ಹ್ಯೂಮನಿಟಿ ಫಸ್ಟ್ ಇಂಡಿಯಾ ಸಂಘಟನೆಯಿಂದ ಬಡವರಿಗೆ ನೆರವು

ಮಡಿಕೇರಿ ಮೇ 6 : ಕೊರೋನಾ ಲಾಕ್ಡೌನ್ನಿಂದ ಸಮಸ್ಯೆಗಳನ್ನು ಎದುರಿಸುತ್ತಿರುವ ಮಡಿಕೇರಿ ನಗರದ ವಿವಿಧ ಬಡಾವಣೆಯ ಬಡ ಕುಟುಂಬಗಳಿಗೆ ಹ್ಯೂಮನಿಟಿ ಫಸ್ಟ್ ಇಂಡಿಯಾದ ಜಿಲ್ಲಾ ಸಮಿತಿ ವತಿಯಿಂದ ನೆರವು ನೀಡಲಾಯಿತು. ಕಳೆದ 09 ದಿನಗಳಿಂದ ಪ್ರತೀ ದಿನ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ನಗರದ ರಾಜೇಶ್ವರಿ ನಗರ, ತ್ಯಾಗರಾಜ ಕಾಲೋನಿ, ಗದ್ದಿಗೆ, ಮಲ್ಲಿಕಾರ್ಜುನ ನಗರ, ಚಾಮುಂಡೇಶ್ವರಿ ನಗರ, ಹಿಲ್ ರಸ್ತೆ, ಮಹದೇವಪೇಟೆ, ರಾಣಿಪೇಟೆಯ 900 ಮಂದಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, 122 ಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳನ್ನು ವಿತರಿಸಲಾಗಿದೆ ಎಂದು ಸಂಸ್ಥೆಯ ಪ್ರಮುಖರು ತಿಳಿಸಿದರು.
80ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳಿಗೆ ಜ್ಯೂಸ್, ನೀರು ಒದಗಿಸಲಾಗಿದೆ.
ಹ್ಯುಮ್ಯಾನಿಟಿ ಫಸ್ಟ್ ಇಂಡಿಯಾದ ಉಸ್ತುವಾರಿ ಮೊಹಮ್ಮದ್ ಶರೀಫ್ ಅವರ ನೇತೃತ್ವದಲ್ಲಿ ಅಹಮ್ಮದಿಯ ಮುಸ್ಲಿಂ ಜಮಾಅತ್ನ ಅಧ್ಯಕ್ಷ ಎಂ.ಬಿ. ಝಹೀರ್ ಅಹಮ್ಮದ್, ಕಾರ್ಯಕರ್ತರಾದ ಎಂ.ಯು. ಉಸ್ಮಾನ್, ಅಬ್ದುಲ್ ಸಾಜೀದ್, ಎಂ. ತಾಹೀರ್, ಮನ್ಸೂರ್, ತಾಹ ರಹಿಂ ಹಾಗೂ ಮತ್ತಿತರ ಕಾರ್ಯರ್ತರು ಸೇವೆಯಲ್ಲಿ ಪಾಲ್ಗೊಂಡಿದ್ದರು.