ಕುಶಾಲನಗರದ ಮಹಿಳಾ ಮೋರ್ಚಾದಿಂದ ಸಹೋದರಿ ನಿವೇದಿತಾ ಜನ್ಮದಿನಾಚರಣೆ

28/10/2020

ಮಡಿಕೇರಿ ಅ.28 : ಸಹೋದರಿ ನಿವೇದಿತಾ ಅವರ 153ನೇ ಜನ್ಮದಿನಾಚರಣೆಯನ್ನು ಕುಶಾಲನಗರದ ಮಹಿಳಾ ಮೋರ್ಚಾದ ವತಿಯಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಹಿಳಾ ಮೋರ್ಚಾದ ಪ್ರಮುಖರು ಸಹೋದರಿ ನಿವೇದಿತಾ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ನಂತರ ಪ್ರಮುಖರಾದ ಅಮೃತ್ ರಾಜ್ ಮಾತನಾಡಿ ನಿವೇದಿತಾ ಚರಿತ್ರೆ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ನಗರ ಅಧ್ಯಕ್ಷ ಉಮಾಶಂಕರ್, ಜಿಲ್ಲಾ ಕಾರ್ಯದರ್ಶಿ ಪುಷ್ಪ ನಾಗೇಶ್, ಪ.ಪಂ ಸದಸ್ಯರಾದ ರೂಪ ಉಮಾಶಂಕರ್, ವಕ್ತಾರಾದ ಮನು ,ರುದ್ರಾಂಬೆ, ಡಾಟಿ,ಇಂದಿರಾ ರಮೇಶ್, ಪದ್ಮ ವೇದಾವತಿ ,ರುಕ್ಮಿಣಿ, ರಮ್ಯ,ಸುಚಿತ್ರ,ಗಂಗಮ್ಮ ಉಪಸ್ಥಿತಿ ತರಿದ್ದರು.

ನಂತರ ನಾಡ ಕಚೇರಿಗೆ ತೆರಳಿ ಉತ್ತರ ಪ್ರದೇಶದಲ್ಲಿ ನಡೆದ ನಿಖಿತಾ ತೋಮರ್ ಅವರ ಹತ್ಯೆಯನ್ನು ಖಂಡಿಸಿ ಆರ್ ಐ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿದರು.