ಕೂಗೆಕೋಡಿ ಗ್ರಾಮದಲ್ಲಿ ಡಾ.ಅಂಬೇಡ್ಕರ್ ಫ್ಲೆಕ್ಸ್ ಅನಾವರಣ
27/10/2020

ಮಡಿಕೇರಿ ಅ.27 : ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನಾಧಾರಿತ “ಮಹಾನಾಯಕ” ಧಾರಾವಾಹಿಯ ಫ್ಲೆಕ್ಸ್ ಅನಾವರಣ ಕಾರ್ಯಕ್ರಮ ಸೋಮವಾರಪೇಟೆಯ ಕೂಗೆಕೋಡಿ ಗ್ರಾಮದಲ್ಲಿ ನಡೆಯಿತು.
ಡಾ.ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಸೋಮವಾರಪೇಟೆಯ ಕೂಗೆಕೋಡಿ ಗ್ರಾಮದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪ್ರಮುಖರು ಫ್ಲೆಕ್ಸ್ ಅನಾವರಣಗೊಳಿಸಿದರು. ಝೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಾಯಕ ಧಾರಾವಾಹಿ ಶೈಕ್ಷಣಿಕ ಸ್ಫೂರ್ತಿಯನ್ನು ತುಂಬುತ್ತಿದೆ ಎಂದು ಅತಿಥಿಗಳು ಅಭಿಪ್ರಾಯಪಟ್ಟರು.
ಸಂಘದ ಅಧ್ಯಕ್ಷ ರಮೇಶ್, ಪ್ರಧಾನ ಕಾರ್ಯದರ್ಶಿ ರವಿ, ಗೌರವಾಧ್ಯಕ್ಷ ಶಂಕರ್ ಹಾಗೂ ಪದಾಧಿಕಾರಿಗಳಾದ ಧರ್ಮಪ್ಪ, ಕೆ.ಪಿ.ವೆಂಕಟೇಶ್, ಪ್ರದೀಪ, ಪ್ರಕಾಶ್, ಪ್ರೀತು, ಸೋಮಪ್ಪ ಶೇಖರ್, ಮಲ್ಲೇಶ, ರಂಗಯ್ಯ, ಭೀಮಯ್ಯ, ರಾಮಯ್ಯ, ವಿನೋದ್ ಕುಮಾರ್, ಸುರೇಶ್ ಸೇರಿದಂತೆ ಯುವ ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ಪ್ರಮುಖರಾದ ಕೆÀ.ಎನ್.ಹೂವಯ್ಯ ಸ್ವಾಗತಿಸಿ, ರಘುಕುಮಾರ್ ನಿರೂಪಿಸಿ, ರವಿ ವಂದಿಸಿದರು.

