ಅನಗತ್ಯ ಸಂಚಾರ ಮಾಡಿದ 1763 ವಾಹನಗಳು ವಶ

04/05/2020

ಮಡಿಕೇರಿ ಮೇ 4 : ಲಾಕ್ ಡೌನ್ ನಿರ್ಬಂಧ ಸಡಿಲಿಕೆ ಇರುವುದರಿಂದ ವಾಹನಗಳ ಸಂಚಾರವೂ ಹೆಚ್ಚಿದೆ. ಈ ಹಂತದಲ್ಲಿ ಅನಗತ್ಯವಾಗಿ ಸಂಚರಿಸುವ ಪರಿಪಾಠವೂ ಕಂಡು ಬರುತ್ತಿದ್ದು, ಇಲ್ಲಿಯವರೆಗೆ ಈ ರೀತಿ ಅನಗತ್ಯ ಸಂಚಾರ ಮಾಡಿದವರ 1763 ವಾಹನಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ನಿರ್ಬಂಧ ಸಡಿಲಿಕೆ ಅವಧಿಯ ಬಳಿಕ ಸಂಜೆ 4 ರಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೆ ವಾಹನ ಸಂಚಾರಕ್ಕೆ ಅವಕಾಶ ನೀಡುವುದಿಲ್ಲವೆಂದು ಎಸ್ ಪಿ ಡಾ.ಸುಮನ್ ತಿಳಿಸಿದ್ದಾರೆ.