ಹದಗೆಟ್ಟ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಆಗ್ರಹ

04/05/2020

ಮಡಿಕೇರಿ ಮೇ 4 : ಮಳೆಗಾಲಕ್ಕೂ ಮೊದಲು ಸ್ಥಗಿತಗೊಂಡ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಅಭಿವೃದ್ಧಿ ಕಾರ್ಯಗಳಿಗೆ ಕೊರೋನಾ ಲಾಕ್ ಡೌನ್ ವಿನಾಯಿತಿ ನೀಡಿದ್ದರೂ ಮಡಿಕೇರಿ ನಗರದಲ್ಲಿ ಅನಿವಾರ್ಯವಾಗಿ ಆಗಲೇಬೇಕಾದ ರಸ್ತೆ ಡಾಮರೀಕರಣ ನಡೆಯುತ್ತಿಲ್ಲ. ನೂತನ ಖಾಸಗಿ ಬಸ್ ನಿಲ್ದಾಣದ ಸಮೀಪದ ರಸ್ತೆ ಕಳೆದ ಎರಡು ವರ್ಷಗಳಿಂದ ಸಂಪೂರ್ಣವಾಗಿ ಹದಗೆಟ್ಟಿದ್ದು, ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳುವ ಕಾಳಜಿಯನ್ನು ನಗರಸಭೆ ತೋರಿಲ್ಲ. ಮಳೆಗಾಲಕ್ಕೂ ಮೊದಲು ರಸ್ತೆ ಡಾಮರೀಕರಣ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.