ಬಸವೇಶ್ವರ ದೇವಾಲಯದಲ್ಲಿ ಶ್ರದ್ಧಾ ಭಕ್ತಿಯಿಂದ ಜರುಗಿದ ದುರ್ಗಾ ಪೂಜೆ

24/10/2020

ಸೋಮವಾರಪೇಟೆ ಅ. 24 : ನವರಾತ್ರಿ ಅಂಗವಾಗಿ ಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ಪ್ರತಿ ನಿತ್ಯ ವಿಶೇಷ ಅಲಂಕಾರ ಹಾಗೂ ಪೂಜೆ ನಡೆಯುತಿದೆ.
ನವರಾತ್ರಿ ಎಂಟನೆ ದಿನವಾದ ಇಂದು ದುರ್ಗಾಷ್ಟಾಮಿ ಯ ಅಂಗವಾಗಿ ಬೆಳಗಿನಿಂದ ವಿಶೇಷ ಪೂಜೆ, ಅರ್ಚನೆ ನಡೆಯಿತು. ದೇವಾಲಯದ ಅರ್ಚಕರಾದ ಮಿಥುನ್ ಶಾಸ್ತ್ರಿಗಳ ಪೌರೋಹಿತ್ಯದಲ್ಲಿ ಸಂಜೆ ದುರ್ಗಾ ಹಾಗೂ ಚಂಡಿಕಾ ಹೋಮ ನಡೆಯಿತು. ರಾತ್ರಿ ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗ ನೆರವೇರಿತು.