ಮೇ 6 ರಂದು ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗಾಗಿ ಫೋನ್-ಇನ್ ಕಾರ್ಯಕ್ರಮ

May 5, 2020

ಮಡಿಕೇರಿ ಮೇ.05 : ಕೋವಿಡ್-19 ಸಂಬಂಧ ಲಾಕ್‍ಡೌನ್ ಹಿನ್ನೆಲೆ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯು ಮುಂದೂಡಲ್ಪಟ್ಟಿದೆ. ವಿದ್ಯಾರ್ಥಿಗಳು ಮನೆಯಲ್ಲಿಯೆ ತಮ್ಮ ಪರೀಕ್ಷಾ ತಯಾರಿಯನ್ನು ಮುಂದುವರೆಸಿತ್ತಾರೆ. ಇದಕ್ಕೆ ಪೂರಕವಾಗಿ ಮುಖ್ಯಶಿಕ್ಷಕರು/ ಶಿಕ್ಷಕರು ಮಕ್ಕಳಿಗೆ ಅಗತ್ಯವಾದ ಮಾರ್ಗದರ್ಶನವನ್ನು ದೂರವಾಣಿಯ ಮುಖಾಂತರ ನೀಡುವುದರ ಮೂಲಕ ಮಕ್ಕಳ ಕಲಿಕೆಯನ್ನು ಅನುಪಾಲನೆ ಮಾಡುತ್ತಿದ್ದಾರೆ. ಮಕ್ಕಳಲ್ಲಿ ಇರಬಹುದಾದ ವಿಷಯಕ್ಕೆ ಸಂಬಂದಿಸಿದ ಅನುಮಾನಗಳನ್ನು ಪರಿಹರಿಸಲು ನೇರ ಪೋನ್‍ಇನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ನಿಟ್ಟಿನಲ್ಲಿ ಮೇ 06 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಮಾಜ ವಿಜ್ಞಾನ ವಿಷಯವಾಗಿ ಫೋನ್ ಇನ್ ಕಾರ್ಯಕ್ರಮ ನಡೆಯಲಿದೆ. ವಿದ್ಯಾರ್ಥಿಗಳು ದೂರವಾಣಿ ಸಂಖ್ಯೆ: 08272-225664 ಅಥವಾ 9480695260 ಗೆ ಹೆಚ್ಚಿನ ಸಂಖ್ಯೆಯಲ್ಲಿ ಕರೆಮಾಡಿ ಈ ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಅವರು ತಿಳಿಸಿದ್ದಾರೆ.

error: Content is protected !!