ಮಡಿಕೇರಿ NEWS DESK ಸೆ.30: ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ಗೋಣಿಕೊಪ್ಪದಲ್ಲಿ ವೈಭವದ ದಸರಾ ಆಚರಣೆ ಹಿನ್ನೆಲೆಯಲ್ಲಿ ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟು ಅಗತ್ಯ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಹಿಂದಿನ ಸಾಲಿಗಿಂತಲೂ ಹೆಚ್ಚಿನ ಪೊಲೀಸ್ ಸಿಬ್ಬಂದಿ ಮತ್ತು ಭದ್ರತಾ ವ್ಯವಸ್ಥೆ ಒದಗಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾಹಿತಿ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಮಾಹಿತಿ ನೀಡಿದ ಎಸ್.ಪಿ. ರಾಮರಾಜನ್ ಅವರು ಈ ಬಾರಿ ಮಡಿಕೇರಿ ದಸರಾಕ್ಕೆ ಕೆಎಸ್‌ಆರ್‌ಪಿ, ಡಿಎಆರ್ ಸಹಿತ ಒಟ್ಟು 1500 ಹಾಗೂ ಗೋಣಿಕೊಪ್ಪ ದಸರಾ ಕಾರ್ಯಕ್ರಮಕ್ಕೆ 600 ಪೊಲೀಸ್ ಸಿಬ್ಬಂದಿಗಳನ್ನು ಬಂದೋಬಸ್ತ್ ಗೆ ಬಳಸಿಕೊಳ್ಳಲಾಗುತ್ತಿದೆ. ಮಹಿಳೆಯರ ಸುರಕ್ಷತೆ, ಜನ ಸಂದಣಿ ಏರ್ಪಡುವ ಸ್ಥಳಗಳಲ್ಲಿ ಸೂಕ್ತ ನಿಯಂತ್ರಣಕ್ಕೆ ಜಂಬೋ ತಂಡಗಳನ್ನು ರಚಿಸಲಾಗಿದೆ. ಓರ್ವ ಮಹಿಳಾ ಮತ್ತು ಓರ್ವ ಎಸ್.ಐ. ದರ್ಜೆಯ ಅಧಿಕಾರಿ ಸಹಿತ 10ರಿಂದ 15 ಮಂದಿ ಸಿಬ್ಬಂದಿಗಳು ಈ ತಂಡದಲ್ಲಿರಲಿದ್ದು, ಅಹಿತಕರ ಘಟನೆಗಳ ಬಗ್ಗೆ ಹದ್ದಿನ ಕಣ್ಣಿಡಲಿದ್ದಾರೆ. ಮಡಿಕೇರಿಯಲ್ಲಿ 10 ಮತ್ತು…
ಲೇಖಕ: admin
ಮಡಿಕೇರಿ NEWS DESK ಸೆ.30 : ರಾಜ್ಯ ಸರಕಾರದ ವತಿಯಿಂದ ಇದೇ ಸೆ.22 ರಿಂದ ಅ.7ರ ವರೆಗೆ ನಡೆಯಲಿರುವ ಜಾತಿವಾರು ಗಣತಿಯ ಸಂದರ್ಭ ಜಾತಿ, ಭಾಷೆ ಮತ್ತು ಧರ್ಮದ ಕಾಲಂನಲ್ಲಿ “ಕೊಡವ” ಎಂದೇ ಬರೆಸುವ ಮೂಲಕ ಆ್ಯನಿಮಿಸ್ಟಿಕ್ ಏಕ-ಜನಾಂಗೀಯ ಆದಿಮಸಂಜಾತ ಕೊಡವರ ಸಮಗ್ರ ಸಬಲೀಕರಣಕ್ಕೆ ಕೊಡವರು ಕಟಿಬದ್ಧರಾಗಿರಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಕರೆ ನೀಡಿದ್ದಾರೆ. ಸಿಎನ್‌ಸಿ ಸಂಘಟನೆ ವತಿಯಿಂದ ಬೇಂಗ್ ನಾಡಿನ ಚೇರಂಬಾಣೆಯಲ್ಲಿ ನಡೆದ 14ನೇ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹಿಂದೂ ಧರ್ಮದ ಬಗ್ಗೆ ವಿಶ್ಲೇಷಿಸಿ ಹಿಂದೂ ಎನ್ನುವುದು ಒಂದು ಧರ್ಮವಲ್ಲ. ಅದೊಂದು ಜೀವನ ಶೈಲಿ ಎಂದು ಬಹಳ ಸೊಗಸಾಗಿ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಈ ಸಂಬಂಧ “ಹಿಂದೂ ಒಂದು ಧರ್ಮವಲ್ಲ, ಅದೊಂದು ಜೀವನ ಶೈಲಿ” ಎಂದು ಹೊರಡಿಸಿದ ತೀರ್ಪನ್ನು ಕೂಡ ಮೋದಿಯವರು ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ…
ಮಡಿಕೇರಿ NEWS DESK ಸೆ.30 : ರಸ್ತೆ ಅವ್ಯವಸ್ಥೆ ವಿರುದ್ಧ ಬಿಜೆಪಿ ನಡೆಸಿದ ಪ್ರತಿಭಟನೆಯಿಂದ ಮುಜುಗರಗೊಂಡಿರುವ ಕಾಂಗ್ರೆಸ್ಸಿಗರು ಜನರ ಹಾದಿ ತಪ್ಪಿಸುವುದಕ್ಕಾಗಿ ಅನುದಾನ ಮತ್ತು ಅಭಿವೃದ್ಧಿಯ ವಿಚಾರದಲ್ಲಿ ಕಟ್ಟುಕಥೆ ಹೇಳುತ್ತಿದ್ದಾರೆ. ಕಳೆದ 2 ವರ್ಷಗಳಲ್ಲಿ 1266 ಕೋಟಿ ರೂ. ಅನುದಾನ ಬಂದಿದ್ದರೆ ಅಭಿವೃದ್ಧಿ ಕಾರ್ಯಗಳನ್ನು ಸಾಕ್ಷೀಕರಿಸಲಿ ಎಂದು ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಆಗ್ರಹಿಸಿದ್ದಾರೆಪತ್ರಿಕಾ ಪ್ರಕಟಣೆ ನೀಡಿರುವ ಅವರು ಅಭಿವೃದ್ಧಿ ಕಾರ್ಯಗಳು ಕುಂಟಿತಗೊಂಡಾಗ ಮತ್ತು ಸರಕಾರ ಹಾದಿ ತಪ್ಪಿದಾಗ ಎಚ್ಚರಿಸುವ ಕಾರ್ಯವನ್ನು ವಿರೋಧ ಪಕ್ಷಗಳು ಮಾಡುತ್ತವೆ. ಪ್ರಸ್ತುತ ವಿರೋಧ ಪಕ್ಷದ ಸ್ಥಾನದಲ್ಲಿರುವ ಬಿಜೆಪಿ ಕೂಡ ಇದನ್ನೇ ಮಾಡುತ್ತಿದೆ. ಪ್ರತಿಭಟನೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಮರೆತು ಜನರ ಹಿತವನ್ನು ಕಡೆಗಣಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಸಮರ್ಪಕವಾಗಿ ರಸ್ತೆಯನ್ನು ಅಭಿವೃದ್ಧಿ ಪಡಿಸದ ಜನಪ್ರತಿನಿಧಿಗಳು ಈಗ ಮಳೆಯ ನೆಪವೊಡ್ಡಿ ಕಾಲಹರಣ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದ್ದಾರೆ. 1266 ಕೋಟಿ ರೂ. ಅನುದಾನ ತಂದಿರುವುದಾಗಿ ಕಾಗದದ ಮೂಲಕ ತೋರಿಸುತ್ತಿರುವವರು ಈ…
ಮಡಿಕೇರಿ NEWS DESK ಸೆ.30 : ಚಾಲಕನ ನಿಯಂತ್ರಣ ಕಳೆದುಕೊಂಡ ಪ್ರವಾಸಿ ವಾಹನವೊಂದು ಡಿಕ್ಕಿಯಾದ ಪರಿಣಾಮ ಮಡಿಕೇರಿ ನಗರದಲ್ಲಿರುವ ಸ್ವಾತಂತ್ರ್ಯ ಸೇನಾನಿ ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆಯಿರುವ ಉದ್ಯಾನವನದ ಕಾಂಪೌಂಡ್ ಗೆ ಹಾನಿಯಾಗಿದೆ. ಸ್ಥಳಕ್ಕೆ ನಗರ ಪೊಲೀಸರು ಹಾಗೂ ಗೌಡ ಸಮಾಜದ ಪ್ರಮುಖರು ಭೇಟಿ ನೀಡಿ ಪರಿಶೀಲಿಸಿದರು. (ಚಿತ್ರ ವರದಿ : ಶಿವು, ಮಡಿಕೇರಿ)
ಮಡಿಕೇರಿ NEWS DESK ಸೆ.30 : ಮಡಿಕೇರಿಯ ಸರಕಾರಿ ಮಹಿಳಾ ಕಾಲೇಜು ಮತ್ತು ರೋಟರಿ ಮಡಿಕೇರಿ ವುಡ್ಸ್ ನ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ನಡೆದ ಜಿಲ್ಲಾ ಮಟ್ಟದ ಅಂತರ ಕಾಲೇಜು ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪುರುಷರ ವಿಭಾಗದಲ್ಲಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಹಾಗೂ ಮಹಿಳೆಯರ ವಿಭಾಗದಲ್ಲಿ ಗೋಣಿಕೊಪ್ಪದ ಕಾವೇರಿ ಕಾಲೇಜು ಗೆಲುವು ಸಾಧಿಸಿದವು. ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಂತರ ಕಾಲೇಜು ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ರೋಟರಿ ಮಡಿಕೇರಿ ವುಡ್ಸ್ ನ ಅಧ್ಯಕ್ಷ ರೋ.ಕಿರಣ್ ಕುಂದರ್ ಹಾಗೂ ಕಾರ್ಯದರ್ಶಿ ರೋ.ಪ್ರಮಿಳಾ ಶೆಟ್ಟಿ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಸರಕಾರಿ ಮಹಿಳಾ ಕಾಲೇಜ್ ನ ಪ್ರಾಂಶುಪಾಲರಾದ ನಿರ್ಮಲಾ, ದೈಹಿಕ ಶಿಕ್ಷಣ ನಿರ್ದೇಶಕರಾದ ರಾಖಿ ಪೂವಣ್ಣ, ರೋಟರಿ ವುಡ್ಸ್ ಮಾಜಿ ಅಧ್ಯಕ್ಷ ರೋ.ವಸಂತ್ ಕುಮಾರ್, ರೋ.ರವಿಕುಮಾರ್, ರೋ.ಕಶ್ಯಪ್, ರೋ.ರಾಜೇಶ್ ಚೌಧರಿ ಮತ್ತಿತರರು ಉಪಸ್ಥಿತರಿದ್ದರು. ಪಂದ್ಯಾವಳಿಯ ಪುರುಷರ ಹಾಗೂ ಮಹಿಳೆಯರ ವಿಭಾಗಗಳಲ್ಲಿ ತಲಾ ಎಂಟು ತಂಡಗಳು ಸ್ಪರ್ಧಿಸಿದವು. ಎರಡೂ ವಿಭಾಗಗಳಲ್ಲಿ ಮಡಿಕೇರಿಯ ಫೀಲ್ಡ್…
ಮಡಿಕೇರಿ ಸೆ.30 NEWS DESK : ರಾಜ್ಯದ 183 ಪಿಕಾರ್ಡ್ ಬ್ಯಾಂಕುಗಳ ಪೈಕಿ ಮಡಿಕೇರಿ ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ಗೆ ನಾಲ್ಕನೇ ಬಾರಿಗೆ ಕಾಸ್ಕಾರ್ಡ್ ಬ್ಯಾಂಕ್ ನೀಡುವ ಅತ್ಯುತ್ತಮ ಪ್ರಶಸ್ತಿ ಲಭಿಸಿದ್ದು, ವಸೂಲಾತಿಯಲ್ಲಿಯೂ ಎರಡು ಬಾರಿ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು ಬ್ಯಾಂಕ್‍ನ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ತನ್ನ ನೇತೃತ್ವದಲ್ಲಿ ಕಳೆದ ಮೂರು ವರ್ಷಗಳಿಂದ ರಾಜ್ಯದ 183 ಬ್ಯಾಂಕ್‍ಗಳ ಪೈಕಿ ಮಡಿಕೇರಿ ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಕಾಸ್ಕಾರ್ಡ್ ಬ್ಯಾಂಕ್ ನೀಡುವ ಅತ್ಯುತ್ತಮ ಪ್ರಶಸ್ತಿ ಭಾಜನವಾಗಿದೆ. ಈ ಸಾಲಿನಲ್ಲಿಯೂ ಎರಡು ಅತ್ಯುತ್ತಮ ಪ್ರಶಸ್ತಿಗಳಾದ ಶೇಕಡವಾರು ಅತೀ ಹೆಚ್ಚು ವಸೂಲಾತಿ (ಶೇ.98.60) ಹಾಗೂ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಎರಡು ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಅಲ್ಲದೆ ಜಿಲ್ಲಾ ಮಟ್ಟದಲ್ಲಿ ನೀಡುವ ಪ್ರಶಸ್ತಿಯನ್ನು 19ನೇ ಬಾರಿ ಪಡೆದಿದೆ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ…
ಮಡಿಕೇರಿ ಸೆ.30 NEWS DESK : ಪುಟಾಣಿ ಮಕ್ಕಳ ಸುಪ್ತ ಪ್ರತಿಭೆಯ ಅನಾವರಣದೊಂದಿಗೆ, ಸಾಮಾಜಿಕ ವ್ಯವಹಾರಗಳ ಕುರಿತು ಅವರಲ್ಲಿ ಅರಿವು ಮೂಡಿಸುವ ಮಕ್ಕಳ ಸಂತೆ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ‘ಮಕ್ಕಳ ದಸರಾ ಉತ್ಸವ’ದ ಸಂಭ್ರಮ ಗಾಂಧಿ ಮೈದಾನದ ಉದ್ದಗಲಕ್ಕೂ ವ್ಯಾಪಿಸಿ ಸಂತಸ ಮೂಡಿಸಿತು. ಮಡಿಕೇರಿ ನಗರ ದಸರಾ ಸಮಿತಿ, ದಸರಾ ಜನೋತ್ಸವ ಸಾಂಸ್ಕೃತಿಕ ಸಮಿತಿ ವತಿಯಿಂದ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಮಕ್ಕಳ ಸಂತೆ ನಡೆಯಿತು. ನಗರದ ಗಾಂಧಿ ಮೈದಾನದಲ್ಲಿ ನಡೆದ ಮಕ್ಕಳ ಸಂತೆಯಲ್ಲಿ ಮಕ್ಕಳ ವ್ಯಾಪಾರ, ವ್ಯವಹಾರ ವಹಿವಾಟು ಜೋರಾಗಿಯೇ ನಡೆಯಿತು. ಅತ್ಯಧಿಕ ವಿದ್ಯಾರ್ಥಿಗಳ ತಂಡವು ನೋಂದಣಿ ಮಾಡಿಕೊಂಡು ಮಕ್ಕಳ ಸಂತೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಪಾಲಕ್, ಮೆಂತೆ, ಸಬ್ಸಿಗೆ, ದಂಡು, ಕೀರೆ, ಗಣಿಕೆ, ನೊಗ್ಗೆ, ಬಸಳೆ, ಎಲೆಕೋಸು, ವೀಳ್ಯದೆಲೆಯಿಂದ ಹಿಡಿದು ಎಲ್ಲಾ ರೀತಿಯ ಸೊಪ್ಪುಗಳು, ತರಕಾರಿ ವಿಭಾಗದಲ್ಲಿ ಕುಂಬಳ, ಬೂದುಕುಂಬಳ, ಸೌತೆಕಾಯಿ, ಸೋರೆಕಾಯಿ ವಿವಿಧ ರೀತಿಯ ತರಕಾರಿಗಳು, ಹಣ್ಣುಗಳಲ್ಲಿ ಬಾಳೆ, ಕಿತ್ತಳೆ, ಚಕೋತಾ, ಸೇಬು, ಮತ್ತೊಂದು ಬದಿಯಲ್ಲಿ ಪಾನಿಪೂರಿ, ಮಸಾಲಪೂರಿ,…
ನಾಪೋಕ್ಲು ಸೆ.30 NEWS DESK : ಮೂರ್ನಾಡು ಬಿಜೆಪಿ ಶಕ್ತಿ ಕೇಂದ್ರದಲ್ಲಿ ಮಡಿಕೇರಿ ಬಿಜೆಪಿ ಗ್ರಾಮಾಂತರ ಮಂಡಲ ವತಿಯಿಂದ “ಸೇವಾಪಾಕ್ಷಿಕ” ಕಾರ್ಯಕ್ರಮ ನಡೆಯಿತು. ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ರಕ್ತ ದಾನ ಶಿಬಿರ, ಜನ ಸಂಘದ ಸ್ಥಾಪಕರಾದ ಶ್ರೀ ದೀನ್ ದಯಾಳ್ ಉಪಾಧ್ಯಾಯರ ಅವರ ಜನ್ಮ ದಿನದ ಆಚರಣೆ ಮತ್ತು ಮೂರ್ನಾಡು ಆಸ್ಪತ್ರೆ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ ನೆರವೇರಿತು. ಮೂರ್ನಾಡು ಶಕ್ತಿ ಕೇಂದ್ರದ ಅಧ್ಯಕ್ಷ ರವಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಅಶ್ವಿ ಸತೀಶ್, ಯುವ ಮೋರ್ಚಾ ಅಧ್ಯಕ್ಷ ಚೇತನ್ ಬಂಗೇರ, ಮಹಿಳಾ ಮೋರ್ಚಾ ಅಧ್ಯಕ್ಷ ಕುಮುದ ಮತ್ತು ಬಿಜೆಪಿ ಕಾರ್ಯಕರ್ತರು ಶಕ್ತಿ ಕೇಂದ್ರದ ಪ್ರಮುಖ್ ಸಹ ಪ್ರಮುಖ್ ಮತ್ತು ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಮಡಿಕೇರಿ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಸ್ವಾಗತಿಸಿ ವಂದಿಸಿದರು. ವರದಿ…
ಮಡಿಕೇರಿ ಸೆ.30 NEWS DESK : ಪೆರಾಜೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಬಿ.ಎಸ್.ಎನ್.ಎಲ್ ಟವರ್ ಕಾಮಗಾರಿಯು ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಂಪರ್ಕ ಜಾಲವನ್ನು ಒದಗಿಸಲಾಗುತ್ತದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ತಿಳಿಸಿದ್ದಾರೆ. ಇನ್ನೂ ಕೇವಲ ಸೋಲಾರ್ ಪ್ಯಾನೆಲ್ ಅಳವಡಿಕೆ ಮತ್ತು ತಾಂತ್ರಿಕ ಪ್ರಕ್ರಿಯೆಗಳು ಬಾಕಿ ಇರುವುದಾಗಿ ಅಧಿಕಾರಿಗಳು ವರದಿ ನೀಡಿರುವುದಾಗಿ ಯದುವೀರ್ ಒಡೆಯರ್ ಹೇಳಿದರು.
ಮಡಿಕೇರಿ NEWS DESK ಸೆ.30 : ಕರ್ನಾಟಕ ರಾಜ್ಯ ಸರ್ಕಾರದಿಂದ ಪ್ರಸ್ತುತ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಮತ್ತು ಜಾತಿ ಜನಗಣತಿಯಲ್ಲಿ ಹಾಗೂ ಮುಂದೆ ಕೇಂದ್ರ ಸರ್ಕಾರ ನಡೆಸುವ ಗಣತಿಯ ಸಂದರ್ಭ ಜಾತಿಯ ಕಾಲಂನಲ್ಲಿ ಸರ್ವ ಅರೆಭಾಷೆ ಗೌಡರು GOWDA (ಗೌಡ) ಎಂದು, ಉಪಜಾತಿ ಅರೆಭಾಷೆ ಗೌಡ, ಮಾತೃ ಭಾಷೆ ಅರೆಭಾಷೆ ಎಂದು ನಮೂದಿಸುವಂತೆ ಬೆಂಗಳೂರು ಕೊಡಗು ಗೌಡ ಯುವ ವೇದಿಕೆಯ ಅಧ್ಯಕ್ಷರಾದ ನಂಗಾರು ಮಮತಾ ಅವರು ಮನವಿ ಮಾಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರಸ್ತುತ ರಾಜ್ಯ ಸರ್ಕಾರ ನಡೆಸುತ್ತಿರುವ ಮತ್ತು ಮುಂದೆ ಕೇಂದ್ರ ಸರಕಾರ ನಡೆಸಲಿರುವ ಜಾತಿ ಜನಗಣತಿಯಲ್ಲಿ ಕೊಡಗಿನ ಅರೆಭಾಷೆ ಗೌಡರು ಕಡ್ಡಾಯವಾಗಿ ಜಾತಿಯ ಕಾಲಂನಲ್ಲಿ GOWDA (ಗೌಡ) ಎಂದು ನಮೂದಿಸಬೇಕು. ಗಣತಿಯಲ್ಲಿ ತಮ್ಮ ಜಾತಿಗೆ ಇರುವ ಇನ್ನೊಂದು ಹೆಸರು ಎಂಬ ಕಾಲಂ ಕೂಡ ಇದ್ದು, ಇದರಲ್ಲಿ ಒಕ್ಕಲಿಗ, ಕೊಡಗು ಗೌಡ, ಅರೆಭಾಷೆ ಒಕ್ಕಲಿಗ ಎಂದು ನಮೂದಿಸಲು ಸಲಹೆ ನೀಡಿದ್ದಾರೆ. ರಾಜ್ಯ ಸರಕಾರವು ಈಗಾಗಲೇ ಸಾಮಾಜಿಕ,…






