ್ಣ ಅವರಿಂದ ಕ್ಲಬ್ ಅಭಿನಂದನಾ ಕಾರ್ಯಕ್ರಮ ನಡೆಯಿತು. ನಿವೃತ್ತ ಕರ್ನಲ್ ಸಿ.ಎಂ.ತಿಮ್ಮಣ್ಣ ಅವರನ್ನು ರೊ.ಪ್ರಿನ್ಸ್ ಪೊನ್ನಣ್ಣ ಪರಿಚಯಿಸಿದರು.…

Read More

ಮಡಿಕೇರಿ NEWS DESK ಆ.21 : ರೋಟರಿ ಮಡಿಕೇರಿ ವುಡ್ಸ್, ಮಡಿಕೇರಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ರೋಟರಾಕ್ಟ್ ಕ್ಲಬ್‌ನ ಜಂಟಿ ಆಶ್ರಯದಲ್ಲಿ ಹಿರಿಯ ನಾಗರಿಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮಹಿಳಾ ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿ ಆಕಾಶವಾಣಿಯ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ ಅವರು ಹಿರಿಯರನ್ನು ಗೌರವಿಸಿ, ಅವರ ಜೀವನದ ಸಂಧ್ಯಾಕಾಲದಲ್ಲಿ ಅವರೊಂದಿಗೆ ಇದ್ದು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಹಿರಿಯರಿಗೆ ಪ್ರೀತಿ ತೋರಿಸುವ ಮೂಲಕ ನಾವೂ ಒಂದು ದಿನ ಹಿರಿಯ ನಾಗರಿಕರಾಗಲಿದ್ದೇವೆ ಎಂಬ ಸತ್ಯವನ್ನು ಅರಿತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ವುಡ್ಸ್ ಅಧ್ಯಕ್ಷೆ ರೊ.ಪ್ರಮೀಳಾ ಶೆಟ್ಟಿ ಅವರು ಹಿರಿಯರು ನಡೆದು ಬಂದ ದಾರಿ ಕಿರಿಯರಿಗೆ ದಾರಿ ದೀಪದಂತಿದೆ ಎಂದರು. ಹಿರಿಯ ನಾಗರಿಕರನ್ನು ಮರದ ಆಳವಾದ ಬೇರಿಗೆ ಹೋಲಿಸಿದ ಅವರು, ಸುಮಧುರ ಗೀತೆ ಹಾಡುವ ಮೂಲಕ ಕಾರ್ಯಕ್ರಮದ ಮಹತ್ವವನ್ನು ಸಾರಿದರು. ಸುಬ್ರಾಯ ಸಂಪಾಜೆ ಅವರು ಹಿರಿಯ…

Read More

ಮಡಿಕೇರಿ ಆ.20 NEWS DESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶ್ರೀ ಪೇರಿಯಂಡ ಪಿ. ಪೆಮ್ಮಯ್ಯ ಮತ್ತು ಶ್ರೀಮತಿ ಜಿ.ಕೆ. ದೇವಕಿ ಪೆಮ್ಮಯ್ಯ ದಂಪತಿಗಳು ಸ್ಥಾಪಿಸಿರುವ ದತ್ತಿಯ ಆಶಯದಂತೆ, ಕೊಡಗು ಜಿಲ್ಲೆಯ ಲೇಖಕರು ರಚಿಸಿರುವ ಉತ್ತಮ ಕೃತಿಗೆ ‘ಶ್ರೀ ಪೇರಿಯಂಡ ಪಿ. ಪೆಮ್ಮಯ್ಯ ಮತ್ತು ಶ್ರೀಮತಿ ಜಿ.ಕೆ. ದೇವಕಿ ಪೆಮ್ಮಯ್ಯ ದತ್ತಿ ಪ್ರಶಸ್ತಿ’ ನೀಡಲು ಕೃತಿಗಳನ್ನು ಆಹ್ವಾನಿಸಲಾಗಿದೆ. 2026-27ನೇ ಸಾಲಿನಲ್ಲಿ ನೀಡಲಾಗುವ ಪ್ರಥಮ ಪ್ರಶಸ್ತಿಗೆ ಕೊಡಗು ಜಿಲ್ಲೆಯ ಲೇಖಕ-ಲೇಖಕಿಯರು ತಾವು ಪ್ರಕಟಿಸಿರುವ ಕಥೆ, ಕವನ, ಕಾದಂಬರಿ, ಕಥಾ ಸಂಕಲನ, ವೈಚಾರಿಕ ಲೇಖನಮಾಲೆ ಹಾಗೂ ಲೇಖನಗಳ ಗುಚ್ಛ ಸೇರಿದಂತೆ ವಿವಿಧ ಕೃತಿಗಳನ್ನು ಸ್ಪರ್ಧೆಗೆ ಕಳುಹಿಸಬಹುದು. ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ತಮ್ಮ ಕೃತಿಯ ನಾಲ್ಕು ಪ್ರತಿಗಳನ್ನು ಕಳುಹಿಸಬೇಕು. 2021ರ ನಂತರ ಪ್ರಕಟಗೊಂಡ ಕೃತಿಗಳನ್ನು ಮಾತ್ರ ಪರಿಗಣಿಸಲಾಗುವುದು. ಸ್ಪರ್ಧೆಗೆ ಕೃತಿ ಕಳುಹಿಸುವವರು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿರಬೇಕು. ಒಬ್ಬ ಲೇಖಕರು ಒಂದು ಕೃತಿಯನ್ನು ಮಾತ್ರ ಕಳುಹಿಸಬಹುದಾಗಿದೆ. ಕೃತಿಯ ಲಕೋಟೆಯ ಮೇಲೆ ‘ಶ್ರೀ ಪೇರಿಯಂಡ…

Read More

ಮಡಿಕೇರಿ, ಆ.20 NEWS DESK : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ವತಿಯಿಂದ ವಿಶೇಷ ಆರೋಗ್ಯ ಕಾರ್ಯಕ್ರಮವು ಗುರುವಾರ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಸನತ್ ಕುಮಾರ್ ಉದ್ಘಾಟಿಸಿದರು. ಐಸಿಟಿಸಿ ಮತ್ತು ಡಿಎಸ್‌ಆರ್‌ಸಿ ವೈದ್ಯಾಧಿಕಾರಿ ಡಾ. ಹರ್ಷವರ್ಧನ್, ಚರ್ಮರೋಗ ವಿಭಾಗದ ಮುಖ್ಯಸ್ಥ ಡಾ. ಪುರುಷೋತ್ತಮ್, ಮಕ್ಕಳ ವಿಭಾಗದ ಮುಖ್ಯಸ್ಥರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಬಳಿಕ ಮಾತನಾಡಿದ ಡಾ. ಸನತ್ ಕುಮಾರ್, ಯುವಜನರಲ್ಲಿ ಎಚ್‌ಐವಿ ಸೋಂಕಿನ ತಡೆಗಟ್ಟುವಿಕೆ ಹಾಗೂ ನಿಯಂತ್ರಣದ ಮಹತ್ವ, ಏಡ್ಸ್ ಸುರಕ್ಷಾ ಕಾರ್ಯಕ್ರಮದಡಿ ಕೈಗೊಳ್ಳಲಾಗುತ್ತಿರುವ ಮೊಬಿಲೈಸೇಷನ್ ಚಟುವಟಿಕೆಗಳು ಹಾಗೂ ಜಿಲ್ಲೆಯಲ್ಲಿ 95:95:99 ಗುರಿಯನ್ನು ಸಾಧಿಸುವ ಅಗತ್ಯತೆಯ ಕುರಿತು ಮಾಹಿತಿ ನೀಡಿದರು. ಎಚ್‌ಐವಿ ಮತ್ತು ಸಿಫಿಲಿಸ್ ಕುರಿತು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಸೇವೆಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಡಾ. ಹರ್ಷವರ್ಧನ್ ಅವರು ಯುವಜನರಲ್ಲಿ…

Read More

ಮಡಿಕೇರಿ, ಆ.20 NEWS DESK : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ವಿರಾಜಪೇಟೆ ಹಾಗೂ ಪೊನ್ನಂಪೇಟೆ ಇವರ ಸಂಯುಕ್ತಾಶ್ರಯದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಸಾಮಾಜಿಕ ಕ್ರಾಂತಿಯ ಹರಿಕಾರ ಡಿ. ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆಯನ್ನು ಪೊನ್ನಂಪೇಟೆ ಸಾಮರ್ಥ್ಯ ಸೌಧದಲ್ಲಿ  ಆಚರಿಸಲಾಯಿತು. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಪೊನ್ನಂಪೇಟೆ ತಹಶೀಲ್ದಾರ್ ಸಿ.ಎಸ್. ಸಂಜನಾ ಅವರು ಚಾಲನೆ ನೀಡಿ, ಡಿ. ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಡಿ. ದೇವರಾಜ ಅರಸು ಅವರ ಕುರಿತು ಬಿ.ಸಿ. ಪ್ರೌಢಶಾಲೆಯ ಮುಖ್ಯ ಶಿಕ್ಷಕ ಲೋಕೇಶ್ ಅವರು ಉಪನ್ಯಾಸ ನೀಡಿದರು. ದೇವರಾಜ ಅರಸು ಅವರ ಸಾಧನೆ ಹಾಗೂ ಸಾಮಾಜಿಕ ಸುಧಾರಣೆಗಳನ್ನು ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು. ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಬಗರ್ ಹುಕುಂ ಸಕ್ರಮೀಕರಣ ಸಮಿತಿಯ ಅಧ್ಯಕ್ಷ ಎ.ಬಿ. ಅಪ್ಪಣ್ಣ, ವಿರಾಜಪೇಟೆ ಹಾಗೂ ಪೊನ್ನಂಪೇಟೆ ಗ್ಯಾರಂಟಿ ಸಮಿತಿಗಳ ತಾಲೂಕು ಅಧ್ಯಕ್ಷರಾದ ಪ್ರಶಾಂತ್ ಹಾಗೂ ಜಾನ್ಸನ್, ವಿರಾಜಪೇಟೆ ತಾ.ಪಂ. ಇಒ ರಾಜೇಶ್ ಕೆ.ಆರ್., ಉಪ ತಹಶೀಲ್ದಾರ್ ಪ್ರದೀಪ್ ಕುಮಾರ್, ಸಹಾಯಕ…

Read More

ಮಡಿಕೇರಿ ಆ.20 NEWS DESK : ನಗರದ ಕೋಟೆ ಆವರಣಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ಭಾರತೀಯ ಪುರಾತತ್ವ ಇಲಾಖೆಯವರು ಜಾಗ ನೀಡಿದಲ್ಲಿ ಕೋಟೆ ಆವರಣದಲ್ಲಿ ಶೀಘ್ರವೇ ಹೈಟೆಕ್ ಶೌಚಾಲಯ ನಿರ್ಮಿಸಲಾಗುವುದು. ಈ ನಿಟ್ಟಿನಲ್ಲಿ ಅಗತ್ಯ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ತಿಳಿಸಿದರು. ಸರ್ಕಾರಿ ವಸ್ತುಸಂಗ್ರಹಾಲಯದ ಕ್ಯೂರೇಟರ್ ಬಿ.ಪಿ.ರೇಖಾ ಮಾತನಾಡಿ, ನಗರದ ಕೋಟೆಯಲ್ಲಿರುವ ಪುರಾತತ್ವ ಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆಯ ವ್ಯಾಪ್ತಿಗೆ ಕೋಟೆ ಅರಮನೆಯನ್ನು ನೀಡಿದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದರು. ಕೋಟೆಯ ಹಿಂಭಾಗ ಸೇರಿದಂತೆ ಆವರಣದಲ್ಲಿ ಕಾಡು ಬೆಳೆದಿದ್ದು, ಸ್ವಚ್ಛತೆ ಹಾಗೂ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಕೋಟೆಯನ್ನು ರಾಜ್ಯ ಪುರಾತತ್ವ ಇಲಾಖೆಗೆ ವಹಿಸಿದಲ್ಲಿ ಅಗತ್ಯ ನಿರ್ವಹಣಾ ಕಾರ್ಯಗಳನ್ನು ಸಮರ್ಪಕವಾಗಿ ಕೈಗೊಳ್ಳಬಹುದು ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು. ಕೋಟೆ ಅರಮನೆಯ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದಿಂದ ರೂ.10 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಈ ಕಾಮಗಾರಿಗಳನ್ನು…

Read More