ಪ್ರವಾಸಿಗರನ್ನು ಆಕರ್ಷಿಸುವ ತಾಣ ದಕ್ಷಿಣ ಕನ್ನಡ ಜಿಲ್ಲೆಯ ಕಾರಂತ ಪಿಲಿಕುಳ ನಿಸರ್ಗಧಾಮ

October 29, 2020

ಪಿಲಿಕುಳ ಮಂಗಳೂರು ಮೂಡುಬಿದಿರೆ ರಸ್ತೆಯಲ್ಲಿ01-12 ಕಿಲೋ ಮೀಟರ್ ಹೋಗುವಾಗ ವಾಮಂಜೂರು ಎಂಬ ಸ್ಥಳ ಸಿಗುತ್ತದೆ. ಇಲ್ಲಿಂದ ಎರಡು ಕಿಲೋ ಮೀಟರ್ ಎಡಕ್ಕೆ ಹೋದರೆ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಪ್ರದೇಶ ಸಿಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಶ್ರೀಯುತ ಭರತ್‍‍‍‍‍‍‍‍ಲಾಲ್ ಮೀನ ಮತ್ತು ಮಂಗಳೂರಿನ ಈಗಿನ ಶಾಸಕರಾದ ಜೆ.ಆರ್.ಲೋಬೊ, ಜೈವಿಕ ಉದ್ಯಾನವನದ ನಿರ್ದೇಶಕ ಶ್ರೀ ಎಚ್ ಜಯಪ್ರಕಾಶ್ ಭಂಡಾರಿ, ವಿಜ್ಞಾನ ಕೇಂದ್ರದ ನಿರ್ದೇಶಕರಾದ ಡಾ.ಕೆ.ವಿ ರಾವ್ ಇವರ ಮುಖಂಡತ್ವದಲ್ಲಿ ಆಗ ಪಿಲಿಕುಳ ಎಂಬ ಹೆಸರನ್ನು ಈ ಸ್ಥಳಕ್ಕೆ ಇಟ್ಟರು.

ಪಿಲಿಕುಳ ನಿಸರ್ಗದಾಮ :

ತುಳು ಸಂಸ್ಕೃತಿಯನ್ನು ಬೆಳೆಸುವ ಉಳಿಸುವ ನೆಲೆಯಲ್ಲಿ ಮಂಗಳೂರು ನಗರದಿಂದ ಹೊರವಲಯದಲ್ಲಿ ವಿಸ್ತಾರವಾದ ಪ್ರದೇಶವಾದ ವಾಮಂಜೂರಿನಲ್ಲಿ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗದಾಮ ನಿಂತಿದೆ.

ಸ್ಥಳನಾಮ
ಪಿಲಿಕುಳೆನ್ನುವುದು ತುಳುವಿನ ಪದ (ಪಿಲಿ+ಕುಳ).ಪಿಲಿ ಎಂದರೆ ಕನ್ನಡದಲ್ಲಿ ಹುಲಿ ಎಂದು,ಕುಳ ಎಂದರೆ ಕೊಳ ಎಂಬ ಅರ್ಥವನ್ನು ನೀಡುತ್ತದೆ “ಹುಲಿಗಳ ಕೊಳ”.ಅಂದರೆ ಹಿಂದಿನ ಕಾಲದಲ್ಲಿ ಪಿಲಿಕುಳ ಎಂಬ ಸ್ಥಳವು ದಟ್ಟಾರಣ್ಯದಿಂದ ಕೂಡಿತ್ತು.ಅಲ್ಲಿ ಹುಲಿಗಳು ಯತೇಚ್ಚವಾಗಿ ಇದ್ದವು.ಹಾಗಾಗಿ ಹುಲಿಗಳು ಅಯಾಸವನ್ನು ಪರಿಹರಿಸಿಕೊಳ್ಳಲು ಆ ಕೆರೆಗೆ ಬರುತ್ತಿದ್ದವು.ಹಾಗಾಗಿ ಪಿಲಿಕುಳ ಎಂಬ ಹೆಸರು ಬಂತು.

ಜೈವಿಕ ಉದ್ಯಾನವನ :

ಜೈವಿಕ ಉದ್ಯಾನವನ
ಪಿಲಿಕುಳ ನಿಸರ್ಗಧಾಮದಲ್ಲಿರುವ ೮೨ ಎಕರೆಗಳಷ್ಟು ವಿಸ್ತಾರವಾಗಿದೆ. ಮಲೆನಾಡು ಮತ್ತು ಸಹ್ಯಾದ್ರಿ ಬೆಟ್ಟಗಳಲ್ಲಿ ಜೀವಿಸುವ ಹಲವಾರು ಪ್ರಾಣಿಗಳನ್ನು ಇಲ್ಲಿ ಸಂರಕ್ಷಿಸಲಾಗಿದೆ. ಇದರ ಸಂದರ್ಶನ ಸಮಯ:ಬೆಳಗ್ಗೆ 9.30 ಇಂದ ಸಂಜೆ 5.30ರ ತನಕ. ವಾರದ ರಜೆ:ಸೋಮವಾರ

ಪಿಲಿಕುಳ ದೋಣಿವಿಹಾರ ಕೇಂದ್ರ
ಪಿಲಿಕುಳಕ್ಕೆ ಈ ಕೊಳದಿಂದಲೇ ಈಗಿನ ಹೆಸರು ಬಂದಿತು ಎಂದು ಜನರು ನಂಬುತ್ತಾರೆ. ಇಲ್ಲಿಗೆ ಮುಂಚೆ ಹುಲಿಗಳು ಭೇಟಿ ನೀಡುತ್ತಿದ್ದವಂತೆ. ಹಾಗಾಗಿ ಹುಲಿಗಳು(ಪಿಲಿ) ಭೇಟಿ ನೀಡುವ ಕೊಳ(ಕುಳ), ಪಿಲಿಕುಳ ಆಯಿತು ಎನ್ನುತ್ತಾರೆ. ಪಿಲಿಕುಳ ನಿಸರ್ಗಧಾಮದ ಅಭಿವೃದ್ಧಿಯ ಸಮಯದಲ್ಲಿ ಈ ಕೆರೆಯ ಹೂಳೆತ್ತಿ ಈಗಿನಂತೆ ಅಭಿವೃದ್ಧಿಪಡಿಸಲಾಗಿದೆ. ಈ ದೋಣಿವಿಹಾರ ಕೇಂದ್ರವಿರುವ ಕೆರೆ ೩೦ ಅಡಿ ಆಳವೂ, ೫ ಎಕರೆಯಷ್ಟು ವಿಸ್ತಾರವೂ ಇದೆ ಎಂದು ಇಲ್ಲಿನ ಅಧಿಕಾರಿಗಳು ತಿಳಿಸುತ್ತಾರೆ.

error: Content is protected !!