“ಕಾಶ್ಮೀರ್ ಟೈಮ್ಸ್” ಕಚೇರಿಗಳಿಗೆ ಬೀಗ
24/10/2020

ನವದೆಹಲಿ ಅ.24 : “ಕಾಶ್ಮೀರ್ ಟೈಮ್ಸ್” ಕಚೇರಿಗಳಿಗೆ ಜಮ್ಮು-ಕಾಶ್ಮೀರ ಆಡಳಿತ ಬೀಗಮುದ್ರೆ ಹಾಕಿರುವ ಕೇಂದ್ರ ಸರ್ಕಾರದ ನಿಲುವನ್ನು ಭಾರತೀಯ ಸಂಪಾದಕರ ಕೂಟ (ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ) ತೀವ್ರವಾಗಿ ಖಂಡಿಸಿದೆ.
ಶ್ರೀನಗರದಲ್ಲಿ ‘ಕಾಶ್ಮೀರ್ ಟೈಮ್ಸ್’ ಕಚೇರಿಗಳಿಗೆ ಜಮ್ಮು-ಕಾಶ್ಮೀರ ಆಡಳಿತ ಬೀಗಮುದ್ರೆ ಹಾಕಿರುವುದನ್ನು ತೀವ್ರವಾಗಿ ಖಂಡಿಸಿರುವ ಭಾರತೀಯ ಸಂಪಾದಕರ ಕೂಟ (ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ), ಈ ಕ್ರಮದಿಂದ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು-ಕಾಶ್ಮೀರ ಮತ್ತು ಲಡಾಖ್‍ನ ಮಾಧ್ಯಮದ ಮೇಲೆ ಗೊಂದಲ ಪರಿಣಾಮ ಬೀರಿದೆ ಎಂದು ಹೇಳಿದೆ.
`ಕಾಶ್ಮೀರ್ ಟೈಮ್ಸ್ ನ ಶ್ರೀನಗರ ಕಚೇರಿಗಳ ಮೇಲೆ ಏಕಾಏಕಿ ಮತ್ತು ಹಠಾತ್ ಆಗಿ ಬೀಗಮುದ್ರೆ ಹಾಕಿರುವುದು ಖಂಡನೀಯ. ಜಮ್ಮು -ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಮಾಧ್ಯಮಗಳ ಮೇಲೆ ಇದು ಗೊಂದಲದ ಪರಿಣಾಮ ಬೀರಿದೆ.’ ಎಂದು ಗಿಲ್ಡ್ ಇಲ್ಲಿ ಬಿಡುಗಡೆ ಮಾಡಿರುವ ಪ್ರಕಟಣೆ ತಿಳಿಸಿದೆ.
