ಮಡಿಕೇರಿ ಓಂಕಾರ್ ಆಟೋ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ

01/11/2020

ಮಡಿಕೇರಿ ನ.1 : ನಗರದ ಶ್ರೀಆಂಜನೇಯ ದೇವಾಲಯದ ಬಳಿಯ ಓಂಕಾರ್ ಆಟೋ ರಿಕ್ಷಾ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ನಗರ ಠಾಣೆಯ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರು ಧ್ವಜಾರೋಹಣ ನೆರವೇರಿಸಿದರು. ನಂತರ ಸಸಿ ನೆಟ್ಟು ಪರಿಸರ ಜಾಗೃತಿ ಮೂಡಿಸಿದರು. ಕನ್ನಡ ನಾಡು, ನುಡಿಯ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು.
ಆಟೋ ಚಾಲಕರುಗಳಾದ ಡಾಲು, ಉಮೇಶ್, ಹೇಮಂತ್, ಯತೀಶ್, ಮೋಹನ್, ಸುನಿಲ್ ಕುಮಾರ್, ಸಚಿನ್, ಹರ್ಷಿತ್ ಮತ್ತಿತರರು ಹಾಜರಿದ್ದು, ಸಿಹಿ ಹಂಚಿ ಸಂಭ್ರಮಿಸಿದರು.