ಮಡಿಕೇರಿಯಲ್ಲಿ ದಾನಿಗಳ ಸಹಕಾರದಿಂದ ಕಿಯೋಸ್ಕ್ ನಿರ್ಮಾಣ

04/05/2020

ಮಡಿಕೇರಿ ಮೇ 4 : ಕೋವಿಡ್-19 ರ ಸಂಬಂಧ ಕೊಡಗು ಜಿಲ್ಲೆಯಲ್ಲಿ ಕೋವಿಡ್ ಶಂಕಿತರ ಗಂಟಲು ದ್ರವವನ್ನು ಸಂಗ್ರಹಿಸಲು ಈ ಹಿಂದೆ ಕೋವಿಡ್ ಆಸ್ಪತ್ರೆಯಲ್ಲಿ ಜಿಲ್ಲಾಡಳಿತದವತಿಯಿಂದ ಕಿಯೋಸ್ಕ್ ನ್ನು ನಿರ್ಮಿಸಲಾಗಿದೆ.

ಪ್ರಸ್ತುತ ಅದೇ ರೀತಿಯ 04 ಕಿಯೋಸ್ಕ್ ಗಳನ್ನು ದಾನಿಗಳ ಸಹಕಾರದಿಂದ ನಿರ್ಮಿಸಲಾಗಿದೆ. ಇವುಗಳ ಪೈಕಿ ಓಲಮ್ ಆಗ್ರೋ ಇಂಡಿಯಾ ಲಿಮಿಟೆಡ್ , ಕೂಡಿಗೆ ಇವರು-01, ಅನುರಾಧ್ ಸಂಸ್ಥೆ, ಗೋಣಿಕೊಪ್ಪ, ಇವರು-02 ಮತ್ತು ಭಾರತೀಯ ವೈದ್ಯಕೀಯ ಸಂಘ-01 ಕಿಯೋಸ್ಕ್ ನಿರ್ಮಾಣಕ್ಕೆ ಸಹಕರಿಸಿರುತ್ತಾರೆ. ಕೋವಿಡ್ ನಿಗ್ರಹ ಸಂಬಂಧದ ಕಾರ್ಯದಲ್ಲಿ ಜಿಲ್ಲಾಡಳಿತದೊಂದಿಗೆ ಸಹಕರಿಸಿದ ಇವರಿಗೆ ಜಿಲ್ಲಾಡಳಿತವು ಧನ್ಯವಾದಗಳನ್ನು ಸಮರ್ಪಿಸುತ್ತದೆ.

ಈ ಕಿಯೋಸ್ಕ್ ಗಳನ್ನು ಸೋಮವಾರಪೇಟೆ, ಕುಶಾಲನಗರ, ಗೋಣಿಕೊಪ್ಪ ಮತ್ತು ವಿರಾಜಪೇಟೆ ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗುವುದು.