ಲಾಕ್ ಡೌನ್ ನಡುವೆ ಕೊಡಗಿನಲ್ಲಿ ಸರಳ ವಿವಾಹಗಳ ಸುಗ್ಗಿ

13/05/2020

ಮಡಿಕೇರಿ ಮೇ 13 : ಕೊರೋನಾ ಲಾಕ್ ಡೌನ್ ನಿಂದಾಗಿ ನೂರಾರು ಮದುವೆಗಳು ಮುಂದೂಡಲ್ಪಟ್ಟರೂ ಕೊಡಗಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಕಾರಣ ಇಲ್ಲಿನವರು ಬೆರಳೆಣಿಕೆಯಷ್ಟು ಮಂದಿಯ ನಡುವೆ ಸರಳ ವಿವಾಹಕ್ಕೆ ಆದ್ಯತೆ ನೀಡುತ್ತಿದ್ದಾರೆ. ಕಳೆದ ಒಂದು ವಾರದಿಂದ ಜಿಲ್ಲೆಯ ವಿವಿಧೆಡೆ ಸಾಲು ಸಾಲು ಸರಳ ವಿವಾಹಗಳು ನಡೆದಿವೆ. ಇಂದು ಮಡಿಕೇರಿಯ ಅಶ್ವಿನಿ ಗಣಪತಿ ದೇವಾಲಯದಲ್ಲಿ ಎರಡು ಜೋಡಿಯ ಸರಳ ವಿವಾಹ ನಡೆಯಿತು. ಅರ್ಚಕ ನಡುಮನೆ ಜಯಾಭಟ್ ಮದುವೆ ನೆರವೇರಿಸಿದರು.