ಮಡಿಕೇರಿ NEWS DESK ಅ.1 : ನಗರದ ದೇಚೂರು ಶ್ರೀ ರಾಮಮಂದಿರ ದೇವಾಲಯ ದಸರಾ ಮಂಟಪ ಸಮಿತಿ 107ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗುತ್ತಿದೆ ಎಂದು ದೇಚೂರು ಶ್ರೀ ರಾಮಮಂದಿರ ದೇವಾಲಯ ದಸರಾ ಮಂಟಪ ಸಮಿತಿ ಅಧ್ಯಕ್ಷ ಎ.ವೇಣುಗೋಪಾಲ್ ತಿಳಿಸಿದ್ದಾರೆ. 1 ಟ್ರ್ಯಾಕ್ಟರ್ ನ್ನು ಬಳಸಲಾಗುತ್ತಿದ್ದು, ಶ್ರೀರಾಮಾಂಜನೇಯ ವೈಭವ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ. ದಿಂಡಿಗಲ್ ಜೇಮ್ಸ್ ಲೈಟಿಂಗ್ ಬೋರ್ಡ್ ಅಳವಡಿಸಲಿದ್ದು, ಧ್ವನಿವರ್ಧಕ ಹಾಗೂ ಸ್ಟುಡಿಯೋ ಸೆಟ್ಟಿಂಗ್ಸ್ ವ್ಯವಸ್ಥೆಯನ್ನು ಸೋಮವಾರಪೇಟೆಯ ನಂದಿ ಸೌಂಡ್ಸ್ ನವರು ಮಾಡಲಿದ್ದಾರೆ. ಪ್ಲಾಟ್ ಫಾರಂನ್ನು ಸಮಿತಿ ಸದಸ್ಯರೆ ನಿರ್ಮಾಣ ಮಾಡಲಿದ್ದು, ಟ್ರ್ಯಾಕ್ಟರ್ ಸೆಟ್ಟಿಂಗ್ಸ್ ನ್ನು ಮಡಿಕೇರಿಯ ಅರುಣ ಮತ್ತು ತಂಡ ಮಾಡಲಿದೆ. 6 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಹುದುಬೂರಿನ ಮಹದೇವಪ್ಪ ಅಂಡ್ ಸನ್ಸ್ ಕಲಾಕೃತಿಗಳನ್ನು ತಯಾರಿಸಲಿದ್ದಾರೆ. ಒಟ್ಟು ರೂ.13 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದ್ದು, ಮಂಗಳೂರಿನ ಟೀಂ ಎಸ್‌ವಿ ಮಂಟಪವನ್ನು ಮುನ್ನಡೆಸಲಿದೆ ಎಂದು ವೇಣುಗೋಪಾಲ್ ಮಾಹಿತಿ ನೀಡಿದರು.
ಲೇಖಕ: admin
ಮಡಿಕೇರಿ NEWS DESK ಅ.1 : ನಗರದ ಶ್ರೀ ಚೌಡೇಶ್ವರಿ ಬಾಲಕ ಭಕ್ತ ಮಂಡಳಿಯು ಈ ಬಾರಿ 63ನೇ ವರ್ಷದ ದಸರಾ ಉತ್ಸವವನ್ನು ಆಚರಿಸಲು ಸಿದ್ದವಾಗಿದೆ ಎಂದು ಶ್ರೀ ಚೌಡೇಶ್ವರಿ ಬಾಲಕ ಭಕ್ತ ಮಂಡಳಿಯ ಅಧ್ಯಕ್ಷ ಡಿ.ಎ.ಜಗದೀಶ್ ತಿಳಿಸಿದ್ದಾರೆ. ಈ ಬಾರಿ ಮಂಟಪದಲ್ಲಿ ಆನಂದ ರಾಮಾಯಣದಿಂದ ಆರಿಸಿದ ಮಹಾ ಸಾದ್ವಿ ಸೀತೆಯ ಚಂಡಿಕಾವತಾರ ಎಂಬ ‘ಕಥೆ ಸಾರಾಂಶವನ್ನು ಅಳವಡಿಸಲಾಗುತ್ತಿದೆ. ಎರಡು ಟ್ರ್ಯಾಕ್ಟರ್ ಬಳಸಲಾಗುತ್ತಿದ್ದು, ದಿಂಡಿಗಲ್‌ನ ಮಾರ್ಟೀನ್ ಲೈಟಿಂಗ್ ಸಂಸ್ಥೆ ಲೈಟಿಂಗ್ ಬೋರ್ಡ್ ಅಳವಡಿಸಲಿದೆ. ಮಂಗಳೂರಿನ ಜೆಎಸ್ ಸೌಂಡ್ಸ್ ನವರು ಸ್ಟುಡಿಯೋ ಸೆಟ್ಟಿಂಗ್ ಹಾಗೂ ಸ್ಪೆಷಲ್ ಎಫೆಕ್ಟ್ ವ್ಯವಸ್ಥೆ ಮಾಡಲಿದ್ದು, ಮಂಗಳೂರಿನ ಸ್ವಸ್ತಿಕ್ ಫಯಸ್‌ನವರು ಫೈರ್ ಎಫೆಕ್ಟ್ ನೀಡಲಿದ್ದಾರೆ. ತಂಡದ ಸದಸ್ಯರಾದ ಜಯರಾಂ ಆಚಾರ್ಯ, ಶೇಖರ್, ಹರೀಶ್ ಭೀಮಯ್ಯ, ಜನ್ನು, ಶಶಿ, ಉಮೇಶ ಹಾಗೂ ಇತರರು ಪ್ಲಾಟ್ ಫಾರಂ ನಿರ್ಮಿಸಲಿದ್ದಾರೆ. ಕಲಾಕೃತಿಗಳಿಗೆ ಚಲನ ವಲನವನ್ನು ಸಮಿತಿಯ ಸದಸ್ಯರೇ ನೀಡಲಿದ್ದು, ಸಂಭಾಷಣೆ, ಧ್ವನಿ ಮುದ್ರಣ, ಸೆಟ್‌ವರ್ಕ್ ಹಾಗೂ ವಿಶೇಷ ಕಲಾಕೃತಿಗಳನ್ನು ಕ್ರಿಯೇಟಿವ್ ಸ್ಟುಡಿಯೋ ತಂಡ…
ಮಡಿಕೇರಿ NEWS DESK ಅ.1 : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾಗಿರುವ ಶ್ರೀ ಕೋಟೆ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿ 50ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗುತ್ತಿದೆ ಎಂದು ಶ್ರೀ ಕೋಟೆ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿ ಅಧ್ಯಕ್ಷ ಬಿ.ಕೆ.ಜಗದೀಶ್ ತಿಳಿಸಿದ್ದಾರೆ. ಸಮಿತಿ ಈ ಬಾರಿ ಸುವರ್ಣ ಮಹೋತ್ಸವ ಸಂಭ್ರಮದಲ್ಲಿದ್ದು, ವಿಷ್ಣು ಪುರಾಣದಿಂದ ಆಯ್ದ ದೇವ-ದೇವತೆಗಳ ಕಾಳಗ, ಶರಬವತಾರ ಹಾಗೂ ಪ್ರತ್ಯುಂಗ ದೇವಿಯಿಂದ ನರಸಿಂಹನ ಉಗ್ರ ಶಮನ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ. ಎರಡು ಟ್ರ್ಯಾಕ್ಟರ್ ಗಳನ್ನು ಬಳಸಲಾಗುತ್ತಿದ್ದು, ದಿಂಡಿಗಲ್‌ನ ಕಳೆಯಗಂ ಲೈಟಿಂಗ್ ಬೋರ್ಡ್ ಅಳವಡಿಸಲಿದ್ದಾರೆ. ಬೆಂಗಳೂರಿನ ಪ್ರೀತಿ ಸೌಂಡ್ಸ್ ನ ಶಿವರಾಜ್ ಮತ್ತು ತಂಡ ಧ್ವನಿವರ್ಧಕ, ಸ್ಟುಡಿಯೋ ಹಾಗೂ ಫೈಯರ್ ಎಫೆಕ್ಟ್ ವ್ಯವಸ್ಥೆ ಮಾಡಲಿದೆ. ಈ ತಂಡಕ್ಕೆ ಸಮಿತಿ ಸದಸ್ಯರಾದ ಪ್ರಶಾಂತ್ ತಂಡ ಸಹಕಾರ ನೀಡಲಿದೆ. ಪ್ಲಾಟ್‌ಫಾರಂನ್ನು ಸಮಿತಿ ಸದಸ್ಯರೆ ನಿರ್ಮಿಸಲಿದ್ದು, ಟ್ರ್ಯಾಕ್ಟರ್ ಸೆಟ್ಟಿಂಗ್ಸ್ ಹಾಗೂ ಕಲಾಕೃತಿಗಳ ಚಲನ ವಲನ ವ್ಯವಸ್ಥೆಯನ್ನು ಸಮಿತಿ ಸದಸ್ಯರಾದ ಪ್ರಸಾದ್…
ಮಡಿಕೇರಿ NEWS DESK ಅ.1 : ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದಲ್ಲಿ 150ಕ್ಕೂ ಅಧಿಕ ವರ್ಷಗಳಿಂದ ಪಾಲ್ಗೊಳ್ಳುತ್ತಾ ದಶಮಂಟಪಗಳ ಸಾರಥಿ ಎಂದೇ ಖ್ಯಾತಿಯಾಗಿರುವ ಪೇಟೆ ಶ್ರೀ ರಾಮಮಂದಿರ ದೇವಾಲಯ ದಸರಾ ಮಂಟಪ ಸಮಿತಿ ಈ ಬಾರಿಯ ಉತ್ಸವ ಆಚರಣೆಗೆ ಸಜ್ಜಾಗುತ್ತಿದೆ ಎಂದು ಸಮಿತಿಯ ಅಧ್ಯಕ್ಷ ಆರ್.ಎಸ್. ಶಿವಮೂರ್ತಿ ತಿಳಿಸಿದ್ದಾರೆ. ಎರಡು ಟ್ರ್ಯಾಕ್ಟರ್ ಗಳನ್ನು ಬಳಸಲಾಗುತ್ತಿದ್ದು, ಶ್ರೀ ಕೃಷ್ಣನಿಂದ ಗೀತೋಪದೇಶ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ. ದಿಂಡಿಗಲ್‌ನ ಸೆಲ್ವಂ ಎಲೆಕ್ಟ್ರಿಕ್ಸ್ ನವರು ಲೈಟಿಂಗ್ ಬೋರ್ಡ್ ಅಳವಡಿಸಲಿದ್ದು, ಕೊಣನೂರಿನ ಪಿಂಟೋ ಸೌಂಡ್ಸ್ನವರು ಧ್ವನಿವರ್ಧಕ ಹಾಗೂ ಸ್ಟುಡಿಯೋ ಸೆಟ್ಟಿಂಗ್ಸ್ ವ್ಯವಸ್ಥೆ ಮಾಡಲಿದ್ದಾರೆ. ಪ್ಲಾಟ್‌ಫಾರಂ ನಿರ್ಮಾಣ, ನೆಟ್‌ವರ್ಕ್ ಹಾಗೂ ಟ್ರ್ಯಾಕ್ಟರ್ ಸೆಟ್ಟಿಂಗ್ಸ್ ಮಡಿಕೇರಿ ಎಸ್‌ಕೆವೈಸಿ ತಂಡದವರು ಮಾಡಲಿದ್ದಾರೆ. ಒಟ್ಟು 4 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಸಮಿತಿ ಸದಸ್ಯರೇ ಕಲಾಕೃತಿಗಳನ್ನು ರಚಿಸಲಿದ್ದಾರೆ. ಒಟ್ಟು ರೂ. 10 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದೆ ಎಂದು ಶಿವಮೂರ್ತಿ ಮಾಹಿತಿ ನೀಡಿದರು.
ಗೋಣಿಕೊಪ್ಪ NEWS DESK ಅ.1 (ಜಗದೀಶ್ ಜೋಡುಬೀಟಿ) : ಗೋಣಿಕೊಪ್ಪ ದಸರಾದ ಪ್ರಮುಖ ಅಕರ್ಷಣೆಯಾದ ಶೋಭಾಯತ್ರೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ಮಂಟಪ ಸಮಿತಿಗಳು ಆಕರ್ಷಕ ಕಲಾಕೃತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿವೆ. ಪೌರಾಣಿಕ ಕಥೆಗಳನ್ನು ಆಧರಿಸಿ ಕಲಾಕೃತಿಗಳನ್ನು ನಿರ್ಮಿಸಲಾಗುತ್ತಿದೆ. ಜೆಸಿಬಿ ,ಟ್ಯಾಕ್ಟರ್, ಹಿಟಾಚಿ, ಲಾರಿ, ವ್ಯಾನ್ ಸೇರಿದಂತೆ ಇನ್ನಿತರ ವಾಹನಗಳನ್ನು ಬಳಸುವ ಮೂಲಕ ಜನಾಕರ್ಷಣೆಯ ಕಲಾಕೃತಿಗಳ ಅಳವಡಿಕೆಗೆ ತಯಾರಿ ನಡೆಯುತ್ತಿದೆ. ಪ್ರತಿ ವರ್ಷದಂತೆ ಎಂಟು ಮಂಟಪಗಳು ಪೈಪೋಟಿಗೆ ಇಳಿದು ಕಲಾಕೃತಿಯನ್ನು ನಿರ್ಮಿಸುತ್ತಿದೆ. ಶ್ರೀ ಕಾವೇರಿ ದಸರಾ ಸಮಿತಿಯ ಚಾಮುಂಡಿ ದೇವಿ ಹೊತ್ತ ಮಂಟಪವು ಮೊದಲ ಸಾಲಿನಲ್ಲಿ ಮೆರವಣಿಗೆ ಹೊರಡಲಿದೆ. ವಿಜಯದಶಮಿ ಮಧ್ಯಾಹ್ನ ಸ್ಥಬ್ಧ ಚಿತ್ರ ಮೆರವಣಿಗೆಯನ್ನು ಆಕರ್ಷಣೆಯಾವಾಗಿಸುವ ನಾಡ ಹಬ್ಬ ದಸರಾ ಸಮಿತಿಯ 36ನೇವರ್ಷದ ಅಚಾರಣೆಯಾಗಿ ಭಾರತಾಂಭೆ ಭಾವಚಿತ್ರ ಹೊತ್ತ ಮಂಟಪ ಸಾಗಲಿದೆ. ಇತರ ಏಂಟು ಮಂಟಪಗಳು ಮೆರವಣಿಗೆಯಲ್ಲಿ ಒಂದರ ಹಿಂದೆ ಒಂದರಂತೆ 47ನೇ ದಸರಾಜನೋತ್ಸವದ ಆಕರ್ಷಣೆಗೆ ಮೆರುಗು ನೀಡಲಿದೆ. 36ನೇ ವರ್ಷದಲ್ಲಿ ನಾಡಹಬ್ಬ ದಸರಾ ಸಮಿತಿ, 20ನೇ ವರ್ಷದಲ್ಲಿ ಅರುವತೊಕ್ಲು ಕಾಡ್ಲಯಪ್ಪ…
ಗೋಣಿಕೊಪ್ಪ NEWS DESK ಅ.1 (ಜಗದೀಶ್ ಜೋಡುಬೀಟಿ) : ಗೋಣಿಕೊಪ್ಪ ದಸರಾದ ಕಾವೇರಿ ಕಲಾ ವೇದಿಕೆಯಲ್ಲಿ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮಗಳು ಸಂಭ್ರಮಿಸಿದವು. ಸೈಕ್ಲೋನ್ ಡ್ಯಾನ್ಸ್ ಅಕಾಡೆಮಿ, ಸುವೃತ ನಾಟ್ಯಾಲಯ, ವಿಧ್ಯಾರ್ಥಿಗಳ ನೃತ್ಯ, ಗಾಯಕರುಗಳಾದ ಅನ್ವಿತ್‌ಕುಮಾರ್, ಪ್ರಜ್ಞಾ ಮರಾಠೆ ಇವರ ಹಾಡು ವೈವಿಧ್ಯಮಯ ಭಾವನೆಗಳಿಂದ ಗಮನ ಸೆಳೆಯಿತು. ಎರಡು ಸಹಸ್ರಕ್ಕೂ ಹೆಚ್ಚು ಜನರ ಉಪಸ್ಥಿತಿಯಲ್ಲಿ ವೇದಿಕೆಯಲ್ಲಿ 260ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ನಡೆದ ನೃತ್ಯ, ಗಾಯನ ಕಲಾ ಸಾಮರ್ಥ್ಯ ಪ್ರದರ್ಶನ ಪ್ರೇಕ್ಷಕರನ್ನು ಮುಧಗೊಳಿಸುವಲ್ಲಿ ಸಾರ್ಥಕತೆ ಖಂಡಿತು. ಸೈಕ್ಲೋನ್ ಡ್ಯಾನ್ಸ್ ಅಕಾಡೆಮಿ ವಿಧ್ಯಾರ್ಥಿಗಳ ವಿವಿಧ ನೃತ್ಯ ಪ್ರದರ್ಶನಗಳಿಂದ ಭಾವನಾತ್ಮಕ ಮತ್ತು ಕಲಾತ್ಮಕ ಅನುಭವಗಳನ್ನು ಪ್ರೇಕ್ಷಕರಿಗೆ ನೀಡಿದರು. ಸುವೃತ ನಾಟ್ಯಾಲಯದ ಮಕ್ಕಳ ಸ್ಪಂದನಾತ್ಮಕ ನೃತ್ಯದ ದೃಶ್ಯಗಳು ಪ್ರೇಕ್ಷಕರಲ್ಲಿ ಹೊಸ ಆಲೋಚನೆಗಳನ್ನು ಮೂಡಿಸಿದವು. ಅನ್ವಿತ್‌ಕುಮಾರ್ ಮತ್ತು ಪ್ರಜ್ಞಾ ಮರಾಠೆ ಅವರ ಕಂಠದಲ್ಲಿ ಮೂಡಿ ಬಂದ ಗಾಯನ ಪ್ರೇಕ್ಷಕರಿಗೆ ಸಂಭ್ರವಾಗಿ ತಲುಪಿತು. ಭರತನಾಟ್ಯ, ಜನಪದ ಕುಣಿತ, ಸಿನಿಮಾ ಗೀತೆ, ಮಹಾಭಾರತ ನೃತ್ಯ ರೂಪಕ, ಮಾಣಿಪುರಿ ಸ್ಟಿಕ್ ಡ್ಯಾನ್ಸ್, ನಿಸರ್ಗ ಕಲಾ…
ಮಡಿಕೇರಿ NEWS DESK ಅ.1 : ವಿಜಯ ದಶಮಿಯ ದಿನವಾದ ಅಕ್ಟೋಬರ್ 2 ರಂದು ಮಡಿಕೇರಿಯಲ್ಲಿ ದಶಮಂಟಪಗಳ ಶೋಭಾಯಾತ್ರೆಯನ್ನು ಮತ್ತು ಗಾಂಧಿ ಮೈದಾನದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲು ಜಿಲ್ಲೆಯ, ಹೊರ ಜಿಲ್ಲೆಯ, ರಾಜ್ಯದ, ಹೊರ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆ ಇದೆ. ಅ.3 ರಂದು ದಶ ಮಂಟಪಗಳ ಪ್ರದರ್ಶನ ಮುಗಿದ ನಂತರ ಐಜಿ ವೃತ್ತ, ಮಹದೇವಪೇಟೆಗಾಗಿ ಬನ್ನಿ ಮಂಟಪಕ್ಕೆ ತೆರಳಿ ಪೂಜೆ ಸಲ್ಲಿಸಿ ದೇವಸ್ಥಾನಗಳಿಗೆ ತೆರಳಲು ರಾತ್ರಿ 8 ಗಂಟೆ ಆಗಲಿದೆ. ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಸೇರುವುದಲ್ಲದೇ, ವಾಹನ ಸಂಚಾರವು ಹೆಚ್ಚು ಇರಲಿರುವುದರಿಂದ ಅಕ್ಟೋಬರ್ 3 ರಂದು ಮಡಿಕೇರಿ ನಗರದ ಸಂತೆ ರದ್ದುಗೊಳಿಸಲಾಗಿದೆ ಎಂದು ನಗರಸಭೆಯ ಪೌರಾಯುಕ್ತ ಎಚ್.ಆರ್.ರಮೇಶ್ ಅವರು ತಿಳಿಸಿದ್ದಾರೆ.
ಗೋಣಿಕೊಪ್ಪ NEWS DESK ಅ.1 : ಗೋಣಿಕೊಪ್ಪಲು ನಗರದ ಉಮಾಮಹೇಶ್ವರಿ ದೇವಸ್ಥಾನದಿಂದ ಹರಿಶ್ಚಂದ್ರಪುರದವರೆಗೆ, ಪೊನ್ನಂಪೇಟೆ ರಸ್ತೆ ಜಂಕ್ಷನ್‌ನಿಂದ ಕೆ.ಪಿ.ಟಿ.ಸಿ.ಎಲ್ ಕಚೇರಿಯವರೆಗೆ, ಪೊನ್ನಂಪೇಟೆ ರಸ್ತೆ, ಬೈಪಾಸ್ ರಸ್ತೆ ಜಂಕ್ಷನ್‌ನಿಂದ ಐಪಿ ಜಂಕ್ಷನ್‌ವರೆಗೆ, ಪಾಲಿಬೆಟ್ಟ ರಸ್ತೆಯಲ್ಲಿ ಗೋಣಿಕೊಪ್ಪದ ಕೂರ್ಗ್ ಪಬ್ಲಿಕ್ ಸ್ಕೂಲ್ ರಸ್ತೆಯವರೆಗೆ ಮುಖ್ಯ ಬೀದಿಯಲ್ಲಿ ರಸ್ತೆಯ ಬದಿಯಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಿದೆ. ಮೈಸೂರಿನಿಂದ ತಿತಿಮತಿ, ಗೋಣಿಕೊಪ್ಪ ಮಾರ್ಗವಾಗಿ ವಿರಾಜಪೇಟೆಗೆ ಬರುವ ವಾಹನಗಳು- ತಿತಿಮತಿ, ಪಾಲಿಬೆಟ್ಟ, ಅಮ್ಮತ್ತಿ ಮಾರ್ಗವಾಗಿ ವಿರಾಜಪೇಟೆಗೆ ಹೋಗುವುದು. ವಿರಾಜಪೇಟೆಯಿಂದ ಗೋಣಿಕೊಪ್ಪ-ತಿತಿಮತಿ ಮಾರ್ಗವಾಗಿ ಮೈಸೂರಿಗೆ ಹೋಗುವ ವಾಹನಗಳು- ಕೈಕೇರಿ ಗ್ರಾಮದ ಕಳತ್ಮಾಡ್-ಅತ್ತೂರು ಶಾಲೆ ಜಂಕ್ಷನ್- ಪಾಲಿಬೆಟ್ಟದ ಟಾಟಾ ಸ್ಟೋರ್ ಜಂಕ್ಷನ್-ತಿತಿಮತಿ ಮಾರ್ಗವಾಗಿ ಮೈಸೂರಿಗೆ ಹೋಗುವುದು. ಕೇರಳದಿಂದ ಪೆರುಂಬಾಡಿ-ಗೋಣಿಕೊಪ್ಪ ಮಾರ್ಗವಾಗಿ ಮೈಸೂರಿಗೆ ಹೋಗುವ ವಾಹನಗಳು- ಪೆರುಂಬಾಡಿ-ವಿರಾಜಪೇಟೆ-ಅಮ್ಮತ್ತಿ-ಸಿದ್ದಾಪುರ-ಪಿರಿಯಾಪಟ್ಟಣ-ಮೈಸೂರು ಮೂಲಕ ಹೋಗುವುದು. ವಿರಾಜಪೇಟೆಯಿಂದ ಗೋಣಿಕೊಪ್ಪ ಮಾರ್ಗವಾಗಿ-ಕಾನೂರು-ಶ್ರೀಮಂಗಲ-ಕುಟ್ಟ ಕಡೆಗಳಿಗೆ ಹೋಗುವ ವಾಹನಗಳು-ವಿರಾಜಪೇಟೆ-ಹಾತೂರು-ಕುಂದಾ-ಪೊನ್ನಂಪೇಟೆ ಮಾರ್ಗವಾಗಿ ಸಂಚರಿಸುವುದು. ಬಾಳಲೆಯಿಂದ ಗೋಣಿಕೊಪ್ಪ ಮಾರ್ಗವಾಗಿ ವಿರಾಜಪೇಟೆಗೆ ಹೋಗುವ ವಾಹನಗಳು-ಬಾಳಲೆ-ಪೊನ್ನಂಪೇಟೆ-ಕುಂದಾ-ಹಾತೂರು ಮಾರ್ಗವಾಗಿ ವಿರಾಜಪೇಟೆಗೆ ಸಂಚರಿಸುವುದು. ಕುಟ್ಟ, ಶ್ರೀಮಂಗಲ, ಕಾನೂರು ಕಡೆಯಿಂದ ಗೋಣಿಕೊಪ್ಪ ಮಾರ್ಗವಾಗಿ ವಿರಾಜಪೇಟೆಗೆ…
ಮಡಿಕೇರಿ NEWS DESK ಅ.1 : ಸೋಮವಾರಪೇಟೆ ಕಡೆಯಿಂದ ಬರುವ ವಾಹನಗಳು ಸಂಪಿಗೆ ಕಟ್ಟೆ ಕಡೆಯಿಂದ ಎ.ವಿ.ಶಾಲೆ, ಮುತ್ತಪ್ಪ ದೇವಸ್ಥಾನ ಮುಂದೆ ಸೆಂಟ್ ಜೋಸೆಫ್ ಕಾನ್ವೆಂಟ್ ಮೈದಾನದಲ್ಲಿ ವಾಹನ ನಿಲುಗಡೆಗೊಳಿಸುವುದು. ಎಸ್.ಪಿ ಕಚೇರಿ ಜಂಕ್ಷನ್, ಮುಂದೆ ಐಟಿಐ ಜಂಕ್ಷನ್ ಕಡೆಯಿಂದ ಎಫ್.ಎಂ.ಸಿ ಕಾಲೇಜು ಮೈದಾನದಲ್ಲಿ ವಾಹನಗಳನ್ನು ನಿಲುಗಡೆಗೊಳಿಸುವುದು. ಮೈಸೂರು ರಸ್ತೆ ಮತ್ತು ಸಿದ್ದಾಪುರ ಕಡೆಯಿಂದ ದಸರಾಕ್ಕೆ ಬರುವ ವಾಹನಗಳು ಚೈನ್‌ಗೇಟ್ ಮುಖಾಂತರ ತೆರಳಿ ಮ್ಯಾನ್ಸ್ ಕಾಂಪೌAಡ್ ಮೈದಾನದಲ್ಲಿ ನಿಲುಗಡೆಗೊಳಿಸುವುದು. ವಿರಾಜಪೇಟೆ, ಮೂರ್ನಾಡು ಕಡೆಯಿಂದ ದಸರಾಕ್ಕೆ ಬರುವ ವಾಹನಗಳು ಮೇಕೇರಿ ಶಾಲಾ ಮೈದಾನದಲ್ಲಿ ನಿಲುಗಡೆಗೊಳಿಸುವುದು. ಮಂಗಳೂರು ಕಡೆಯಿಂದ ದಸರಾಕ್ಕೆ ಬರುವ ವಾಹನಗಳು ತಾಳತ್ ಮನೆ ನೇತಾಜಿ ಮೈದಾನ ಮತ್ತು ದುರ್ಗ ಭಗವತಿ ದೇವಸ್ಥಾನ ಮೈದಾನದಲ್ಲಿ ನಿಲುಗಡೆಗೊಳಿಸುವುದು. ಗಾಳಿಬೀಡು ಅಬ್ಬಿಪಾಲ್ಸ್, ಕಾಲೂರು ಕಡೆಯಿಂದ ಬರುವ ವಾಹನಗಳು ಎಫ್.ಎಂ.ಸಿ ಕಾಲೇಜು ಮೈದಾನದಲ್ಲಿ ನಿಲುಗಡೆಗೊಳಿಸುವುದು. ಭಾಗಮಂಡಲ ಕಡೆಯಿಂದ ದಸರಾಕ್ಕೆ ಬರುವ ವಾಹನಗಳು ತಾಳತ್ ಮನೆ ಪಪ್ಪೀಸ್ ಗ್ಲಾಸ್ ಹೌಸ್ ಮೈದಾನದಲ್ಲಿ ನಿಲುಗಡೆಗೊಳಿಸುವುದು. ಮೈಸೂರು, ಸಿದ್ದಾಪುರ ಕಡೆಯಿಂದ ಬರುವ…
ಮಡಿಕೇರಿ NEWS DESK ಸೆ.30 : ಮಡಿಕೇರಿ ನಗರ ಮತ್ತು ಗೋಣಿಕೊಪ್ಪ ಪಟ್ಟಣದಲ್ಲಿ ನಡೆಯಲಿರುವ ನಾಡಹಬ್ಬ ದಸರಾ ಸಂಬಂಧ ವಾಹನ ದಟ್ಟಣೆ ನಿಯಂತ್ರಿಸಿ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮ 1989ರ (ತಿದ್ದುಪಡಿ ನಿಯಮಾವಳಿ 1990) ನಿಯಮ 221ಎ (5)ರಲ್ಲಿ ದತ್ತವಾದ ಅಧಿಕಾರದಂತೆ ಅಕ್ಟೋಬರ್ 2 ರಂದು ಸಂಜೆ 4 ಗಂಟೆಯಿಂದ ಅಕ್ಟೋಬರ್, 3 ರಂದು ಬೆಳಗ್ಗೆ 10 ಗಂಟೆ ವರೆಗೆ ಮಡಿಕೇರಿ ನಗರ ಮತ್ತು ಗೋಣಿಕೊಪ್ಪ ಪಟ್ಟಣದಲ್ಲಿ ಸಂಚಾರ ವ್ಯವಸ್ಥೆಯನ್ನು ನಿರ್ವಹಿಸಲು ಆರಕ್ಷಕ ಅಧೀಕ್ಷಕರು, ಕೊಡಗು ಜಿಲ್ಲೆ, ಮಡಿಕೇರಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ, ಕೊಡಗು ಜಿಲ್ಲೆ, ಮಡಿಕೇರಿ ಇವರಿಗೆ ಅನುಮತಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಅವರು ಆದೇಶ ಹೊರಡಿಸಿದ್ದಾರೆ. ದಿನಾಂಕ 02-10-2025 ರಂದು ಮಧ್ಯಾಹ್ನ 2 ಗಂಟೆಯಿಂದ ದಿನಾಂಕ 03-10-2025 ಬೆಳಗ್ಗೆ 10 ಗಂಟೆಯವರೆಗೆ ಮಂಗಳೂರು ಕಡೆಯಿಂದ ಮಡಿಕೇರಿ…






