ಸೋಮವಾರಪೇಟೆ ಪಟ್ಟಣದಲ್ಲಿ ಟ್ರಾಫಿಕ್ ಜಾಮ್
05/05/2020

ಮಡಿಕೇರಿ ಮೇ 5 : ಲಾಕ್‍ಡೌನ್ ಹಿನ್ನೆಲೆಯಲ್ಲಿ 45ದಿನಗಳಿಂದ ಬಂದ್ ಆಗಿದ್ದ ಮದ್ಯದಂಗಡಿಗಳು ತೆರೆಯುತ್ತಿದ್ದಂತೆ ಸೋಮವಾರಪೇಟೆ ಪಟ್ಟಣದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಮದ್ಯದಂಗಡಿಗಳ ಮುಂದೆ ಜನರು ಸರದಿ ಸಾಲಿನಲ್ಲಿ ನಿಂತಿದ್ದರೂ, ಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮದ್ಯ ಖರೀದಿಸಿದರು. ಭರ್ಜರಿ ವ್ಯಾಪಾದೊಂದಿಗೆ ಹೆಚ್ಚಿನ ಮದ್ಯದಂಗಡಿಗಳಲ್ಲಿ ಎಂ.ಆರ್.ಪಿ.ಗಿಂತ ಶೇ25ರಷ್ಟು ಹೆಚ್ಚಿನ ಹಣವನ್ನು ವಸೂಲಿ ಮಾಡಿದ ಆರೋಪಗಳು ಕೇಳಿಬಂತು.
ಸೀಲ್ ಆದ ನಂತರ ಮದ್ಯದಂಗಡಿಯಲ್ಲಿದ್ದ ಮದ್ಯಗಳ ಎಂ.ಆರ್.ಪಿಗಿಂತ ಹೆಚ್ಚಿನ ಬೆಲೆಯನ್ನು ಪಡೆದ ಬಗ್ಗೆ ದೂರು ಕೇಳಿ ಬಂದವು.