ಮದ್ಯ ಬೇಡವೆಂದು ಮಹಿಳೆಯರ ಪ್ರತಿಭಟನೆ

05/05/2020

ಕೊಪ್ಪಳ ಮೇ 4 : ಸುಮಾರು 40 ದಿನಗಳ ಬಳಿಕ ಮದ್ಯದಂಗಡಿ ತೆರೆಯಲಾಗಿದೆ ಎಂದು ಮದ್ಯ ಪ್ರಿಯರು ಖುಷಿ ಪಡುತ್ತಿದ್ದರೆ ಅತ್ತ ಕೊಪ್ಪಳದಲ್ಲಿ ಮಹಿಳಾ ಮಣಿಗಳು ತೆರೆದಿರುವ ಬಾರ್ ಗಳನ್ನು ಕೂಡಲೇ ಮುಚ್ಚಬೇಕು ಎಂದು ಪ್ರತಿಭಟನೆ ನಡೆಸಿದ್ದಾರೆ.
ಕೊಪ್ಪಳದ ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಎಂ ಎಸ್ ಐ ಎಲ್ ಅಂಗಡಿ ಎದುರು ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದು, ಅಂಗಡಿ ತೆರೆಯದಂತೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಮದ್ಯದ ಅಂಗಡಿಯಿಂದ ಮಹಿಳೆಯರು ಓಡಾಡಲು ಆಗುತ್ತಿಲ್ಲ. ಕುಡುಕರು ಹಾವಳಿ ಹೆಚ್ಚಾಗಿದ್ದು, ಕುಡಿದು ಕುಡುಕರು ಕೂಗಾಡುತ್ತಾರೆ ಕೆಟ್ಟ ಪದಗಳ ಬಳಕೆ ಮಾಡ್ತಾರೆ. ಇದರಿಂದ ಮಹಿಳೆಯರಿಗೆ ಸಮಸ್ಯೆಯಾಗುತ್ತಿದೆ ಎಂದು ಪ್ರತಿಭಟನಾ ನಿರತ ಮಹಿಳೆಯರು ಹೇಳಿದ್ದಾರೆ.