ಸರಳ ಜಂಬೂ ಸವಾರಿ ಮುಕ್ತಾಯ

27/10/2020

ಮೈಸೂರು ಅ.26 : ಐತಿಹಾಸಿಕ ಜಂಬೂ ಸವಾರಿ ಈ ಬಾರಿ ಸರಳವಾಗಿ ಆಚರಣೆಯಾಗಿ, ಮುಕ್ತಾಯಗೊಂಡಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸೋಮವಾರ ನಾಡ ದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಶ್ವ ವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಗೆ ಚಾಲನೆ ನೀಡಿದ್ದರು.
ಅರಮನೆ ಆವರಣಕ್ಕೆ ಸೀಮಿತಗೊಂಡ ಈ ಬಾರಿಯ ಜಂಬೂ ಸವಾರಿಯಲ್ಲಿ ಅಭಿಮನ್ಯು ಮೊದಲ ಬಾರಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು ಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದು, ವಿಜಯ ಕಾವೇರಿ, ಗೋಪಿ ಆನೆಗಳು ಸಾಥ್ ನೀಡಿದ್ದ
ಬಲರಾಮ ದ್ವಾರದ ಬಳಿ ಸಂಜೆ 4.17 ವೇಳೆಗೆ ಜಂಬೂ ಸವಾರಿ ಮೆರವಣಿಗೆ ಮುಕ್ತಾಯವಾಯಿತು. ಈ ಎರಡು ಸ್ತಬ್ಧಚಿತ್ರಗಳು ಮಾತ್ರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಅಲ್ಲಿ ನೆರೆದಿದ್ದ ಪ್ರೇಕ್ಷಕರು ಕಣ್ತುಂಬಿಕೊಂಡರು.
ಸರಳ ದಸರಾ: ಕೊರೋನಾ ಆತಂಕದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿಯಲ್ಲಿ ಈ ಬಾರಿ ವಿಜಯದಶಮಿ ಆಚರಣೆಯನ್ನು ಸೀಮಿತ ಅವಧಿಯಲ್ಲಿ ಸರಳವಾಗಿ ಮತ್ತು ಸುಸಜ್ಜಿತವಾಗಿ ನಡೆಸಲಾಗಿದೆ.
ಪ್ರತಿವರ್ಷ ಐದು ಕಿ.ಮೀ ಸಾಗುತ್ತಿದ್ದ ಜಂಬೂಸವಾರಿ ಈ ಬಾರಿ ಅರಮನೆ ಆವರಣದೊಳಗಿನ ಭುವನೇಶ್ವರಿ ದೇವಸ್ಥಾನದಲ್ಲಿ `ಶಮಿಪೂಜೆ’ ನಡೆಸುವುದರೊಂದಿಗೆ ಕೊನೆಗೊಂಡಿದೆ.