ಕೊಡಗಿನಲ್ಲಿ ಹೊರ ರಾಜ್ಯ-ವಿದೇಶದ 275 ಮಂದಿಗೆ ಸಂಪರ್ಕ ತಡೆ

May 26, 2020

ಮಡಿಕೇರಿ ಮೇ 26 : ಕೊರೊನಾ ಸಾಂಕ್ರಾಮಿಕ ತಡೆಯ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿ ವಿದೇಶದಿಂದ ಆಗಮಿಸಿದವರು ಸೇರಿದಂತೆ ಹೊರ ರಾಜ್ಯದ ಒಟ್ಟು 275 ಮಂದಿ ಸಂಪರ್ಕ ತಡೆಯಲ್ಲಿರುವುದಾಗಿ ಜಿಲ್ಲಾಡಳಿತ ಮಾಹಿತಿ ನೀಡಿದೆ.
ಪ್ರಸ್ತುತ ವಿದೇಶಗಳಿಂದ ಜಿಲ್ಲೆಗೆ ಆಗಮಿಸಿರುವ 13 ಮಂದಿ ಮತ್ತು ಹೊರ ರಾಜ್ಯದ 262 ಮಂದಿಯನ್ನು 14 ದಿನಗಳ ಸಂಪರ್ಕ ತಡೆಗೆ ಒಳಪಡಿಸಲಾಗಿದೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ 2218 ಮಂದಿಯ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಇದರಲ್ಲಿ 3 ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ( ಒಂದು ಪಾಸಿಟಿವ್ ಪ್ರಕರಣದಲ್ಲಿ ಸಂಬಂಧಿತ ವ್ಯಕ್ತಿ ಗುಣ ಮುಖ ಹೊಂದಿದ್ದಾರೆ). 2180 ಪ್ರಕರಣಗಳು ನೆಗೆಟಿವ್ ಆಗಿದ್ದು, 35 ಪ್ರಕರಣಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಕೋವಿಡ್ ಆಸ್ಪತ್ರೆಯಲ್ಲಿ 86 ಮಂದಿ ದಾಖಲಾಗಿರುವುದಾಗಿ ಮಾಹಿತಿ ನೀಡಲಾಗಿದೆ.