ಮಳೆಗಾಲ ಸಮೀಪಿಸಿದರೂ ಎಚ್ಚೆತ್ತುಕೊಳ್ಳದ ನಗರಸಭೆ

04/05/2020

ಮಡಿಕೇರಿ ಮೇ 4 : ಮಳೆಗಾಲ ಕೊಡಗು ಜಿಲ್ಲೆಯನ್ನು ಪ್ರವೇಶಿಸಲು ಇನ್ನು ಒಂದು ತಿಂಗಳಷ್ಟೇ ಬಾಕಿ ಉಳಿದಿದೆ. ಆದರೆ ಮಡಿಕೇರಿ ನಗರಸಭೆ ಅಗತ್ಯ ಮುಂಜಾಗೃತಾ ಕ್ರಮಗಳಿಗೆ ಇನ್ನೂ ಮುಂದಾಗಿಲ್ಲ. ನಗರದ ಅನೇಕ ತೋಡುಗಳು ಕಾಡು ತುಂಬಿದ್ದು, ಮಳೆಗಾಲದಲ್ಲಿ ನೀರು ತುಂಬಿ ಹರಿದು ಪ್ರವಾಹ ಏರ್ಪಡುವ ಸಾಧ್ಯತೆಗಳಿದೆ. ನೀರು ಸರಾಗವಾಗಿ ಹರಿಯಲು ತೋಡುಗಳ ಕಾಡನ್ನು ಕಡಿದು ತ್ಯಾಜ್ಯವನ್ನು ವಿಲೇವಾರಿ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಮಳೆಗಾಲಕ್ಕೂ ಮೊದಲು ಕಾಮಗಾರಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದರೂ ಕೆಲಸ ಪ್ರಗತಿಯಲ್ಲಿಲ್ಲ.